ಡಾ.ಬಾಬಾಸಾಹೇಬ್ ಅಂಬೇಡ್ಕರ್‍ರ ತತ್ವಗಳಿಂದ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿ

ಕಲಬುರಗಿ:ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಒಬ್ಬ ವ್ಯಕ್ತಿಯಾಗಿರದೆ, ದೇಶದ ಮಹಾನ ಶಕ್ತಿಯಾಗಿದ್ದಾರೆ. ಆ ಶಕ್ತಿ ಕೆಲಸ ಮಾಡುತ್ತಿರುವುದರಿಂದಲೇ ನಮ್ಮ ದೇಶ ವಿಶ್ವಗುರುವಾಗುವ ಅರ್ಹತೆ ಹೊಂದಿದೆ. ಇಡೀ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನವನ್ನು ರಚಿಸಿ ಸರ್ವರಿಗೂ ಸಮಬಾಳನ್ನು ಒದಗಿಸಿಕೊಟ್ಟ ಅವರ ನೈಜ ತತ್ವಗಳನ್ನು ಪ್ರತಿಯೊಬ್ಬರು ಅರಿತು, ಅಳವಡಿಸಿಕೊಂಡರೆ ಜಾತಿ ಪದ್ಧತಿ ನಿರ್ಮೂಲನೆಯಾಗಿ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ತನ್ಮೂಲಕ ವ್ಯಕ್ತಿಯ ಸರ್ವಾಂಗೀಣ ಪ್ರಗತಿಯೊಂದಿಗೆ ರಾಷ್ಟ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಮಕ್ತಂಪುರ ಗುರುಬಸವ ಮಠದ ಪೂಜ್ಯ ಶಿವಾನಂದ ಶ್ರೀಗಳು ಅಭಿಮತಪಟ್ಟರು.

ಡಾ.ಬಿ.ಆರ್.ಅಂಬೇಡ್ಕರ್ ಇಂಟಿಗ್ರೇಟೆಡ್ ರಿಸರ್ಚ್ ಇನಸ್ಟಿಟ್ಯೂಟ್’ವು ‘ಬಸವೇಶ್ವರ ಸಮಾಜ ಸೇವಾ ಬಳಗ’, ‘ ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’, ‘ಡಾ.ರಾಜಕುಮಾರ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಕಲಾ ಸಂಘ’, ‘ಅಂತರಂಗ ಸಾಂಸ್ಕøತಿಕ ಕಲಾ ಸಂಘ’, ‘ಕನ್ಯಾಕುಮಾರಿ ಮಹಿಳಾ ಸ್ವಸಹಾಯ ಸಂಘ’, ‘ಹೈದ್ರಾಬಾದ್ ಕರ್ನಾಟಕ ಸಿದ್ದಾರ್ಥ ಸೇವಾ ಸಂಸ್ಥೆ’ ‘ಅಕ್ಕಮಹಾದೇವಿ ಮಹಿಳಾ ಸ್ವಸಹಾಯ ಸಂಘ’ ಹಾಗೂ ಜಿಲ್ಲೆಯ ಸರ್ವ ಧರ್ಮಗಳು, ಸಮುದಾಯಗಳ ಸಂಘಟನೆಗಳ ಸಹಯೋಗದೊಂದಿಗೆ ‘ಡಾ.ಬಾಬಾ ಸಾಹೇಬ್ ಅಂಬೇಡ್ಕರರ 132ನೇ ಜಯಂತಿ’ಯ ಪ್ರಯುಕ್ತ ಎಸ್‍ವಿಪಿ ವೃತ್ತದಿಂದ ಜಗತ್ ವೃತ್ತದವರೆಗೆ ಶುಕ್ರವಾರ ಏರ್ಪಡಿಸಲಾಗಿದ್ದ ಐತಿಹಾಸಿಕ ಬೃಹತ್ ಅರಿವಿನ ಜಾಥಾಕ್ಕೆ ಎಸ್‍ವಿಪಿ ವೃತ್ತದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಅಕ್ಕಮಹಾದೇವಿ ಆಶ್ರಮದ ಪೂಜ್ಯ ಪ್ರಭುಶ್ರೀ ತಾಯಿ, ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಇಸ್ಲಾಂ ಧಾರ್ಮಿಕ ಮುಖಂಡ ಜನಾಬ್ ಆದಾಮ್ ಅಲಿ ಶಾಹ ಚಿಸ್ತಿ, ಜಿಲ್ಲಾ ಮೆಥೋಡಿಸ್ಟ್ ಚರ್ಚ್‍ನ ರೆವರೆಂಡ್ ಡೇವಿಡ್ ನೇಥನೀಲ್, ಶಿಖ್ ಧಾರ್ಮಿಕ ಮುಖಂಡ ಬೈದೀಪ್‍ಸಿಂಗ್, ಜೈನ್ ಧಾರ್ಮಿಕ ಮುಖಂಡ ಬ್ರಹ್ಮ ಜಗಶೆಟ್ಟಿ ಅವರು ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ನಂತರ ಮಾತನಾಡಿ, ನಾವು ವಿವಿಧ ಧರ್ಮ, ಸಮುದಾಯದವರಾಗಿದ್ದರು, ನಮ್ಮೆಲ್ಲರಿಗೆ ಸಂವಿಧಾನ ಅವಶ್ಯವಾಗಿದೆ. ನಂತರ ಆದ್ಯತೆಗಳನ್ನು ನಮ್ಮ-ನಮ್ಮ ಧರ್ಮಗಳ ಗ್ರಂಥಗಳಿಗೆ ನೀಡೋಣ. ಡಾ.ಅಂಬೇಡ್ಕರ್ ಜಯಂತಿ ಸರ್ವರು ಆಚರಿಸೋಣ. ಸಂವಿಧಾನವೇ ಭಾರತದ ರಾಷ್ಟ್ರಗ್ರಂಥವಾಗಿದ್ದು, ನಾವೆಲ್ಲರು ಅದರ ಆಶಯದಂತೆ ಬದುಕು ಸಾಗಿಸುವ ಪ್ರತಿಜ್ಞೆಯ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಇಂಟಿಗ್ರೇಟೆಡ್ ರಿಸರ್ಚ್ ಇನಸ್ಟಿಟ್ಯೂಟ್ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ, ವಿವಿಧ ಸಂಘಟನೆಗಳು, ಸಮುದಾಯದ ಪ್ರಮುಖರಾದ ರವೀಂದ್ರ ಶಾಬಾದಿ, ಆರ್.ಜಿ.ಶೆಟಗಾರ, ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ನೀಲಕಂಠಯ್ಯ ಹಿರೇಮಠ, ಶಿವಯೋಗಪ್ಪ ಬಿರಾದಾರ, ಬಸವರಾಜ ಎಸ್.ಪುರಾಣೆ, ಶಿವಕುಮಾರ ಬಿದರಿ, ಸಿದ್ದರಾಮ ಯಳವಂತಗಿ, ಡಾ.ರುಬೀನ್, ವೆಂಕಟೇಶ್ ರಂಗಂಪೇಟ್, ಈಶ್ವರ ಫರತಾಬಾದ್, ಸಿದ್ದರಾಮ ತಳವಾರ, ಜಯಶ್ರೀ ಎಸ್.ವಂಟಿ, ಸುಜಯ್, ಸಾಯಿಪ್ರಸಾದ್, ಸಾನ್ವಿ, ರಾಜೇಶ್ವರಿ ಮೇಲ್ಕೇರಿ, ರಾಜಕುಮಾರ ಕೊರಿ, ಗುರುನಾಥ ಪೂಜಾರಿ, ಸಾಯಬಣ್ಣ ಹೋಳ್ಕರ್, ಕಾಶಿರಾಯ ನಂದೂರಕರ್, ಎಚ್.ವೀರಭದ್ರಪ್ಪ, ಪ್ರೊ.ರಮೇಶ ಯಾಳಗಿ, ಸಿ.ಎಸ್.ಮಾಲಿಪಾಟೀಲ್, ಪೀರಪ್ಪ ದೊಡ್ಡಮನಿ, ಡಾ.ಶಿವಶಂಕರ್ ಬಿ., ಸಂತೋಷ ರಾಯಕೋಡೆ, ಮಲ್ಲಿಕಾರ್ಜುನ ಮೇಲ್ಮನಿ, ಸಂಗಮೇಶ ಇಮ್ಡಾಪೂರ್, ಬಸವರಾಜ ಪಿ.ನಂದೂರಕರ್, ಬುಧಾನ್ ಗೌಳಿ, ಈರಗಪ್ಪ ಬರ್ಗಲಿ, ಅನೀಲಕುಮಾರ ಎಂಟಮನಿ, ಸಂತೋಷ ಹಾವನೂರ್, ಸಿದ್ಧಾರ್ಥ ಎಂಟಮನಿ, ಆನಂದ ಸೇರಿದಂತೆ ಅನೇಕರು ಭಾಗವಹಿಸಿದ್ದರು.

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

3 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

3 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

3 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

4 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

4 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420