ಡಾ.ಅಂಬೇಡ್ಕರ್ ಅವರ ಚಿಂತನೆ ಮರೆಯಬೇಡಿ: ನಿಜಲಿಂಗ ದೊಡ್ಮನಿ

ಶಹಾಪುರ: ಮನೆಗೆಲಸ ಮಾಡುವ ಮಹಿಳೆ ದೇಶದ ರಾಷ್ರ್ಟಪತಿಯಾಗಿದ್ದು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಕೊಟ್ಟ ಸಂವಿಧಾನದ ಮೂಲಕ ಎಂದು ಉಪನ್ಯಾಸಕ ನಿಜಲಿಂಗ ದೊಡ್ಮನಿ ಅಭಿಪ್ರಾಯಪಟ್ಟರು.

ಪಟ್ಟಣದ ಸಿಬಿಎಸ್ ಶಾಲಾ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಲ್ಲೂಕಮಟ್ಟದ ಡಾ.ಬಿ.ಆರ್. ಅಂಬೇಡ್ಕರ್ ಅವರ 132ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.

ಬಾಬಾ ಸಾಹೇಬರ ಜಯಂತಿಗಳು ಮಾಡಿ ಅವರ ಚಿಂತನೆಗಳು ಮರೆಯಬೇಡಿ. ಅವರ ಚಿಂತನೆಗಳು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿಗ ಮಾತ್ರ ಸಾರ್ಥಕವಾಗುತ್ತದೆ. ಈ ದೇಶದಲ್ಲಿ ಹಣಕಾಸು ವ್ಯವಸ್ಥೆˌ ನೀರಾವರಿˌ ಕ್ರಷಿˌ ಅಣೆಕಟ್ಟುಗಳು ಬಾಬಾ ಸಾಹೇಬರ ಕೊಡುಗೆಗಳಾಗಿವೆ.

ದೇಶದ ಜನರಿಗೆ ಸಮಾನತೆ ಕೊಡಿಸಲು ಬಾಬಾ ಸಾಹೇಬರು ಅನ್ನ ನೀರು ಬಿಟ್ಟು ಹೋರಾಡಿದ್ದಾರೆ ಎಂದರು.

ನಂತರ ಮಾತನಾಡಿದ ಭೀಮರಾಯ ಅಂಚೆಸೂಗುರˌ ಮಹಿಳೆಯರ ಹಕ್ಕುಗಳನ್ನು ಕೊಡಿಸಲು ಮಂತ್ರಿ ಮದವಿಗೆ ರಾಜೀನಾಮೆ ನೀಡಿದರು. ಈ ದೇಶದಲ್ಲಿ ಅಷ್ರ್ಪಶ್ಯರನ್ನು ಕೀಳಾಗಿ ಕಾಣಲಾಗುತ್ತಿದೆ. ಈ ಕಾರಣಕ್ಕಾಗಿ ಬಾಬಾ ಸಾಹೇಬರು ಸಂವಿಧಾನದಲ್ಲಿ ದಮನಿತರಿಗೆ ಹಕ್ಕುಗಳನ್ನು ನೀಡಿದರು ಎಂದರು.

ಸಾರಿಪುತ್ರ ಬುದ್ಧ ವಿಹಾರದ ಪೂಜ್ಯ ಬಂತೇ ಆದಿತ್ಯ ಉದ್ಘಾಟಿಸಿದರು. ಶಾಸಕ ಶರಣಬಸಪ್ಪ ದರ್ಶನಾಪುರ ಡಾ.ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಆಯುಷ್ಮಾನ ಸುಭಾಷ ತಳವಾರ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷರಾಗಿ ಮಾಪಣ್ಣ ಮದ್ರಕಿ ಇದ್ದರು. ಶಿವಪುತ್ರ ಜವಳಿ ಪ್ರಾಸ್ತಾವಿಕ ಮಾತನಾಡಿದರು. ಬಲಭೀಮ ಬೇವಿನಹಳ್ಳಿ ಸ್ವಾಗತಿಸಿದರು. ಮರೆಪ್ಪ ಜಾಲಿಮಂಚಿˌ ಶರಣು ದೋರನಹಳ್ಳಿ ನಿರೂಪಿಸಿದರು. ಲಕ್ಷ್ಮಣ ಹಳಿಸಗರ ವಂದಿಸಿದರು. ದೊಡ್ಡಬಳ್ಳಾಪುರದ ಭೂಮ್ತಾಯಿ ಬಳಗದ ನಿರ್ಮಲಾ ಡಿ.ಆರ್. ಅವರಿಂದ ಭೀಮಗೀತೆಗಳನ್ನು ಹಾಡಲಾಯಿತು.

ದಲಿತ ಮುಖಂಡರಾದ ಮಲ್ಲಿಕಾರ್ಜುನ ಪೂಜಾರಿˌ ಅಮರೇಶ ವಿಭೂತಿಹಳ್ಳಿˌ ನೀಲಕಂಠ ಬಡಿಗೇರˌ ಶ್ರೀಶೈಲ್ ಹೊಸಮನಿˌ ಬಾಬುರಾವ ಬೂತಾಳಿˌ ಭೀಮರಾಯ ತಳವಾರˌ ನಾಗಣ್ಣ ಬಡಿಗೇರˌ ಶಂಕರ ಸಿಂಗೆ ನಗರ ಸಭೆ ಸದಸ್ಯರಾದ ಶಿವು ತಳವಾರˌ ಶರಣಪ್ಪ ಮುಂಡಾಸˌ ಶಾಂತಪ್ಪ ಕಟ್ಟಿಮನಿˌ ಚಂದಪ್ಪ ಸೀತನಿˌ ಚಂದ್ರು ಚಕ್ರವರ್ತಿ ಬಸವರಾಜ ತಳವಾರˌ ಡಾ.ರವೀಂದ್ರ ಹೊಸಮನಿˌ ಭಾಗಪ್ಪ ಮುಂಡಾಸˌ ಮಾನಪ್ಪ ಹುಲಸುರˌ ಗ್ಯಾನಪ್ಪ ಮ್ಯಾಗೇರಿˌ ಮಲ್ಲಪ್ಪ ಬಿರನೂರˌ ಶರಣಪ್ಪ ಟಣಕೇದಾರ ಸೇರಿದಂತೆ ಇತರರು ಇದ್ಡರು.

emedialine

Recent Posts

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

2 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

2 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

2 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

2 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

2 hours ago

ನಮೋಶಿ ನೇತೃತ್ವದಲ್ಲಿ, ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಶಿಕ್ಷಕರ ಸಭೆ

ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420