ಬಿಸಿ ಬಿಸಿ ಸುದ್ದಿ

ಮಹಿಳೆಗೆ ಸ್ವಾತಂತ್ರ್ಯ ನೀಡಿದವರಲ್ಲಿ ಬಸವಾದಿ ಶರಣರೇ ಮೊದಲಿಗರು

ಶಹಾಬಾದ: ಪುರುಷ ಪ್ರಧಾನವಾದ ಸಮಾಜದಲ್ಲಿ ಹೆಣ್ಣಿಗೆ ಯಾವುದೇ ಸ್ವಾತಂತ್ರ್ಯ ವಿರಲಿಲ್ಲ. 12 ನೇ ಶತಮಾನದಲ್ಲಿ ಪುರುಷರಿಗೆ ಇರುವ ಸ್ಥಾನಮಾನವನ್ನು ಮಹಿಳೆಯರಿಗೂ ನೀಡಿದವರಲ್ಲಿ ಬಸವಾದಿ ಶರಣರೇ ಮೊದಲಿಗರು ಎಂದು ಕಲಬುರಗಿ ಬಿದ್ದಾಪೂರ ಕಾಲೋನಿಯ ಶ್ರೀ ಅಕ್ಕಮಹಾದೇವಿ ಆಶ್ರಮದ ಪೂಜ್ಯ ಪ್ರಭು ತಾಯಿ ಹೇಳಿದರು.

ಅವರು ಗುರುವಾರ ಹಳೆಶಹಾಬಾದ ಬಸವಾದಿ ಶರಣರ ಒಕ್ಕೂಟ ಸಮಿತಿಯು ಬಸವ ಜಯಂತಿ ನಿಮಿತ್ತ ಹಳೆಶಹಾಬಾದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾದ ಪ್ರವಚನ ಕಾರ್ಯಕ್ರಮದ ಪ್ರವಚನಕಾರರಾಗಿ ಮಾತನಾಡಿದರು.

ಹೆಣ್ಣು ಅಡುಗೆ ಮನೆಯ ದಾಸಿ.ಮಕ್ಕಳು ಹಡೆಯುವ ಯಂತ್ರ ಎಂದು ನಂಬಿಕೊಂಡಿದ್ದ ಕಾಲಘಟ್ಟದಲ್ಲಿ ಶರಣರು ಪುರುಷರಿಗೆ ಇರುವ ಸ್ಥಾನಮಾನವನ್ನು ಹೆಣ್ಣಿಗೆ ಒದಗಿಸಿಕೊಟ್ಟರು. ಹೆತ್ತ ತಾಯಿ ಮಾತ್ರ ದೇವತಾ ಸಮಾನ ಎಂದು ವೇದ ಹೇಳಿದರೇ, 12ನೇ ಶತಮಾನದಲ್ಲಿ ಬಸವಾದಿ ಶರಣರು ಹೆಣ್ಣೇ ದೇವರನ್ನುವ ಮೂಲಕ ಸ್ತ್ರೀಯರಿಗೆ ಉನ್ನತವಾದ ಸ್ಥಾನವನ್ನು ನೀಡಿದ್ದರು. ಮಹಿಳೆಗೆ ಅನುಭವ ಮಂಟಪದಲ್ಲಿ ಎಲ್ಲರ ಸಮಾನ ಚರ್ಚೆಯಲ್ಲಿ ಭಾಗವಹಿಸುವ ಸ್ವಾತಂತ್ರ್ಯ ಇತ್ತು.ಅವರಿಗೆ ಅಕ್ಷರ ಅಭ್ಯಾಸವನ್ನು ಕಲಿಸಿದವರು ಬಸವಣ್ಣನವರು.ಅದರಿಂದಲೇ ಅನೇಕ ಶರಣಿಯರು ವಚನಗಳು ಬರೆದಿದ್ದನ್ನು ನಮ್ಮ ಕಣ್ಮುಂದೆ ಇವೆ. ಅಲ್ಲದೇ ಮೂಢ ಆಚರಣೆಗಳನ್ನು ತೊಲಗಿಸಲು ವೈಚಾರಿಕತೆ ಸಂಬಂಧಿಸಿದ ಪ್ರಸ್ತುತ ಸನ್ನಿವೇಶಗಳನ್ನು ಬಿಚ್ಚಿಟ್ಟರು. ಶರಣರ ಒಂದೊಂದು ವಚನಗಳು ನಮ್ಮ ಬದುಕಿಗೆ ದಿಕ್ಸೂಚಿಗಳಾಗಿವೆ. ವಚನ ಸಾಹಿತ್ಯದ ಮೂಲಕ ಎಲ್ಲ ಜನಾಂಗದ ಮನಸ್ಸುಗಳನ್ನು ಒಗ್ಗೂಡಿಸಿ ಸಮಾನತೆಯ ಸಮಾಜ ಕಟ್ಟಿದರು. ವೈಚಾರಿಕತೆ ಹಾಗೂ ವೈe್ಞÁನಿಕ ತಳಹದಿ ಹೊಂದಿರುವ ಧರ್ಮ ಇಂದು ಬೇಕಾಗಿದೆ. ಆದ್ದರಿಂದ ವಚನಗಳ ಅಧ್ಯಯನದ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು.

ಸಂಗೋಳ್ಳಿ ರಾಯಣ್ಣ ಯುವಘರ್ಜನೆ ಜಿಲ್ಲಾಧ್ಯಕ್ಷ ಬಸವರಾಜ ಮದ್ರಿಕಿ ಮಾತನಾಡಿ,ಹನ್ನೆರಡನೇ ಶತಮಾನದಲ್ಲಿ ಜಾತಿ ವಿಷಮತೆಯನ್ನು ಹೋಗಲಾಡಿಸಿ, ವೈಚಾರಿಕತೆಯ ಸಮಾಜವನ್ನು ನಿರ್ಮಾಣ ಮಾಡಿದ ವಿಶ್ವದ ಕಂಡ ಅಪ್ರತಿಮ ಸಂತ ವಿಶ್ವಗುರು ಬಸವಣ್ಣನವರು.ಬಾಬಾ ಸಾಹೇಬರು ರಚಿಸಿದ ಸಂವಿಧಾನ ನಮ್ಮ ಗ್ರಂಥವಾಗಬೇಕು. ಬಸವ ಧರ್ಮ ನಮ್ಮ ರಾಷ್ಟ್ರಧರ್ಮವಾಗಬೇಕು.ಅಂದಾಗ ಮಾತ್ರ ದೇಶದಲ್ಲಿ ಸಮಾನತೆಯನ್ನು ಕಾಣಲು ಸಾಧ್ಯ ಎಂದು ಹೇಳಿದರು.ಎಸ್.ಜಿ.ವರ್ಮಾ ಪ್ರೌಢಶಾಲೆಯ ಮುಖ್ಯಗುರು ಮಲ್ಲಿನಾಥ ಪಾಟೀಲ ಮಾತನಾಡಿದರು.

ಹಳೆಶಹಾಬಾದ ಅ.ಭಾ.ವೀ.ಮಹಾಸಭಾ ಅಧ್ಯಕ್ಷ ಮಲ್ಲಿಕಾರ್ಜುನ ಚಂದನಕೇರಿ, ಕೋಲಿ ಸಮಾಜದ ಮುಖಂಡ ಶಿವಕುಮಾರ ನಾಟೇಕಾರ ವೇದಿಕೆಯ ಮೇಲಿದ್ದರು.

ಗಿರಿಮಲ್ಲಪ್ಪ ವಳಸಂಗ ಪ್ರಾಸ್ತಾವಿಕ ನುಡಿದರು, ವಿಶ್ವನಾಥ ಹಡಪದ ನಿರೂಪಿಸಿದರು, ಶರಣಗೌಡ ಪಾಟೀಲ ಸ್ವಾಗತಿಸಿದರು, ಕುಪೇಂದ್ರ ತುಪ್ಪದ್ ವಂದಿಸಿದರು.

emedialine

Recent Posts

ಕೋವಿಡ್‌ನಿಂದ ಮಂಕಾಗಿದ್ದ ರಂಗ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ

ರಂಗದಂಗಳದಲ್ಲಿ ಮಾತುಕತೆಯಲ್ಲಿ ರಂಗಕರ್ಮಿ ಸಾಂಬಶಿವ ದಳವಾಯಿ ಹೇಳಿಕೆ ಕಲಬುರಗಿ: ಕೋವಿಡ್‌ನಿಂದ ರಂಗ ಚಟುವಟಿಕೆಗಳು ಮಂಕಾಗಿದ್ದವು. ಇದೀಗ ನಿಧಾನಗತಿಯಲ್ಲಿ ಅವು ಚೇತರಿಕೆ…

5 hours ago

ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಪತ್ರಿಕಾ ರಂಗದ ಪಾತ್ರ ಅನನ್ಯ: ಡಾ.ಶಿವರಂಜನ ಸತ್ಯಂಪೇಟೆ

ಕಲಬುರಗಿ: ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಸಾಧಕ-ಬಾಧಕಗಳನ್ನು ನಾಗರಿಕರಿಗೆ ಮುಟ್ಟಿಸುವ ಕಾರ್ಯ ಮಾಡುವ ಪತ್ರಿಕಾ ರಂಗವು ನಾಲ್ಕನೇ ರಂಗವಾಗಿ ಕಾರ್ಯನಿರ್ವಹಿಸುತ್ತಿದ್ದೆ.…

5 hours ago

ರಾಸಯೋ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ : ಪ್ರೊ. ಬಾಬಣ್ಣ ಹೂವಿನಬಾವಿ

ಕಲಬುರಗಿ : ಭಾರತ ದೇಶ ಪ್ರಗತಿಯಲ್ಲಿ ಯುವಶಕ್ತಿ ಸಹಭಾಗಿತ್ವ ಬಹಳ ಮುಖ್ಯ ಎಂಬುದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕನಸಾಗಿತ್ತು.…

7 hours ago

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಂಸ್ಕøತಿಕ ಸಂಜೆ ಕಾರ್ಯಕ್ರಮ

ಕಲಬುರಗಿ: ನಗರದ ಪತ್ರಿಕಾ ಭವನದಲ್ಲಿ ಜ್ಞಾನದೀಪ ನೃತ್ಯ ಕಲಾ ಸಂಸ್ಥೆ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಂಸ್ಕøತಿಕ ಸಂಜೆ ಕಾರ್ಯಕ್ರಮದಲ್ಲಿ…

8 hours ago

ಜಾನಪದ ನೃತ್ಯೋತ್ಸವ ಕಾರ್ಯಕ್ರಮ

ಕಲಬುರಗಿ: ನಗರದ ಮಾತಾ ಮಾಣಿಕೇಶ್ವರಿ ಕಾಲೋನಿಯಲ್ಲಿರುವ ಶ್ರೀ ಕೋಕಿಲ ಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ನವಚೇತನ ಸಾಂಸ್ಕøತಿಕ ಕಲಾ ಸಂಸ್ಥೆ ವತಿಯಿಂದ …

8 hours ago

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ.ಹನುಮಂತರಾವಗೆ ಅಭಿನಂದನ ಸಮಾರಂಭ

ಕಲಬುರಗಿ: ನಮ್ಮ ತಾಲೂಕಿನ ಹೆಮ್ಮೆಯ ಹೋರಾಟಗಾರ,ಕವಿ,ಸಾಹಿತಿಯಾದ ಡಾ.ಹನುಮಂತರಾವ ಅವರಿಗೆ ಪ್ರಶಸ್ತಿ ಲಭಿಸಿದ್ದು ಸಂತೋಷ ತಂದಿದೆ ಅವರಿಗೆ ಪ್ರಶಸ್ತಿ ದೊರಕಿದ್ದು ಸರ…

8 hours ago