ಕಲಬುರಗಿ: ನಮ್ಮ ತಾಲೂಕಿನ ಹೆಮ್ಮೆಯ ಹೋರಾಟಗಾರ,ಕವಿ,ಸಾಹಿತಿಯಾದ ಡಾ.ಹನುಮಂತರಾವ ಅವರಿಗೆ ಪ್ರಶಸ್ತಿ ಲಭಿಸಿದ್ದು ಸಂತೋಷ ತಂದಿದೆ ಅವರಿಗೆ ಪ್ರಶಸ್ತಿ ದೊರಕಿದ್ದು ಸರ ಕಾರಕ್ಕೆ ಘನತೆ ಬಂದಿದೆ ಎಂದು ಜನಪ್ರಿಯ ಶಾಸಕ ಎಂ.ವೈ.ಪಾಟೀಲ ಅಭಿಮತ ವ್ಯಕ್ತಪಡಿಸಿದರು ಸಿರಿಗನ್ನಡ ವೇದಿಕೆ ಮತ್ತು ಬುದ್ಧಂಕುರ ಪ್ರಕಾಶನದ ಕನ್ನಡ ಭವನದ ಸುವರ್ಣ ಸಭಾಂಗಣದಲ್ಲಿಏರ್ಪಡಿಸಿ ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಹಿರಿಯ ಸಾಹಿತಿ ಡಾ.ಹನುಮಂತರಾವ ಬಿ.ದೊಡ್ಡಮನಿ ಅವರಿಗೆ ಅಭಿನಂದನ ಸಮಾರಂಭವನ್ನು ಉದ್ಘಾಟಿಸಿ ದೊಡ್ಡಮನಿ ದಂಪತಿಗಳನ್ನು ಸತ್ಕರಿಸಿ ಮಾತನಾಡಿದ ಅವರು ದಲಿತ ಕುಟುಂಬದಿಂದ ಬಂದ ಇಂತಹ ಹಂತ ತಲುಪಿದ್ದು ನಮಗೆ ಮಾದರಿ ಎಂದರು.
ಸಮಾಜದ ನೈತಿಕ ಹೊಣೆಗಾರಿಕೆ ಲೇಖಕರಿಗೆ ಇದೆ ಪ್ರಶಸ್ತಿ ರಾಜ ಮಹಾರಾಜರ ಕಾಲದಿಂದ ನಡೆದುಕೊಂ ಡು ಬಂದಿವೆ,ಕರ್ನಾಟಕ ಸರಕಾರ ಕೊಡುವ ಪ್ರಶಸ್ತಿ ತುಂಬಾ ಮಹತ್ವ ಪ್ರಜಾತಾಂತ್ರಿಕ ಪ್ರಶಸ್ತಿ ದಲಿತ ಕುಟುಂಬದಿಂದ ಬಂದವರು ಚಾರಿತ್ರಿಕ ಹಿನ್ನೆಲೆಯಲ್ಲಿ ಜಾತಿ,ಗ್ರಾಮೀಣ, ಅಕ್ಷರ ಕಲಿತ ಎರಡನೇ ತಲೆಮಾರಿನ ಲೇಖಕರಾಗಿ,ಚಳವಳಿಗಾರರಾಗಿ,ಉಪನ್ಯಾಸಕರಾಗಿ ಡಾ.ಹನುಮಂತರಾವ ಅವರು ಕುಗ್ರಾಮದಲ್ಲಿ ಬಂದ ವರು ಅವರ ಸೇವೆಗೆ ದಲಿತ ಎಚ್ಚೆತ್ತ ಪ್ರಜ್ಞೆಗೆ ಕಲ್ಯಾಣ ಕರ್ನಾಟಕಕ್ಕೆ ಸಂದ ಗೌರವ ಎಂದು ಚಿಂತಕಿ ಡಾ.ಮೀನಾಕ್ಷಿ ಬಾಳಿ ಅಭಿನಂದನ ನುಡಿದರು.
ಗ್ರಾಮೀಣ ಭಾಗದಿಂದ ಬಂದ ನಾವು ನಲವತ್ತೈದು ವರ್ಷದ ಹಿಂದೆ ದಲಿತ ಸಂಘರ್ಷ ಸಮಿತಿ ಪ್ರಾರಂಭದ ಹೋರಾಟಗಾರರಲ್ಲಿ ದೊಡ್ಡಮನಿ ಒಬ್ಬರು ಪ್ರಖರ ವೈಚಾರಿಕದ ಬರಿತಾರ,ಹಾಡತಾರ,ಭಾಷಣ ಮಾಡತಾ ರ ಎಂದು ಹೋರಾಟಗಾರ ಬಸಣ್ಣ ಸಿಂಗೆ ಹೇಳಿದರು. ಡಾ.ಹನುಮಂತರಾವ ಅವರಿಗೆ ತೋದರೆ ಪಿಎಚ್.ಡಿ ಮಾಡಲು ತೊಂದರೆ ಕೊಟ್ಟವರಿದ್ದಾರೆ ಅವರಾರು ರಾಜ್ಯೋತ್ಸವ ಪ್ರಶಸ್ತಿ ಪಡೆದಿಲ್ಲ ಅವರು ಸ್ವಾರ್ಥಕ್ಕಾಗಿ ಕೆಲಸ ಮಾಡಿದವರಲ್ಲ ನಿಸ್ವಾರ್ಥ ಕೆಲಸಕ್ಕೆ ಸಂದ ಪ್ರಶಸ್ತಿ ಎಂದರು.
ಈ ಭಾಗದಲ್ಲಿ ದಲಿತ ಸಾಹಿತ್ಯ ಲೋಕದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.ಲೇಖಕರು ಸಮಾ ಜಕ್ಕೆ ಒಳ್ಳೆಯ ಮಾರ್ಗದರ್ಶನ ಮಾಡುವ ಕೆಲಸ ಮಾಡಲಿ ಎಂದು ಮಾಜಿ ಮಾಧ್ಯಮ ಅಕಾಡೆಮಿ ಸದಸ್ಯ ದೇವೇಂದ್ರಪ್ಪ ಕಪನೂರ ನುಡಿದರು.
ಸಾಹಿತಿ ಬಾಬುರಾವ ಜಮಾದಾರ ನಮ್ಮೂರ ಅವರೂರ ಪಕ್ಕದವರು ನಮ್ಮ ಅವ್ವ ಅಪ್ಪರಿಗೆ ಪುತ್ರ ಪ್ರೇಮ ಇತ್ತು ಅವರ ತಮ್ಮ ಒಡನಾಟ ಹಂಚಿಕೊಂಡ ರು. ಅಭಿನಂದಿತರಾದ ಡಾ.ಹನುಮಂತರಾವ ದೊಡ್ಡಮನಿ ಅವರು ಬಡತನದ ಮಧ್ತದಲ್ಲಿ ಬಂದು ಕಬ್ಬಡ್ಡಿ,ಕ್ರಿಡಾಪಟು,ಹೊಡೆಸಿ ಬಡಿಸಿಕೊಂಡರು ಎಂ.ಎ ದಲ್ಲಿ ಯಾರ್ಂಕ್ ಇತ್ತು ನಾನು ಎಲ್ಲರ ಜೊತೆ ಹೋರಾಡಿವಿ,ನಾವು ಬಡತನ ಬೇಗುದಿಯಲ್ಲಿ ಬೆಂದರು ಒಂದೆಡೆ ಒಳ- ಹೊರ ಹೋರಾಟದ ಬೆಗುದಿಯನ್ನು ಹೊರ ಹಾಕಿದರು. ಕಾಯಕದಲ್ಲಿ ನಿಷ್ಠೆ,ಭೀಮಾತೀರದ ಹಂತಕರಲ್ಲ ಚಿಂತಕರು ನಾವೆಂದು ತಮ್ಮ ಅನುಭವ ಕಥನ ವಿವರಿಸಿ ಮಲ್ಲಾಬಾದ,ಅಫಜಲಪುರ, ಕಲಬುರಗಿ ಜಿಲ್ಲೆಗೆ ಸಂದ ಪ್ರಶಸ್ತಿ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಡಾ.ಗವಿಸಿದ್ಧಪ್ಪ ಪಾಟೀಲರು ಮಾತನಾಡಿದರು. ಮಾಜಿ ಮಾಧ್ಯಮ ಅಕಾಡೆಮಿ ಸದಸ್ಯ ದೇವೇಂದ್ರಪ್ಪ ಕಪನೂರು ಅವರ 58 ನೆಯ ಹುಟ್ಟು ಹಬ್ಬದ ಪ್ರಯು ಕ್ತ ಪತ್ರಿಕಾ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಹನುಮಂತರಾವ ದೊಡ್ಡಮನಿ ಅವರ ಬದುಕು- ಬರಹ ಕುರಿತು ಡಾ.ಶರಣಪ್ಪ ಮಾಳಗೆ ಮಾರ್ಗದರ್ಶ ನದಲ್ಲಿ ಪಿಎಚ್.ಡಿ ಪಡೆದ ಡಾ.ಎಂ.ಡಿ.ರಾಜಾ ಪಟೇಲ್ ಅವರನ್ನು ಸನ್ಮಾನಿಸಲಾಯಿತು.
ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭ,ಬುದ್ಧಂ ಕುರ ಪ್ರಕಾಶನದ ಪ್ರಕಾಶಕ ಸಂತೋಷಕುಮಾರ ಎಸ್. ಕರಹರಿ ಸ್ವಾಗತಿಸಿದರು. ಲೇಖಕ ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು.ವೇದಿಕೆ ಪ್ರಧಾನ ಕಾರ್ಯದ ರ್ಶಿ ಡಾ.ಸಿದ್ಧಪ್ಪ ಹೊಸಮನಿ ವಂದಿಸಿದರು.
ಬಸವರಾಜ ಕೊನೇಕ್, ಶಿವರಾಜ್ ಪಾಟೀಲ, ಸುರೇಶ ಬಡಿಗೇರ,ಡಾ.ಸದಾನಂದ ಪೆರ್ಲ,ಡಾ.ನಾರಾಯಣ ರೋಳೇಕರ್,ಡಾ.ಪೀರಪ್ಪ ಸಜ್ಜನ,ಅಶೋಕ ಕಪನೂರ, ಡಾ.ವಿಜಯಕುಮಾರ ಕಾಂಬಳೆ, ಡಾ.ಕಗ್ಗನಮಡಿಗಿ, ಡಾ. ಅವಿನಾಶ ದೇವನೂರ, ಡಾ.ಪುಟ್ಟಮಣಿ ದೇವಿದಾಸ, ಗೌತಮ ಸಕ್ಕರಗಿ ಇದ್ದರು.
ಕಲಬುರಗಿ : ಭಾರತ ದೇಶ ಪ್ರಗತಿಯಲ್ಲಿ ಯುವಶಕ್ತಿ ಸಹಭಾಗಿತ್ವ ಬಹಳ ಮುಖ್ಯ ಎಂಬುದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕನಸಾಗಿತ್ತು.…
ಕಲಬುರಗಿ: ನಗರದ ಪತ್ರಿಕಾ ಭವನದಲ್ಲಿ ಜ್ಞಾನದೀಪ ನೃತ್ಯ ಕಲಾ ಸಂಸ್ಥೆ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಂಸ್ಕøತಿಕ ಸಂಜೆ ಕಾರ್ಯಕ್ರಮದಲ್ಲಿ…
ಕಲಬುರಗಿ: ನಗರದ ಮಾತಾ ಮಾಣಿಕೇಶ್ವರಿ ಕಾಲೋನಿಯಲ್ಲಿರುವ ಶ್ರೀ ಕೋಕಿಲ ಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ನವಚೇತನ ಸಾಂಸ್ಕøತಿಕ ಕಲಾ ಸಂಸ್ಥೆ ವತಿಯಿಂದ …
ಕಲಬುರಗಿ: ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಕರ್ನಾಟಕ ಸಂಘಟನಾ ವೇದಿಕೆ (ಕನ್ನಡಿಗರ ಶಕ್ತಿ) ವತಿಯಿಂದ ಕನ್ನಡ ರಾಜ್ಯೋತ್ಸವ ನಿಮಿತ್ಯವಾಗಿ ಕನ್ನಡದ ಹಬ್ಬ…
ಕಲಬುರಗಿ: ಯಾವ ವ್ಯಕ್ತಿ ಸಮಾಜದಲ್ಲಿರುವ ನೊಂದವರು, ಬಡವರು, ಅಸಹಾಯಕರ ಪರ ಕಾಳಜಿ ಹೊಂದಿ ಅವರಿಗೆ ಸಹಾಯ ಮಾಡುತ್ತಾನೆಯೋ, ಅವರೇ ಸಮಾಜದ…
ಆನೇಕಲ್: ಮಂಡ್ಯ ಟೈಮ್ಸ್ ಪತ್ರಿಕೆ ಸಂಪಾದಕರಾದ ಎಸ್. ಎಂ ಕುಮಾರಸ್ವಾಮಿ ರವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ರಾಜ್ಯ ಬೆಂಗಳೂರು…