ಬಿಸಿ ಬಿಸಿ ಸುದ್ದಿ

ಲಿಂಗಾಯತರು ರಾಜಕೀಯ ಪ್ರಜ್ಞೆ ಬೆಳೆಸಿ ಕೊಳ್ಳಿ

ಬಸವ ಜಯಂತಿ ರಾμÁ್ಟದ್ಯಂತ ಆಚರಿಸಲು ಪ್ರಧಾನಿಗೆ ಪತ್ರ: ಜಗತ್ತಿನ ಮೊಟ್ಟ ಮೊದಲ ಪಾರ್ಲಿಮೆಂಟ್ ಪರಿಕಲ್ಪನೆ ಕಟ್ಟಿಕೊಟ್ಟ ಬಸವಣ್ಣನವರು ಪ್ರಜಾಪ್ರಭುತ್ವ ಮೌಲ್ಯಗಳನ್ನು ಪ್ರಚುರಪಡಿಸಿದ ಮಹಾನ್ ದಾರ್ಶನಿಕ ವ್ಯಕ್ತಿ ಬಸವಣ್ಣನವರ ಜಯಂತಿಯನ್ನು ರಾಷ್ಟ್ರದಾದ್ಯಂತ ಆಚರಿಸುವಂತೆ ಆದೇಶ ನೀಡಬೇಕೆಂದು ಪ್ರಧಾನಮಂತ್ರಿ ಮೋದಿಗೆ ಪತ್ರ ಬರೆಯಲಾಗಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಉಪಾಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.

ಕಲಬುರಗಿ: ಲಿಂಗಾಯತರು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಪಾಟೀಲ ಬೆಟ್ಟದೂರು ತಿಳಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ಬಸವಪರ ಸಂಘಟನೆಗಳು ಹಾಗೂ ಕಾಯಕ ಶರಣರ ಒಕ್ಕೂಟದ ವತಿಯಿಂದ ಸೋಮವಾರದಿಂದ ಆರಂಭವಾಗಿರುವ 890ನೇ ಬಸವ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ‘ಶರಣರ ವಿಚಾರಧಾರೆಗಳಲ್ಲಿ ಸಾಂಸ್ಕøತಿಕ ಸ್ವಾತಂತ್ರ್ಯ’ ವಿಷಯ ಕುರಿತು ಅನುಭಾವ ನೀಡಿದರು.

ದೇವ ಭಾμÉಯನ್ನು ಜನಭಾμÉಯನ್ನಾಗಿಸಿದ ಶರಣರು ತಮ್ಮ ವಿಚಾರಧಾರೆಯ ಮೂಲಕ ಸಾಂಸ್ಕೃತಿಕ ಸ್ವಾತಂತ್ರ್ಯ ಒದಗಿಸಿದರು. ದಯವೇ ಧರ್ಮದ ಮೂಲ ಎಂದು ಹೇಳಿದ ಬಸವ ಧರ್ಮ ಹುಟ್ಟಿದ ಈ ನಾಡಿನಲ್ಲಿ ಚಾತುರ್ವರ್ಣವೇ ಧರ್ಮ ವಾಗಿರುವುದು ದುರಂತದ ಸಂಗತಿ ಎಂದು ವಿμÁದ ವ್ಯಕ್ತಪಡಿಸಿದರು.

ಬಸವಣ್ಣ ಸಂಶೋಧಿಸಿದ ಇಷ್ಟಲಿಂಗದಲ್ಲಿ ಬ್ರಹ್ಮಾಂಡ ಅಡಗಿದೆ. ಸ್ತ್ರೀ ಪುರುಷರೆಲ್ಲರಿಗೂ ಪೂಜೆ ಮಾಡಿಕೊಳ್ಳುವ ಸಮಾನ ಅವಕಾಶ ಕಲ್ಪಿಸಿದರು. ಅವರು ಹೇಳಿಕೊಟ್ಟ ಸಪ್ತಸೂತ್ರಗಳು ಸಂಸ್ಕೃತಿಯ ಬುನಾದಿಯಾಗಿದೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಬಸವ ಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಲಿಂಗ ತಾರತಮ್ಯ, ಬಡವ, ಬಲ್ಲಿದ, ವರ್ಣ, ವರ್ಗ ತಾರತಮ್ಯವಿಲ್ಲದ, ಮೂಢನಂಬಿಕೆ ಇಲ್ಲದ ಬಸವ ಧರ್ಮ ಪಾಲಿಸಬೇಕು. ಬಸವ ಧರ್ಮಕ್ಕಾಗಿ ಎಲ್ಲರೂ ಒಗ್ಗಟ್ಟಾಗಬೇಕು. ಮೂಗು ಬಿಗಿ ಹಿಡಿದರೆ ಬಾಯಿ ತನ್ನಿಂದ ತಾನೇ ತೆರೆಯುತ್ತದೆ ಎಂದು ತಿಳಿಸಿದರು.

ಗದ್ದುಗೆ ಮಠದ ಚರಲಿಂಗ ಮಹಾಸ್ವಾಮಿ ನೇತೃತ್ವ ವಹಿಸಿದ್ದರು.ಬಸವ ಜಯಂತಿ ಉತ್ಸವ ಸಮಿತಿ ಗೌರವಾಧ್ಯಕ್ಷ ಉಮಾಕಾಂತ ನಿಗ್ಗುಡಗಿ ಅಧ್ಯಕ್ಷತೆ ವಹಿಸಿದ್ದರು.

ಎಚ್ಕೆಇ ಸೊಸೈಟಿ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ, ಉತ್ಸವ ಸಮಿತಿ ಪ್ರಧಾನ ಸಂಚಾಲಕ ಆರ್.ಜಿ. ಶೆಟಗಾರ, ಜಹಿರಾಬಾದ ರಾಷ್ಟ್ರೀಯ ಬಸವದಳ ಅಧ್ಯಕ್ಷ ಶಂಕರೆಪ್ಪ ಪಾಟೀಲ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ, ನೀಲಕಂಠ ಅವಂಟಿ, ಭೀಮಣ್ಣ ಬೋನಾಳ ವೇದಿಕೆಯಲ್ಲಿದ್ದರು.

ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಶಾಬಾದಿ ಪ್ರಾಸ್ತಾವಿಕ ಮಾತನಾಡಿದರು. ಸಂತೋಷ ಹೂಗಾರ ನಿರೂಪಿಸಿದರು. ಶಿವಕುಮಾರ ಬಿದರಿ . ಬಸವಾಂಬಿಕಾ ವಚನ ನೃತ್ಯ ಪ್ರಸ್ತುತಪಡಿಸಿದರು. ವಿಜಯಲಕ್ಷ್ಮೀ ಕೆಂಗನಾಳ ಪ್ರಾರ್ಥನೆಗೀತೆ ಹಾಡಿದರು. ಬಸವರಾಜ ಧೂಳಾಗುಂಡಿ ಶರಣು ಸಮರ್ಪಿಸಿದರು.

ಲಕ್ಷಕೊಬ್ಬ ಭಕ್ತ ಕೋಟಿಗೊಬ್ಬ ಶರಣ ಇರುವುದರಿಂದ ಸಾಮಾನ್ಯರ ಹೆಸರಿನ ಮುಂದೆ ಶರಣ, ಶರಣೆ ಪದ ಬಳಕೆ ಮಾಡಬಾರದು. ಅದೇರೀತಿಯಾಗಿ ಜಾತಿ ಹಾಗೂ ಉಪಜಾತಿಗಳ ಹೆಸರಿನ ಮುಂದೆ ಸಮಾಜ ಎಂಬ ಪದ ಬಳಸುವುದು ಕೂಡ ತಪ್ಪು. – ಅಲ್ಲಮಪ್ರಭು ಬೆಟ್ಟದೂರು, ಕೊಪ್ಪಳ.

emedialine

Recent Posts

ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲರ ನುಡಿಮುತ್ತುಗಳು ಜೀವನದಲ್ಲಿ ಅಳವಡಿಸಿಕೊಳ್ಳಿ

ಕಲಬುರಗಿ: ನಗರದ ಜಸ್ಟಿಸ್ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ ಮತ್ತು ಸರ್ವಜ್ಞ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಕಲಬುರಗಿಯಲ್ಲಿ ಶ್ರಾವಣ…

14 hours ago

ಛಾಯಾಚಿತ್ರ ಪ್ರದರ್ಶನ ಭಾಷೆಯಷ್ಟೇ ಪ್ರಬಲ ಮಾಧ್ಯಮ

ಕಲಬುರಗಿ : ಒಂದು ಛಾಯಾಚಿತ್ರ ನೂರು ಪದಗಳಲ್ಲಿ ಹೇಳಬಹುದಾದೊಂದನ್ನು ಪರಿಣಾಮಕಾರಿ ಹೇಳುತ್ತದೆ, ಅದು ಭಾಷೆಯಷ್ಟೇ ಪ್ರಬಲ ಮಾಧ್ಯಮ ಎಂದು ಹಿರಿಯ…

14 hours ago

ಕಲಬುರಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು 29 ರಂದು: ಸರ್ವಾಧ್ಯಕ್ಷೆ ಲೇಖಕಿ ಪ್ರಮೀಳಾ ಜಾನಪ್ಪಗೌಡಗೆ ಸನ್ಮಾನ

ಕಲಬುರಗಿ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಆಗಷ್ಟ್ 29 ರಂದು ಹಮ್ಮಿಕೊಂಡಿರುವ ತಾಲೂಕಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ…

14 hours ago

18 ವರ್ಷ ಮೇಲ್ಪಟ್ಟ ಅರ್ಹರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಡಿ.ಸಿ.ಮನವಿ

ಕಲಬುರಗಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಿ.01-01-2025 ಅರ್ಹತಾ ದಿನವನ್ನಾಗಿ ಪರಿಗಣಿಸಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯವು ಇದೇ…

15 hours ago

ನಾಳೆ ಕಲಬುರಗಿಗೆ ಉಪ ಮುಖ್ಯಮಂತ್ರಿ ಆಗಮನ: ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ

ಕಲಬುರಗಿ: ರಾಜ್ಯದ "ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ ಅವರು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಕಲಬುರಗಿ ನಗರದ ಪಿ.ಡಿ.ಎ.…

15 hours ago

ಪ್ರಜ್ವಲ್‍ಗೆ ಸನ್ಮಾನ

ಕಲಬುರಗಿ: ಕಲ್ಯಾಣ ಕರ್ನಾಟಕದ ಮಹಾನಗರದಲ್ಲಿ ಬುದ್ಧ ಬಸವ ಅಂಬೇಡ್ಕರ್ ಕಂಪ್ಯೂಟರ್ ಬೆರಳಚ್ಚುಗಾರರ ಹಾಗೂ ಜೆರಾಕ್ಸ್ ಹಾಗೂ ಸಣ್ಣಪುಟ್ಟ ವ್ಯಾಪಾರಿಗಳ ಸಂಘದ…

15 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420