ಹೈದರಾಬಾದ್ ಕರ್ನಾಟಕ

ದಿ/ನಡ್ಜ್ ಸಂಸ್ಥೆಯ ಲಾಭ ಪಡೆದುಕೊಳ್ಳಿ; ಪಶು ವೈದ್ಯಾಧಿಕಾರಿ ರೇವಣಸಿದ್ಧಪ್ಪ

ಆಳಂದ: ಇಂದು ಆಳಂದ ತಾಲೂಕಿನ ಮಟಕಿ ಗ್ರಾಮದಲ್ಲಿ ದಿ/ನಡ್ಜ್ ಸಂಸ್ಥೆ ಹಾಗೂ ಪಶುಸಂಗೋಪನ ಇಲಾಖೆ ಸಹಯೋಗದೊಂದಿಗೆ 40 ಅತಿ ಕಡು ಬಡತನದಿಂದ ಕೂಡಿರುವ ಕುಟುಂಬಗಳ 80 ಆಡುಗಳಿಗೆ ಡಿ ವರ್ಮಿಂಗ್ ಹಾಗೂ ವ್ಯಾಕ್ಸಿನೇಷನ್ ಕ್ಯಾಂಪ್ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ತಾಲೂಕಿನ ಹಿರಿಯ ಪಶು ವೈದ್ಯಾಧಿಕಾರಿಗಳಾದ ರೇವಣಸಿದ್ದಪ್ಪನವರು ಚಾಲನೆ ಕೊಟ್ಟು ಮಾತನಾಡಿದರು. ಅವರು ತಮ್ಮ ಮಾತುಗಳಲ್ಲಿ ಆಡುಗಳಿಗೆ ಕಾಲಕ್ಕೆ ತಕ್ಕಂತೆ ವ್ಯಾಕ್ಸಿನೇಷನ್ ಮಾಡಿಸಬೇಕು, ಅವುಗಳಿಗೆ ಉತ್ತಮವಾದ ಆಹಾರ ನೀಡಬೇಕು. ಆಡುಗಳಿಗೆ ರೋಗ ಬರದಂತೆ ಎಚ್ಚರ ವಹಿಸಬೇಕು, ಸರಿಯಾಗಿ ನೋಡಿಕೊಂಡರೆ ಉತ್ತಮವಾದ ಲಾಭ ಕೊಡಲಿವೆ ಎಂದರು. ದಿ/ನಡ್ಜ್ ಸಂಸ್ಥೆಯು ಕಡು ಬಡತನ ನಿರ್ಮೂಲನೆ ಕಾರ್ಯಕ್ರಮದಲ್ಲಿ ಮಟಕಿ ಗ್ರಾಮದ ಒಟ್ಟು 40 ಕುಟುಂಬಗಳಿಗೆ ಆಡುಗಳನ್ನು ನೀಡಿದ್ದು, ಅವುಗಳ ಲಾಭ ಗ್ರಾಮದ ಜನತೆ ಪಡೆಯಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದಿ/ನಡ್ಜ್ ಸಂಸ್ಥೆಯ ಕರ್ನಾಟಕದ ಆಪರೇಷನ್ ಮ್ಯಾನೇಜರ್ ವಿಶ್ವನಾಥ ಎಂ.ಕೆ. ನಡ್ಜ್ ಸಂಸ್ಥೆಯು ತನ್ನ ಗ್ರಾಮೀಣ ಅಭಿವೃದ್ಧಿಯ ಕೇಂದ್ರದ ಭೂರಹಿತ, ಸಣ್ಣ ಮತ್ತು ಅತಿ ಕಡಿಮೆ ಕೃಷಿಕ ಕುಟುಂಬಗಳಿಗೆ ಸುಸ್ಥಿರ ಜೀವನೋಪಾಯವನ್ನು ನಿರ್ಮಿಸಲು ಸಹಾಯ ಮಾಡುವ ಮೂಲಕ ಅತ್ಯಂತ ಬಡತನದಲ್ಲಿ ವಾಸಿಸುತ್ತಿರುವ ಕುಟುಂಬಗಳೊಂದಿಗೆ ಕೆಲಸ ಮಾಡುತ್ತಿದೆ. ಭೂರಹಿತ, ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯವನ್ನು ಸುಧಾರಿಸುವುದು ಗ್ರಾಮೀಣ ಜೀವನೋಪಾಯದಲ್ಲಿ ಮಹಿಳೆಯರ ಏಜೆನ್ಸಿಯನ್ನು ನಿರ್ಮಿಸಿ ಕಡುಬಡವರಿಗೆ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುತ್ತಿದೆ.

ಕಳೆದ 3 ವರ್ಷಗಳಿಂದ, 81 ಸಾವಿರಕ್ಕೂ ಹೆಚ್ಚು ಗ್ರಾಮೀಣ ಕುಟುಂಬಗಳ ಜೊತೆಗೆ ಬಡತನ ನಿರ್ಮಲನೆಗೆ ಕೆಲಸ ಮಾಡುತ್ತಿದೆ. ಪ್ರಸ್ತುತ ಕಲಬುರಗಿ ಮತ್ತು ಬೀದರ ಜಿಲ್ಲೆಗಳಲ್ಲಿ ಆಳಂದ ಮತ್ತು ಔರಾದ ತಾಲೂಕಿನಲ್ಲಿ ಒಟ್ಟು 710 ಮಹಿಳಾ ಪ್ರಧಾನ ಕುಟುಂಬಗಳ ಕಡುಬಡತನ ನಿರ್ಮೂಲನಾ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಕುಟುಂಬದ ಮಹಿಳೆಯರಿಗೆ ಕುರಿ ಸಾಕಾಣಿಕೆ ಮತ್ತು ಸಣ್ಣ ವ್ಯಾಪಾರಕ್ಕೆ ಸಹಕಾರಿ ಮಾಡಿ ಅವರು ಅದರ ಮೂಲಕ ತಮ್ಮ ಬಡತನ ನಿರ್ಮೂಲೆನೆಗೆ ದಾರಿಮಾಡಿಕೊಡಲಾಗುತ್ತಿದೆ. ಇದಲ್ಲದೇ ಸರಕಾರದ ಸಹಕಾರದ ತತ್ವದಡಿಯಲ್ಲಿ ಅನೇಕ ಯೋಜನೆಳಿಗೆ ಸಂಯೋಜಿಸಿ ಉತ್ತಮ ಮತ್ತು ಸ್ವಾಭಿಮಾನದ ಬದುಕಿಗೆ ದಾರಿ ಮಾಡಿಕೊಡಲಾಗುತ್ತಿದೆ ಇದರ ಲಾಭವನ್ನು ಆಯ್ಕೆಯಾದ ಗ್ರಾಮಗಳು ಚೆನ್ನಾಗಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಕಲಬುರಗಿ ತಂಡದ ಮುಖ್ಯಸ್ಥರಾದ ನಾಗರಾಜ್ ಮಾತನಾಡಿ ನಮ್ಮ ಸಂಸ್ಥೆಯು ಕೈಗೊಂಡಿರುವ ಬೇಸ್‌ಲೈನ್ ಸರ್ವೆಯ ಪ್ರಕಾರ ಕುಟುಂಬಗಳ ಆಯ್ಕೆ ಮಾಡಿದ್ದು, ಮೊದಲನೇ ಜೀವನೋಪಾಯ ಕುರಿಸಾಗಾಣಿಕೆ ಹಾಗೂ ಎರಡನೇ ಜೀವನೋಪಾಯ ಸಣ್ಣ ವ್ಯಾಪರವನ್ನು ಆಯ್ಕೆಯಾದ ಕಡುಬಡ ಕುಟುಂಬಗಳಿಗೆ ನೀಡಿ ಅವರ ಆದಾಯದ ಮಟ್ಟವನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾರ್ಯಕ್ರಮವು ಇನ್ನಷ್ಟು ವಿಸ್ತರಿಸಿ, ಸರಕಾರದೊಂದಿಗೆ ಸಂಯೋಜಿಸಿ ಕೆಲಸ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜೀವನೋಪಾಯ ತರಬೇತುದಾರರಾದ ಲಕ್ಷ್ಮಿ ಕುಂಬಾರ್, ಸಮುದಾಯ ಅಭಿವೃದ್ಧಿ ಅಧಿಕಾರಿಗಳಾದ ಸೋಮನಾಥ್ ವಿಠಲ್, ಮಹಾವೀರ್, ಮಲ್ಲಿಕಾರ್ಜುನ್ ದೊರೆ, ಗ್ರಾಮದ ಫಲಾನುಭವಿ ಮಹಿಳೆಯರು (ಅಕ್ಕಂದಿರು) ಹಾಗೂ ಗ್ರಾಮದ ಮುಖಂಡರು ಹಿರಿಯರು ಪಂಚಾಯತಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

emedialine

View Comments

  • ನಮ್ಮನಿಮ್ಮೇಲರ ಸಹಕಾರ ಮತ್ತು ಪ್ರೋತ್ಸಹ ಹೀಗೆ ಒಗ್ಗಟ್ಟಿನಿಂದ ಮುಂದೆ ಸಾಗಲಿ 💐🙏

Recent Posts

ಕಲಬುರಗಿಯಲ್ಲಿ ಕೆ.ಇ.ಎ ಪರೀಕ್ಷೆ ಸುಸೂತ್ರ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಕಲ್ಯಾಣ ಕರ್ನಾಟಕ ರಸ್ತೆ…

2 hours ago

ತಿಪಟೂರು ಕೃಷ್ಣಗೆ ” ಕಾಯಕ ರತ್ನ ಪ್ರಶಸ್ತಿ ” ಪ್ರದಾನ

ಬೀದರ್: ಮಾಧ್ಯಮ ಮತ್ತು ಸಾಮಾಜಿಕ ಸಂಘಟನೆ ಕ್ಷೇತ್ರದಲ್ಲಿ ದೀರ್ಘ ಸೇವೆಯನ್ನು ಗುರ್ತಿಸಿ ತಿಪಟೂರು ಕೃಷ್ಣ ಅವರಿಗೆ " ಕಾಯಕ ರತ್ನ…

2 hours ago

ಕೃಷಿ ವಿಜ್ಞಾನಿ ಡಾ.ಎಸ್.ಎ.ಪಾಟೀಲ್ ಹೃದಯಾಘಾತದಿಂದ ನಿಧನ

ಕಲಬುರಗಿ: ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ನಾಡಿನ ಶ್ರೇಷ್ಠ ಕೃಷಿ ವಿಜ್ಞಾನಿಗಳಾಗಿದ್ದ ಡಾ.ಎಸ್.ಎ.ಪಾಟೀಲ್ ಬಿರಾಳ (80) ಅವರು ನಿಧನರಾಗಿದ್ದಾರೆ.…

4 hours ago

ಜಲಮೂಲ, ಪರಿಸರ ಸಂರಕ್ಷಣೆಯತ್ತ ಯುವಜನತೆ ಸಕ್ರಿಯರಾಗಲಿ: ಹುಲಿಕುಂಟೆ ಮೂರ್ತಿ

ಬೆಂಗಳೂರು: ಯುವಜನತೆ ನದಿಮೂಲಗಳು ಹಾಗೂ ಪರಿಸರ ಸಂರಕ್ಷಣೆಯ ಅಭಿಯಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮೈಗೂಡಿಸಿಕೊಳ್ಳಬೇಕೆಂದು…

5 hours ago

ಕಲಬುರಗಿ ಜಿಲ್ಲಾ ಗಾಣಿಗ ನೌಕರರ ಸಭೆ 17ಕ್ಕೆ: ಸಂಗನಗೌಡ ಪಾಟೀಲ್‌

ಕಲಬುರಗಿ: ಜಿಲ್ಲಾ ಗಾಣಿಗ ನೌಕರರ ಕಲ್ಯಾಣ ಸಂಘದ ಸದಸ್ಯರ ಸಭೆ ಜು.17ರಂದು ಬೆಳಗ್ಗೆ 10.30ಕ್ಕೆ ಕನ್ನಡ ಭವನದಲ್ಲಿ ನಡೆಯಲಿದ್ದು, ಸಂಘದ…

7 hours ago

371 (ಜೆ) ಸಮರ್ಪಕ ಅನುಷ್ಠಾನಗೊಳಿಸದಿದ್ದರೆ ಮತ್ತೊಮ್ಮೆ ಉಗ್ರ ಹೋರಾಟದ ಎಚ್ಚರಿಕೆ

ಕಲಬುರಗಿ: 371(ಜೆ) ಕಲಂ ಸಮರ್ಪಕ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಘೋಷಣೆ ಮಾಡಿ ಕಚೇರಿ ಸ್ಥಾಪಿಸಬೇಕು.ಇಲ್ಲದಿದ್ದಲ್ಲಿ ಮತ್ತೊಮ್ಮೆ ಕಲ್ಯಾಣ ಕರ್ನಾಟಕದ ಎಲ್ಲಾ…

7 hours ago