ಇತ್ತೀಚಗೆ ನಾನು ಕಥೆ ಬರೆಯುವುದನ್ನು ನಿಲ್ಲಿಸಿದ್ದೇನೆ. ಹಿರಿಯ ಸಾಹಿತಿಯೊಬ್ಬರ ಸಲಹೆ ಮೇರೆಗೆ, ಕಥೆಗಳನ್ನು ಓದಿಕೊಳ್ಳಲು ಪ್ರಾರಂಭ ಮಾಡಿದ್ದೇನೆ. ನನ್ನ ಪ್ರಕಾರ ನನ್ನಂತಹ ಯುವಕರು ಸಾಹಿತ್ಯಕವಾಗಿ ಬೆಳೆಯಬೇಕೆಂದರೆ, ನಮ್ಮ ಕನ್ನಡ ಸಾಹಿತ್ಯದ, ಕಥಾ ಪ್ರಕಾರವನ್ನು ಅತ್ಯಂತ ಆಳವಾಗಿ ಅಧ್ಯಯನ ಮಾಡುವುದು ಇವತ್ತಿನ ಅವಶ್ಯಕೆತೆಯಂದು ಭಾವಿಸುತ್ತೇನೆ. ಸತ್ಯ ಬರೆಯುವುದರಿಂದ ನಿಷ್ಠೂರನಾದ ಉದಾಹರಣೆಯು ಇದೆ. ಆ ಕ್ಷಣಕ್ಕೆ ಅನುಭವಿಸಿದ ಅನುಭವಗಳನ್ನು ಆಲೋಚನೆಗೊಳಪಡಿಸಿ ಅಭಿವ್ಯಕ್ತಗೊಳಿಸಿದ್ದೇನೆ.
ಇತ್ತೀಚಗೆ ನಾನು ನಮ್ಮ ಹಿರಿಯ ಸಾಹಿತಿಗಳಾದ ಶ್ರೀ ಸಿದ್ಧರಾಮ ಹೊನ್ಕಲ್ ಅವರ “ಮತ್ತೆ ಮಳೆ ಹೊಯ್ಯುತ್ತಿದೆ ಭೂಮಿ ಕರೆಯುತ್ತಿದೆ” ಎಂಬ ವಾಸ್ತವಿಕತೆ ಬಿಂಬಿಸುವ ಕಥೆ ಓದಿ ಮುಗಿಸಿದೆ. ಈ ಕಥೆಯ ಬಗ್ಗೆ ಬರೆಯುವ ಮುನ್ನ ಕಥೆಗಾರರಾದ ಹೊನ್ಕಲ್ ಅವರು ನಮ್ಮ ಭಾಗದ ಹೊನ್ನಿನಂತಹ ಕಥೆಗಾರರೆಂಬ ಹಾಗೂ ಅತ್ಯಂತ ಹಿರಿಯ ಸಾಹಿತಿ ಎಂಬ ಅಪ್ಪಟ ಸತ್ಯ ಮರೆತಿಲ್ಲ. ಅವರೊಂದಿಗೆ ನನ್ನ ಸಾಹಿತ್ಯದ ಒಡನಾಟವು ಇದೆ. ಅವರು ಈ ಭಾಗದಲ್ಲಿ ಅಷ್ಟೆ ಅಲ್ಲದೇ ನಾಡಿನಾದ್ಯಾಂತ ಅನೇಕ ವೇದಿಕೆಗಳಲ್ಲಿ ಸಾಹಿತ್ಯದ ಬಗ್ಗೆ ಮಾತನಾಡಿದ ವ್ಯಕ್ತಿ, ನಮ್ಮಂತಹ ಯುವಕರಿಗೆ ಮಾರ್ಗದರ್ಶಿ ಎನ್ನುವ ಸತ್ಯ ಗಮನದಲ್ಲಿರಿಸಿಯೇ ಬರೆಯುತ್ತಿದ್ದೇನೆ. ನನ್ನ ಅಭಿಪ್ರಾಯ ಕಥೆಯ ಸುತ್ತವೆ ಹೊರತು ಕಥೆಗಾರನ ಸುತ್ತ ಅಲ್ಲ.
ಕಥೆಯು ನೂರಂದಯ್ಯ ಎನ್ನುವ ವ್ಯಕ್ತಿಯ ಚಿಂತನೆಗಳಿಂದ ಪ್ರಾರಂಭವಾಗುತ್ತದೆ. ತಾನು ತನ್ನ ಮಠಬಿಟ್ಟು ಗ್ರಹಸ್ತನಾದ ಬಳಿಕ, ಜನ ಮಾತನಾಡಿಕೊಳ್ಳುವ ರೀತಿಯೊಳಗೆ ಹಳ್ಳಿಗಳಲ್ಲಿ ನಡೆಯುವ ಅತ್ಯಂತ ಸಾಮಾನ್ಯ ಸಂಗತಿಯಿಂದ ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಕಥೆ ಹಾಗೆ ಇನ್ನೊಂದು ಮಗ್ಗಲು ಪಡೆಯುವಾಗ, ಶಹಾಪೂರನ ಸುತ್ತಮುತ್ತಲಿನ ರೈತರ ಸಾಮಾನ್ಯ ಸಂಗತಿಯೊಂದರ ಕಡೆಗೆ ವಾಲುತ್ತದೆ. ಯಾದಗಿರಿ ಜಿಲ್ಲೆಯ ರೈತರು ಆಂದ್ರಾದಿಂದ ಬರುವ ಜನರಿಗೆ ತಮ್ಮ ಹೊಲಗಳನ್ನು ಲೀಜಿಗೆ ಹಾಕಿ ತಾವು ಮಾತ್ರ ಊರ ಕಟ್ಟಿಯ ಮೇಲೆ, ದೇಶದ ಚಿಂತನೆಗಳನ್ನು ಮಾತನಾಡುತ್ತಾ ಕುಳಿತುಕೊಳ್ಳುತ್ತಾರೆ ಎನ್ನುವ ಅತ್ಯಂತ ಸಹಜ ಹಾಗೂ ಅವಶ್ಯಕ ವಿಷಯದ ಕುರಿತು ಕಥೆ ಚರ್ಚಿಸುತ್ತದೆ.
ಕಥೆಗಾರರು ರೈತರು ಯಾಕೆ ತಮ್ಮ ತಮ್ಮ ಹೊಲದಲ್ಲಿ ತಾವೇ ಶ್ರಮವಹಿಸಿ ಕೆಲಸ ಮಾಡಲು ಮುಂದೆ ಬರುತ್ತಿಲ್ಲ ಎನ್ನುವ ಆತಂಕವನ್ನು ನೂರಂದಯ್ಯ ಎನ್ನುವ ಕಥಾನಾಯಕನ ಮೂಲಕ ಹೊರ ಹಾಕುತ್ತಾರೆ. ಕಥೆ ಮುಂದುವರೆಯುತ್ತಾ ಒಂದಷ್ಟು ಹಳ್ಳಿ ಸೊಗಡಿನ ಮಾತುಗಳು ಬರುತ್ತವೆ, ಹಳ್ಳಿಯ ವಾತಾವರಣದ ಸಣ್ಣ ಗಾಳಿ ಹೊರಸೂಸುತ್ತದೆ. ಕಥೆ ಬೆಳೆಯುತ್ತಾ ಹೋದಂತೆ ನಾಲ್ಕರಿಂದ ಐದು ಪಾತ್ರಗಳ ಸುತ್ತಲು ಗಿರಕಿ ಹೊಡೆಯುತ್ತದೆ. ಸಮಸ್ಯೆ ಮತ್ತು ಕಥಾ ವಸ್ತು ವಾಸ್ತವವೆನಿಸಿದರು, ಓದುಗನ್ನು ಹಿಡಿದಿಡುವ ಶಕ್ತಿ ಕಳೆದುಕೊಳ್ಳುತ್ತಾ ಮುಂದೆ ಸಾಗುತ್ತದೆ. ಒಬ್ಬ ಕಥೆ ಓದುಗನಿಗೆ ಕುತುಹಲ ಕಥಾನಾಯಕ ಏನಾಗಬಹುದು ಎಂಬ ಆತಂಕ ಎದುರಾದಾಗ ಕಥಾನಾಯಕ ಬಹಳ ಸರಳವಾಗಿ ತನ್ನ ಕಥೆ ಹೇಳಿ ಮುಗಿಸುತ್ತಾನೆ. ಕಥೆಗಾರ ಆಂದ್ರಪ್ರದೇಶದ ಜನರ ಶ್ರಮವನ್ನು ಹೇಳುತ್ತಾರೆ ಹಾಗೂ ನಮ್ಮ ಭಾಗದ ರೈತರು ಎಷ್ಟು ಶ್ರಮಜೀವಿಗಳಿದ್ದರು ವಲಸೆ ಹೋಗುತ್ತಾರೆ ಎನ್ನುವ ಆತಂಕ ವ್ಯಕ್ತಪಡಿಸುತ್ತಾರೆ.
ಈ ಕಥೆಯು ಸರಳವಾಗಿ ಓದಿ ಮುಗಿಸಬಹುದಾಗಿದೆ. ಕಥಾವಸ್ತು ಆಯ್ಕೆ ಅವಶ್ಯಕವೆನಿಸದರು, ಓದುಗನನ್ನು ಹಿಡಿದಿಡಬಲ್ಲ ಶಕ್ತಿ ಚಾಕಚಕ್ಯತೆ ಕಥೆಯೊಳಗೆ ಇಲ್ಲ ಎನ್ನುವುದು ನನ್ನ ಅಭಿಪ್ರಾಯ. ಒಂದು ಸಣ್ಣ ವಿಷಯವನ್ನು ಕಥೆ ಹೇಳುವಾಗ ಹೇಗೆ ರೋಚಕತೆ, ಕುತುಹಲ, ತನ್ಮಯತೆ, ಹಿಡಿದಿಡಬಲ್ಲ ಗುಣವನ್ನು ಕಥೆ ಕಳೆದುಕೊಂಡು ನಿರಾಸದಾಯವಾಗಿ ಓದಿಸಿಕೊಳ್ಳುತ್ತದೆ. ಘಟನಾವಳಿಗಳನ್ನು ಸಾಹಿತ್ಯದ ಹಲವು ಬಗೆಗಳನ್ನು ಬಳಸಿಕೊಂಡು ಕಥೆ ಬರೆಯಬೇಕಿತ್ತು ಎಂದು ನನ್ನ ಅಭಿಪ್ರಾಯ. ರೈತರ ಹಾಡುಪಾಡುಗಳನ್ನು ಅತ್ಯಂತ ಹತ್ತಿರದಿಂದ ಕಂಡ ಕಥೆಗಾರರು ಅದನ್ನು ಬಳಸಿಕೊಂಡಿದ್ದರೆ ಕಥೆಗೆ ಮೆರಗು ಬರುತ್ತಿತ್ತು, ಓದುಗರನ್ನು ಅವರ ಮನಸ್ಸನ್ನು ಹಿಡಿದಿಡುವ ಶಕ್ತಿ ಅದಕ್ಕೆ ಇಮ್ಮಡಿಯಾಗಿತ್ತಿತ್ತು ಎಂದು ಓದುವಾಗ ನನಗೆ ಅನಿಸಿದ್ದು.
ಎಸ್.ಎಲ್.ಬೈರಪ್ಪನವ “ಯಾನ” ಕಾದಂಬರಿ ಓದುವಾಗ ಕಥಾಜಗತ್ತಿನೊಳಗೆ ನಮ್ಮನ್ನು ಕರೆದೊಯ್ಯುವ ರೀತಿಯನ್ನು ನಾನು ಆಪೇಕ್ಷಿಸಿದ್ದೆ ಆದರೆ ಕಥೆಯ ಕೊನೆಯವರೆಗೂ ಅದ್ಯಾವುದೇ ಕಥಾಹಂದರ ನನ್ನ ಅನುಭವಕ್ಕೆ ಬರಲಿಲ್ಲ. ಇದೊಂದು ಹಳ್ಳಿಯಲ್ಲಿ ನಡೆಯುವ ಸಾಮಾನ್ಯ ಘಟನೆ ಅದಕ್ಕೆ ಕೆಲವು ಸರಳ ಹಳ್ಳಿ ಮಾತುಗಳಿಂದ ವಿವರಿಸಿದ್ದಾರೆ. ನೂರಂದಯ್ಯನ ಊರಿನ ಬಗೆಗಿನ ಕಾಳಜಿ, ಕೆಂಚ ಎನ್ನುವವನ ಉಡಾಫೆ ಮಾತುಗಳು, ತಳವಾರನ ಡಂಗುರ, ನೂರಂದಪ್ಪನವರ ಸಮಾರೂಪದ ನುಡಿ ಇವುಗಳ ಸುತ್ತಲೂ ಕಥೆ ಗಿರಕಿ ಹೊಡೆಸುತ್ತದೆ. ಕಥೆಗೆ ಮತ್ತು ಪಾತ್ರಕ್ಕೆ ಬೇಕಾದ ಕಥಾಹಂದರ ಅದಕ್ಕೊಂದು ಚೌಕಟ್ಟು, ಅಂದ ಚಂದ ಮರೆಯಾಗುತ್ತದೆ.
ಕಥಾ ಪ್ರವೇಶ ಮಾಡುವ ಓದುಗನನ್ನು ಕಥೆಯ ಕೊನೆಯವರೆಗೂ ಹಿಡಿದಿಡಬೇಕಾದ ಕಥೆ ಸ್ವಲ್ಪ ಓದಿದ ಬಳಿಕ ವಿಶೇಷವಾಗಿ ನಮ್ಮ ಭಾಗದ ಜನಕ್ಕೆ ಇದು ಬಹಳ ಸಾಮಾನ್ಯ ಸಂಗತಿಯಾಗಿದೆ ಇದಕ್ಕೆ ಔಷಧ ತಾತ್ಕಾಲಿಕವಾಗಿದೆ ಎಂದು ಪುಟದಲ್ಲಿಯೇ ನಿಲ್ಲಿಸಬಹುದು ಎನಿಸುತ್ತದೆ. ಈ ಕಥೆಯನ್ನು ಓದುವಾಗ ಮಾಸ್ತಿ,ಕುವೆಂಪು ಅವರ ಕಥೆಗಳನ್ನು ನೆನಪಾಗುತ್ತವೆ ಆದರೆ ಅವರು ಬಳಿಸಿರುವ ಕಥೆಯ ಸುತ್ತಮುತ್ತಲಿನ ಕಥಾವಸ್ತುಗಳು ಕಾಣದೇಯಿದ್ದಾಗ ಮನಸ್ಸು ಕೊರಗುತ್ತದೆ.
ಕೊನೆಯದಾಗಿ ನನಗೆ ಅನಿಸಿದ್ದು ನಮ್ಮ ಕಥೆಗಳು ಜೀವಂತ ವಸ್ತುಗಳ ಜೊತೆಗೆ ಮಾತ್ರ ಮಾತನಾಡುತ್ತವೆ. ನಾನು ಓದಿದ ಅದೆಷ್ಟೊ ಕಥೆ ಕಾದಂಬರಿ ಕಾವ್ಯದಲ್ಲಿ ನಿರ್ಜಿವ ವಸ್ತುಗಳಲ್ಲಿ ಜೀವ ತುಂಬುವಂತಹ ಸಾಹಿತ್ಯವನ್ನು ಕಾಣುತ್ತೇವೆ. ಈ ವಿಷಯ ಪ್ರಸ್ತುತ ಕಥೆಯಲ್ಲಿ ಕಾಣುವುದಿಲ್ಲ. ಈ ಕಥೆ ಓದುವಾಗ ನನಗೆ ಪ್ರಭಾಕರ ಜೋಶಿ ಅವರ ಕಾದಂಬರಿ ನೆನಪಾಯಿತು. ನಗಾರಿ ಎನ್ನುವ ಜೀವವಿಲ್ಲದ ವಸ್ತುವಿಗೆ ನಗಾರಿ ನಾಗ್ಯಾ ದ್ವೇಶಿಷಿಸುವ ಬಗೆ ಕಣ್ಣಿಗೆ ಕಟ್ಟುವಂತಹ್ದು, ನೇರವಾಗಿ ಊರಿನ ಹೆಸರು ಬಳಸದೇ ಅವರು “ಮೋಹಪುರ” ಎನ್ನುವ ನವಿರಾದ ಬಾಣ ಬಳಸುತ್ತಾರೆ. ಇವುಗಳೆ ನಮ್ಮ ಕಥೆಗಳಿಗೆ ಓದುಗನ ಹೃದಯದೊಳಗೆ ಅಚ್ಚಾಗಿ ಉಳಿಯುತ್ತವೆ ಎನ್ನುವುದು ನನ್ನ ಅಭಿಪ್ರಾಯ. ಪ್ರಸ್ತುತ ಓದಿದ ಕಥೆಯಲ್ಲಿ ಈ ವಿಷಯ ಕಾಣಸಿಗುವುದಿಲ್ಲ. ಅದು ಕಥೆಗಾರರ ಲಿಮಿಟ್ ಕೂಡಾ ಆಗಿರಬಹುದು ಬಟ್ ನಾನು ಆಪೇಕ್ಷಿಸಿದ ಬಹಳ ಹಂಬಲದಿಂದ ಓದಿದ ಈ ಕಥೆಯಲ್ಲಿ ಹೆಚ್ಚಿನದ್ದೇನೊ ನಿರೀಕ್ಷೆ ದೊರೆಯಲಿಲ್ಲ. ನನ್ನ ನಿರಿಕ್ಷೆಯಲ್ಲಿಯೂ ತಪ್ಪಿರಬಹುದು ಅಲ್ಲವೆ?
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…