ಕಲಬುರಗಿ: ಈ ಸಲದ ಚುನಾವಣೆ ಕೇವಲ ಪ್ರಿಯಾಂಕ್ ಖರ್ಗೆ ಮಣಿಕಂಠನ ನಡುವಿನ ಚುನಾವಣೆಯಲ್ಲ ಇದು ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿ, ಬೊಮ್ಮಾಯಿ, ಆದಿತ್ಯನಾಥ,ಶಾ, ಮೋದಿ ಮತ್ತು ಆರ್ ಎಸ್ ಎಸ್ ನಡುವೆ ನಡೆಯುವ ಚುನಾವಣೆಯಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.
ಇಂಗಳಗಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದ ಅವರು ಬಿಜೆಪಿ ಅಭ್ಯರ್ಥಿ ಮಣಿಕಂಠನ ವಿರುದ್ದ ಒಟ್ಟು ನಲವತ್ತು ಕೇಸುಗಳಿವೆ ಅವುಗಳಲ್ಲಿ ಅಕ್ರಮ ಅಕ್ಕಿ ಹಾಗೂ ಹಾಲಿನ ಪೌಡರ ಸಾಗಾಣಿಕೆ ಮಾಡಿದ ಕೇಸುಗಳಿವೆ. ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಹಾಗೂ ಮಹಾರಾಷ್ಟ್ರ ದ ಒಟ್ಟು 6 ಜಿಲ್ಲೆಯ ಪೊಲೀಸ್ ಸ್ಟೇಷನ್ ಗಳಲ್ಲಿವೆ. ಆದರೆ ಈ ಕೇಸುಗಳೆಲ್ಲ ನಾನೇ ಹಾಕಿಸಿದ್ದೇನೆ ಎಂದು ಹೇಳುತ್ತಿದ್ದಾನೆ. ನಾನು ಅವನನ್ನು ನೋಡಿರಲೇ ಇಲ್ಲ. ಅವನ ಮೇಲೆ ಕೇಸು ಹಾಕಿದ್ದು ಬಿಜೆಪಿ ಸರ್ಕಾರವೇ ಎಂದು ನೆನಪಿಸಿದರು.
ರಾಮರಾಜ್ಯದ ಮಾತನಾಡುವ ಬಿಜೆಪಿಗರು ಚಿತ್ತಾಪುರ ದಲ್ಲಿ ರಾವಣನಿಗೆ ಟಿಕೇಟ್ ಕೊಟ್ಟಿದ್ದಾರೆ. ಅವನು ಯಾವ ಮರ್ಯಾದಾಪುರಿಷೋತ್ತಮ. ಇಂತವನಿಂದ ರಾಮರಾಜ್ಯ ಸ್ಥಾಪನೆ ಸಾಧ್ಯನಾ? ಎಂದರು.
ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಪ್ರತಿ ಕುಟುಂಬಕ್ಕ 200 ಯೂನಿಟ್ ಉಚಿತ ವಿದ್ಯುತ್, ಗೃಹ ಲಕ್ಷ್ಮಿ ಯೋಜನೆಯಡಿಯಲ್ಲಿ ಮನೆಯ ಒಡತಿಗೆ ರೂ 2000 ಸಹಾಯ ಧನ, ಯುವನಿಧಿ ಯೋಜನೆಯಡಿಯಲ್ಲಿ ಸರ್ಕಾರಿ ನೌಕರಿ ಸಿಗುವವರೆಗೆ ಪದವಿಧರರಿಗೆ ಪ್ರತಿ ತಿಂಗಳಿಗೆ 3000 ಡಿಪ್ಲೋಪ ಪಡೆದವರಿಗೆ ರೂ 2000 ಕೊಡಲಾಗುವುದು. ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗುವುದು. ಅನ್ನಭಾಗ್ಯ ಯೋಜನೆಯಡಿಯಲ್ಲಿ ಹತ್ತು ಕೇಜಿ ಅಕ್ಕಿ ನೀಡಲಾಗುವುದು. ಈ ಯೋಜನೆಗಳ ಗ್ಯಾರೆಂಟಿ ಗೆ ಪತ್ರ ನೀಡಲಾಗುತ್ತಿದೆ. ಇನ್ನೂ ಆರನೆಯ ಗ್ಯಾರೆಂಟಿಯೊಂದನ್ನು ನಾನು ಕೊಡುತ್ತಿದ್ದೇನೆ ಅದೇನಂದರೆ, KKRDB ಯಲ್ಲಿ ಭ್ರಷ್ಠಾಚಾರ ಮಾಡಿದವರಿಗೆ, ಸಾಮಾಜಿಕ ಆತಂಕಕಾರಿಯಾದವರಿಗೆ ಹಾಗೂ ಅವರಿಗೆ ಸಹಕರಿಸುವವರಿಗೆ ಜೈಲಿಗೆ ಕಳಿಸುತ್ತೇನೆ. ಮಹಿಳೆಯರ ರಕ್ಷಣೆ ಹಾಗೂ ಯುವಕರ ಭವಿಷ್ಯಕ್ಕೆ ಅಡ್ಡಿಯಾಗುವವರನ್ನು ಬೆಳೆಯಲು ಬಿಡುವುದಿಲ್ಲ ಎಂದರು.
ಬಿಜೆಪಿ ಅಭ್ಯರ್ಥಿ ದೇವಾಲಯ ಕಟ್ಟಲು ಅಕ್ರಮದ ಹಣ ಕೊಡುತ್ತಾನೆ ಅಂತಹ ಹಣದಿಂದ ದೇವಾಲಯ ಕಟ್ಟಿದರೆ ದೇವರು ಮೆಚ್ಚುತ್ತಾನೆಯೇ? ಎಂದು ಪ್ರಶ್ನಿಸಿದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…