ಬಿಸಿ ಬಿಸಿ ಸುದ್ದಿ

ಎತ್ತಿನ ಬಂಡಿ ಹತ್ತಿ ಕೂಡಿ, ಕೋಳ್ಕೂರಲ್ಲಿ ಡಾ. ಅಜಯ್ ಸಿಂಗ್ ಭರ್ಜರಿ ಮತ ಬೇಟೆ

ಕಲಬುರಗಿ/ ಜೇವರ್ಗಿ; ಜೇವರ್ಗಿ ಮತಕ್ಷೇತ್ರದ ಕಾಂಗ್ರೆಸ್ ಹುರಿಯಾಳು, ಹಾಲಿ ಶಾಸಕ ಡಾ. ಅಜಯ್ ಸಿಂಗ್ ಸೋಮವಾರ ಮತ ಯಾಚನೆಗಾಗಿ ಕೋಳಕೂರ್, ಕೂಡಿ, ಹರವಾಳ ಗ್ರಾಮಗಳಲ್ಲಿ ಮನೆ ಮನೆ ಸುತ್ತಿದ್ದಲ್ಲದೆ ಎತ್ತಿನ ಬಂಡಿ ಹತ್ತಿದರು.

ಕೋಳಕೂರ್ ಜಿಪಂ ಕ್ಷೇತ್ರ ವ್ಯಾಪ್ತಿಲ್ಲಿ ಇಂದು ನಡೆದ ಭರಾಟೆಯ ಪ್ರಚಾರದಲ್ಲಿ ಡಾ. ಅಜಯ್ ಸಿಂಗ್ ಮನೆ ಮನೆ ಸುತ್ತಿ ಮತ ಕೇಳಿದರು, ನಂತರ ಕೋಳಕೂರದಲ್ಲಿ ಎತ್ತಿನ ಬಂಡಿ ಹತ್ತಿ, ಹೆಗಲ್ಲಿ ಕಂಬಳಿ ಹೊದ್ದು ನಿಂತು, ಕೈಯಲ್ಲಿ ಬಾರುಕೋಲು ಹಿಡಿದು ತಿರುಗಿಸುತ್ತ ಜನಮನ ಸಳೆದರು.

ಸತತ 3 ನೇ ಬಾರಿಗೆ ಗೆಲ್ಲುವ ಉಮೇದಿನಲ್ಲಿರುವ ಡಾ. ಅಜಯ್ ಸಿಂಗ್ ಕೋಳಕೂರಲ್ಲಿ ಮನೆ ಮನೆ ಸುತ್ತಿದರು. ಎಲ್ಲಾ ಸಮುದಾಯದ ಮನೆಗಳಿಗೆ ಹೋಗಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ಕೊಡುತ್ತ ಮತ ಕೇಳಿದರು. ದಾರಿಯಲ್ಲಿ ಅನೇಕರು ಅಭಿಮಾನಿಗಳು ಹೂವಿನ ಹಾರ, ಶಾಲು ಹಾಕಿ ಡಾ. ಅಜಯ್ ಸಿಂಗ್ ಅವರನ್ನ ಸ್ವಾಗತಿಸಿ ಹರಸಿದರು.

ಕೋಳಕೂರಿನ ಗ್ರಾಮ ದೇವರಾದ ಸಿದ್ದಬಸವೇಶ್ವರ ಮದಿರಕ್ಕೆ ಹೋಗಿ ಆರತಿಯಲ್ಲಿ ಪಾಲ್ಗೊಂಡು ನಮಿಸಿದ ಡಾ. ಅಜಯ್ ಸಿಗ್ ಊರಲ್ಲಿನ ವಿವಿಧ ಧರ್ಮಿಯರ ಮಂದಿರ, ಮಸೀದಿಗಳಿಗೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಕೂಡಿಯಲ್ಲಿ ಎತ್ತಿನ ಬಂಡಿ ಮೆರವಣಿಗೆ- ಬೈಕ್ ರ್ಯಾಲಿ; ಕೋಳಕೂರ್‍ನಿಂದ ಬೈಕ್ ರ್ಯಾಲಿಯ ಮೂಲಕ ಯುವಕರ ದಂಡು ಡಾ. ಅಜಯ್ ಸಿಂಗ್‍ರನ್ನ ಕೂಡಿ ವರೆಗೂ ಕರೆತಂದಿತ್ತು. ಕ್ರಾಸ್‍ನಲ್ಲೇ ಸಿದ್ದವಾಗಿಡಲಾಗಿದ್ದ ಎತ್ತಿನ ಬಡಿ ಹತ್ತಿದ ಡಾ. ಅಜಯ್ ಸಿಂಗ್ ಕೈಯಲ್ಲಿ ಬಾರುಕೋಲು ಹಿಡಿದು ಜನರ ಗಮನ ಸೆಳೆದರು.

ಸುಮಾರು 2 ಕಿಮೀ ವರೆಗೂ ನಡೆದ ಎತ್ತಿನ ಬಂಡೆಯ ರ್ಯಾಲಿಯಲ್ಲಿ ನೂರಾರು ಯುವಕರು ಸೇರಿದ್ದರು. ಡೊಳ್ಳು, ಹಲಗೆ, ನಾನಾ ವಾದ್ಯಗಳಿಂದಾಗಿ ಇಡೀ ಮತ ಯಾಚನೆ ಮೆರವಣಿಗೆ ಬಣ್ಣಬಣ್ಣದಾಗಿ ಕಂಗೊಳಿಸಿತ್ತು. ಕೂಡಿ ದರ್ಗಾ ವ್ಯಾಪ್ತಿಯಲ್ಲಿ ಹಾಗೂ ಊರಲ್ಲೆಲ್ಲಾ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಮೆರವಣಿಗೆಯ ನಂತರ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಅಜಯ್ ಸಿಂಗ್ ಗೃಹಲಕ್ಷೀ ಯೋಜನೆಯಡಿ ಪ್ರತಿ ಗೃಹಿಣಿಗೆ ಮಾಸಿಕ 2 ಸಾವರ ರುಪಾಯಿ ಕೊಡುವುದು ಸೇರಿದಂತೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ವಿವರಿಸಿ ಮತ ಕೇಳಿದರು.

ವಿರೋಧ ಪಕ್ಷಗಳು ವಿನಾಕಾರಣ ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಯೋಜನೆಗಳಿಗೆ ಟೀಕಿಸುತ್ತಿವೆ. ನಮ್ಮ ಪಕ್ಷದ ಯೋಜನೆಗು ಜನರ ಗಮನ ಸೆಳೆಯುತ್ತಿರೋದರಿಂದ ವಿಪಕ್ಷಗಳಿಗೆ ಭಯ ಹುಟ್ಟಿದೆ. ಅದಕ್ಕಾಗಿ ಆತಂಕ- ಭೀತಿಯಲ್ಲಿ ಬಿಜೆಪಿಯವರು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಟೀಕಿಸುತ್ತಿದೆ ಎಂದು ಕಾಂಗ್ರೆಸ್ ಟೀಕೆಗಳಿಗೆ ತಿರುಗೇಟು ನೀಡಿದರು. ಕೂಡಿ ಗ್ರಾಮದಿಂದ ನೇರವಾಗಿ ಹರವಾಳಕ್ಕೆ ತೆರಳಿ ಅಲ್ಲಿಯೂ ಮನೆ ಮನೆ ತೆರಳಿ ಡಾ. ಅಜಯ್ ಸಿಂಗ್ ಮತ ಯಾಚಿಸಿದರು.

ಕಾಂಗ್ರೆಸ್ ಮುಖಂಡರಾದ ರಾಜಶೇಖರ ಸಿರಿ, ಶಿವಶರಣಪ್ಪ ಕೋಬಾಳ್, ಕೆಪಿಸಿಸಿ ಮಾಜಿ ಸದಸ್ಯ ಹಣಮಂತರಾವ ಭೂಸನೂರ್, ಎಸ್‍ಎಸ್ ಹುಲ್ಲೂರ್, ಶಿವನಗೌಡ ಮಂದರವಾಡ್, ಸುಭಾಷ ಹೂಗಾರ್, ರುಕ್ಕುಂ ಪಟೇಲ್, ಮಹಾದೇವಪ್ಪಗೌಡ ಪಾಟೀಲ್ ನರಿಬೋಳ್ ಸೇರಿದಂತೆ ಅನೇಕರು ಇದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

5 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

16 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

16 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

18 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

18 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

18 hours ago