ಕಲಬುರಗಿ: ಬೆವರು ಹರಿಸಿ, ನಿಸ್ವಾರ್ಥವಾಗಿ ಸೇವೆಯನ್ನು ಸಲ್ಲಿಸುವ ಕಾಯಕ ಜೀವಿಗಳ ಕೊಡುಗೆಯನ್ನು ಸಮಾಜ ಮರೆಯುವಂತಿಲ್ಲ. ಕೃಷಿ, ಕೈಗಾರಿಕೆ, ಸೇವಾ ಕ್ಷೇತ್ರದ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಕಾರ್ಮಿಕರ ಅವಶ್ಯಕತೆಯಿದೆ. ಎಲ್ಲ ಕಾರ್ಮಿಕರಿಗೆ ಸೂಕ್ತ ಜೀವನ ಭದ್ರತಾ ಕ್ರಮಗಳನ್ನು ಕೈಗೊಂಡು ಅವರಿಗೆ ಅನಕೂಲ ಮಾಡಿಕೊಡಬೇಕಾದದ್ದು ಅಗತ್ಯವಾಗಿದೆ ಎಂದು ಕಾರ್ಮಿಕ ಮುಖಂಡ ಡಾ.ಸುನೀಲಕುಮಾರ ಎಚ್.ವಂಟಿ ಹೇಳಿದರು.
ನಗರದ ಸಾರ್ವಜನಿಕ ಉದ್ಯಾನವನದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’, ‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ ಮತ್ತು ‘ಕನ್ನಡ ಜಾನಪದ ಪರಿಷತ್’ನ ಜಿಲ್ಲಾ ಘಟಕ ಇವುಗಳು ಸಂಯುಕ್ತವಾಗಿ ಸೋಮವಾರ ಏರ್ಪಡಿಸಿದ್ದ ‘ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ವಿವಿಧ ಕಾಯಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ನಿರಂತರವಾಗಿ ಕಾರ್ಯ ಮಾಡುವ ಕಾಯಕ ಜೀವಿಗಳಿಗೆ, ಅವರು ಮಾಡುವ ಕಾರ್ಯ ಕೀಳೆಂದು ಭಾವಿಸಿ, ಅವರನ್ನು ಕನಿಷ್ಟವೆಂದು ತಿಳಿದರೆ, ಸ್ವಚ್ಚತೆ ಬಗ್ಗೆ ವಿಚಾರ ಮಾಡಬೇಕಾಗುತ್ತದೆ. ಕಾಯಕ ಜೀವಿಗಳಿಗೆ ಬುದ್ದ-ಬಸವ-ಡಾ.ಅಂಬೇಡ್ಕರ್ ಅವರ ಕೊಡುಗೆ ಪ್ರಮುಖವಾಗಿದೆ. ದುಡಿಯುವ ವರ್ಗ ಕನಿಷ್ಠ, ದುಡಿಸಿಕೊಳ್ಳುವ ವರ್ಗ ಶ್ರೇಷ್ಠ ಎಂಬ ಸಾಮಾಜಿಕ ವ್ಯವಸ್ಥೆ ಹೋಗಬೇಕು. ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿಯೇ ಎಲ್ಲಾ ಕಾಯಕ ಶರಣರಿಗೆ ಸಮಾನವಾದ ಸ್ಥಾನಮಾನ ನೀಡಿ, ‘ಕಾಯಕವೇ ಕೈಲಾಸ’ ಎಂಬ ತತ್ವ ಸಾರಿದ್ದಾರೆ. ಡಾ.ಅಂಬೇಡ್ಕರ್ ಅವರು ಕಾರ್ಮಿಕರ ಹಿತರಕ್ಷಣೆಗಾಗಿ ಸೂಕ್ತ ಕಾನೂನುಗಳನ್ನು ನೀಡಿದ್ದಾರೆ. ನನ್ನ ಜೀವನ ಕೊನೆಯವರೆಗೆ ಕಾರ್ಮಿಕರ ಹಿತರಕ್ಷಣೆಗಾಗಿ ನಾನು ಶ್ರಮಿಸುತ್ತೇನೆ ಎಂದರು.
ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಮಾತನಾಡಿ, ಸರ್ಕಾರ ಗರಿಷ್ಟ ಮಾನವ ಸಂಪನ್ಮೂಲ ಬಳಕೆಗೆ ಪ್ರೇರೇರಿಸಬೇಕು. ವಿಮೆ, ಜೀವನಕ್ಕೆ ಭದ್ರತೆ, ಖಾಸಗಿ ಕ್ಷೇತ್ರದ ಬಂಡವಾಳದಾರರಿಗೆ ಉತ್ತೇಜನ ನೀಡುವುದರ ಮೂಲಕ, ದುಡಿಯುವ ಕೈಗಳಿಗೆ ಕೆಲಸ ನೀಡಬೇಕು. ದುಡಿಮೆಗೆ ತಕ್ಕಂತೆ ವೇತನ, ಸೌಲಭ್ಯಗಳು ನೀಡಬೇಕು. ‘ಕಾರ್ಮಿಕ ಸ್ನೇಹಿ ವಾತಾವರಣ’ ನಿರ್ಮಿಸಿದಾಗ ಮಾತ್ರ ಯೋಜನೆಗಳು ಸಾಫಲ್ಯ ಪಡೆಯಬಹುದಾಗಿದೆ. ಕಾಯಕಜೀವಿಗಳಿಂದ ಮಾತ್ರ ಸಮಾಜದಲ್ಲಿ ನೆಮ್ಮದಿ, ಶಾಂತಿ ನೆಲೆಸಲು ಸಾಧ್ಯ ಎಂಬ ವಿಷಯ ಮರೆಯಬಾರದು ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ, ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಉಪಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ, ಸದಸ್ಯರಾದ ಶಿವಯೋಗೆಪ್ಪಾ ಬಿರಾದಾರ, ಬಸವರಾಜ ಎಸ್.ಪುರಾಣೆ, ಸಂತೋಷ ರಾಯ್ಕೋಡೆ, ಬಸವರಾಜ ನಂದೂರಕರ್, ಸಾಗರ ಅಡೆ ಸೇರಿದಂತೆ ಇನ್ನಿತರರಿದ್ದರು.
ಮಹಾನಗರ ಪಾಲಿಕೆ ಪೌರ ಕಾರ್ಮಿಕರುಗಳಾದ ನಿರ್ಮಲಾ ದೊಡ್ಡಮನಿ, ಮೋನಮ್ಮ ಸಾವೂರ್, ಶೋಭಾ ಜಂಬಗಾ, ರಂಜಿತಾ ಇಂದಿರಾನಗರ, ತಬಸುಮ್ ಬೇಗಂ, ಸುಮಿತ್ರಾಬಾಯಿ ಕಾಂಬಳೆ, ಪಂಜಶೀಲಾ ರಾಜೋಳಕರ್, ಆಷ್ಮಾ ಬೇಗಂ, ಲಾಲಬಿ ಬೇಗಂ, ಲಕ್ಷ್ಮೀಬಾಯಿ ಕಮಲಾಪುರಕರ್, ಜಗದೇವಿ ಚಿತ್ತಾಪುರ, ಅಂಬಿಕಾ ಹೊಸಮನಿ, ಮಮತಾ ನೆಲ್ಲೂರ್, ಕಸ್ತೂರಬಾಯಿ ತೆಗನೂರ್, ಸುನೀತಾ ಸೈದಾಪೂರ್,ಶರಣು ಅವಂಟಿ, ಪರಶುರಾಮ ಬೇಲಾದ್, ಕೈಲಾಸ ಚಿಂಚೋಳಿ, ಶಿವಲಿಂಗ ಕಂಠಿ, ಕಲ್ಯಾಣಿ ಗುತ್ತೇದಾರ, ಸೂರಪ್ಪ ಕಂಬಾರ, ಚೇತನ ಶಿಂಧೆ ಅವರಿಗೆ ಸತ್ಕರಿಸಿ, ಶುಭಾಷಯಗಳನ್ನು ಕೋರಲಾಯಿತು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…