ಬಿಸಿ ಬಿಸಿ ಸುದ್ದಿ

ಅಕ್ಕಿ ಕದಿಯುವವರಿಗೆ‌ ಮತ ಹಾಕಬೇಕಾ: ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕಲಬುರಗಿ: ಅಕ್ಕಿ ಕದಿಯುವವರಿಗೆ, ಜಾತಿ ಜಾತಿ ಜಗಳ ಹಚ್ಚುವವರಿಗೆ, ಕೊಲೆಯತ್ನ ಮಾಡಿದ ಆರೋಪ ಇರುವವರಿಗೆ, ಬಾರ್ ಗಳಲ್ಲಿ ಜಗಳ ಮಾಡುವವರಿಗೆ ಚಿತ್ತಾಪುರದ ಜನರು ಮತ ಹಾಕಬೇಕಾ ? ಯಾರು ನಿಮ್ಮ ಶಾಸಕರಾಗಬೇಕು ಎಂದು ನೀವು ನಿರ್ಧರಿಸಬೇಕಾದ ಸಮಯ ಬಂದಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.

ಡೋಣಗಾಂವ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಜನರು ಜಾಗೃತರಾಗಬೇಕು. ಇದು‌ ಚುನಾವಣಾ ಪ್ರಚಾರ ಸಭೆ ಎನ್ನುವ ‌ಬದಲು ಜಾಗೃತಿ ಮೂಡಿಸುವ ಸಭೆ ಎಂದರೂ ತಪ್ಪಾಗಲಾರದು. ಯಾಕೆಂದರೆ, ಬಜೆಪಿಗರು ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರಿ ಕ್ರಿಮಿನಲ್ ಹಿನ್ನೆಲೆ ಇರುವವರಿಗೆ ಟಿಕೇಟ್ ನೀಡಿ ಅವರನ್ನೇ ಶಾಸಕರನ್ನಾಗಿ ಮಾಡ ಹೊರಟಿದೆ ಎಂದರು.

ಯುವಕರು ಅವನ ಹಿಂದೆ ಹೋದರೆ, ಅವನಂತೆ ಕ್ರಿಮಿನಲ್ ಹಿನ್ನೆಲೆ ಹೊಂದಿ ಜೈಲು ಬೇಲು ಅಂತ ಕೋರ್ಟಿಗೆ ಅಲೆಯಬೇಕಾಗುತ್ತದೆ. ಈ ಬಗ್ಗೆ ತಾವೆಲ್ಲ ಎಚ್ಚರವಹಿಸಬೇಕು ಎಂದರು.

ಕಾಂಗ್ರೆಸ್ ಪಕ್ಷದ‌ ಐದು ಪ್ರಮುಖ ಗ್ಯಾರೆಂಟಿಗಳ ಬಗ್ಗೆ ವಿವರಿಸಿದ ಖರ್ಗೆ. ಗೃಹ ಭಾಗ್ಯ, ಗೃಹಜ್ಯೋತಿ, ಹತ್ತು ಕೆಜಿ ಅಕ್ಕಿ, ಯುವನಿಧಿ ಹಾಗೂ ಮಹಿಳೆಯರಿಗೆ ಸರ್ಕಾರದ ಬಸ್ ಗಳಲ್ಲಿ ಉಚಿತ ಪ್ರಯಾಣದ‌ ಯೋಜನೆಗಳು ಜನರಿಗೆ ಅನುಕೂಲವಾಗಲಿವೆ. ಆರನೆಯ ಗ್ಯಾರೆಂಟಿ ಏನಂದರೆ, ಅಕ್ಕಿ ಕಳ್ಳತನ ಮಾಡುವವರಿಗೆ ಜೈಲಿಗೆ ಕಳಿಸುವುದಾಗಿದೆ ಎಂದರು.

ಕಳೆದ ಬಾರಿ ನೀವು ನನಗೆ ಆಶೀರ್ವಾದ ಮಾಡಿದ್ದೀರಿ ಆದರೆ ಕೂಲಿ ಸ್ವಲ್ಪ ಕಮ್ಮಿ ಆಗಿತ್ತು. ಆದರೆ, ಈ ಸಲ ಕೂಲಿ ಜಾಸ್ತಿ ಕೊಡಿ‌ ಅಂದಾಗಲೇ ಮಾತ್ರ ಹೆಚ್ಚಿನ ಅನುದಾನ ತಂದು ಅಭಿವೃದ್ದಿ ಮಾಡಲಿದ್ದೇನೆ ಎಂದು ಭರವಸೆ‌ ನೀಡಿದರು.

ವೇದಿಕೆಯ ಮೇಲೆ ಜಗನಗೌಡ ರಾಮತೀರ್ಥ, ಭಾಗನಗೌಡ ಸಂಕನೂರು, ನಾಗರೆಡ್ಡಿ ಪಾಟೀಲ ಕರದಾಳ ಸೇರಿದಂತೆ ಮತ್ತಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

13 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

23 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

23 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

23 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago