ʻಕ್ರಿಶ್-ಇ ಸ್ಮಾರ್ಟ್ ಕಿಟ್ʼ ಮೂಲಕ ದೇಶದಲ್ಲಿ ನಡೆಸಲಾಗುವ ಪ್ರತಿ ಎಕರೆ ಮತ್ತು ಕಿಲೋಮೀಟರ್ ಬಾಡಿಗೆ ಚಟುವಟಿಕೆಯನ್ನು ಟ್ರ್ಯಾಕ್ ಮಾಡುವ ಮತ್ತು ಡಿಜಿಟಲೀಕರಣಗೊಳಿಸುವ ಗುರಿಯನ್ನು ʻಮಹೀಂದ್ರಾʼ ಹೊಂದಿದೆ
ಬೆಂಗಳೂರು: ಮಹೀಂದ್ರಾದ ʻಅಗ್ಟೆಕ್ʼ ಉದ್ಯಮವಾದ ʻಕ್ರಿಶ್-ಇʼ ಕರ್ನಾಟಕದಲ್ಲಿ ʻಕ್ರಿಶ್-ಇ ಸ್ಮಾರ್ಟ್ ಕಿಟ್ʼ(ಕೆಎಸ್ಕೆ) ಅನ್ನು ಬಿಡುಗಡ ಮಾಡಿದೆ.
ʻಕ್ರಿಶ್-ಇ ಸ್ಮಾರ್ಟ್ ಕಿಟ್ʼ ಉದ್ಯಮದಲ್ಲಿ ಇಂತಹ ಮೊದಲ ರೀತಿಯ ಸ್ಮಾರ್ಟ್ ಸಾಧನವಾಗಿದೆ. ಇದು ಕೃಷಿ ಉಪಕರಣಗಳ ಮಾಲೀಕರಿಗೆ ʻಜಿಪಿಎಸ್ʼ ಆಧರಿತ ಟೈಮ್ ಟ್ರ್ಯಾಕಿಂಗ್ ಮೂಲಕ ತಮ್ಮ ಟ್ರ್ಯಾಕ್ಟರುಗಳು ಮತ್ತು ಕೃಷಿ ಉಪಕರಣಗಳ ವಿವರವಾದ ಒಳನೋಟಗಳನ್ನು ಒದಗಿಸುತ್ತದೆ. ಜೊತೆಗೆ ಸ್ಮಾರ್ಟ್ಫೋನ್ ಮೂಲಕ ನಿರಾಯಾಸವಾಗಿ ವಿವಿಧ ನಿಯತಾಂಕಗಳನ್ನು ದೂರದಿಂದಲೇ ಮೇಲ್ವಿಚಾರಣೆ ಮಾಡಲು ಅವಕಾಶ ಒದಗಿಸುತ್ತದೆ.
ಅತ್ಯಾಧುನಿಕ ಕೊಡುಗೆಯಾದ ʻಕ್ರಿಶ್-ಇ ಸ್ಮಾರ್ಟ್ ಕಿಟ್ʼ ಅನ್ನು 2015ರಲ್ಲಿ ʻಐಐಟಿ ಬಾಂಬೆʼಯ ನಾಲ್ವರು ಹಳೆಯ ವಿದ್ಯಾರ್ಥಿಗಳು ಸ್ಥಾಪಿಸಿದ ಕೃಷಿ ತಂತ್ರಜ್ಞಾನ ನವೋದ್ಯಮ ʻಕಾರ್ನೋಟ್ ಟೆಕ್ನಾಲಜೀಸ್ʼ ಅಭಿವೃದ್ಧಿಪಡಿಸಿದೆ. 20 ವರ್ಷ ಹರೆಯದ ʻಐಐಟಿಬಿ ರೇಸಿಂಗ್ʼ ತಂಡದ ಭಾಗವಾಗಿದ್ದ ವಿದ್ಯಾರ್ಥಿಗಳು ʻಪಿಟ್ʼನಿಂದಲೇ ರೇಸಿಂಗ್ ವಾಹನಗಳ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಲು ಇದನ್ನು ಅಭಿವೃದ್ಧಿಪಡಿಸಿದ್ದರು. ಇಂದು ʻಕಾರ್ನೋಟ್ ಟೆಕ್ನಾಲಜೀಸ್ʼ, ವಾಹನಗಳು ಮತ್ತು ಸಲಕರಣೆಗಳ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡುವ ಇಂಟರ್ನೆಟ್-ಸಂಪರ್ಕಿತ ಸಾಧನಗಳ ಉತ್ಪಾದನೆ ಮತ್ತು ಚಿಲ್ಲರೆ ಮಾರಾಟದಲ್ಲಿ ತೊಡಗಿದೆ. ʻಎಂ&ಎಂ ಲಿಮಿಟೆಡ್ʼ ಸಂಸ್ಥೆಯು ಈ ಕಂಪನಿಯಲ್ಲಿ ಗಮನಾರ್ಹ ಪಾಲನ್ನು ಪಡೆದುಕೊಂಡಿದೆ.
ಕ್ರಿಶ್-ಇ ಸ್ಮಾರ್ಟ್ ಕಿಟ್:
ಕೃಷಿ ಸಾಧನಗಳ ಮಾಲೀಕರು ಮತ್ತು ಬಾಡಿಗೆ ಉದ್ಯಮಿಗಳಿಗೆ ಫ್ಲೀಟ್ ಕಾರ್ಯಕ್ಷಮತೆಯನ್ನು ಸುಸ್ಥಿರವಾಗಿ ಸುಧಾರಿಸಲು, ಆದಾಯವನ್ನು ಹೆಚ್ಚಿಸಿಕೊಳ್ಳಲು ಮತ್ತು ನಿರ್ವಹಣಾ ವೆಚ್ಚಗಳನ್ನು ನಿರ್ವಹಿಸಲು ʻಕ್ರಿಶ್-ಇ ಸ್ಮಾರ್ಟ್ ಕಿಟ್ʼ ಅನುವು ಮಾಡಿಕೊಡುತ್ತದೆ. ಅಲ್ಲದೆ, ಟ್ರ್ಯಾಕ್ಟರ್ ಡೌನ್ಟೈಮ್ ಮತ್ತು ಅನಧಿಕೃತ ಬಳಕೆಯನ್ನು ಇದು ತಡೆಯುತ್ತದೆ. ವಾಣಿಜ್ಯ ಸಾರಿಗೆ ಮತ್ತು ಟ್ರಾಲಿ ಚಟುವಟಿಕೆಯನ್ನು ಪತ್ತೆಹಚ್ಚಲು ಸುಧಾರಿತ ʻಟ್ರಿಪ್ ರಿಪ್ಲೇʼ ವೈಶಿಷ್ಟ್ಯವನ್ನು ಸಹ ʻಸ್ಮಾರ್ಟ್ ಕಿಟ್ʼ ಒಳಗೊಂಡಿದೆ.
ಈ ಕಿಟ್ ಅನ್ನು ಯಾವುದೇ ಹೊಸ ಅಥವಾ ಹಳೆಯ ಬ್ರಾಂಡ್ನ ಟ್ರಾಕ್ಟರ್ ಅಥವಾ ಕೃಷಿ ಉಪಕರಣಗಳಲ್ಲಿ ಅಳವಡಿಸಬಹುದು. ಉದಾಹರಣೆಗೆ ಕೊಯ್ಲು ಯಂತ್ರಗಳು, ಅಕ್ಕಿ ನಾಟಿ ಯಂತ್ರಗಳು ಮತ್ತು ಸ್ವಯಂ ಚಾಲಿತ ಸ್ಪ್ರೇಯರ್ಗಳು. ಈ ಕಿಟ್ ಅನ್ನು ʻಕ್ರಿಶ್-ಇ ರೆಂಟಲ್ ಪಾರ್ಟ್ನರ್ ಅಪ್ಲಿಕೇಶನ್ʼ ಎಂಬ ತಂತ್ರಾಂಶದೊಂದಿಗೆ ಜೋಡಿಸಲಾಗಿದೆ. ಇದು ʻಗೂಗಲ್ ಪ್ಲೇಸ್ಟೋರ್ʼನಲ್ಲಿ ಲಭ್ಯವಿದೆ. ಟ್ರ್ಯಾಕಿಂಗ್ ಮತ್ತು ಮೇಲ್ವಿಚಾರಣೆಯ ಜೊತೆಗೆ, ತಂತ್ರಾಂಶ ಬಳಕೆದಾರರಿಗೆ ʻಪೇ ಪರ್ ಯೂಸ್ʼ ಆಧಾರದ ಮೇಲೆ ಹೈ-ಎಂಡ್ ಕೃಷಿ ಯಂತ್ರೋಪಕರಣಗಳ ಪಟ್ಟಿಗಳಿಗೆ ಇದು ಪ್ರವೇಶ ಕಲ್ಪಿಸುತ್ತದೆ.
ಹಿರಿಯ ಉಪಾಧ್ಯಕ್ಷರು ಮತ್ತು ʻಎಂ&ಎಂ ಲಿಮಿಟೆಡ್ʼನ ʻಕ್ರಿಶ್-ಇ-ಕೃಷಿ ಉಪಕರಣಗಳ ವಲಯʼದ ಮುಖ್ಯಸ್ಥರಾದ ರಮೇಶ್ ರಾಮಚಂದ್ರನ್ ಅವರು ಮಾತನಾಡಿ, ʻಕ್ರಿಶ್-ಇ ಸ್ಮಾರ್ಟ್ ಕಿಟ್ʼ ಸಾಧನವು ಉದ್ಯಮದ ಮೊದಲ ಮಾರುಕಟ್ಟೆ ನಂತರದ ʻಐಒಟಿʼ ಪರಿಹಾರವಾಗಿದೆ. ಇದು ರೈತರು ಮತ್ತು ಉದ್ಯಮಿಗಳಿಗೆ ತಮ್ಮ ಕೃಷಿ ಉಪಕರಣಗಳನ್ನು ಸಂಪರ್ಕಿಸಲು ಮತ್ತು ಮೇಲ್ವಿಚಾರಣೆ ಮಾಡಲು ಅತ್ಯಂತ ಸ್ಮಾರ್ಟ್ ಹಾಗೂ ಅಗ್ಗದ ಸುಸ್ಥಿರ ಮಾರ್ಗವನ್ನು ಒದಗಿಸುತ್ತದೆ. ಸ್ಕೇಲ್-ಅಪ್ ಹಂತದಲ್ಲಿ, 25,000ಕ್ಕೂ ಹೆಚ್ಚು ಸಕ್ರಿಯ ಬಳಕೆದಾರರೊಂದಿಗೆ ನಾವು ಅಧಿಕೃತವಾಗಿ ʻಕ್ರಿಶ್-ಇ-ಸ್ಮಾರ್ಟ್ ಕಿಟ್ʼ ಅನ್ನು ಕರ್ನಾಟಕದ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ.
ಪ್ರತಿ ಎಕರೆ ಮತ್ತು ಕಿಲೋಮೀಟರ್ ಬಾಡಿಗೆ ಚಟುವಟಿಕೆಯನ್ನು ಡಿಜಿಟಲೀಕರಣಗೊಳಿಸುವ ಗುರಿಯನ್ನು ನಾವು ಹೊಂದಿರುವುದರಿಂದ, ಈ ಸಂಪರ್ಕಿತ ಪ್ರಯಾಣದಲ್ಲಿ ನಮ್ಮೊಂದಿಗೆ ಪಾಲುದಾರರಾಗಲು ರಾಜ್ಯದ ಸಂಸ್ಥೆಗಳು, ಎಫ್ಪಿಒಗಳು, ಸರಕಾರಿ ಸಂಸ್ಥೆಗಳು ಮತ್ತು ಸಂಘ ಸಂಸ್ಥೆಗಳನ್ನು ಆಹ್ವಾನಿಸುತ್ತೇವೆ. ಮುಂದೆ ನಾವು ಭಾರತದಲ್ಲಿ ಕೃಷಿ ಉಪಕರಣಗಳಿಗೆ ಸಂಪರ್ಕವನ್ನು ಒದಗಿಸುವ ಪ್ರಮುಖ ಪೂರೈಕೆದಾರರಾಗುವ ಗುರಿ ಹೊಂದಿದ್ದೇವೆ,” ಎಂದು ಹೇಳಿದರು.
ʻಕಾರ್ನೋಟ್ ಟೆಕ್ನಾಲಜೀಸ್ʼನ ಸಿಟಿಒ ಪುಷ್ಕರ್ ಲಿಮಾಯೆ ಮಾತನಾಡಿ, “ಭಾರತದಲ್ಲಿ ವಿಶ್ವ ದರ್ಜೆಯ ಉತ್ಪನ್ನಗಳನ್ನು ನಿರ್ಮಿಸುವ ಆಶಯದೊಂದಿಗೆ, ʻಐಒಟಿʼ ಬಳಸಿ ಉತ್ಪಾದಕತೆಯನ್ನು ಸುಧಾರಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ಟ್ರ್ಯಾಕ್ಟರ್ಗಳಿಗಾಗಿ ಸಣ್ಣ ಪ್ಲಗ್-ಅಂಡ್-ಪ್ಲೇ ಸಾಧನವನ್ನು ನಾವು ಹೊರತಂದಿದ್ದೇವೆ. ಇಂದು 25,000ಕ್ಕೂ ಹೆಚ್ಚು ಕಿಟ್ಗಳು ಈಗಾಗಲೇ ರೈತರ ಬಳಿ ಇದ್ದು, ಅವರಿಗೆ ತಮ್ಮ ವ್ಯವಹಾರಗಳನ್ನು ಡಿಜಿಟಲೀಕರಣಗೊಳಿಸಲು ಮತ್ತು ಮೌಲ್ಯವರ್ಧನೆಗೆ ಸಹಾಯ ಮಾಡಿವೆ ಎಂಬ ವಿಷಯ ತಿಳಿದು ಸಂತಸವಾಗಿದೆ.
ಇಂದು ಮಹೀಂದ್ರಾ ಜೊತೆಗೂಡಿ ʻಕ್ರಿಶ್-ಇ ಸ್ಮಾರ್ಟ್ ಕಿಟ್ʼನ ಅಧಿಕೃತ ಬಿಡುಗಡೆಯೊಂದಿಗೆ, ನಾವು ಭಾರತೀಯ ಕೃಷಿಯನ್ನು ಭಾರತ ಆಧಾರಿತ ಪರಿಹಾರದೊಂದಿಗೆ ಡಿಜಿಟಲೀಕರಣಗೊಳಿಸುವ ಗುರಿಯನ್ನು ಹೊಂದಿದ್ದೇವೆ. ಆ ಮೂಲಕ ಹೆಚ್ಚಿನ ಸಂಖ್ಯೆ ಟ್ರ್ಯಾಕ್ಟರ್ ಮಾಲೀಕರು ಮತ್ತು ಬಾಡಿಗೆ ವ್ಯವಹಾರ ಮಾಲೀಕರನ್ನು ತಲುಪುತ್ತೇವೆ,ʼʼ ಎಂದರು.
ಇಲ್ಲಿಯವರೆಗೆ 25,000ಕ್ಕೂ ಹೆಚ್ಚು ಸಕ್ರಿಯ ಚಂದಾದಾರರನ್ನು ʻಕ್ರಿಶ್-ಇʼ ಹೊಂದಿದೆ. 85% ದೈನಂದಿನ ಸಕ್ರಿಯ ಬಳಕೆದಾರರು(ʻಡಿಎಯುʼ), ತಂತ್ರಾಂಶದಲ್ಲಿ ದಿನಕ್ಕೆ ಸುಮಾರು 55 ನಿಮಿಷಗಳನ್ನು ವ್ಯಯಿಸುತ್ತಿದ್ದಾರೆ (ಋತುವಿನಲ್ಲಿ), ಉಚಿತ ಚಂದಾದಾರಿಕೆ ಅವಧಿ ಮುಗಿದ ನಂತರ 70% ನವೀಕರಣ ಮಾಡಿದ್ದಾರೆ.
ವೈಯಕ್ತಿಕ ರೈತರು, ಸಾಂಸ್ಥಿಕ ಖರೀದಿದಾರರು, ʻಎಫ್ಪಿಒʼಗಳು ಮತ್ತು ನವೋದ್ಯಮಗಳು ʻಕ್ರಿಶ್-ಇ ಸ್ಮಾರ್ಟ್ ಕಿಟ್ʼ ಅನ್ನು ಹತ್ತಿರದ ʻಕ್ರಿಶ್-ಇʼ ಕೇಂದ್ರ, ʻಕ್ರಿಶ್-ಇʼ ವೆಬ್ಸೈಟ್ ಅಥವಾ ʻಕ್ರಿಶ್-ಇʼ ಸಹಾಯವಾಣಿ: 1800-266-1555 ಗೆ ಕರೆ ಮಾಡುವ ಮೂಲಕ 4,995 ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು (ತೆರಿಗೆಗಳು ಮತ್ತು ಮೇಲೆ ತಿಳಿಸಿದ ಸೇವೆಗಳಿಗೆ ಆರು ತಿಂಗಳ ಚಂದಾದಾರಿಕೆ ಪ್ಯಾಕೇಜ್ ಸೇರಿದಂತೆ).
2020ರಲ್ಲಿ ಪ್ರಾರಂಭವಾದ ʻಕ್ರಿಶ್-ಇʼ ಸಂಸ್ಥೆಯು ಮಹೀಂದ್ರಾದ ಹೊಸ ವ್ಯವಹಾರ ವಿಭಾಗವಾಗಿದೆ. ತಂತ್ರಜ್ಞಾನ ಚಾಲಿತ ಸೇವೆಗಳನ್ನು ಒದಗಿಸುವ ʻಕ್ರಿಶ್-ಇʼ, ರೈತರು ಮತ್ತು ಇತರ ಮೌಲ್ಯ ಸರಪಳಿ ಮಧ್ಯಸ್ಥಗಾರರ ಆದಾಯ ಸಾಮರ್ಥ್ಯವನ್ನು ಸುಸ್ಥಿರವಾಗಿ ಹೆಚ್ಚಿಸುತ್ತದೆ. ʻಎಕ್ಸ್ಪರ್ಟ್ ಟೆಕ್ನೀಕ್. ನಯೀ ಉಪಾಯ್. ಪರಿಣಾಮ್ ದಿಖಾಯೆ’ ಎಂಬ ಘೋಷವಾಕ್ಯದೊಂದಿಗೆ ಕೃಷಿ ಸಲಹೆ, ಸಲಕರಣೆಗಳ ಬಾಡಿಗೆ ಮತ್ತು ಬಳಸಿದ ಉಪಕರಣಗಳ ಕ್ಷೇತ್ರಗಳ ಮೇಲೆ ʻ ಕ್ರಿಶ್-ಇʼ ಸೇವೆಗಳನ್ನು ಕೇಂದ್ರೀಕರಿಸಲಾಗಿದೆ.
ಪ್ರಸ್ತುತ 150 ಕ್ರಿಶ್-ಇ ಕೇಂದ್ರಗಳು ಮತ್ತು ಅಪ್ಲಿಕೇಶನ್ ಆಧಾರಿತ ಟಚ್ ಪಾಯಿಂಟ್ಗಳನ್ನು ಒಳಗೊಂಡಿರುವ ಓಮ್ನಿ ಚಾನೆಲ್ ಉಪಸ್ಥಿತಿಯ ಮೂಲಕ ಈ ಸೇವೆಗಳನ್ನು ಪೂರೈಸಲಾಗುತ್ತಿದೆ.
ʻಕ್ರಿಶ್-ಇʼ ಪ್ರಯತ್ನಗಳನ್ನು ಜಾಗತಿಕವಾಗಿ ಗುರುತಿಸಲಾಗಿದೆ ಮತ್ತು ನಿರ್ಣಾಯಕ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸಮುದಾಯಗಳೊಂದಿಗೆ ವ್ಯವಹಾರಗಳು ಹೇಗೆ ಸಹಕರಿಸಬಹುದು ಎಂಬುದಕ್ಕೆ ಉದಾಹರಣೆಯಾಗಿ “ಹವಾಮಾನ ಬದಲಾವಣೆ ಹೊಂದಾಣಿಕೆಯ ಮೇಲೆ ವ್ಯಾಪಾರ ಕ್ರಮವನ್ನು ವೇಗಗೊಳಿಸುವುದು” ಎಂಬ ʻವಿಶ್ವ ಆರ್ಥಿಕ ವೇದಿಕೆʼಯ (ಡಬ್ಲ್ಯುಇಎಫ್) ಜನವರಿ 2023ರ ಶ್ವೇತಪತ್ರದಲ್ಲಿ ಸೇರಿಸಲಾಗಿದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…