ಕಲಬುರಗಿ: ಮಂಗಳವಾರ ಪ್ರಧಾನಿ ಮೋದಿ ರೋಡ್ ಶೋ ಕಾರ್ಯಕ್ರಮ ವ್ಯವಸ್ಥೆಯಲ್ಲಿ ನೀತಿಸಂಹಿತೆ ಉಲ್ಲಂಘಿಸಿ ಬಿಜೆಪಿ ಪಕ್ಷದ ಧ್ವಜಗಳು ಮತ್ತು ಕಟೌಟ್ ಹಾಗೂ ಬ್ಯಾನರ್ ಗಳು ಹಾಕಲಾಗಿದೆ ಎಂದು ಕಲಬುರಗಿ ಉತ್ತರ ಮತಕ್ಷೇತ್ರದ ಜೆಡಿಯು ಅಭ್ಯರ್ಥಿ ಶರಣ ಐಟಿ ಆರೋಪಿಸಿ ಪ್ರಧಾನಿ ವಿರುದ್ಧ ಪ್ರಕರಣ ದಾಖಲಿಸುವಂತೆ ದೂರು ನೀಡಿದ್ದಾರೆ.
ನಗರದ ಕೆಎಂಎಫ್ ಕಚೇರಿಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತದ ವರೆಗೆ ಚುನಾವಣಾಧಿಕಾರಿಗಳು ನೀತಿಸಂಹಿತೆ ಕಾಪಾಡುವಲಿ ವಿಫಲವಾಗಿದೆ. ನಮ್ಮ ಪಕ್ಷದ ಕಾರ್ಯಕ್ರಮಕ್ಕೆ ಬ್ಯಾನರ್ ಹಾಕಲು ಅವಕಾಶಕೇಳಿದ್ದಕ್ಕೆ ರೀಟನಿಂಗ್ ಅಧಿಕಾರಿ ಅವಕಾಶ ನೀಡದೇ ಆದೇಶದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡ್ತಾರೆ.
ಆದರೆ ಮಂಗಳವಾರ ಪ್ರಧಾನಿ ರೋಡ್ ಶೋ ಮಾರ್ಗದಲ್ಲಿ ನೀತಿಸಂಹಿತೆ ಉಲ್ಲಂಘನೆಯಾದರು ಪಾಲಿಕೆಯ ಆಯುಕ್ತರು, ಚುನಾವಣಾಧಿಕಾರಿಗಳು ಹಾಗೂ ರೀಟನಿಂಗ್ ಅಧಿಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದುರಿದ್ದಾರೆ.
ಪ್ರಧಾನಿ ಎಂಬ ಮಾತ್ರಕ್ಕೆ ಅವರು ಏನೂ ಮಾಡಿದರು ನಡೆಯುತ್ತದೆ ಎಂಬಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಈ ದ್ವಂದ್ವ ನೀತಿಯಿಂದ ಪಾರದರ್ಶಕ ಚುನಾವಣೆ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಪಕ್ಷ ತಾರತಮ್ಯವನ್ನು ಅನುಸರಿಸಲಾಗುತ್ತದೆ ಎಂದು ಆರೋಪಿಸಿದರು.
ಬಿಜೆಪಿಯ ರಾಷ್ಟ್ರೀಯ ನಾಯಕರ ಕಾರ್ಯಕ್ರಮಗಳಿಗೆ ಕೋಟಿ ಗಟ್ಟಲೆ 40% ಕಮಿಷನ್ ಹಣ ಖರ್ಚು ಮಾಡಲಾಗುತ್ತಿದೆ. ಬಿಜೆಪಿ ಅವರು ಅಧಿಕಾರದಲ್ಲಿ ಇರುವ ಕಾರಣ ನೀತಿಸಂಹಿತೆ ಅವರಿಗೆ ಅಪ್ಲೈ ಆಗುವುದೇವೇ? ಇತರೆ ಪಕ್ಷಗಳಿಗೆ ಮಾತ್ರ ನೀತಿಸಂಹಿತೆ ಪಾಲಿಸಬೇಕೆಂಬ ಚುನಾವಣೆ ಆಯೋಗದ ಕ್ರಮ ಖಂಡನೀಯವಾಗಿದೆ ಎಂದರು.
ತಕ್ಷಣ ಪ್ರಧಾನಿ ಮೋದಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಪಾರದರ್ಶಕ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದ ಅವರು ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಒ್ರಧಾನಿ ವಿರುದ್ಧ ದೂರು ನೀಡಲು ತೆರಳಿದ ವೇಳೆ ಒತ್ತಾಯಿಸಿದರು.
ಕಲಬುರಗಿ: ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸರ್ಕಾರಿ ಪದವಿ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಮಹಾನಗರ ಪಾಲಿಕೆ,ಸಮಾಜ ಕಲ್ಯಾಣ ಇಲಾಖೆ, ಕನ್ನಡ…
ಕಲಬುರಗಿ: ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿ ಹಾಗೂ ಸಿ.ಆರ್.ಸಿ ಸ್ನೇಹ ಬಳಗ ಕಲಬುರಗಿ ಮತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ…
ಕಲಬುರಗಿ: ಸುವರ್ಣ ಭವನ (ಕನ್ನಡ ಭವನ)ದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ…
ಕಲಬುರಗಿ : ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿಯಲ್ಲಿ ಎನ್.ಎಸ್.ಎಸ್, ರೆಡ್‍ಕ್ರಾಸ್, ಸ್ಕೌಟ್ಸ್ ಆಂಡ್ ಗೈಡ್ಸ್, ಐ.ಕ್ಯೂ.ಎ.ಸಿ ಮತ್ತು ಸಾಂಸ್ಕøತಿಕ ಘಟಕಗಳ…
ಕಲಬುರಗಿ; ಶಿಶು ಮಗುವಿಗೆ ಅಪಹರಣಕಾರರನ್ನು ಬಂಧಿಸಿದ ಕಲಬುರಗಿ ಪೆÇೀಲೀಸ್ ಇಲಾಖೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಅಭಿನಂದನೆ ವ್ಯಕ್ತಪಡಿಸಿದೆ.…
ಕಲಬುರಗಿ; ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಜೇವರ್ಗಿ, ಯಡ್ರಾಮಿ, ಅಫಜಲಪೂರ, ಸೇಡಂ, ಆಳಂದ, ಚಿಂಚೋಳಿ ತಾಲೂಕಿನಲ್ಲಿ ಜಂಗಲ್ ಕಟಿಂಗ್ ಹಾಗೂ ಮೆಂಟನೆನ್ಸ್…