ಗಂಗಾವತಿ: ಬಡವರು, ನಿರ್ಗತಿಕರ ನೆರವಿಗೆ ಮುಂದಾಗಿರುವ ಇಲ್ಲಿನ ಗೆಳೆಯರ ಬಳಗ, ‘ವಾಲ್ ಆಫ್ ಕೈಂಡ್‌ನೆಸ್’ ಮೂಲಕ ಸಹಾಯಹಸ್ತ ಚಾಚಿದೆ.
ನಗರದ ಕೋರ್ಟ ಹತ್ತಿರ ‘ ವಾಲ್ ಆಫ್ ಕೈಂಡ್ ನೆಸ್ ’ ಹೆಸರಿನಲ್ಲಿ ಬಾಕ್ಸ್ ರೂಪದ ಸೆಲ್ಫ್‌ಗಳನ್ನು ನಿರ್ಮಿಸಿದೆ. ಅದರಲ್ಲಿ ಯಾರು ಬೇಕಾದರೂ ಬಟ್ಟೆ, ಪಾತ್ರೆ ಸಾಮಾನು ಸೇರಿದಂತೆ ಇತರೆ ದೈನಂದಿನ ಉಪಯೋಗದ ವಸ್ತುಗಳನ್ನು ಇಟ್ಟು ಹೋಗಬಹುದು.
ಈ ವಿನೂತನ ಕೆಲಸ ಆರಂಭಿಸಿದ್ದು, ಪ್ರಾರಂಭದಲ್ಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆಲವರು ಹಳೆಯ ಬಟ್ಟೆ, ಪಾತ್ರೆ ಸಾಮಾನು ಸೇರಿದಂತೆ ಇತರೆ ವಸ್ತುಗಳನ್ನು ಬಳಸದೆ ಮನೆಯ ಒಂದು ಕೋಣೆಯಲ್ಲಿ ಹಾಗೆಯೇ ಇಟ್ಟಿರುತ್ತಾರೆ. ಅವುಗಳು ಅಲ್ಲೇ ಧೂಳು ತಿನ್ನುತ್ತ ಹಾಳಾಗುತ್ತಿರುತ್ತವೆ. ಮತ್ತೆ ಕೆಲವರು, ಬಹಳ ಕಡಿಮೆ ಬೆಲೆಗೆ ಗುಜರಿಗೆ ಹಾಕುತ್ತಾರೆ. ಹೀಗೆ ಮಾಡುವ ಬದಲು ಅವುಗಳನ್ನು ‘ವಾಲ್ ಆಫ್ ಕೈಂಡ್‌ನೆಸ್’ ಪೆಟ್ಟಿಗೆಯಲ್ಲಿ ಹಾಕಿ ಹೋದರೆ, ಬಡವರು, ನಿರ್ಗತಿಕರು ಹಾಗೂ ಅನಾಥಾಶ್ರಮದಲ್ಲಿ ಇರುವವರಿಗೆ ಅನುಕೂಲವಾಗುವುದಲ್ಲದೆ ಅವರಿಗೆ ನೆರವಿನ ಹಸ್ತ ಚಾಚಿದಂತಾಗುತ್ತದೆ. ಎಲ್ಲ ದಿನ ಯಾರು ಬೇಕಾದರೂ ಬಂದು ವಸ್ತುಗಳನ್ನು ಇಟ್ಟು ಹೋಗಬಹುದು. ಭಿಕ್ಷುಕರು ನಿರ್ಗತಿಕರು ಸೇರಿದಂತೆ ಯಾರುಬೇಕಾದರೂ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು.
ಸ್ವಾತಂತ್ರ್ಯೋತ್ಸವ ದಿನ ಅಧಿಕೃತವಾಗಿ ಪೋಲಿಸ್ ಉಪವಿಭಾಗದ ಅಧೀಕ್ಷಕರು ಡಾ.ಚಂದ್ರಶೇಖರ ರವರು ಚಾಲನೆ ನೀಡಿದರು. ಶ್ರೀಶೈಲ ಪಟ್ಟಣಶೆಟ್ಟಿ, ಡಾ.ಶಿವಕುಮಾರ ಮಾಲಿಪಾಟೀಲ್,ಬಸವರಾಜ ಕೆ ಅಧ್ಯಕ್ಷರು ಬಸವಕೇಂದ್ರ, ಗ್ರಂಥಪಾಲಕ ರಮೇಶ ಗಬ್ಬೂರು, ಶಿಕ್ಷಕ ಮೈಲಾರಪ್ಪ ಬೂದಿಹಾಳ, ಮಂಜುನಾಥ ಗುಡ್ಲಾನೂರ , ಎಸ್ ಬಿ ಗೊಂಡಬಾಳ ತಾಲೂಕ ಕಸಾಪ ಅಧ್ಯಕ್ಷರು , ದಶರಥ ವರದಿಗಾರ, ಹಾಗೂ ವಾಲ್ ಆಫ್ ಕೈಂಡ್ ನೆಸ್ ಗೆಳೆಯರು ಸೇರಿದಂತೆ ಇತರರು ಭಾಗವಹಿಸಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…