ಬಿಸಿ ಬಿಸಿ ಸುದ್ದಿ

ತಾಂಡಾಗಳ ಅಭಿವೃದ್ದಿಗೆ ಶ್ರಮ: ಪ್ರಿಯಾಂಕ್ ಖರ್ಗೆ

ಚಿತ್ತಾಪುರ: ನಾನು ಈಗ ಸಮಾಜಕಲ್ಯಾಣ ಸಚಿವನಾಗಿಲ್ಲದಿರಬಹುದು ಆದರೆ ಶಾಸಕನಾಗಿ ಸಮಾಜಕಲ್ಯಾಣ ಇಲಾಖೆಯಲ್ಲಿ ಕೈಗೊಳ್ಳಬೇಕಾಗಿರುವ ನನ್ನ ಎಲ್ಲ ಯೋಜನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ನಿಯಮಾವಳಿಗಳನ್ನೇ ರೂಪಿಸಿದ್ದೇನೆ. ಹಾಗಾಗಿ, ತಾಂಡಾಗಳ ಅಭಿವೃದ್ದಿಯ ನನ್ನ ಮಹಾತ್ವಾಕಾಂಕ್ಷೆ ಕಾರ್ಯರೂಪಕ್ಕೆ ಬರುತ್ತದೆ ಈ ಕುರಿತು ಯಾವುದೇ ಆತಂಕ ಬೇಡ ಎಂದು ಶಾಸಕರಾದ ಸನ್ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆ ನುಡಿದರು.

ಮಹಾನಗರ ತಾಂಡದಲ್ಲಿ ಸೇವಾಲಾಲ್ ದೇವಸ್ಥಾನದ ಕಂಪೌಂಡ್ ನಿರ್ಮಾಣ, ಸಾಂಸ್ಕೃತಿಕ ಕೇಂದ್ರ, ಸಿಸಿ ರಸ್ತೆ, ಕೊಳವೆಬಾವಿಗೆ ಪೈಪ್ ಲೈನ್ ಅಳವಡಿಕೆ ಸೇರಿದಂತೆ ರೂ 50 ಲಕ್ಷ ಮೊತ್ತದ‌ ವಿವಿಧ ಅಭಿವೃದ್ದಿ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡುತ್ತಿದ್ದರು.

ನಾನು ಸಚಿವನಾಗಿದ್ದಾಗ ತಾಂಡಾಗಳ ಅಭಿವೃದ್ದಿಗಾಗಿ ಸೇವಾಲಾಲ ಅಧ್ಯಯನ‌ ಕೇಂದ್ರ, ಮೂಲಭೂತ ಸೌಲಭ್ಯಗಳನ್ನು ಒದಗಿಸಲು ತಾಂಡಾ ಪ್ರಗತಿ ಕಾಲನಿ, ಸಿಸಿ ರಸ್ತೆ ನಿರ್ಮಾಣ, ಬೀದಿ ದೀಪ ಮುಂತಾದ ಯೋಜನೆಗಳ ಜಾರಿಗೆ ಪ್ರತಿ ತಾಂಡಕ್ಕೆ‌ ರೂ 50 ಕೋಟಿ ಬಿಡುಗಡೆ ಮಾಡಿದ್ದೇನೆ. ಸೇವಾಲಾಲರ ಪುಣ್ಯಕ್ಷೇತ್ರ ದಾವಣಗೆರೆ ಜಿಲ್ಲೆಯ ಸೊರಗೊಂಡನಕೊಪ್ಪದ ಸಮಗ್ರ ಅಭಿವೃದ್ದಿಗೆ ರೂ 200 ಕೋಟಿ ಬಿಡುಗಡೆ ಮಾಡಿಸಿದ್ದೇನೆ. ತಾಂಡಾ ಅಭಿವೃದ್ದಿಗೆ ನಾನೂ ಈಗಲೂ ಬದ್ದನಾಗಿದ್ದು, ನನ್ಮ ಅವಧಿಯಲ್ಲಿನ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ತಾಂಡಾ ನಿವಾಸಿಗಳು ಕೇವಲ ಜಾತಿಯಾಧಾರಿತ ಮತದಾನ ಮಾಡದೇ ಯಾರು ಅಭಿವೃದ್ದಿ ಮಾಡುತ್ತಾರೋ ಅಂತವರನ್ನು ಆರಿಸಿ ಕಳಿಸಬೇಕು ಎಂದು ಕರೆ ನೀಡಿದ ಪ್ರಿಯಾಂಕ್ ಖರ್ಗೆ ಅವರು ಧರ್ಮದಾಧರಿತ ಮತಯಾಚನೆ ಅಥವಾ ಮತದಾನ ಅಭಿವೃದ್ದಿಗೆ ಕಂಟಕವಾಗುವ ಅಪಾಯವಿದೆ ಎಂದು ಎಚ್ಚರಿಸಿದರು. ಜೇವಸಿಂಗ್ ಮಹಾರಾಜರು ಬೇರೆಯವರಿಗೆ ಆಶೀರ್ವಾದ ಮಾಡಿದಂತೆ ನನಗೂ ಆಶೀರ್ವಾದ ಮಾಡಲಿ, ನೀವೆಲ್ಲ ನನಗೆ ಶಕ್ತಿ ತುಂಬಿ ಇನ್ನಷ್ಟು ಸೇವೆ ಮಾಡುವ ಅವಕಾಶ ನೀಡಿ ಎಂದು ಮನವಿ ಮಾಡಿದರು.

ವೇದಿಕೆ ಮೇಲೆ ಜೇವಸಿಂಗ್ ಮಹಾರಾಜ್, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಶಿವಾನಂದ ಪಾಟೀಲ್, ರಮೇಶ ಮರಗೋಡ‌ ಸೇರಿದಂತೆ ಮತ್ತಿತರಿದ್ದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

7 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

7 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

9 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

9 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

9 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

10 hours ago