ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬವನ್ನು ಕೊಲೆ ಮಾಡಲು ಬಿಜೆಪಿ ಮುಖಂಡರು ಸಂಚು ನಡೆಸಿದ್ದಾರೆ ಎಂದು ಕಲಬುರಗಿಯ ದಲಿತ ಮುಖಂಡರು ಗಂಭೀರ ಆರೋಪ ಮಾಡಿದೆ.
ಇದೇ ಸಂದರ್ಭದಲ್ಲಿ ಹಲವು ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರದು ಎನ್ನಲಾದ ಆಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ “ಖರ್ಗೆ ಮತ್ತು ಅವರ ಹೆಂಡ್ತಿನಾ, ಇಡೀ ಕುಟುಂಬವನ್ನು ಸಾಫ್ ಮಾಡ್ತೀನಿ” ಅನ್ನುವುದು ದಾಖಲಾಗಿದೆ. ರವಿ ಎಂಬ ಬಿಜೆಪಿ ಕಾರ್ಯಕರ್ತನೊಬ್ಬ ಮಣಿಕಂಠ ರಾಥೋಡ್‌ರವರಿಗೆ ಫೋನ್ ಮಾಡಿ ನಿಮ್ಮ ಮೇಲೆ 40 ಕೇಸುಗಳಿವೆ ಅನ್ನುತ್ತಾರೆ.
ಈ ಕುರಿತು ಖರ್ಗೆಯವರನ್ನು ಪ್ರಶ್ನೆ ಮಾಡ್ತೀನಿ ಅವರ ನಂಬರ್ ಕೊಡಿ ಅಣ್ಣ ಎಂದು ಕೇಳುತ್ತಾನೆ. ಇದಕ್ಕೆ ಉತ್ತರಿಸುವ ಮಣಿಕಂಠ ರಾಥೋಡ್, “ನನ್ನ ಬಳಿ ಅವರ ಫೋನ್ ನಂಬರ್ ಇದ್ರೆ ಅವರ ಹೆಂಡ್ರು ಮಕ್ಕಳು ಎಲ್ಲರನ್ನು ಸಾಫ್ ಮಾಡ್ತೀನಿ. ಅದಕ್ಕೆ ನನ್ನ ಬಳಿ ನಂಬರ್ ಇಲ್ಲ” ಎನ್ನುವುದು ದಾಖಲಾಗಿದೆ.
ಈ ಕುರಿತು ಎಸ್.ಪಿ ಅವರನ್ನು ಭೇಟಿಯಾದ ದಲಿತ ಮುಖಂಡರು ಉಡಾಫೆ ಮಾತಗಳನ್ನು ಆಡುತ್ತಾ ಇಂದು ಕೊಲೆ ಬೆದರಿಕೆ ಹಾಕುವ ಮಟ್ಟಕ್ಕೆ ರೌಡಿಶೀಟರ್ ನನ್ನು ಬೀದಿಗೆ ಬಿಟ್ಟಿದ್ದು ಕೂಡಲೆ ಕ್ರಮ ತೆಗೆದುಕೊಳ್ಳದಿದ್ದರೆ ಬೃಹತ್ ಹೋರಾಟ ಮಾಡಲಾಗುವುದು ಎಂದು ಮುಖಂಡರು ಆಗ್ರಹಿಸಿದರು.
ರೌಡಿಶೀಟರ್ ಮಣಿಕಂಠನ ಮೇಲೆ ಈಗಾಗಲೆ ಎಫ್.ಐ.ಆರ್ ಮಾಡಲಾಗಿದೆ. ಈ ಕುರಿತು ಕೂಡಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್.ಪಿ.ಅವರು ಆಶ್ವಾಸನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಹಣಮಂತ ಯಳಸಂಗಿ, ಬಸಣ್ಣ ಸಿಂಗೆ, ಅಶ್ವಿನಿ ಮದನಕರ, ಲಕ್ಷ್ಮೀಕಾಂತ ಹುಬ್ಳಿ, ದತ್ತತ್ರೆಯ ಇಕ್ಕಳಕಿ, ಸಂತೋಷ ಮೆಲ್ಮನಿ, ದಿಲೀಪ್ ಕಾಯಂಕರ್ ಇದ್ದರು.
ಕಲಬುರಗಿ: ನಗರದ ಪ್ರತಿಷ್ಠಿತ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ-ಪೂರ್ವ ಕಾಲೇಜಿನಲ್ಲಿ ಸಂವಿಧಾನ ದಿನ…
ಶಹಾಬಾದ: ಮಾನವೀಯ ಮೌಲ್ಯಗಳು ವಿದ್ಯಾರ್ಥಿ ಯುವಜನರ ಬೆಳೆಸಿಕೊಂಡು ಉತ್ತಮ ನಾಗರಿಕರಾಗಬೇಕೆಂದು ಎಸ್ಎಸ್ ಮರುಗೋಳ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಕೆ.ಬಿ. ಬಿಲ್ಲವ…
ಶಹಾಪುರ : 26 : ಚಿಕ್ಕ ವಯಸ್ಸಿನಲ್ಲಿಯೆ ಹಿರಿದಾದ ಜ್ಞಾನವನ್ನು ಹೊಂದಿದ್ದ ಚೆನ್ನಬಸವಣ್ಣ ಷಟಸ್ಥಲ ಜ್ಞಾನಿ ಎಂದು ಕರೆಯಿಸಿಕೊಂಡರು. ಬಸವಣ್ಣನವರ…
ಶಹಾಬಾದ: ನಗರಸಭೆಯ ವಾರ್ಡ ನಂ.3 ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಾಜೀದ್ ಖಾನ್ ಜಮಾದಾರ ಅವರು ಗೆಲುವು ಸಾಧಿಸಿದ್ದಾರೆ. ನಗರದ…
ಶಹಾಬಾದ: ಜಾತಿ-ಬೇಧ ಎನ್ನದೇ ಸರ್ವರಿಗೂ ಮೂಲಭೂತ ಹಕ್ಕನ್ನು ಒದಗಿಸಿ, ಬದುಕುವ ವಾತಾವರಣ ಸೃಷ್ಠಿಸಿದ್ದೇ ಡಾ. ಬಿ .ಆರ್. ಅಂಬೇಡ್ಕರ್ ಬರೆದ…
ಶಹಾಬಾದ: ಸಂವಿಧಾನದ ಆಶೋತ್ತರಗಳು, ಮೌಲ್ಯಗಳನ್ನು ಅರಿತು ಅದರಂತೆ ಎಲ್ಲರೂ ನಡೆದರೆ ನಮ್ಮ ದೇಶ ಜಗತ್ತಿನಲ್ಲಿಯೇ ಉನ್ನತ ಸ್ಥಾನದಲ್ಲಿರುತ್ತದೆ ಎಂದು ಬಿಜೆಪಿ…