ಬೆಂಗಳೂರು: ಜನರ ಮೇಲೆ ಯಾವುದೇ ತೆರಿಗೆಭಾರ ಹಾಕದೇ ಪಂಚರತ್ನ ಯೋಜನೆಗಳನ್ನು ಜಾರಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಘೋಷಣೆ ಮಾಡಿದರು.
ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದ ವಸಂತಪುರದಲ್ಲಿ ಶನಿವಾರ ಸಂಜೆ ಜೆಡಿಎಸ್ ಅಭ್ಯರ್ಥಿ ರಾಜಗೋಪಾಲ ರೆಡ್ಡಿ ಅವರ ಪರವಾಗಿ ಪ್ರಚಾರ ಮಾಡಿದ ವೇಳೆ ಅವರು ಮಾತನಾಡಿದರು.
ಪಂಚರತ್ನ ಯೋಜನೆಗಳು ಉಚಿತ ಕೊಡುಗೆಗಳು ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅವು ಉಚಿತ ಕೊಡುಗೆಗಳಲ್ಲ. ರೈತರು ಸೇರಿ ಎಲ್ಲ ವರ್ಗದ ಜನರನ್ನು ಆರ್ಥಿಕವಾಗಿ ಮೇಲೆತ್ತುವ ಹಾಗೂ ಸರಕಾರಕ್ಕೆ ಆಸ್ತಿಗಳನ್ನು ಸೃಷ್ಟಿ ಮಾಡುವ ಯೋಜನೆಗಳಾಗಿವೆ ಎಂದರು.
ಈ ಯೋಜನೆಗಳಿಗೆ ಹಣ ಎಲ್ಲಿಂದ ತರುತ್ತಾರೆ ಎಂದು ಕೆಲವರು ಕೊಂಕು ಮಾತನಾಡುತ್ತಿದ್ದಾರೆ. ಹೊಸ ತೆರಿಗೆ ಹಾಕದೆ, ಸಾಲ ಮಾಡದೆ ಆಂತರಿಕ ಸಂಪನ್ಮೂಲ ಕ್ರೋಡೀಕರಿಸಿ, ಜನರ ಹಣ ಲೂಟಿ ತಡೆಗಟ್ಟಿ ಹಣ ಹೊಂದಿಸುತ್ತೇನೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದರು.
ಇಂದು ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತಿಲ್ಲ. ಮಕ್ಕಳ ಭವಿಷ್ಯಕ್ಕೆ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಸಾಲ ಮಾಡುತ್ತಿದ್ದಾರೆ. ಜನರ ಸಹಕಾರದಿಂದ ಜನತಾ ಸರಕಾರ ಬಂದರೆ ಶಿಕ್ಷಣ ವ್ಯವಸ್ಥೆಗೆ ಚಿಕಿತ್ಸೆ ನೀಡುತ್ತೇನೆ ಎಂದು ಅವರು ಹೇಳಿದರು.
ಈ ಬಾರಿ ಕನ್ನಡಿಗರು ಪಂಚರತ್ನ ಯೋಜನೆಗಳ ಜಾರಿಗೆ ಜನಾದೇಶ ನೀಡಬೇಕು. ಇದೇ ಮೇ 10ರಂದು ನಡೆಯುವ ಚುನಾವಣೆಯಲ್ಲಿ ಪ್ರಾದೇಶಿಕ ಪ್ಪಕ್ಷಕ್ಕೆ ಆಶೀರ್ವಾದ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಈ ಚುನಾವಣೆ ಮಹತ್ವ ಪೂರ್ವವಾಗಿದೆ. ಮತ ಕೇಳಲು ಎರಡು ರಾಷ್ಟ್ರೀಯ ಪಕ್ಷಗಳ ರಾಷ್ಟ್ರೀಯ ಮುಖಂಡರು ಬಂದಿದ್ದಾರೆ. ಪ್ರಧಾನಮಂತ್ರಿ ಸೇರಿ ಎಲ್ಲರೂ ಬಂದಿದ್ದಾರೆ. ಪರಸ್ಪರ ಕೆಸರು ಎರಚಿಕೊಂಡು ಭಾವನಾತ್ಮಕ ವಿಚಾರಗಳ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಜನರ ಕಷಟಗಳ ಬಗ್ಗೆ, ನಾಡಿನ ಜ್ವಲಂತ ಸಮಸ್ಯೆಗಳ ಕುರಿತು ಅವರು ಚರ್ಚೆ ಮಾಡುತ್ತಿಲ್ಲ. ಅಧಿಕಾರ ಬಿಟ್ಟರೆ ಅವರಿಗೆ ಬೇರೆ ಬೇಕಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದರು.
ಕಾಂಗ್ರೆಸ್ ನವರು ಮೋದಿ ಅವರನ್ನು ವಿಷ ಸರ್ಪ ಅಂತಾರೆ, ಸೋನಿಯಾ ಗಾಂಧಿ ಅವರನ್ನು ಬಿಜೆಪಿಯವರು ವಿಷಕನ್ಯೆ ಎನ್ನುತ್ತಾರೆ. ಕಾಂಗ್ರೆಸ್ ಇದ್ದರೆ 80 ಪರ್ಸೆಂಟ್ ಅಂತಾರೆ, ಬಿಜೆಪಿಯವರದ್ದು 40 ಪರ್ಸೆಂಟ್ ಅಂತಾರೆ. ನಾನು ಈ ನಾಡಿನ ತಾಯಂದಿರ ಕಣ್ಣೀರು ಹೊರೆಸಲು ಪಂಚರತ್ನ ಯೋಜನೆ ತರಲು ಮುಂದಾಗಿದ್ದೇನೆ.ಅದಕ್ಕಾಗಿ ಒಂದು ಬಾರಿ ನಮಗೆ ಆಶಿರ್ವಾದ ಮಾಡಿ ಅಂತ ಹೇಳಿದ್ದೆನೆ ಎಂದು ಅವರು ಹೇಳಿದರು.
ಈ ಯೋಜನೆಗಳು ಜಾರಿಗೆ ಬಂದರೆ ಸುವರ್ಣ ಕರ್ನಾಟಕ ನಿರ್ಮಾಣ ಆಗೋದು ಗ್ಯಾರಂಟಿ. ನಮ್ಮ ಸರ್ಕಾರ ಬಂದರೆ ವೃದ್ದರಿಗೆ 5000 ಕೊಡಲಾಗುತ್ತದೆ. ವಿಧವೆಯರಿಗೆ 2500 ರೂ. ಕೊಡಲಾಗುತ್ತದೆ. ಸ್ತ್ರೀ ಶಕ್ತಿ ಸ್ವಹಾಯ ಗುಂಪುಗಳ ಸಾಲಮನ್ನಾ ಮಾಡಲಾಗುತ್ತದೆ. ವರ್ಷಕ್ಕೆ ಐದು ಸಿಲಿಂಡರ್ ಉಚಿತವಾಗಿ ಕೊಡುತ್ತೇವೆ.
ಗ್ಯಾಸ್ ಸಿಲಿಂಡರ್ ಏರಿಕೆ ಆಗುತ್ತಲೇ ಇದೆ. ಆದರೆ, ಬಿಜೆಪಿಯವರು ಮೂರು ಸಿಲಿಂಡರ್ ಕೊಡ್ತಾರಂತೆ. ನಾವು ಐದು ಸಿಲಿಂಡರ್ ಉಚಿತವಾಗಿ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದೇವೆ. ಕುಮಾರಸ್ವಾಮಿ ಇದೆಲ್ಲದಕ್ಕೆ ದುಡ್ಡು ಎಲ್ಲಿ ತರ್ತಾರೆ ಅಂತ ಕೇಳಬಹುದು. ನೀವು ಕಟ್ಟೋ ತೆರಿಗೆ ಹಣವನ್ನು ಸರಿಯಾಗಿ ಬಳಕೆ ಮಾಡಿದರೆ ಆಗುತ್ತದೆ. ಅದೆಲ್ಲೂ ಸೋರಿಕೆ ಆಗದಂತೆ ಸರಿಯಾಗಿ ಬಳಸಬೇಕು. ಹಾಗಾಗಿ ನೀವು ಒಂದು ಅವಕಾಶವನ್ನು ನಮಗೆ ಕೊಡಿ ಎಂದು ಅವರು ಮನವಿ ಮಾಡಿದರು.
ನಾನು ಮುಖ್ಯಮಂತ್ರಿ ಆಗಿದ್ದಾಗ 2017ರಲ್ಲಿ ಬೆಂಗಳೂರು ನಗರ ಪಾಲಿಕೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಡಿದೆ. ಈ ವಸಂತಪುರವನ್ನೂ ಆಗ ಬಿಬಿಎಂಪಿಗೆ ಸೇರಿಸಿದೆ. ಸಾವಿರಾರು ಕೋಟಿ ಹಣ ನಗರದ ಅಭಿವೃದ್ಧಿಗೆ ಸಿಕ್ಕಿತು. ಮೆಟ್ರೋ ರೈಲು ಯೋಜನೆ ಪ್ರಾರಂಭ ಮಾಡಿದ್ದು ನಾನು. ದೆಹಲಿಯಲ್ಲಿ ಮೆಟ್ರೋ ಯೋಜನೆ ಪ್ರಾರಂಭ ಮಾಡಿದ್ದು ದೇವೇಗೌಡರು ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದರು.
ಬಳಿಕ ಮಾಜಿ ಮುಖ್ಯಮಂತ್ರಿಗಳು ದಾಸರಹಳ್ಳಿ ಕ್ಷೇತ್ರದಲ್ಲಿ ಮಂಜುನಾಥ್ ಹಾಗೂ ಯಲಹಂಕ ಕ್ಷೇತ್ರದಲ್ಲಿ ಮುನೇಗೌಡ ಪರವಾಗಿ ಪ್ರಚಾರ ನಡೆಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಸೇರಿದಂತೆ ಸ್ಥಳೀಯ ಮುಖಂಡರು, ಅಭ್ಯರ್ಥಿಗಳು ಜತೆಯಲ್ಲಿ ಇದ್ದರು.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…