ಅಷ್ಟಾವರಣಗಳಾದ ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ರುದ್ರಾಕ್ಷಿ, ಭಸ್ಮ ಮತ್ತು ಮಂತ್ರ ಇವು ಶರಣರ ತತ್ವಗಳಾಗಿದ್ದವು ಎಂದು ಶರಣಬಸವೇಶ್ವರ ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎನ್.ಎಸ್.ಪಾಟೀಲರು ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಶುಕ್ರವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.
ಶರಣಬಸವರು ಭಸ್ಮಕ್ಕೆ ಬಹಳ ಮಹತ್ವ ನೀಡಿದ್ದರು. ಅವರ ಹಣೆಯ ಮೇಲೆ ಮೂರು ಬೆರಳು ವಿಭೂತಿ ಯಾವಾಗಲೂ ಹೊಳೆಯುತ್ತಿತ್ತು. ಆದರೆ ಮತಾಂಧರರಿಗೆ ಇದು ಹಿಡಿಸಲಿಲ್ಲ. ತಾವು ಪೂಜಿಸುವ ದೇವರಿಗೆಲ್ಲ ಅವರು ಏನೇನೋ ಹಚ್ಚುತ್ತಿದ್ದರು. ಆಗ ಗುಡಿಯೊಳಗಿರುವ ಲಿಂಗಗಳೆಲ್ಲ ಶರಣರೊಂದಿಗೆ ಹೀಗೆ ಹೇಳುತ್ತವೆ’ ನಮಗೆ ಗುಡಿಯ ಪೂಜಾರಿಗಳು ವಿಭೂತಿ ಹಚ್ಚುತ್ತಿಲ್ಲ. ಏನೇನೋ ಹಚ್ಚುತ್ತಿದ್ದಾರೆ ಅದು ಎಂದು ಅಳಲು ತೋಡಕೊಂಡವರು ಆಗ ಶರಣರು ಭಸ್ಮದಿಂದ ಮೂರು ಬೆರಳು ವಿಭೂತಿಯನ್ನು ಲಿಂಗೊಂದಕ್ಕೆ ಹಚ್ಚಿದಾಗ ಎಲ್ಲ ಲಿಂಗಗಳ ಮೇಲೆ ವಿಭೂತಿ ಹೊಳೆಯಲು ಪ್ರಾರಂಭಿಸಿತು. ಮರುದಿನ ಪೂಜಾರಿಗಳು ಗುಡಿಗೆ ಹೋದಾಗ ನಿಮ್ಮ ಪೂಜೆ ಬೇಡ ಎಂದು ಮುಖ ತಿರುಗಿಸುತ್ತವೆ. ಸಿಟ್ಟಿಗೆದ್ದ ಪೂಜಾರಿ ವಿಭೂತಿ ಅಳಿಸಬೇಕೆಂದು ಎಷ್ಟು ನೀರು ಹಾಕಿದರೂ ವಿಭೂತಿ ಹೊಗುವುದಿಲ್ಲ. ಅವರ ತಪ್ಪು ಅರಿವಾಗುತ್ತದೆ. ಶರಣರಿಗೆ ವ್ಯಕ್ತಿತ್ವಕ್ಕೆ ಕೈಮುಗಿಯುತ್ತಾರೆ.
ಶರಣರಿಗೆ ಮಹಾಮನೆಯ ಎದುರಿಗೆ ತುಂಬಿದ ಕೆರೆಯೆಂದರೆ ಪ್ರೀತಿ ಅದರಲ್ಲಿರುವು ಮೀನುಗಳಿಗೆ ದಿನಾಲೂ ತಿನ್ನಲು ಏನಾದರೂ ಹಾಕುತ್ತಿದ್ದರು. ಕೆಲವರು ಮೀನುಗಳನ್ನು ಹಿಡಿದುಕೊಂಡು ಒಯ್ದು ಮನೆಯೊಳಗಿಟ್ಟರು. ಶರಣರಿಗೆ ವಿಷಯ ತಿಳಿದು ರಾತ್ರಿ ಜನರ ಕನಸ್ಸಿನೊಳಗೆ ಹೋಗಿ ಆ ಮೀನುಗಳನ್ನು ಕೆರೆಗೆ ತಂದು ಒಪ್ಪಿಸಿರಿ ಎಂದು ಹೇಳುತ್ತಾರೆ. ಆದರೆ ಕನಸ್ಸಿನಲ್ಲಿ ಶರಣರು ಹೇಳಿದ ಮಾತು ತಿರಸ್ಕರಿಸಿ ಮಡದಿಯರಿಗೆ ಮೀನಿನ ಅಡುಗೆ ಮಾಡಿರೆಂದು ಹೇಳಿದಾಗ ಮನೆಯ ಮಕ್ಕಳೆಲ್ಲ ಕೆಳಗೆ ಬಿದ್ದು ಕಾಲು ತಿಕ್ಕಲು ಆರಂಭಿಸುತ್ತಾರೆ. ಶರಣರ ಕನಸ್ಸಿನ ಮಾತು ನೆನಪಾಗಿ ಮಕ್ಕಳನ್ನು ಹೆಗಲ ಮೇಲೆ ಹಾಕಿಕೊಂಡು ಶರಣರಲ್ಲಿ ಬರುತ್ತಾರೆ. ಇನ್ನೊಮ್ಮೆ ಪ್ರಾಣಿ ಹಿಂಸೆ ಮಾಡುವುದಿಲ್ಲ ಎಂದು ಹೇಳುತ್ತಾರೆ. ಶರಣರು ಭಸ್ಮವನ್ನು ತಂದು ಮಕ್ಕಳ ಮತ್ತು ಮೀನುಗಳ ಮೇಲೆ ಹಾಕಿದಾಗ ಮಕ್ಕಳು ಎದ್ದು ಕೂಡುತ್ತಾರೆ. ಮೀನುಗಳು ಜೀವಂತವಾಗುತ್ತವೆ ಅವುಗಳನ್ನು ಮತ್ತೆ ಕೆರೆಗೆ ಬಿಡಲಾಗುತ್ತದೆ.
ಹೆತ್ತತಾಯಿ ತನ್ನ ಮಕ್ಕಳನ್ನು ಬಿಟ್ಟು ಲಿಂಗೈಕ್ಯಳಾಗುತ್ತಾಳೆ. ತಂದೆ ಇನ್ನೊಂದು ಮದುವೆಯಾಗುತ್ತಾನೆ. ಆಕೆ ಬಹಳ ಸೊಕ್ಕಿನವಳು. ಮಕ್ಕಳಿಗೆ ಬಹಳ ಕಷ್ಟ ಕೊಡುತ್ತಿರುತ್ತಾಳೆ. ತಂದೆಗೆ ಹೇಳಿದರೆ ಮಕ್ಕಳಿಗೆ ಬಯ್ಯುತ್ತಾನೆ. ಮಕ್ಕಳು ದಿಕ್ಕು ತೋಚದೆ ಶರಣರಲ್ಲಿ ಬಂದು ಎಲ್ಲ ಹೇಳಿದಾಗ ಶರಣರು ಅವರನ್ನು ತಮ್ಮಲ್ಲಿಯೇ ಉಳಿಯಲು ಹೇಳುತ್ತಾರೆ. ಕೆಲ ವರ್ಷಗಳ ನಂತರ ಆಕೆಗೆ ಮಹಾರೋಗ ಹತ್ತಿ ನಿತ್ರಾಣಗೊಂಡಿರುತ್ತಾಳೆ. ಆಕೆಗೆ ಆರೈಕೆ ಮಾಡಲು ಯಾರೂ ದಿಕ್ಕಿಲ್ಲ. ಶರಣರ ಹತ್ತಿರ ಬಂದಾಗ ತಮ್ಮ ಮಕ್ಕಳನ್ನು ನೋಡುತ್ತಾಳೆ. ಆ ಮಕ್ಕಳು ಅವಳ ಬೇನೆಯನ್ನು ಕಳೆಯಲು ಶರಣರ ಹತ್ತಿರ ಬೇಡಿಕೊಳ್ಳುತ್ತಾರೆ. ಮಕ್ಕಳ ಅಂತಃಕರಣಕ್ಕೆ ಮಾರು ಹೋಗಿ ಶರಣರು ಭಸ್ಮ ತಂದು ಆಕೆಯ ಮೈಗೆ ಹಚ್ಚಿದಾಗ ರೋಗ ಅಳಿದು ಹೋಗುತ್ತದೆ. ಶರಣರ ಪಾದಕ್ಕೆ ಬಿದ್ದು ತಪ್ಪನ್ನು ಒಪ್ಪಿಕೊಂಡು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ.
ಒಬ್ಬ ವ್ಯಕ್ತ್ತಿ ಶರಣರ ಅಪ್ಪಟ ಭಕ್ತನಾಗಿದ್ದ, ಆದರೆ ಹೆಂಡತಿಗೆ ಕುರುಡ ಭಕ್ತಿ ಇತ್ತು. ಒಂದು ಸಲ ದುರುಗಮ್ಮನ ಮುಂದೆ ಕಡಿಯಲು ಕುರಿಯೊಂದನ್ನು ಹಿಡಿದು ಹೊರಟಳು. ಗಂಡ ಎಷ್ಟೇ ಹೇಳಿದರೂ ಒಪ್ಪಲಿಲ್ಲ. ಶರಣರಿಗೆ ಈ ವಿಷಯ ತಿಳಿಯುತ್ತದೆ. ಕುರಿ ಕಡೆಯುವ ಖಡ್ಗ ಎತ್ತಿದಾಗ ಅದು ಹೆಣ್ಣಮಗಳ ಕೈ ಮೇಲೆ ಬಿದ್ದು ಅವಳ ಎರಡು ಕೈಗಳು ಕಡಿದು ಬಿಳುತ್ತವೆ. ಕಡಿಯುವ ಗಾಬರಿಯಾದ ಮತ್ತೆ ಖಡ್ಗ ಎತ್ತಿದಾಗ ಅವನ ಕೈ ಕಡಿಯುತ್ತವೆ. ತಪ್ಪಿನ ಅರಿವಾಗಿ ಶರಣರಲ್ಲಿ ಹೋಗಿ ಬೇಡಿಕೊಂಡು ಶರಣರ ಆಶೀರ್ವಾದಿಂದ ಮತ್ತೆ ಮೊದಲಿನಂತಾಗುತ್ತಾರೆ ಎಂದು ಲೀಲೆಗಳನ್ನು ಹೇಳಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…