ಬಿಸಿ ಬಿಸಿ ಸುದ್ದಿ

ಸುಪ್ತಮನಸ್ಸನ್ನು ಉಪಯೋಗಿಸಿ ಸಂದರ್ಶನ ಎದುರಿಸಿ: ಭುಜಬಲಿ

ಕಲಬುರಗಿ: ಸಂದರ್ಶನ ಎಂದ ಕೂಡಲೇ ಭಯ ಹುಟ್ಟಿಕೊಳ್ಳುವುದು ಸಾಮಾನ್ಯ, ಸಂದರ್ಶನಕ್ಕೆ ಹೊರಡುವ ಮುನ್ನ ಸಕಲ ಸಿದ್ದತೆಗಳನ್ನು ಮಾಡಿಕೊಂಡರೆ ಸರಳವಾಗಿ ಮತ್ತು ಧೈರ್ಯದಿಂದ ಸಂದರ್ಶನವನ್ನು ಗೆಲ್ಲಬಹುದು ಎಂದು ಬೆಂಗಳೂರಿನ ಖ್ಯಾತ ಮನೋತಜ್ಞ ,ಹ್ಯಾಪಿನೆಸ್ ಇಂಜಿನಿಯರ್ ತರಬೇತುದಾರರಾದ ಭುಜಬಲಿ ಬೋಗಾರ ಅವರು ಹೇಳಿದರು.

ನಗರದ ಜಾಜಿ ಪ್ರತಿಷ್ಠಾನದ ಗುರುಕುಲ ಡಿಗ್ರಿ ಕಾಲೇಜಿನಲ್ಲಿ ಮೌನಯೋಗಿ ಫೌಂಡೇಶನ್ ಹಾಗೂ ಟ್ರಾನ್ಸ್‌ಫಾರ್ಮೊ ಇನ್‌ಕಾರ್ಪ್ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸುಪ್ತಮನಸ್ಸಿನ ರಹಸ್ಯ ಶಕ್ತಿಗಳನ್ನು ಉಪಯೋಗಿಸಿ ಸಂದರ್ಶನ ಎದುರಿಸಿ ಎಂಬ ವಿಶೇಷ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದರು.

ಅವರು ಸಂದರ್ಶಕರ ಪ್ರಶ್ನೆಗಳಿಗೆ ಉತ್ತರಿಸುವಾಗ ಸಂದರ್ಶಕರೆಡೆಗೆ ದೃಷ್ಟಿಯನ್ನು ಹರಿಸಿ ಉತ್ತರಿಸಬೇಕು, ಪ್ರಶ್ನೆಗಳಿಗೆ ಉತ್ತರ ತಿಳಿಯದಿದ್ದಾಗ ಅದನ್ನು ಒಪ್ಪಿಕೊಳ್ಳುವುದು ಉತ್ತಮ, ಕುರ್ಚಿಯ ಮೇಲೆ ನೇರವಾಗಿ ದೇಹವನ್ನು ಸ್ವಲ್ಪ ಮುಂಭಾಗಕ್ಕೆ ಇರಿಸಿ ಆತ್ಮವಿಶ್ವಾಸದಿಂದ ಕುಳಿತುಕೊಳ್ಳಬೇಕು, ಎಲ್ಲದಕ್ಕಿಂತ ಮುಖ್ಯವಾಗಿ ಸಂದರ್ಶನಕ್ಕೆ ಹೊರಡುವ ಕಂಪನಿ ಮತ್ತು ಹುದ್ದೆಗೆ ಸಂಬಂಧಿಸಿದಂತೆ ಸಾಕಷ್ಟು ತಿಳಿದುಕೊಂಡಿರಬೇಕು, ಕೆಲವೊಂದು ಕಂಪನಿಗಳು ಉದ್ಯೋಗಕ್ಕಿಂತ ಮುಂಚೆ ಅಭ್ಯರ್ಥಿಯ ವ್ಯಕ್ತಿತ್ವವನ್ನು ಅರಿಯಲು ಕೈ ಬರಹದ ತಪಾಸಣೆ ಮಾಡುತ್ತಾರೆ.ಈ ಪ್ರಯುಕ್ತ ವಿದ್ಯಾರ್ಥಿಗಳಿಗೆ ತಮ್ಮ ಕೈಬರಹದಲ್ಲಿನ ಬದಲಾಯಿಸಿಕೊಳ್ಳಬೇಕಾದ ಅಂಶಗಳ ಬಗ್ಗೆ ಪ್ರಾತ್ಯಕ್ಷಿಕವಾಗಿ ತೋರಿಸಿ ವಿವರಿಸಿದರು.

ಸಂದರ್ಶನಕಾರರ ಮೇಲೆ ಸಕರಾತ್ಮಕವಾದ ಪ್ರಭಾವವನ್ನು ಬೀರುವ ಮೆದುಳಿನ-ನರವಿಜ್ಞಾನದ ಇತ್ತೀಚಿನ ಸಂಶೋಧನೆಗಳ ಲಾಭಗಳ ಬಗ್ಗೆ ಹೇಳಿದರು .ಸಂದರ್ಶನಕ್ಕೆ  ನಮ್ಮ ವಸ್ತ್ರಗಳು ಶುಚಿಯಾಗಿ ಹಾಗೂ ಸೂಕ್ತವಾಗಿರುವಂತೆ ಎಚ್ಚರ ವಹಿಸಬೇಕು ಮತ್ತು ಸಂದರ್ಶನಕ್ಕೆ ಆಂಗಿಕ ಭಾಷೆ ಧನಾತ್ಮಕವಾಗಿ ಆತ್ಮವಿಶ್ವಾಸದಿಂದ ಕೂಡಿದರೆ ಖಂಡಿತವಾಗಿಯು ಯಶಸ್ಸು ಸಾಧ್ಯ ಎಂದರು. ಕಣ್ಣುಗಳು ಮನಸ್ಸಿನ ಕನ್ನಡಿಯಿದ್ದಂತೆ,ಕಣ್ಣುಗಳ ಚಲನವಲನವೂ ಮನಸ್ಸಿನಲ್ಲಿ ನಡೆಯುತ್ತಿರುವ ಆಲೋಚನೆಗಳನ್ನು ನಿರ್ದಿಷ್ಟವಾಗಿ ಹೇಳುತ್ತದೆ ಎಂದು ತಿಳಿಸಿಕೊಟ್ಟರು.ಈ ಜ್ಞಾನವನ್ನು ಉಪಯೋಗಿಸಿ ಸಂದರ್ಶಕನ ಮನಸ್ಸಿನಾಳವನ್ನು ಅರಿತು ಉದ್ಯೋಗ ಗಿಟ್ಟಿಸಿಕೊಳ್ಳುವಂತೆ ಸಂದರ್ಶನಕಾರರ ಮೇಲೆ ಹೇಗೆ ಪ್ರಭಾವ ಬೀರಬಹುದೆಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ಭುಜಬಲಿ ಬೋಗಾರ, ಮೌನಯೋಗಿ ಫೌಂಡೇಶನ್‌ನ ಗೌರವ ಮಾರ್ಗದರ್ಶಕರಾದ ಖ್ಯಾತ ವಾಸ್ತುಶಿಲ್ಪಿ ಬಸವರಾಜ ಖಂಡೇರಾವ,  ಪ್ರಾಚಾರ್ಯರಾದ – ಸಂಜೀವ ಆರ್.ಪಾಟೀಲ, ಆಪರೇಶನ್ ಹೆಡ್ ನರಸಿಂಹ ಭಟ್, ಡಾ.ಎಸ್.ಬಿ.ಹಾಗರಗಿ, ಶ್ರಾವಣಯೋಗಿ ಹಿರೇಮಠ, ಸಂಸ್ಥೆಯ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

4 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

14 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

14 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

14 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago