ಬಿಸಿ ಬಿಸಿ ಸುದ್ದಿ

ಬೈಕ್ ನಿಂದ ಬಿದ್ದು ಮಹಿಳೆ ಸಾವು

ವಾಡಿ: ಬೈಕ್ ಸ್ಕಿಡ್ ಆಗಿ ವಾಹನ ಅಪಘಾತ ಸಂಭವಿಸಿದ ಪರಿಣಾಮ ಹಿಂಬದಿ ಸವಾರ ಮಹಿಳೆ ಮೃತಪಟ್ಟ ಘಟನೆ ರವಿವಾರ ಬೆಳಗ್ಗೆ ಚಿತ್ತಾಪುರ ತಾಲೂಕಿನ ಲಾಡ್ಲಾಪುರ-ಹಳಕರ್ಟಿ ಗ್ರಾಮ ಮಧ್ಯದ ರಾಷ್ಟ್ರೀಯ ಹೆದ್ದಾರಿಯ ಮೆಲೆ ಸಂಭವಿಸಿದೆ.

ಹೀನಾಬೇಗಂ ಮಹ್ಮದ್ ಇಮ್ರಾನ್ (27) ಮೃತ ದುರ್ದೈವಿ. ರಾಯಚೂರು ನಗರದ ನಿವಾಸಿಯಾಗಿರುವ ಇವರು ತಂದೆಯ ಜತೆಗೆ ಬೈಕ್ ಮೇಲೆ ಕಲಬುರಗಿಗೆ ತೆರಳುತ್ತಿದ್ದರು. ವೇಗವಾಗಿ ಚಲಿಸುತ್ತಿದ್ದ ಬೈಕ್ ಸ್ಕಿಡ್ ಆಗಿದೆ. ಪರಿಣಾಮ ಆಯತಪ್ಪಿ ಮಹಿಳೆ ರಸ್ತೆ ಮೇಲೆ ಬಿದ್ದಿದ್ದಾಳೆ. ಮಹಿಳೆಯ ಬಟ್ಟೆ ಚೈನ್ ಗೆ ಸುತ್ತಿಕೊಂಡ ಪರಿಣಾಮ ಸುಮಾರು 80 ಅಡಿವರೆಗೂ ಮಹಿಳೆಯನ್ನು ಎಳೆದುಕೊಂಡು ಹೋಗಿದೆ.

ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ವಾಡಿ ಸಮುದಾಯ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸುವ ಮೂಲಕ ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮಧ್ಯಾಹ್ನ ವೇಳೆ ಮೃತ ಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

emedialine

Recent Posts

ಜಿಲ್ಲಾಧ್ಯಕ್ಷ-ತಾಲೂಕು ಅಧ್ಯಕ್ಷರಾಗಿ ಬಳಿರಾಮ ರಾಮಜಿ, ಶಿವರಾಜ ದೇಶಮುಖಪ್ಪಾ ನೇಮಕ

ಕಲಬುರಗಿ: ಕಲ್ಯಾಣ ಕರ್ನಾಟಕ ರೈತಾಪಿ ಸಂಘದ ಜಿಲ್ಲಾ ಅಧ್ಯಕ್ಷರನ್ನಾಗಿ ಬಳಿರಾಮ ರಾಮಜಿ ಚೌವ್ಹಾಣ, ಹಾಗೂ ತಾಲೂಕು ಅಧ್ಯಕ್ಷರನ್ನಾಗಿ ಶಿವರಾಜ ದೇಶಮುಖಪ್ಪಾ…

2 hours ago

ಪುರಾತನ ಕಾಲದಲ್ಲಿ ನಾಗಾವಿ ನಾಡು ಸಾಂಸ್ಕøತಿಕವಾಗಿ ಪ್ರಸಿದ್ಧ: ತಹಸಿಲ್ದಾರ್ ಹಿರೇಮಠ್

ಕಲಬುರಗಿ: ಪುರಾತನ ಕಾಲದಲ್ಲಿ ನಾಗಾವಿ ಪ್ರದೇಶವು ದಕ್ಷಿಣ ಭಾರತದಲ್ಲಿ ನಾಗಾವಿ ಪ್ರಸಿದ್ದಿ ಪಡೆದ ವಿಶ್ವ ವಿದ್ಯಾಲಯವಾಗಿತ್ತು ಎಂದು ತಹಸಿಲ್ದಾರ್ ನಾಗಯ್ಯ…

12 hours ago

ಮತದಾರರ ನೋಂದಣಿಗೆ ನವೆಂಬರ್ 23 ಮತ್ತು‌ 24 ರಂದು ವಿಶೇಷ ಅಭಿಯಾನಬಿ:.ಫೌಜಿಯಾ ತರನ್ನುಮ್

ಕಲಬುರಗಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಿ.1-1-2025 ಅರ್ಹತಾ ದಿನವನ್ನಾಗಿ ಪರಿಗಣಿಸಿಕೊಂಡು ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಸಲಾಗುತ್ತಿದ್ದು,…

12 hours ago

ವಿಕಲಚೇತನರು ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಿ ಜಯಸಾಧಿಸಬೇಕು: ರಾಯಪ್ಪ ಹುಣಸಗಿ

ಕಲಬುರಗಿ: ವಿದ್ಯಾರ್ಥಿಗಳು ಜಿಲ್ಲೆಯ ಎಲ್ಲಾ ವಿಕಲಚೇತನರಿಗೆ ಹೆಚ್ಚಿನ ಸ್ಥಾನಮಾನಗಳನ್ನು ಸಿಗಬೇಕು ಹಾಗೂ ಎಲ್ಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಿ ಜಯಸಾಧಿಸಬೇಕು ಎಂದು ಅಪರ…

12 hours ago

ಕಲಬುರಗಿ: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ನಾಲ್ವರು ಭಾರತೀಯರು

ಪ್ರಜ್ವಲ್,ಧೀರಜ್ ಸೋಲಿಸಿ ಗೆದ್ದು ಬೀಗಿದ ಬೊಬ್ರೋಬ್ ಹಾಗೂ ಸುಲ್ತಾನೋವ್ ಕಲಬುರಗಿ, ನವೆಂಬರ್ ೨೧ : ಐಟಿಎಫ್ ಕಲಬುರಗಿ ಓಪನ್ ಟೆನಿಸ್…

12 hours ago

ಜಾನಪದ ಉಳಿಸಿ ಬೇಳೆಸ ಬೇಕಾದರೆ ಯುವಕರು ಮುಂದಾಳತ್ವ ಬಹಳ ಮುಖ್ಯ: ಪ್ರೊ. ಶೊಭಾದೇವಿ ಚೆಕ್ಕಿ

ಕಲಬುರಗಿ: ವೀರಭದ್ರೇಶ್ವರ ಸಾಂಸ್ಕೃತಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ರಿ ಆಳಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು…

13 hours ago