ಬಿಸಿ ಬಿಸಿ ಸುದ್ದಿ

ಶರಣರ ವಚನಗಳು ಪಾಕಗೊಂಡ ಪಕ್ವಾನ್ನಗಳು: ಸತ್ಯಂಪೇಟೆ

ಕಲಬುರಗಿ: ಕಲಬುರಗಿಯ ವಚನೋತ್ಸವ ಪ್ರತಿಷ್ಠಾನ ಹಾಗೂ ವಚನೋತ್ಸವ ಸಮಿತಿಗಳ ಒಕ್ಕೂಟದ ವತಿಯಿಂದ  ಶ್ರಾವಣ ಮಾಸದಂಗವಾಗಿ ಹಳೇ ಜೇವರ್ಗಿ ರಸ್ತೆಯಲ್ಲಿರುವ  ಕಸ್ತೂರಬಾ ಕಾಂಪೌಂಡನಲ್ಲಿನ ಸಾಹಿತ್ಯ ಪ್ರೇಮಿ-ಶರಣ ಚಿಂತಕ ರವೀಂದ್ರಕುಮಾರ ಭಂಟನಳ್ಳಿ ಅವರ ಮಹಾಮನೆಯ ಅಂಗಳದಲ್ಲಿ ಶುಕ್ರವಾರ ಜರುಗಿದ ‘ವಚನಗಳಲ್ಲಿ ಜೀವನ ಮೌಲ್ಯಗಳು’ ಕುರಿತ ಕಾರ್ಯಕ್ರಮ  ಹಿರಿಯ ಶರಣ ಚಿಂತಕ ಕಲ್ಯಾಣಪ್ಪ ಪಾಟೀಲ ಮಳಖೇಡ ಉದ್ಘಾಟಿಸಿದರು.

‘ಮಾರಿ ಮಸಣಿಯೆಂಬುದು ಬೇರಿಲ್ಲ’ ಎನ್ನುವ ಬಸವಣ್ಣನವರ ವಚನ ವಿಶ್ಲೇಷಣೆ ಮಾಡಿ ಅನುಭಾವ ನೀಡಿದ  ಪತ್ರಕರ್ತ-ಸಾಹಿತಿ ಶಿವರಂಜನ್ ಸತ್ಯಂಪೇಟೆ, ಶರಣರ ವಚನಗಳು ಅಂದಿನ ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆ, ಕಂದಾಚಾರಗಳನ್ನು ಖಂಡಿಸಿ ಸುಜ್ಞಾನವನ್ನು ಬಿತ್ತಿ ಸದಾಚಾರದ ಬೆಳೆ ತೆಗೆಯುವ ಸ್ವಭಾವದವುಗಳಾಗಿವೆ ಎಂದು ಅಭಿಪ್ರಾಯಪಟ್ಟರು.

ಶರಣರ ನಡೆ-ನುಡಿಯಿಂದ ಪಾಕಗೊಂಡ ಪಕ್ವಾನ್ನಗಳಂತಿರುವ ಈ ವಷನಗಳು ಓದುಗರಿಗೆ, ಕೇಳುಗರಿಗೆ ಬೇವಿನಂತೆ ಕಹಿಯೆನಿಸಿದರೂ ಅವುಗಳನ್ನು ಆಚರಣೆಗೆ ತಂದಾಗ ಬೆಲ್ಲದಂತೆ ಸಿಹಿಯಾಗುವುದು. ಶರಣರ ವಚನಗಳು ಅಧರಕ್ಕೆ ಕಹಿ, ಉದರಕ್ಕೆ ಸಿಹಿ ಎಂದು ತಿಳಿಸಿದರು.

ನಾವು ನೋಡುವ ದೃಷ್ಟಿಕೋನ ಒಳ್ಳೆಯದಾಗಿರಬೇಕು. ನಾವು ಆಡುವ ಮಾತು ಉತ್ತಮವಾಗಿರಬೇಕು. ನಮ್ಮ ಕಣ್ಣು ನಾಲಿಗೆ ಮೇಲೆ ನಿಯಂತ್ರಣವಿರಬೇಕು. ಇವುಗಳು ದಾರಿ ತಪ್ಪಿದರೆ ಅದುವೆ ಮಾರಿ ಹೊರತು, ಕ್ಷುದ್ರ ದೇವತೆಗಳಲ್ಲ. ನೈತಿಕತೆ ಮತ್ತು ಆಂತರಿಕ ಶುದ್ಧತೆ ಇರಬೇಕು ಎಂದು ವಿವರಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ  ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ವಚನಗಳನ್ನು ಕೇವಲ ಓದುವುದು, ಕಂಠಪಾಠ ಮಾಡುವುದು ಮಾಡದೆ, ವಚನ ಪಚನ ಮಾಡಿಕೊಂಡು ವಚನ ಬದುಕಬೇಕು ಎಂದರು.

ಬದುಕಿನ ಸಾರ್ಥಕ ಮಾರ್ಗ ತೋರಿದ ಶರಣರು ತಾತ್ವಿಕ ತಳಹದಿಯ ಮೇಲೆ ಸಾತ್ವಿಕ ಸಮಾಜ ಕಟ್ಟ ಬಯಸಿದ್ದರು. ಮನುಷ್ಯ ಮಾನವನಾಗುವ ಬಗೆ, ಮನೆ ಮಹಾಮನೆ ಆಗುವ ಬಗೆಯನ್ನು ಶರಣರು ತೋರಿಸಿಕೊಟ್ಟರು. ನಾವೆಲ್ಲರೂ ಶರಣ ಮಾರ್ಗದಲ್ಲಿ ಮುನ್ನಡೆದು ಬದುಕಿಗೆ ಅರ್ಥ ತಂದುಕೊಳ್ಳೋಣ ಎಂದು ಹೇಳಿದರು. ವಚನೋತ್ಸವ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಬಸವರಾಜ ಮೋದಿ, ಕಾರ್ಯದರ್ಶಿ ಬಸವರಾಜ ಧೂಳಾಗುಂಡಿ, ಕಲ್ಯಾಣಪ್ಪ ಬಿರಾದಾರ, ಸಿದ್ಧರಾಮ ಹಂಚನಾಳ, ಶರಣ ಚಿಂತಕ ನಾಗಣ್ಣಾ ಸ್ವಾದಿ ವೇದಿಕೆ ಮೇಲಿದ್ದರು. ಪ್ರಮುಖರಾದ ಶಿವರಾಜ ಅಂಡಗಿ, ಬಿ.ಎಂ.ಪಾಟೀಲ ಕಲ್ಲೂರ, ಜಗದೀಶ ಮರಪಳ್ಳಿ,  ಸತೀಶ ಸಜ್ಜನ್, ಪ್ರಭುದೇವ ಯಳವಂತಗಿ, ಶಿವಾನಂದ ಮಠಪತಿ, ಪ್ರಭುಲಿಂಗ ಮೂಲಗೆ, ನಾಗೇಂದ್ರಪ್ಪ ಮಾಡ್ಯಾಳೆ, ರಮೇಶ ಧುತ್ತರಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಮಹಾಮನೆಯ ಮಾಲೀಕರೂ ಆದ ಕಾರ್ಯಕ್ರಮದ ದಾಸೋಹಿಗಳಾದ-ದಂಪತಿಗಳಾದ ಶ್ರೀಮತಿ ಸುನಂದಾ ಮತ್ತು ಶ್ರೀ ರವೀಂದ್ರಕುಮಾರ ಭಂಟನಳ್ಳಿ ಅವರನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಗೌರವಿಸಲಾಯಿತು

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

6 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

16 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

16 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

16 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago