ಆಳಂದ: ಪಟ್ಟಣದ ಪಿಯು ಖಾಸಗಿ ಕಾಲೇಜೊಂದು ಬೀದರ್‌ನ ಶಾಹೀನ್ ಕಾಲೇಜಿನ ಒಡಬಂಡಿಕೆಯ ಹೆಸರಿನಲ್ಲಿ ಪ್ರಚಾರ ನಡೆಸಿ ಕಾಲೇಜಿನ ಶೈಕ್ಷಣಿಕ ವರ್ಷದ ಪ್ರವೇಶಕ್ಕೆ ಪ್ರಚಾರ ನಡೆಸಿದ ದೂರಿನನ್ವಯ ಕಾರಣ ಕೇಳಿ ಜಿಲ್ಲಾ ಪಿಯು ಬೋರ್ಡ್ ಉಪನಿರ್ದೇಶಕರು ನೋಟಿಸ್ ಜಾರಿಗೊಳಿಸಿದ ಘಟನೆ ನಡೆದಿದೆ.
ಪಟ್ಟಣದಲ್ಲಿನ ಮಹಾತ್ಮಾಗಾಂಧಿ (ಎಂಜಿ) ಪದವಿ ಪೂರ್ವ ಕಾಲೇಜು ಬೀದರನ ಶಾಹೀನ್ ಕಾಲೇಜಿನ ಹೆಸರಿನಲ್ಲಿ ಪ್ರಚಾರ ನಡೆಸಿ ವಿದ್ಯಾರ್ಥಿಗಳ ಪ್ರವೇಶ ಪಡೆಯುತ್ತಿದ್ದು, ಇಲಾಖೆಯ ಅನುಮತಿ ಇಲ್ಲದೆ, ಕಾಲೇಜುಗಳ ಒಪ್ಪಂದ ಸಾಧ್ಯವಿಲ್ಲ. ಒಪ್ಪಂದ ಹೆಸರಿನಲ್ಲಿ ಶಾಹೀನ್ ಕಾಲೇಜು ಹೆಸರು ಬಳಕೆ ಮಾಡಿದ್ದು, ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಮೋಸವಾಗುತ್ತಿದೆ. ಈ ಕುರಿತು ಎಂಜಿ ಕಾಲೇಜು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ರಫಿಕ ಇನಾಮದಾರ ಪಿಯು ಆಯುಕ್ತರಿಗೆ ಮತ್ತು ಉಪ ನಿರ್ದೇಶಕರಿಗೆ ವಾರದ ಹಿಂದೆಯೇ ದೂರು ನೀಡಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಎಂಜಿ ಕಾಲೇಜಿಗೆ ಶುಕ್ರವಾರ ಹಠಾತ್ ಭೇಟಿ ನೀಡಿದ ಪಿಯು ಉಪನಿರ್ದೇಶಕರು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ. ಅಲ್ಲದೆ, ಯಾವ ಹೆಸರಿನ ಮೇಲೆ ಕಾಲೇಜು ಅನುಮತಿ ಪಡೆಯಲಾಗಿದೆ. ಅದೇ ಹೆಸರಿನಲ್ಲೇ ಕಾಲೇಜು ಪ್ರಕ್ರಿಯೆ ನಡೆಯಬೇಕು. ಶಾಹೀನ ಕಾಲೇಜಿನ ಹೆಸರು ಬಳಕೆಯನ್ನು ಎರಡು ದಿನಗಳಲ್ಲಿ ಕಿತ್ತುಹಾಕಬೇಕು ಇಲ್ಲವಾದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉಪನಿರ್ದೇಶಕರು ಎಂಜಿ ಪಿಯು ಕಾಲೇಜಿನ ಆಡಳಿತ ಮಂಡಳಿಗೆ ಎಚ್ಚರಿಸಿದ್ದಾರೆ.
ದೂರಿನಲ್ಲಿ ಏನಿದೆ: ಶಾಹೀನ್ ಗ್ರೂಫ್ ಆಫ್ ಶಿಕ್ಷಣ ಸಂಸ್ಥೆ ಬೀದರನಲ್ಲಿ ಅನುಮತಿ ಇದೇ ಎಂಜಿ ಪಿಯು ಕಾಲೇಜು ಆಳಂದನಲ್ಲಿದೆ. ಒಂದು ಕಾಲೇಜಿನ ಹೆಸರು ಇನ್ನೊಂದು ಕಾಲೇಜಿಗೆ ಬಳಸಿಕೊಂಡ ಪಿಯು ಶಿಕ್ಷಣ ಕಾಯ್ದೆ ಉಲ್ಲಂಘಿಸಿದ್ದಾರೆ. ಈ ಕುರಿತು ಕ್ರಮ ಜರುಗಿಸಬೇಕು ಎಂದು ರಫಿಕ್ ಇನಾಮದಾರ ದೂರಿದ್ದರು.
ಈಗ ಉಪ ನಿರ್ದೇಶಕರು ಭೇಟಿ ನೀಡಿ ನೋಟಿಸ್ ಜಾರಿಗೊಳಿಸಿದ್ದಕ್ಕೆ ತೃಪ್ತರಾಗದ ಇನಾಮದಾರ ಅವರು, ಪಿಯು ಉಪನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಕೇವಲ ಅಪರಾಧಿಗಳಿಗೆ ನೋಟಿಸ್ ನೀಡಿ ವಾನಿಂಗ್ ಕೊಟ್ಟರೆ ಸಾಲದು ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ,
ಕರ್ನಾಟಕ ಶಿಕ್ಷಣ ಕಾಯ್ದೆ 1982 (ಕರ್ನಾಟಕ ಕಾಯ್ದೆ1-1983) ಪರಿಛೇಧ 6 ಉಪ ಪರಿಛೇದ 1ರನ್ವಯ ಯಾವುದೇ ಕಾಲೇಜು ಶಿಕ್ಷಣವೂ ಸಹಭಾಗಿತ್ವ ಅಥವಾ ಒಪ್ಪಂದ ಹೆಸರು ಬಳಿಕೆ ಮಾಡುವಂತ್ತಿಲ್ಲ. ಒಂದು ವೇಳೆ ಇದನ್ನು ಮಾಡಿದರೆ ಪಿಯು ಶಿಕ್ಷಣ ಕಾಯ್ದೆ ನಿಯಮ ಉಲ್ಲಂಘನೆಯಾಗಿದೆ.
ಶಾಹೀನ ಕಾಲೇಜು ಬೀದರ್‌ನಲ್ಲಿ ನೋಂದಣಿ ಇದೇ. ಆದರೆ ಎಂಜಿ ಕಾಲೇಜು ನೋಂದಣಿ ಕಲಬುರಗಿ ಜಿಲ್ಲೆ ಆಳಂದನಲ್ಲಿದೆ. ಎರಡು ಕಾಲೇಜುಗಳ ಕೋಡ್ ಬೇರೆ ಬೇರೆಯೇ ಆಗಿವೆ. ಹೀಗಿರುವಾಗ ಎರಡೂ ಕಾಲೇಜು ಆಡಳಿತ ಮಂಡಳಿ ಇಲಾಖೆಯ ಗಮನಕ್ಕಿಲ್ಲದೆ ಕಾಲೇಜಿನ ಒಪ್ಪಂದ ಕಾನೂನು ವಿರುದ್ಧವಾಗಿದೆ. ಶಾಹೀನ ಕಾಲೇಜಿನ ವೈಬ್‌ಸೈಟ್‌ನಲ್ಲ್ಲೂ ಆಳಂದ ಎಂಜಿ ಕಾಲೇಜಿನ ಪ್ರೆನಂಚೈಸಿ ಇದೆ ಎಂದು ಹಾಕಿದ್ದಾರೆ ಎಂದು ದೂರಿದ್ದರು.
ಕ್ರಮ ಜರುಗಿಸಿ: ಬೀದರ್‌ನ ಪ್ರತಿಷ್ಠಿತ ಶಾಹೀನ್ ಶಿಕ್ಷಣ ಸಂಸ್ಥೆಯ ಹೆಸರನ್ನು ಆಳಂದನ ಎಂಜಿ ಕಾಲೇಜಿಗೆ ಜೋಡಿಸಿದ್ದ ವಿದ್ಯಾರ್ಥಿಗಳು ಮತ್ತು ಪಾಲಕರು ನಂಬಿ ದುಬಾರಿ ಶುಲ್ಕ ಭರಿಸಿ ಪ್ರವೇಶ ಪಡೆಯುತ್ತಾರೆ. ಶಾಹೀನ್ ಕಾಲೇಜಿನ ಗುಣಮಟ್ಟತೆ ಇಲ್ಲಿನ ಎಂಜಿ ಕಾಲೇಜಿನ ಗುಣಮಟ್ಟತೆ ಇದೆಯೇ? ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಿ ವಿದ್ಯಾರ್ಥಿಗಳ ಮತ್ತು ಪಾಲಕರ ಮೋಸ ಹೋಗುವುದನ್ನು ತಡೆಯಬೇಕು. -ರಫಿಕ ಇನಾಮದಾರ ಸಾಮಾಜಿಕ ಕಾರ್ಯಕರ್ತ ಆಳಂದ.
ನೋಟಿಸ್ ನೀಡಲಾಗಿದೆ: ಶಾಹೀನ್ ಕಾಲೇಜಿನ ಹೆಸರು ಬಳಕೆ ತೆಗೆಯಲು ಎಂಜಿ ಕಾಲೇಜಿನ ಸಂಬಧಿತರಿಗೆ ಸೂಚಿಸಲಾಗಿದೆ. ಎರಡು ದಿನಗಳಲ್ಲಿ ತೆಗೆಯದಿದ್ದರೆ ಮುಂದಿನ ಕ್ರಮ ಜರುಗಿಸಲು ತಾಕೀತು ಮಾಡಿ ನೋಟಿಸ್ ನೀಡಲಾಗಿದೆ.- ಶಿವಶರಣಪ್ಪ ಮುಳೆಗಾಂವ ಪಿಯು ಉಪನಿರ್ದೇಶಕರು ಕಲಬುರಗಿ
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…