ಕಲಬುರಗಿ: ಕುಸ್ತಿ ಪಟುಗಳ ಮೇಲೆ ದೆಹಲಿ ಪೆÇೀಲಿಸರ ವರ್ತನೆಯನ್ನು ಖಂಡಿಸಿ ಹಾಗೂ ಘನವೆತ್ತ ರಾಷ್ಟ್ರಪತಿಗಳು ಕೂಡಲೇ ಮಧ್ಯ ಪ್ರವೇಶಿಸಬೇಕೆಂದು ಕಲಬುರಗಿ ಜಿಲ್ಲಾ ಕೊಳಗೇರಿ ನಿವಾಸಿಗಳ ಒಕ್ಕೂಟ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಶ್ರೀ ಘನವೆತ್ತ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನವ ದೆಹಲಿಯಲ್ಲಿ ಭಾನುವಾರ ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ಉದ್ಘಾಟನೆಗೊಂಡ ನೂತನ ಸಂಸತ್ ಭವನದ ಹೊರಗಡೆ ಪ್ರತಿಭಟನೆ ನಡೆಸಲು ತೆರಳುತ್ತಿದ್ದ, ಕುಸ್ತಿ ಪಟುಗಳನ್ನು ದೆಹಲಿ ಪೆÇೀಲಿಸರು ವಶಕೆ ಪಡೆದಿದ್ದಾರೆ. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಭಾರತೀಯ ಕುಸ್ತಿ ಫೇಡ್ರೆಶನ್ ಅಧ್ಯಕ್ಷ ಬ್ರಿಜ್‍ಭೂಷಣಸಿಂಗ್ ವಿರುದ್ಧ ಕೆಲ ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದ, ಕುಸ್ತಿ ಪಟುಗಳು ಭಾನುವಾರ ಮಹಿಳಾ ಸನ್ಮಾನ್ ಮಹಾ ಪಂಚಾಯತಿಗೆ ಕರೆ ನೀಡಿದರು. ಇದರ ಭಾಗವಾಗಿ ಹೊಸ ಸಂಸತ್ ಭವನದ ಮುಂದೆ ಪ್ರತಿಭಟಿಸಿಲು ಯೋಜಿಸಿದ್ದು, ಅದಕ್ಕಾಗಿ ಮೇರವಣಿಗೆ ಹೊರಟಿದ್ದರು, ಕುಸ್ತಿ ಪಟುಗಳಾದ ವಿನೇಶ್ ಫೆÇೀಗಟ್, ಸಾಕ್ಷಿಮಲೀಕ್, ಭರಂಗ್‍ಫುನಿಯಾ ಮೇರವಣಿಗೆಯ ನೇತೃತ್ವ ವಹಿಸಿದ್ದರು.
ಬ್ಯಾರಿಕೆಡ್ ಹಾಕಿ ಕುಸ್ತಿ ಪಟುಗಳನ್ನು ತಡೆಯಲು ಪೆÇೀಲಿಸರು ಮುಂದಾದರು. ಈ ವೇಳೆ ಕುಸ್ತಿಪಟುಗಳ ಮೇಲೆ ಹಲ್ಲೆ ನಡೆಸಿದ ಪೆÇೀಲಿಸರು ಪ್ರತಿಭಟನಾ ಕಾರರನ್ನು ವಶಕ್ಕೆ ಪಡೆದಿರುವುದು ಅತ್ಯಂತ ನೋವಿನ ಸಂಗತಿ ಜೋತೆಗೆ ಹೋರಾಟಗಾರರ ಮೇಲೆ ನಡೆಸುವ ದಬ್ಬಾಳಿಕೆಯಾಗಿದೆ ಎಂದು ಸ್ಲಂ ಜನಾಂದೋಲನ ಕರ್ನಾಟಕ ಕಲಬುರಗಿ ಜಿಲ್ಲಾ ಘಟಕವು ಖಂಡಿಸುತ್ತದೆ.
ತಮ್ಮ ದೌರ್ಜನ್ಯ ನಡೆಸಿರುವುದಾಗಿ ಆರೋಪಿಸಿರುವ ಕುಸ್ತಿ ಪಟು ಸಾಕ್ಷಿ ಮಲೀಕ್ ಕೆಲವು ಚಿತ್ರಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಯಾವುದೇ ಸರಕಾರ ತಮ್ಮ ದೇಶದ ಚಾಂಪಿಯನ್‍ಗಳನ್ನು ಈ ರೀತಿ ನಡೆಸಿಕೊಳ್ಳುತ್ತದೆಯೇ ಎಂದು ಪ್ರಶ್ನಿಸುವುದರ ಮೂಲಕ ನಾವು ಏನು ಅಪರಾಧ ಮಾಡಿದ್ದೀವಿ ಎಂದು ಪ್ರಶ್ನಿಸಿದ್ದಾರೆ.
ಕೆಲ ದಿನಗಳ ಹಿಂದೆಯು ಪ್ರತಿಭಟನಾ ನೀರತ ಕುಸ್ತಿ ಪಟುಗಳ ಮೇಲೆ ಪೆÇೀಲಿಸರು ಹಲ್ಲೆ ನಡೆಸಿದ್ದರು, ಸಧ್ಯ ಕುಸ್ತಿ ಪಟುಗಳ ಮೇಲಿನ ದೌರ್ಜನ್ಯವು ಸಂಘಟನೆಯು ಖಂಡಿಸುತ್ತದೆ.
ಪ್ರತಿಭಟನಾ ನೀರತ ಕುಸ್ತಿ ಪಟುಗಳು ನಮ್ಮ ದೇಶದ ಆಸ್ತಿ ಮತ್ತು ಗೌರವವಾಗಿದ್ದು, ಅದನ್ನು ನಾವುಗಳು ಮರೆಯ ಬಾರದು ಅಲ್ಲದೇ ಅವರಿಗೆ ಈ ರೀತಿ ಸರಕಾರ ನಡೆಸಿಕೊಳ್ಳುವುದು ಅತ್ಯಂತ ನೋವಿನ ಸಂಗತಿಯಾಗಿದ್ದು, ಕೂಡಲೇ ಕುಸ್ತಿ ಪಟುಗಳ ಬೇಡಿಕೆಗಳ ಈಡೇರಿಕೆಗೆ ಘನವೆತ್ತ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಅವರಿಗೆ ನ್ಯಾಯ ಒದಗಿಸಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಒಕ್ಕೂಟದ ಗೌರವಾಧ್ಯಕ್ಷ ಬಾಬುರಾವ ದಂಡಿನಕರ್, ಅಧ್ಯಕ್ಷ ಅಲ್ಲಮಪ್ರಭು ನಿಂಬರ್ಗಾ, ಕಾರ್ಯದರ್ಶಿ ವಿಕಾಸ್ ಸವಾರಿಕರ್, ಸಹ ಕಾರ್ಯದರ್ಶಿ ಬ್ರಹ್ಮಾನಂದ ಮಿಂಚಾ, ಉಪಾಧ್ಯಕ್ಷ ಅನೀಲ ಚಕ್ರ, ಮುಖಂಡರಾದ ಯಮನಪ್ಪ ಪ್ರಸಾದ್, ಗಣೇಶ ಕಾಂಬಳೆ, ಯೇಸುರಾಜ, ಅಶೋಕ ರಾಠೋಡ, ಮಲ್ಲಿಕಾರ್ಜುನ ಕಾಂಬಳೆ, ಸಿದ್ರಾಮ ತಿರ್ಮಾನ್ ಇದ್ದರು.
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…