ಬಿಸಿ ಬಿಸಿ ಸುದ್ದಿ

ಉತ್ತಮ ಸಮಾಜ ನಿರ್ಮಾಣಕ್ಕೆ ಪೊಲೀಸರಂತೆ ಸಾರ್ವಜನಿಕರು ಕಾಳಜಿ ತೋರಿ

ಸುರಪುರ: ತಾಲೂಕಿನಾದ್ಯಂತ ಎಲ್ಲಿಯೇ ಅಕ್ರಮ ಚಟುವಟೆಕೆಗಳು ಕಂಡುಬಂದಲ್ಲಿ ಅಂತವುಗಳಿಗೆ ಕಡಿವಾಣ ಹಾಕಿ ಉತ್ತಮ ಸಮಾಜ ನಿರ್ಮಿಸಲು ಕೇವಲ ಪೊಲೀಸರು ಮಾತ್ರ ಮಾಡಲಿ ಎನ್ನುವದಲ್ಲಿ ಜೊತೆಗೆ ಸಾರ್ವಜನಿಕರು ಅಂತಹ ಕಾಳಜಿ ತೋರಬೇಕು ಎಂದು ಸುರಪುರ ಪೊಲೀಸ್ ಉಪ ವಿಭಾಗದ ಉಪಾಧಿಕ್ಷಕ ನ್ಯಾಮಗೌಡ ಮನವಿ ಮಾಡಿದರು.

ನಗರದ ಪೊಲೀಸ್ ಠಾಣೆಯ ಆವರಣದಲ್ಲಿ ಹಮ್ಮಿಕೊಳ್ಳಲಾದ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಇಂದಿನ ಸಭೆಯಲ್ಲಿ ಅನೇಕರು ಇಲ್ಲಿಯ ಸಮಸ್ಯೆಗಳ ಬಗ್ಗೆ ಹೇಳಿದ್ದೀರಿ ಅದರಲ್ಲಿ ಟ್ರಾಫಿಕ್ ಸಮಸ್ಯೆ ಬಗ್ಗೆ ಹೇಳಿದ್ದು,ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.ಅಲ್ಲದೆ ನಗರದಲ್ಲಿ ಮಹಿಳಾ ಶೌಚಾಲಯ ನಿರ್ಮಿಸಲು ಹಾಗೂ ಸಿ.ಸಿ ಟಿವಿ ಅಳವಡಿಸಲು ತಿಳಿಸಿದ್ದು,ಇವೆರಡು ನಗರಸಭೆ ಕಡೆಯಿಂದ ಆಗಬೇಕಿವೆ,ಆದ್ದರಿಂದ ನಗರಸಭೆ ಕಮಿಷನರ್ ಜೊತೆಗೆ ಮಾತನಾಡಿ,ಬರುವ ಆಗಷ್ಟ್ 15ರ ಒಳಗೆ ಮಹಿಳಾ ಶೌಚಾಲಯ ನಿರ್ಮಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಅಲ್ಲದೆ ಅನೇಕ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟದ ಕುರಿತು ತಿಳಿಸಿದ್ದೀರಿ,ಶೀಘ್ರದಲ್ಲಿಯೇ ಬಾರ್ ಮಾಲೀಕರ ಸಭೆ ನಡೆಸಿ ಯಾವುದೇ ಕಾರಣಕ್ಕೂ ಮದ್ಯ ಹೊರಗಡೆ ಕಳುಹಿಸದಂತೆ ಸೂಚನೆ ನೀಡಲಾಗುವುದು ಎಂದರು.ಅಲ್ಲದೆ ಈಗಾಗಲೇ ಅನೇಕ ಕೇಸ್ ದಾಖಲಿಸಲಾಗಿದೆ,ಗ್ರಾಮೀಣ ಭಾಗದಲ್ಲಿ ಜೂಜು,ಮಟಕಾ ಹಾಗೂ ಕೋಳಿ ಪಂಜಕ್ಕೆ ಕಡಿವಾಣ ಹಾಕಲಾಗಿದೆ ಎಂದರು.ಅಲ್ಲದೆ ಯಾವುದೇ ಸಮಸ್ಯೆ ನಿವಾರಣಗೆ ಕೇವಲ ಪೊಲೀಸರೆ ಮಾಡಲಿ ಎನ್ನುವ ಬದಲು ಸಾರ್ವಜನಿಕರಾಗಿ ನಮ್ಮದೂ ಜವಬ್ದಾರಿ ಇದೆ ಎಂದು ಅರಿತು ನಮ್ಮ ಗ್ರಾಮಗಳಲ್ಲಿ ಅಕ್ರಮ ಚಟುವಟಿಕೆಗಳನ್ನು ನಾವೇ ವಿರೋಧಿಸೋಣ ಜೊತೆಗೆ ಎಲ್ಲಿಯೆ ಅಕ್ರಮ ಚಟುವಟಿಕೆ ಕಂಡುಬಂದಲ್ಲಿ ನಮಗೆ ಮಾಹಿತಿ ನೀಡುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಸುರಪುರ ಠಾಣೆ ಪಿ.ಐ ಮಹಾಂತೇಶ ದ್ಯಾಮಣ್ಣವರ್, ಮುಖಂಡರಾದ ರೈತ ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ,ಮಹ್ಮದ್ ಜಹಿರ್,ನಿಂಗಣ್ಣ ಗೋನಾಲ,ಅಬ್ದುಲ ಗಫೂರ ನಗನೂರಿ,ಶಕೀಲ್ ಅಹ್ಮದ್,ಮಲ್ಲಣ್ಣ ಹುಬ್ಬಳ್ಳಿ,sಸೂಗುರೇಶ ಮಡ್ಡಿ ಸೇರಿದಂತೆ ಇನ್ನೂ ಅನೇಕರು ವಿವಿಧ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.ವೇದಿಕೆ ಮೇಲೆ ಪಿಎಸ್‍ಐ ಸಿದ್ದಣ್ಣ ಉಪಸ್ಥಿತರಿದ್ದರು.

ಸಭೆಯಲ್ಲಿ ಮುಖಂಡರಾದ ಅಬ್ದುಲ್ ಮಜೀದ್,ಶಿವಲಿಂಗ ಹಸನಾಪುರ,ತಿಪ್ಪಣ್ಣ ಶೆಳ್ಳಗಿ,ಚನ್ನಮಲ್ಲಿಕಾರ್ಜುನ ಗುಂಡಾನೂರ,ಖಾಜಾ ಹುಸೇನ್ ಗುಡಗುಂಟಿ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

37 mins ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

39 mins ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

41 mins ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

17 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

19 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago