ಕಲಬುರಗಿ: ಕಮಲಾಪುರ ತಾಲೂಕಿನ ಮರಗುತ್ತಿ ಬಳಿಯಿರುವ ಟನಲ್ ನಲ್ಲಿ ದೊಡ್ಡ ಕಲ್ಲು ಬಿದ್ದಿರುವುದರಿಂದ ಕಲಬುರಗಿ- ಬೀದರ್ ರೈಲು ಎರಡು ಗಂಟೆಗೂ ಹೆಚ್ಚು ಕಾಲ ಸಿಕ್ಕಿ ಬಿದ್ದಿರುವ ಘಟನೆ ಸೋಮವಾರ ಅಪರಾಹ್ನ ಜರುಗಿದ್ದು, ಭಾರಿ ಅನಾಹುತ ತಪ್ಪಿದೆ.
ಕಲ್ಲು ಉರುಳಿ ರೈಲ್ವೆ ಟ್ರಾಕ್ ಹತ್ತಿರಕ್ಕೆ ಬಂದು ಚಲಿಸುತ್ತಿದ್ದ ರೈಲಿಗೆ ತಾಗಿದೆ. ಸಮಯ ಪ್ರಗ್ನೆಯಿಂದ ರೈಲ್ವೆ ಪೈಲೇಟ್ ಟ್ರೈನ್ ನಿಲ್ಲಿಸಿರುವುದರಿಂದ ಭಾರಿ ಅನಾಹುತ ಒಂದು ತಪ್ಪಿದೆ. ಟನಲ್ ನಲ್ಲೇ ರೈಲು ನಿಂತಿರುವ ಕಾರಣ ತಿಳಿದ್ದು ಪ್ರಯಾಣಿಕರು ಭಯದಿಂದ ರೈಲಿನಿಂದ ಕೆಳಗಿಳಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಲು ಸಂಪರ್ಕ ಸಾಧ್ಯವಾಗಿಲ್ಲ. ಕಳೆದ ರಾತ್ರಿ ಮಳೆಯಾದ ಹಿನ್ನೆಲೆ ಟನಲ್ ಒಳಗೆ ಹಸಿಯುಂಟಾಗಿ ಕಲ್ಲು ಉರುಳಿ ಬಿದ್ದಿದೆ ಎನ್ನಲಾಗುತ್ತಿದೆ. ಎರಡು ವರೆಗೆ ಘಂಟೆಯ ನಂತರ ಕಲ್ಲು ಬಂಡೆ ತೆರವುಗೊಳಿಸಿದ ನಂತರ ಪ್ರಯಾಣಿಕರು ಮತ್ತೆ ರೈಲಿನಲ್ಲಿ ಪ್ರಯಾಣಿಸಿದರು ಎಂದು ತಿಳಿದುಬಂದಿದೆ.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…