ಶಹಾಬಾದ:ಕಲಬುರಗಿ ಜಿಲ್ಲೆಯ ಏಕೈಕ್ ದೊಡ್ಡ ನಗರ ಹಾಗೂ ನಗರಸಭೆಯನ್ನು ಹೊಂದಿರುವ ಶಹಾಬಾದ ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದ ಬೇಜವಾಬ್ದಾರಿಯಿಂದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದ್ದು, ಇದರಿಂದ ಸಾರ್ವಜನಿಕರು ದಿನನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಪರದಾಡುವಂಥ ಪರಿಸ್ಥಿತಿ ಬಂದಿದೆ.
ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದಿಂದ ನಗರದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ.ಜನರು ಕೆಲಸ ಕಾರ್ಯಗಳಿಗೆ ಬಂದರೆ ಆಸನಗಳೆಲ್ಲಾ ಖಾಲಿ ಖಾಲಿ ಕಾಣುತ್ತವೆ.ಕೇಳಿದರೆ ಬರುತ್ತಿದ್ದಾರೆ ಎಂದು ಸೇವಕರು ಹೇಳುತ್ತಾರೆ.ಇವರಿಗೆ ಯಾರು ಹೇಳೋರು ಕೇಳೋರು ಇಲ್ಲದಂತಾಗಿದೆ.ಇದರಿಂದ ಇವರು ಆಡಿದ್ದೆ ಆಟ, ಮಾಡಿದ್ದೆ ಮಾಟ ಎಂಬಂತಾಗಿದೆ. ಕೆಲವರು ನಾಲ್ಕಾರು ದಿನಗಳಿಗೊಮ್ಮೆ ಬಂದು ಸಹಿ ಮಾಡಿ ಹೋಗುತ್ತಾರೆ.ಇನ್ನು ಕೆಲವರು ತಡವಾಗಿ ಬಂದು ಬೇಗನೆ ಹೋಗುತ್ತಾರೆ.ಇನ್ನು ಕೆಲವರು ಯಾವಾಗ ಬರುತ್ತಾರೆ ಯಾವಾಗ ಹೋಗುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ.
ಇದಕ್ಕೆಲ್ಲಾ ಕಡಿವಾಣ ಹಾಕಬೇಕಾದ ಪೌರಾಯುಕ್ತರೇ ಮನಸ್ಸಿಗೆ ಬಂದಂತೆ ಬರುವಾಗ ಸಿಬ್ಬಂದಿಗಳ ಮೇಲೆ ಹೇಗೆ ಹಿಡಿತ ಸಾಧಿಸುತ್ತಾರೆ ಎಂಬುದು ನಾಗರಿಕರ ಪ್ರಶ್ನೆ. ಇತ್ತ ಸಾರ್ವಜನಿಕರು, ನಗರಸಭೆಯ ಸದಸ್ಯರು ಕಚೇರಿಗೆ ಬಂದರೆ ಪೌರಾಯುಕ್ತರು ಎಇಇ, ಜೆಇ ಗಳು ಕೂಡ ಕಚೇರಿಯಲ್ಲಿ ಕಾಣುವುದಿಲ್ಲ. ಎಇಇ,ಜೆಇ ಒಂದು ದಿನವಾದರೂ ರಸ್ತೆಗೆ ಇಳಿದು ನಗರದಲ್ಲಿ ಏನು ಸಮಸ್ಯೆಯಿದೆ ಎಂದು ವಾಹನದಿಂದ ಕೆಳಗಿಳಿದ ಉದಾಹರಣೆಗಳು ಸಿಗುವುದಿಲ್ಲಕರೆ ಮಾಡಿ ಕೇಳಿದರೆ ಕಾಮಗಾರಿ ವೀಕ್ಷಣೆ ಮಾಡಲು ಬಂದಿದ್ದೆವೆ ಎಂದು ಸುಳ್ಳು ಹೇಳುತ್ತಾರೆ.ಕಚೇರಿಗೆ ಬಂದರೂ ಕೂಡುವುದಿಲ್ಲ. ಗುತ್ತಿಗೆದಾರರ ಜತೆಗೆ ಹೋಗಿ ಕರ್ತವ್ಯ ಪಾಲನೆ ಸಮಯದಲ್ಲಿ ದಾಬಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಈ ಸಂಬಂಧ ಪೌರಾಯುಕ್ತರಿಗೆ ಕರೆ ಮಾಡಿ ತಿಳಿಸಿದರೇ ವಿಡಿಯೋ ಕಾನ್ಫಿರೆನ್ಸ್ ಸಭೆಗೆ ಬಂದಿದ್ದೆನೆ ಎಂದು ಹೇಳುತ್ತಾರೆ.ಹೊರತು ಸಿಬ್ಬಂದಿಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ.ಇದರಿಂದ ನಗರಸಭೆಯ ಆಡಳಿತ ಯಂತ್ರ ಕೆಟ್ಟು ಹೋಗಿದೆ.ಇಲ್ಲಿ ಚುನಾಯಿತ ಪ್ರತಿನಿಧಿಗಳ ಕೆಲಸವಾಗುತ್ತಿಲ್ಲ.ದಿನನಿತ್ಯ ಕಚೇರಿಗೆ ಬಂದರೆ ಅಧಿಕಾರಿಗಳು ಕೈಯಿಗೆ ಸಿಗುತ್ತಿಲ್ಲ.ನಮ್ಮ ಸಮಸ್ಯೆ ಈ ರೀತಿಯಾದರೆ ಜನಸಾಮನ್ಯರ ಪರಿಸ್ಥಿತಿ ಹೇಗಾಗಬೇಡ ಹೇಳಿ ಎಂದು ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ ಹಾಗೂ ಸದಸ್ಯ ರವಿ ರಾಠೋಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಚೇರಿಗೆಗ ಬಾರದ,ಸಮಯಕ್ಕೆ ಸರಿಯಾಗಿ ಬಾರದಿರುವುದು ಮತ್ತು ಯಾವುದೇ ಕೆಲಗಳು ಆಗಬೇಕಾದರೆ ಅಲೆದಾಡಿಸುವುದು, ಹಣ ಕೊಟ್ಟ ಕೊಟ್ಟರೆ ಮಾತ್ರ ಕೆಲಸವಾಗುವ ಪರಿಸ್ಥಿತಿಯನ್ನು ತಂದಿಟ್ಟಿದ್ದಾರೆ.ಈ ಬಗ್ಗೆ ಹಲವಾರು ಬಾರಿ ಪಡಿ ಅವರ ಗಮನಕ್ಕೂ ತಂದರೂ ಅವರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ.ನಗರಸಭೆಯಲ್ಲಿ ಹಗರಣಗಳು ನಡೆದರೂ ಯಾರು ಬಂದು ಪರಿಶೀಲನೆ ಮಾಡಲು ಮುಂದಾಗುತ್ತಿಲ್ಲ ಎಂದು ನಗರಸಭೆಯ ಸದಸ್ಯರೇ ದೂರುತ್ತಿದ್ದಾರೆ.
ಈ ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಶಿಸ್ತು ಕ್ರಮಕೈಗೊಳ್ಳಬೇಕು.ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಇಲ್ಲಿನ ಎಲ್ಲಾ ಸಿಬ್ಬಂದಿಗಳನ್ನು ಇಲ್ಲಿಂದ ಎತ್ತಂಗಡಿ ಮಾಡಿ ಬೇರೆ ಸಿಬ್ಬಂದಿ, ಅಧಿಕಾರಿ ವರ್ಗದವರನ್ನು ನೇಮಿಸಿ, ತುಕ್ಕು ಹಿಡಿದಿರುವ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಬೇಕೆಂದು ಶಹಾಬಾದ ನಾಗರಿಕರು ಆಗ್ರಹಿಸಿದ್ದಾರೆ.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…