ಬಿಸಿ ಬಿಸಿ ಸುದ್ದಿ

ಚಾರಿತ್ರ್ಯವನ್ನು ವಿಕಸನಗೊಳಿಸುವ ಅಸ್ತ್ರವೆಂದರೆ ಶಿಕ್ಷಣ

ಶಹಾಬಾದ: ಶಿಕ್ಷಣ ಎಂದರೆ ಓದುವುದು ಮಾತ್ರವಲ್ಲ ಅದು ಮನುಷ್ಯನ ಜೀವನ ಹಾಗೂ ಚಾರಿತ್ರ್ಯವನ್ನು ವಿಕಸನಗೊಳಿಸುವ ಅಸ್ತ್ರ ಎಂದು ಕಸಾಪ ಕಲಬುರಗಿ ಗ್ರಾಮೀಣ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ ಹೇಳಿದರು.

ಅವರು ಮಂಗಳವಾರ ಹಳೆಶಹಾಬಾದನ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಜ್ಞಾನ ವಿಕಾಸ ಯೋಜನೆಯಡಿ ಸಂಘದ ಸದಸ್ಯರಿಗೆ ಶಿಕ್ಷಣದ ಮಹತ್ವ ಮತ್ತು ಸರಕಾರಿ ಸೌಲಭ್ಯದ ಕುರಿತು ಆಯೋಜಿಸಲಾದ ಅರಿವು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಒಂದು ದೇಶವನ್ನು ನಾಶಮಾಡಲು ಯಾವುದೇ ಅಣುಬಾಂಬ ಪ್ರಯೋಗಿಸುವ ಅವಶ್ಯಕತೆಯಿಲ್ಲ.ಆ ದೇಶದ ಶಿಕ್ಷಣ ವ್ಯವಸ್ಥೆಯನ್ನು ಅಸ್ತವ್ಯಸ್ತ್ಯ ಮಾಡಿದರೆ ಸಾಕು ಆ ದೇಶ ಅಧಃಪತನಗೊಳ್ಳುತ್ತದೆ ಎಂದು ಹಿರಿಯರು ಹೇಳಿದ ಮಾತು ಶಿಕ್ಷಣಕ್ಕೆ ಇರುವ ಪ್ರಾಮುಖ್ಯತೆ ತಿಳಿಸುತ್ತದೆ.ಆದ್ದರಿಂದ ಶಿಕ್ಷಣ ನಮ್ಮ ಬದುಕಿಗೆ ದಾರಿದೀಪವಾಗಬಲ್ಲದು ಹಾಗೂ ಮಾರ್ಗದರ್ಶಿಯಾಗಬಲ್ಲದು.ಒಳ್ಳೆಯ ಶಿಕ್ಷಣ ಮಕ್ಕಳಿಗೆ ನೀಡಿದರೆ ಅವರಲ್ಲಿ ಸಂಸ್ಕಾರ ಬೆಳೆಯುತ್ತದೆ.ಆಗ ಅವನ್ನನ್ನು ಸಮಾಜ ಗೌರವಿತವಾಗಿ ನಡೆದುಕೊಳ್ಳುತ್ತದೆ.ಅಲ್ಲದೇ ದೇಶ ಅಭಿವೃದ್ಧಿಯಾಗಬೇಕಾದರೂ ಶಿಕ್ಷಣ ಅವಶ್ಯಕತೆಯಿದೆ.ಆದ್ದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದರು.

ಎಸ್.ಜಿ.ವರ್ಮಾ ಪ್ರೌಢಶಾಲೆಯ ಮುಖ್ಯಗುರು ಮಲ್ಲಿನಾಥ ಪಾಟೀಲ ಮಾತನಾಡಿ, ಜ್ಞಾನ ಯಾರು ಕಸಿದುಕೊಳ್ಳಲಾರದ ಅಮೂಲ್ಯ ಸಂಪತ್ತು.ಅದನ್ನು ಅಲಂಕರಿಸಿದ್ದೆಯಾದರೆ ಅವರಂತ ಸಿರಿವಂತರು ಜಗತ್ತಿನಲ್ಲಿ ಯಾರು ಇಲ್ಲ.ಗುಡಿಸಿನಲ್ಲಿ ಹುಟ್ಟಿದಂತವರು ಅರಮನೆಯಲ್ಲಿ ಮೆರೆಯುವ ಶಕ್ತಿ ಶಿಕ್ಷಣಕ್ಕಿದೆ.ಅದಕ್ಕಾಗಿಯೇ ಇಂದು ಡಾ.ಬಾಬಾ ಸಾಹೇಬ ಅಂಬೇಡ್ಕರ್, ಅಬ್ದುಲ್ ಕಲಾಂ ಅವರಂತವರನ್ನು ನಾವು ಸ್ಮರಿಸುತ್ತೆವೆ.ಪಡೆದುಕೊಂಡ ವಿದ್ಯೆಯನ್ನು ಯಾರು ಕಳ್ಳತನ ಮಾಡಲು, ಪಾಲು ಕೇಳಲು ಸಾಧ್ಯವಿಲ್ಲ.ಅಂತಹ ವಿದ್ಯೆಯನ್ನು ಮಕ್ಕಳಿಗೆ ನೀಡುವ ಮೂಲಕ ಉತ್ತಮ ಸಮಾಜದ ನಿರ್ಮಾಣ ಮಾಡುವಲ್ಲಿ ಸಹಕರಿಸಬೇಕೆಂದು ಹೇಳಿದರಲ್ಲದೇ ಶಿಕ್ಷಣಕ್ಕೆ ಸಿಗುವ ಸರಕಾರಿ ಸೌಲಭ್ಯಗಳ ಕುರಿತು ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಸಂಘದ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಕು.ರೇಖಾ, ಸೇವಾ ಪ್ರತಿನಿಧಿ ಅನುಜಾ, ನಿಲಾಂಬಿಕಾ ಇತರರು ಇದ್ದರು.

emedialine

Recent Posts

ಡಾ. ಫ.ಗು. ಹಳಕಟ್ಟಿ ಯವರ ಜಯಂತಿ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ

ಕಲಬುರಗಿ: ವಚನ ಪಿತಾಮಹ ಎಂದು ಕರೆಸಿಕೊಳ್ಳುವ ಡಾ. ಫ.ಗು. ಹಳಕಟ್ಟಿ ಯವರು ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡುವ…

1 hour ago

ಮೊಬೈಲ್ ರೀಚಾರ್ಜ್‍ಗಳ ಬೆಲೆ ಹೆಚ್ಚಳ ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಪ್ರತಿಭಟನೆ

ಶಹಾಬಾದ: ಖಾಸಗಿ ಟೆಲಿಕಾಂ ಕಂಪನಿಗಳು ಮೊಬೈಲ್ ರೀಚಾರ್ಜ್‍ಗಳ ಬೆಲೆಗಳನ್ನು ಅನಿಯಂತ್ರಿತವಾಗಿ ಹೆಚ್ಚಳ ಮಾಡಿರುವುದನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಎಐಡಿವಾಯ್‍ಓ ವತಿಯಿಂದ…

1 hour ago

ಸಾರ್ವಜನಿಕರು ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಿ

ಶಹಾಬಾದ :ಎಲ್ಲರಿಗೂ ಸರಕಾರಿ ನೌಕರಿ ಬೇಕು.ಆದರೆ ಸರಕಾರಿ ಶಾಲೆಯಲ್ಲಿ ನಿಮ್ಮ ಮಕ್ಕಳು ಓದುವುದು ಬೇಡ ಎಂದರೆ ಹೇಗೆ ? ಮೊದಲು…

1 hour ago

ಪಠ್ಯಕ್ರಮ ರಚನೆ ಗುಣಾತ್ಮಕ ಅಂಶಗಳಿಂದ ಕೂಡಿರಲಿ

ವಿಜಯಪುರ: ಇಂದಿನ ಪ್ರಸ್ತುತ ಶಿಕ್ಷಣ ಪದ್ದತಿ ಕೌಶಲ್ಯಾಧಾರಿತ ಹಾಗೂ ಔದ್ಯೋಗಿಕ ಮತ್ತು ಉದ್ಯೋಗ ಪೂರಕನಂತೆ ಇರಬೇಕು ಎಂದು ಕರ್ನಾಟಕ ರಾಜ್ಯ…

3 hours ago

ಪತ್ರಕರ್ತ ಸಿದ್ರಾಮ್ ನಾಡಗೇರಿ ಪುತ್ರಿ ಸ್ಪಂದನಾ ಎಸ್. ನಡಗೇರಿಗೆ ಪತ್ರಕರ್ತರ ಸಂಘದಿಂದ ಸನ್ಮಾನ

ಹಾವೇರಿ: SSLC,PUC ಯಲ್ಲಿ 90% ಕಿಂತ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು,…

3 hours ago

ಸೇವಾ ಮನೋಭಾವದ ಮನಸ್ಸು ಹೆಚ್ಚಾಗಲಿ: ಜ್ಯೋತಿ ಪಾಟೀಲ್

ಕಲಬುರಗಿ: ನೌಕರಿ ಕಾಯಕವಾದರೆ ತೃಪ್ತಿ ಜೀವನ, ವೃತ್ತಿಯಲ್ಲಿ ಸೇವಾ ಮನೋಭಾವ ಹೊಂದಿದರೆ ಆತ್ಮಶುದ್ಧಿಯಾಗಿ ಸಂತೃಪ್ತ ಜೀವನ ನಮ್ಮದಾಗುತ್ತದೆ ಎಂದು ಉಪಳಾಂವ…

3 hours ago