ಕಲಬುರಗಿ: ಜೀವನದಲ್ಲಿ ಸುಖವಾದ ಭೋಗಗಳನ್ನು ಅನುಭವಿಸಬೇಕಾದರೆ ನಿತ್ಯ ಯೋಗ ಮಾಡಬೇಕು. ಇದರಿಂದ ದೇಹದ ಎಲ್ಲ ಅಂಗಾಂಗಳು ವಿಕಾಸಗೊಂಡು ಉಲ್ಲಾಸ ಮತ್ತು ಚೈತನ್ಯ ನೀಡಿ ಜೀವನ ಸುಖಮಯವಾಗಿಸುವ ಶಕ್ತಿ ಯೋಗಕ್ಕೆ ಇದೆ ಎಂದು ಯೋಗ ಗುರುಗಳಾದ ಶಿವಾನಂದ ದಾನಮ್ಮಗುಡಿ ಹಾಗೂ ರಾಚಪ್ಪ ವೈರಾಗಿ ಹೇಳಿದರು.
ನಗರದ ಹೈಕೋರ್ಟ್ ಪಕ್ಕದಲ್ಲಿರುವ ಅಕ್ಕಮಹಾದೇವಿ ಕಾಲೊನಿಯ ಮಕ್ಕಳ ಉದ್ಯಾನವನದಲ್ಲಿ ಬುಧವಾರ ಯೋಗ ದಿನದ ಅಂಗವಾಗಿ ಎಸ್‌ಆರ್‌ಜೆ ಕಾಮಧೇನು ಸೀಲ್ಸ್ ಮತ್ತು ಇಂಡಿಯಾ ಸಿಮೆಂಟ್ಸ್ ಲಿ. ಏರ್ಪಡಿಸಿದ್ದ ಯೋಗ ಕಾರ್ಯಕ್ರಮ ನಡೆಸಿಕೊಟ್ಟು ಅವರು ಮಾತನಾಡಿದರು.
ಬಹಳಷ್ಟು ಜನರಲ್ಲಿ ಯೋಗ ಮಾಡಲು ರೋಗ ಬರಬೇಕು ಮತ್ತು ಡಾಕ್ಟರ್ ಹೇಳಬೇಕೆನ್ನುವ ಉಮೇದು ಇದೆ. ಆದರೆ, ಯೋಗ ಬರದಂತೆ ನೋಡಿಕೊಳ್ಳಲು ಯೋಗ ಮಾಡಬೇಕಿದೆ. ಮಕ್ಕಳು ಮತ್ತು ಹಿರಿಯರು, ಹೆಣ್ಣುಮಕ್ಕಳು ನಿತ್ಯ ಯೋಗ ಮಾಡುವುದರಿಂದ ಜೀವನದಲ್ಲಿ ಎದುರಾಗುವ ಎಲ್ಲ ಒತ್ತಡಗಳನ್ನು ನಿಭಾಯಿಸಿಕೊಂಡು ಮುನ್ನಡೆಯಲು ಸಹಕಾರಿಯಾಗಿದೆ ಎಂದರು.
ಈ ವೇಳೆಯಲ್ಲಿ ಹಲವಾರು ಆಸನಗಳನ್ನು ಹಾಕಿದರು. ಅದನ್ನು ನೋಡಿ ಕಾಲೊನಿ ನಿವಾಸಿಗಳು ಹಾಗೂ ಅತಿಥಿಗಳು ಕೂಡ ಮಕ್ಕಳ ಸಮೇತ
ಆಸನಗಳನ್ನು ಹಾಕಿ ಖುಷಿ ಪಟ್ಟರು.
ಈ ವೇಳೆಯಲ್ಲಿ ಉಮೇಶ ಬಿರಾದಾರ, ಭಗವಾನ್ ಚಾಕೂರ, ಶೀಕಾಂತ ನಿರೋಣಿ, ಆನಂದತೀರ್ಥ ಜೋಶಿ, ರಾಜಕುಮಾರ ಪಾಟೀಲ, ಅರ್ಜುನಸಿಂಗ್ ಠಾಕೂರ್, ಕಾಶಿನಾಥ ಗಾಯಕವಾಡ, ಗುರುಭೀಮ ಶೋರಾಪುರಕರ್, ಮಲ್ಲಿನಾಥ ಮಂಗಲಗಿ, ರಾಜಕುಮಾರ ಕಡಗಂಚಿ, ವಿಠಲ ಮೋರೆ, ಶಿವಕುಮಾರ ಪಾಟೀಲ, ಚಂದ್ರಶೇಖರ, ಮೋಹನ ಗುಗವಾಡ ಸೇರಿದಂತೆ ಕಾಲೊನಿಯ ಅನೇಕ ನಿವಾಸಿಗಳು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…