ಯೋಗ ಜೀವನಕ್ಕೆ ಸುಖಭೋಗದ ರಹದಾರಿ

0
14

ಕಲಬುರಗಿ: ಜೀವನದಲ್ಲಿ ಸುಖವಾದ ಭೋಗಗಳನ್ನು ಅನುಭವಿಸಬೇಕಾದರೆ ನಿತ್ಯ ಯೋಗ ಮಾಡಬೇಕು. ಇದರಿಂದ ದೇಹದ ಎಲ್ಲ ಅಂಗಾಂಗಳು ವಿಕಾಸಗೊಂಡು ಉಲ್ಲಾಸ ಮತ್ತು ಚೈತನ್ಯ ನೀಡಿ ಜೀವನ ಸುಖಮಯವಾಗಿಸುವ ಶಕ್ತಿ ಯೋಗಕ್ಕೆ ಇದೆ ಎಂದು ಯೋಗ ಗುರುಗಳಾದ ಶಿವಾನಂದ ದಾನಮ್ಮಗುಡಿ ಹಾಗೂ ರಾಚಪ್ಪ ವೈರಾಗಿ ಹೇಳಿದರು.

ನಗರದ ಹೈಕೋರ್ಟ್‌ ಪಕ್ಕದಲ್ಲಿರುವ ಅಕ್ಕಮಹಾದೇವಿ ಕಾಲೊನಿಯ ಮಕ್ಕಳ ಉದ್ಯಾನವನದಲ್ಲಿ ಬುಧವಾರ ಯೋಗ ದಿನದ ಅಂಗವಾಗಿ ಎಸ್‌ಆರ್‌ಜೆ ಕಾಮಧೇನು ಸೀಲ್ಸ್ ಮತ್ತು ಇಂಡಿಯಾ ಸಿಮೆಂಟ್ಸ್ ಲಿ. ಏರ್ಪಡಿಸಿದ್ದ ಯೋಗ ಕಾರ್ಯಕ್ರಮ ನಡೆಸಿಕೊಟ್ಟು ಅವರು ಮಾತನಾಡಿದರು.

Contact Your\'s Advertisement; 9902492681

ಬಹಳಷ್ಟು ಜನರಲ್ಲಿ ಯೋಗ ಮಾಡಲು ರೋಗ ಬರಬೇಕು ಮತ್ತು ಡಾಕ್ಟರ್ ಹೇಳಬೇಕೆನ್ನುವ ಉಮೇದು ಇದೆ. ಆದರೆ, ಯೋಗ ಬರದಂತೆ ನೋಡಿಕೊಳ್ಳಲು ಯೋಗ ಮಾಡಬೇಕಿದೆ. ಮಕ್ಕಳು ಮತ್ತು ಹಿರಿಯರು, ಹೆಣ್ಣುಮಕ್ಕಳು ನಿತ್ಯ ಯೋಗ ಮಾಡುವುದರಿಂದ ಜೀವನದಲ್ಲಿ ಎದುರಾಗುವ ಎಲ್ಲ ಒತ್ತಡಗಳನ್ನು ನಿಭಾಯಿಸಿಕೊಂಡು ಮುನ್ನಡೆಯಲು ಸಹಕಾರಿಯಾಗಿದೆ ಎಂದರು.

ಈ ವೇಳೆಯಲ್ಲಿ ಹಲವಾರು ಆಸನಗಳನ್ನು ಹಾಕಿದರು. ಅದನ್ನು ನೋಡಿ ಕಾಲೊನಿ ನಿವಾಸಿಗಳು ಹಾಗೂ ಅತಿಥಿಗಳು ಕೂಡ ಮಕ್ಕಳ ಸಮೇತ

ಆಸನಗಳನ್ನು ಹಾಕಿ ಖುಷಿ ಪಟ್ಟರು.

ಈ ವೇಳೆಯಲ್ಲಿ ಉಮೇಶ ಬಿರಾದಾರ, ಭಗವಾನ್ ಚಾಕೂರ, ಶೀಕಾಂತ ನಿರೋಣಿ, ಆನಂದತೀರ್ಥ ಜೋಶಿ, ರಾಜಕುಮಾರ ಪಾಟೀಲ, ಅರ್ಜುನಸಿಂಗ್‌ ಠಾಕೂರ್, ಕಾಶಿನಾಥ ಗಾಯಕವಾಡ, ಗುರುಭೀಮ ಶೋರಾಪುರಕರ್, ಮಲ್ಲಿನಾಥ ಮಂಗಲಗಿ, ರಾಜಕುಮಾರ ಕಡಗಂಚಿ, ವಿಠಲ ಮೋರೆ, ಶಿವಕುಮಾರ ಪಾಟೀಲ, ಚಂದ್ರಶೇಖರ, ಮೋಹನ ಗುಗವಾಡ ಸೇರಿದಂತೆ ಕಾಲೊನಿಯ ಅನೇಕ ನಿವಾಸಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here