ಕಲಬುರಗಿ: ನಗರದ ಪ್ರತಿಷ್ಠಿತ ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಶೈಕ್ಷಣಿಕ ವರ್ಷಕ್ಕೆ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಸಂಭ್ರಮದ ಸಮಾರಂಭದಲ್ಲಿ ಪ್ರಮಾಣ ವಚನ ಭೋಧಿಸಲಾಯಿತು.ಎಸಿಪಿ ಶ್ರೀ ದೀಪನ್ ಎಂ.ಏನ್. (ಐಪಿಎಸ್) ಉಪಸ್ಥಿತಿಯಲ್ಲಿ ನಡೆಸಲಾಯಿತು.
ವಿದ್ಯಾರ್ಥಿ ನಾಯಕರ ಆಯ್ಕೆಗೆ ಅರ್ಜಿಯನ್ನು ಆವ್ಹಾನಿಸಲಾಗಿತ್ತು. ಈ ಅರ್ಜುಗಳನ್ನು ಪರಿಶೀಲಿಸಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹಾಗು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದನ್ನು ಪರಿಗಣಿಸಿ, ನಾಯಕರನ್ನು ಆಯ್ಕೆ ಮಾಡಲಾಗಿತ್ತು. ಆಯ್ಕೆಯಾದ ನಾಯಕರಿಗೆ ಪ್ರಮಾಣ ವಚನ ಸಮಾರಂಭವನ್ನು ಆಯೋಜಿಸಲಾಗಿತ್ತು. ಶಾಲೆಯ ಚಟುವಟಿಕೆಗಳಿಗೆ ಸಂಬಂಧಪಡುವಂಥ ವಿವಿಧ ಕ್ಲಬ್ಗಳಿಗೆ ನಾಯಕರು ಮತ್ತು ಉಪನಾಯಕರನ್ನು ನೇಮಿಸಿ ಕರ್ತವ್ಯ ನಿರತರಾಗಲು ಪ್ರಮಾಣ ವಚನ ಭೋಧಿಸಲಾಯಿತು.
ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ವಿದ್ಯಾರ್ಥಿಗಳು ಪ್ರತಿಭಾವಂತರಾಗಿರುತ್ತಾರೆ. ಸಿಕ್ಕಂಥ ಅವಕಾಶಗಳನ್ನು ಸದುಯುಪಯೋಗ ಪಡಿಸಿಕೊಂಡು ಸಾಧಕರಾಗಬೇಕೆಂದು ತಿಳಿಹೇಳಿದರು. ವಿದ್ಯಾರ್ಥಿಗಳೊಂದಿಗೆ ಸಂವಾದಿಸುತ್ತ ತಮ್ಮ ಜೀವನ ಅನುಭವಗಳನ್ನು ಹಂಚಿಕೊಳ್ಳುತ್ತಾ ವಿದ್ಯಾರ್ಥಿಗಳನ್ನು ಪೆÇ್ರೀತ್ಸಾಹಿಸಿದರು. ವಿದ್ಯಾರ್ಥಿಗಳ ಪ್ರಶ್ನೆಗಳನ್ನು ಕೂಡ ಅμÉ್ಟೀ ಉತ್ಸಾಹದಿಂದ ಉತ್ತರಿಸಿದರು. ಭವಿಷ್ಯದ ಜೀವನದಲ್ಲಿ ತಮ್ಮ ವ್ರಿತ್ತಿಯೊಂದಿಗೆ ದೇಶಸೇವೆಯನ್ನು ಮಾಡಬೆಂಕೆಂದು ಕರೆ ನೀಡಿದರು.
ಶಾಲೆಯ ಪ್ರಾಚಾರ್ಯರಾದ ಶಂಕರಗೌಡ ಹೊಸಮನಿ ಉದ್ಘಾಟಿಸಿ ಮಾತನಾಡಿ, ಶ್ರಮ ಮತ್ತು ಶಿಷ್ಟಿನಿಂದ ತಮ್ಮ ಕನಸುಗಳನ್ನು ಸಾಕಾರಗೊಳಿಸಬಹುದೆಂದು ವಿಶ್ವಾಸ ವ್ಯಕ್ತಪಡಿಸಿದರು. ಶಾಲೆಯ ನಾಯಕರ ಅನುಭವ ಮುಂಬರುವ ಜೀವನದಲ್ಲಿ ಸಹಾಯಕವಾಗಲೆಂದು ಎಲ್ಲರನ್ನು ಶುಭಹಾರೈಸಿದರು.
ಈ ಮಧ್ಯೆ ಸಮಾರಂಭದಲ್ಲಿ ಉಪಸ್ಥಿತರಾದ ತಂದೆ ತಾಯೆಂದಿರು ಮತ್ತು ಪೆÇೀಷಕರು ತಮ್ಮ ಮಕ್ಕಳು ವೇದಿಕೆಯ ಮೇಲೆ ವಿದ್ಯಾರ್ಥಿ-ನಾಯಕರಾಗಿ ಶಪಥ ಮಾಡುವದನ್ನು ಹೆಮ್ಮೆಯ ಮುಗುಳ್ನಗೆ ಬೀರುತ್ತಾ ಆನಂದಿಸಿದರು.
ಕಾರ್ಯಕ್ರಮವನ್ನು, ವರ್ಷಿಣಿ ಶೀಲವಂತ ಮತ್ತು ಹರ್ಷ ಸಿದ್ದರೆಡ್ಡಿ ನಿರೂಪಿಸಿದರು. ಕ್ಷಿತಿ ಸ್ವಾಗತಿಸಿದರು. ಭವಾನಿ ಎಸ್. ಅಪ್ಪಾ ಅತಿಥಿಗಳನ್ನು ಪರಿಚಯಿಸಿದರು.
ಶಾಲೆಯ ನಾಯಕರಾಗಿ ಅಧಿಕಾರ ಸ್ವೀಕರಿಸಿದ ಅನಿಶ್ಚಂದ್ರ ತೋರನ್ ಮತ್ತು ಸೃಷ್ಟಿ ಚನ್ನಬಸಪ್ಪ ಮುದೋಳ್ ತಮಗೆ ಕೊಟ್ಟ ಜವಾಬ್ದಾರಿಯನ್ನು ನಿμÉ್ಠಯಿಂದ ನಿಭಾಯಿಸಿ ಶಾಲೆಯ ಗೌರವಕ್ಕೆ ಪಾತ್ರರಾಗುವೆವು ಎಂದು ಸಂಕಲ್ಪ ಮಾಡಿದರು. ಶಿವಾನಿ ಎಸ್. ಅಪ್ಪಾ ವಂದಿಸಿದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…