ಕಲಬುರಗಿ: ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ನಿಮಿತ್ತ ವಚನ ಪಿತಮಹ ಡಾ. ಫ. ಗು.ಹಳಕಟ್ಟಿ ಜಯಂತಿ ಗೆ ಜುಲೈ 2 ರಂದು ಸರ್ಕಾರದ ಅಧಿಕೃತ ಆದೇಶ ಮೇರೆಗೆ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಜಯಂತೋತ್ಸವ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆ ಗೊಂಡ ಜಯಂತಿ ಸಮಿತಿಯ ಸದಸ್ಯರ ಸ್ವಗ್ರಹದಲ್ಲಿ ಸನ್ಮಾನಿಸಲಾಯಿತು.
ಈ ವೇಳೆ ನಿಕಟಪೂರ್ವ ಸಮಿತಿ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದ ನ್ಯಾಯವಾದಿ ಶಿವಲಿಂಗಪ್ಪಾ ಅಷ್ಟಗಿ ಯವರು ಮಾತನಾಡಿ ಕಳೆದ ವರ್ಷ ಮೊಟ್ಟ ಮೊದಲು ಕಾರ್ಯಕ್ರಮ ಸರ್ಕಾರ ಹಮ್ಮಿಕೊಂಡ ಪ್ರಯುಕ್ತ ಒಂದು ಶಾಶ್ವತ ಸಮಿತಿ ರಚಿಸಿ ಚಾಲನೆ ನೀಡಿದ್ದೇನೆ. ಎರಡನೇ ವರ್ಷ ಕಾರ್ಯಕ್ರಮಕ್ಕೆ ಸಮಾಜದ ಹಿರಿಯ ಹಿತಚಿಂತಕ, ಲೇಖಕ ಹಾಗೂ ರಾಜ್ಯ ಹಟಗಾರ ಸಮಾಜದ ಸಂಸ್ಥಾಪಕ ಸದಸ್ಯರಾದ ಸೂರ್ಯಕಾಂತ ಸೊನ್ನದ ಆಯ್ಕೆಗೊಂಡಿದ್ದು ಹರ್ಷವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಅವರ ಮಾರ್ಗದರ್ಶನದಲ್ಲಿ ಹೆಚ್ಚಿನ ಬೆಳವಣಿಗೆಯಾಗಲಿ ಎಂದು ಬಯಸುತೇನೆ ಎಂದರು.
ನ್ಯಾಯವಾದಿ ಹಾಗೂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಜಗೋಪಾಲ ಭಂಡಾರಿ ನೇಕಾರರ ಅಸ್ಮಿತೆ ಜಾಗೃತಿಗೊಳ್ಳುತ್ತಿದೆ ಎಂದರು. ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಸಮಿತಿಯ ಸದಸ್ಯರಾದ ಷಣ್ಮುಖಪ್ಪಾ ಮಿಟ್ಟಾ ರವರು ಜಯಂತೋತ್ಸವ ಆಯ್ಕೆ ಗೊಂಡ ಸೊನ್ನದ ರವನ್ನು ಶಾಲು ಹೊದಿಸಿ ಮಾಲಾರ್ಪಣೆ ಮಾಡಿ ಗೌರವಿಸಿದರು.
ಜಿಲ್ಲಾ ಹಟಗಾರ ಸಮಾಜದ ಕಾರ್ಯದರ್ಶಿ ಜೇನವೆರಿ ವಿನೋದ ಕುಮಾರ ವಂದಿಸಿದರು. ಕಾರ್ಯಕ್ರಮದಲ್ಲಿ ಶ್ರೀನಿವಾಸ ಬಲಪೂರ್, ಚಂದ್ರಶೇಖರ್ ಮ್ಯಾಳಗಿ ಸಂತೋಷ ಗುರುಮಿಟ್ಕಲ ಮತ್ತು ವಿಶ್ವರಾಜ ಮಿಟಾ, ಶರಣ ಪ್ರಸಾದ್ ಜೇನವೆರಿ ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…