ಬಿಸಿ ಬಿಸಿ ಸುದ್ದಿ

ಸ್ವಾವಲಂಬನೆ ಬುನಾದಿ ಹಾಕಿದ ಧೀಮಂತ ನಾಯಕ

ಯಾದಗಿರಿ: ದೇಶದ ಅಭಿವೃದ್ಧಿಗೆ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಕೊಟ್ಟ ಕೊಡುಗೆಯನ್ನು ಮರೆಯುವಂತಿಲ್ಲ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಹೇಳಿದರು.

ಡಾ. ಬಾಬು ಜಗಜೀವನ ರಾಮ ತರುಣ ಸಂಘ ವತಿಯಿಂದ ಭಾನುವಾರ ನಗರದ ಹಿರೇ ಅಗಸಿಯಲ್ಲಿ ಡಾ. ಬಾಬು ಜಗಜೀವನ ರಾಮ ಅವರ ಜಯಂತ್ಸೋತ್ಸವ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾರ್ಲಾಪಣೆ ಮಾಡಿ ಮಾತನಾಡಿದ ಅವರು ಬಾಬು ಜಗಜೀವನ್ ರಾಂ ಹಸಿರುಕ್ರಾಂತಿಯ ಮೂಲಕ ದೇಶ ಆಹಾರ ಸ್ವಾವಲಂಬನೆಯ ಹಾದಿಯಲ್ಲಿ ಸಾಗಲು ಅವಕಾಶ ಮಾಡಿಕೊಟ್ಟ ಧೀಮಂತ ಮತ್ತು ದೂರದೃಷ್ಠಿಯ ನಾಯಕ ಎಂದು ಗುಣಗಾನ ಮಾಡಿದರು. ಇಂದಿನ ಯುವ ಜನತೆ ಡಾ. ಬಾಬು ಜಗಜೀವನರಾಮ್ ಅವರ ಜೀವನಾದರ್ಶ, ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವ ಪೀಳಿಗೆಗೆ ಅವರ ವ್ಯಕ್ತಿತ್ವ ಜೀವನ ಚರಿತ್ರೆ ಪರಿಚಯಿಸುವ ಕಾರ್ಯ ನಡೆಯಬೇಕು. ಅವರ ಹಸಿರು ಕ್ರಾಂತಿಇ ಯೋಜನೆ ಸಾರ್ವಕಾಲಿಕವಾದುದು. ಅವರ ಈ ದೇಶದ ಬಡ ವರ್ಗದ ಜನರ ಹಸೀವನ್ನು ನೀಗಿಸುವ ಮೂಲಕ ಈ ದೇಶದಲ್ಲಿ ನಿರಂತರ ಶಾಂತಿ ದೊರಕುವಂತೆ ಹೋರಾಟ ನಡೆಸಿದ ಕ್ರಾಂತಿಯ ಹರಿಕಾರ ಎಂದು ಬಣ್ಣಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ ಮಾತನಾಡಿ, ಡಾ.ಬಾಬು ಜಗಜೀವನ ರಾಮ್ ಅವರು ಹೋರಾಟದ ಹಾದಿ ಹಾಗೂ ಸಾಧನೆಯು ಗಣನೀಯವಾದದ್ದು, ಅವರು ೨೫ ವರ್ಷಗಳ ಕಾಲ ಅನೇಕ ವಿವಿಧ ಖಾತೆಗಳ ಸಚಿವರಾಗಿ ಪರಿಣಾಮಕಾರಿಯಾಗಿ ಆಡಳಿತ ನೀಡಿದರು. ಸಮಾಜದ ಆರೋಗ್ಯವನ್ನು ಕಾಪಾಡುವ ಕಳಾಕಳಿ ಅವರಲ್ಲಿ ಹೆಚ್ಚಾಗಿತ್ತು. ಅವರು ತಮ್ಮ ಹೋರಾಟದ ಮೂಲಕ ಕೃಷಿ, ರೈತಾಪಿ ವರ್ಗದವರಿಗೆ ಅರ್ಪಿಸಿದ ಅವರು ದುರ್ಬಲರ ಸಂರಕ್ಷಕರಾಗಿ ಹಾಗೂ ಜನ ಸಾಮಾನ್ಯರಲ್ಲೂ ಆದರ್ಶ ಗಾಂಧಿವಾದಿ ಯಾಗಿದವರು ಅವರು ಎಂದು ಅವರು ತಿಳಿಸಿದರು. ನ್ಯೂ ಕನ್ನಡ ಕಾಲೇಜು ಪ್ರಾಂಶುಪಾಲರಾದ ರಘುನಾಥರೆಡ್ಡಿ ಅವರು ಡಾ. ಬಾಬು ಜಗಜೀವನ ರಾಮ ಅವರ ಕುರಿತು ಉಪನ್ಯಾಸ ನೀಡಿದರು.

ಬಿಜೆಪಿ ಮುಖಂಡರಾದ ಶರಣಗೌಡ ಬಾಡಿಯಾಳ, ಖಂಡಪ್ಪ ದಾಸನ, ಡಾ. ಬಾಬು ಜಗಜೀವನ ರಾಮ ತರುಣ ಸಂಘ ಅಧ್ಯಕ್ಷ ಶಂಕರ ಸಿದ್ದಿ, ಹೈದ್ರಬಾದ ಕರ್ನಾಟಕ ಅಭಿವೃದ್ದಿ ಸಮಿತಿ ಅಧ್ಯಕ್ಷ ಆನಂದ ಕುಮಾರ ಎಲ್‌ಗೋಡ್, ಸಮಾಜದ ಮುಖಂಡರಾದ ಬಸವರಾಜ ನಿಡಗಿ, ಕರೆಪ್ಪ ಮುದ್ನಾಳ, ರಾಜಶೇಖರ ಕೋನಿಮನಿ, ವಕೀಲರಾದ ಸಿದ್ದರಾಮಪ್ಪ ನೀಡಗಿ, ಯುವ ಘಟಕದ ಅಧ್ಯಕ್ಷ ವಿಜಯಕುಮಾರ ಕೋನಿಮನಿ, ಪ್ರಭು ಮುದ್ನಾಳ, ಶಿವಕುಮಾರ ಭದ್ರಕ್ಕಿ, ದೇವಿಂದ್ರ ಕೋನಿಮನಿ, ಮಲ್ಲಿಕಾರ್ಜುನ ಅರಿಕೇರಿ, ನಾಗರಾಜ ಕೋನಿಮನಿ, ಸಾಬಣ್ಣ ಹಲಗಿ, ವಿಶ್ವರಾಧ್ಯ ಸಂತಿ, ಸಿದಾಶೀವಪ್ಪ ದನಕಾಯಿ, ರಾಜು ಕೋನಿಮನಿ ಸೇರಿದಂತೆ ಮತ್ತಿತರರು ಇದ್ದರು.

ನಂತರ ಕಾರ್ಯಕ್ರಮದಲ್ಲಿ ನೆರೆ ಸಂತ್ರಸ್ತ ನೆರವಿಗೆ ಹೈದ್ರಬಾದ ಕರ್ನಾಟಕ ನೆರೆ ಸಂತ್ರಸ್ಥರ ಪರಿಹಾರ ನಿಧಿಯನ್ನು ಸಂಗ್ರಹಿಸಲಾಯಿತು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

20 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago