ಆಳಂದ: ಪಟ್ಟಣದ ಉಮರಗಾ ಹೆದ್ದಾರಿಯ ಜಗದ್ಗುರು ತೋಂಟದಾರ್ಯ ಅನುಭವ ಮಂಟ, ವಿದ್ಯಾಪೀಠದ ನಿವೇಶನದಲ್ಲಿ ಕಲಬುರಗಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಆಶ್ರಯದಲ್ಲಿ ಪ್ರಾರಂಭಿಸಲಾದ ಗೋಶಾಲೆ ಸೋಮವಾರ ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಗೋ ಶಾಲೆಯನ್ನು ಶಾಸಕರು ಉದ್ಘಾಟಿಸಬೇಕಾಗಿತ್ತಾದರು. ಅವರು, ಕಾರ್ಯನಿಮಿತ್ತ ಬೆಂಗಳೊರಿಗೆ ಹೋಗಿದ್ದಾರೆ. ಮೊದಲು ದಿನವೇ ೬೭ಕ್ಕೂ ಹೆಚ್ಚು ಜಾನುವಾರುಗಳು ಗೋ ಶಾಲೆಗೆ ದಾಖಲಾಗಿರುವುದು ನೋಡಿದರೆ, ನೀರು ಮೇವಿನ ಕೊರತೆ ತೀವ್ರತೆ ಕಂಡು ಬರುತ್ತದೆ. ಗೋ ಶಾಲೆಗೆ ದಾಖಲಾಗುವ ಎಲ್ಲಾ ಜಾನುವಾರುಗಳಿಗೆ ಸೌಲಭ್ಯಗಳನ್ನು ಒದಗಿಸಿ ಅನುಕೂಲ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದ ಅವರು, ಪಶು ಪಾಲಕರು ಗೋ ಶಾಲೆಯ ಲಾಭವವನ್ನು ಪಡೆಯಬೇಕು. ಗೋ ಶಾಲೆ ಸೇರಿದಂತೆ ಜನಪರ ಕಾರ್ಯಕ್ಕೆ ಜಗದ್ಗುರು ತೋಂಟದಾರ್ಯ ಅನುಭವ ಮಂಟಪ ಸಹಕಾರಕ್ಕೆ ಮುಂದಾಗಿರುವ ಕಾರ್ಯವನ್ನು ಶ್ಲಾಘಿಸಿದ ಅವರು, ಈಗಾಗಲೇ ಅನುಭವ ಮಂಟಪದಿಂದ ಮುಖ್ಯ ಹೆದ್ದಾರಿಗೆ ಸಂಪರ್ಕ ಒದಗಿಸಲು ರಸ್ತೆ ನಿರ್ಮಾಣಕ್ಕೆ ಎಚ್ಕೆಆರ್ಡಿಬಿ ೧೦ ಲಕ್ಷ ರೂಪಾಯಿ ನೀಡಲಾಗಿದೆ. ಇನ್ನೂ ಅಗತ್ಯ ಬಿದ್ದರೆ ಹೆಚ್ಚಿನ ಅನುದಾನ ಒದಗಿಸಿ ಪೂರ್ಣವಾಗಿ ಸಿಮೆಂಟ ರಸ್ತೆ ನಿರ್ಮಾಣಕ್ಕೆ ಶಾಸಕರ ಮನವಲಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಜಿ.ಪಂ ಅಧ್ಯಕ್ಷೆ ಸುವರ್ಣ ಮಲಾಜಿ ಪರ ಪತಿ ಹಣಮಂತರಾವ್ ಮಲಾಜಿ ಅವರು ಮಾತನಾಡಿ, ಬೆಳೆಗಾಗುವಷ್ಟು ಮಾತ್ರ ಮಳೆಯಾಗಿದೆ, ಹೀಗೆ ಮಳೆ ಮುಂದೊಡಿದರೆ ಬೆಳೆ, ಜನ ಜಾನುವಾರುಗಳಿಗೆ ಭಾರೀ ಸಮಸ್ಯೆ ಆಗಲಿದೆ. ಅನೇಕ ಕಡೆ ಇನ್ನೂ ನೀರು ಮೇವಿನ ಸಮಸ್ಯೆ ಇರುವುದು ಪಶು ಪಾಲಕರು ಸಂಕಷ್ಟದಲ್ಲಿದ್ದಾರೆ. ಇದರಿಂದಾಗಿ ಪ್ರತಿ ಹೋಬಳಿ ಮಟ್ಟದಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲು ಶಾಸಕರ ಮೂಲಕ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ಜಿಪಂ ಸದಸ್ಯ ಗುರುಶಾಂತ ಪಾಟೀಲ ನಿಂಬಾಳ, ತಹಸೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ, ಕಲಬುರಗಿ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ವಿ.ಎಚ್. ಹನುಮಂತರಾವ್, ಸಹಾಯಕ ನಿರ್ದೇಶಕ ಡಾ. ಸಂಜಯ ರೆಡ್ಡಿ ಮಾತನಾಡಿದರು.
ಮರಾಠಾ ಸಮಾಜದ ಅಧ್ಯಕ್ಷ ನಾಗನಾಥ ಏಟೆ, ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ಗ್ರಾಮ ಲೇಖಪಾಲಕ ರಮೇಶ ಮಾಳಿ, ಪಶು ವೈದ್ಯಾಧಿಕಾರಿ ಡಾ. ಮಹಾಂತೇಶ ಪಾಟೀಲ, ಜಗನಾಥ ಕುಂಬಾರ ಸೇರಿದಂತೆ ತೆಲಾಕುಣಿ, ಆಳಂದ ವಲಯದ ರೈತರು ಪಾಲ್ಗೊಂಡಿದ್ದರು.
ಸೌಲಭ್ಯ: ಗೋ ಶಾಲೆಯಲ್ಲಿ ಪಶುಗಳಿಗೆ ನೆರಳಿನ ಹೊದಿಕೆ, ಪಶುಗಳ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗಾಗಿ ತಾತ್ಕಾಲಿಕ ಪಶು ಚಿಕಿತ್ಸಾಲಯ, ಜಾನುವಾರುಗಳಿಗೆ ಪ್ರತ್ಯೇಕ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಕಣಕಿ ಹಾಗೂ ಚುನ್ನಿ ವಿತರಿಸಲಾಗುತ್ತಿದೆ. ಗೋ ಶಾಲೆಗೆ ದಾಖಲಾಗುವ ಪಶುಗಳಿಗೆ ಸ್ಥಳದಲ್ಲೇ ಉಚಿತವಾಗಿ ಮೇವು, ನೀರು, ಚಿಕಿತ್ಸೆ ಸೌಲಭ್ಯ, ಮೊದಲು ದಿನವೇ ಎತ್ತುಗಳು, ಎಮ್ಮೆ, ಕರ ಹೋರಿ ಹಸುಗಳು ಸೇರಿ 67 ಜಾನುವಾರುಗಳು ದಾಖಲೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…