ಆಳಂದ ತೋಂಟದಾರ್ಯ ಅನುಭವ ಮಂಟಪದಲ್ಲಿ ಗೋಶಾಲೆ

0
33

ಆಳಂದ: ಪಟ್ಟಣದ ಉಮರಗಾ ಹೆದ್ದಾರಿಯ ಜಗದ್ಗುರು ತೋಂಟದಾರ್ಯ ಅನುಭವ ಮಂಟ, ವಿದ್ಯಾಪೀಠದ ನಿವೇಶನದಲ್ಲಿ ಕಲಬುರಗಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಆಶ್ರಯದಲ್ಲಿ ಪ್ರಾರಂಭಿಸಲಾದ ಗೋಶಾಲೆ ಸೋಮವಾರ ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಗೋ ಶಾಲೆಯನ್ನು ಶಾಸಕರು ಉದ್ಘಾಟಿಸಬೇಕಾಗಿತ್ತಾದರು. ಅವರು, ಕಾರ್ಯನಿಮಿತ್ತ ಬೆಂಗಳೊರಿಗೆ ಹೋಗಿದ್ದಾರೆ. ಮೊದಲು ದಿನವೇ ೬೭ಕ್ಕೂ ಹೆಚ್ಚು ಜಾನುವಾರುಗಳು ಗೋ ಶಾಲೆಗೆ ದಾಖಲಾಗಿರುವುದು ನೋಡಿದರೆ, ನೀರು ಮೇವಿನ ಕೊರತೆ ತೀವ್ರತೆ ಕಂಡು ಬರುತ್ತದೆ. ಗೋ ಶಾಲೆಗೆ ದಾಖಲಾಗುವ ಎಲ್ಲಾ ಜಾನುವಾರುಗಳಿಗೆ ಸೌಲಭ್ಯಗಳನ್ನು ಒದಗಿಸಿ ಅನುಕೂಲ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದ ಅವರು, ಪಶು ಪಾಲಕರು ಗೋ ಶಾಲೆಯ ಲಾಭವವನ್ನು ಪಡೆಯಬೇಕು. ಗೋ ಶಾಲೆ ಸೇರಿದಂತೆ ಜನಪರ ಕಾರ್ಯಕ್ಕೆ ಜಗದ್ಗುರು ತೋಂಟದಾರ್ಯ ಅನುಭವ ಮಂಟಪ ಸಹಕಾರಕ್ಕೆ ಮುಂದಾಗಿರುವ ಕಾರ್ಯವನ್ನು ಶ್ಲಾಘಿಸಿದ ಅವರು, ಈಗಾಗಲೇ ಅನುಭವ ಮಂಟಪದಿಂದ ಮುಖ್ಯ ಹೆದ್ದಾರಿಗೆ ಸಂಪರ್ಕ ಒದಗಿಸಲು ರಸ್ತೆ ನಿರ್ಮಾಣಕ್ಕೆ ಎಚ್‌ಕೆಆರ್‌ಡಿಬಿ ೧೦ ಲಕ್ಷ ರೂಪಾಯಿ ನೀಡಲಾಗಿದೆ. ಇನ್ನೂ ಅಗತ್ಯ ಬಿದ್ದರೆ ಹೆಚ್ಚಿನ ಅನುದಾನ ಒದಗಿಸಿ ಪೂರ್ಣವಾಗಿ ಸಿಮೆಂಟ ರಸ್ತೆ ನಿರ್ಮಾಣಕ್ಕೆ ಶಾಸಕರ ಮನವಲಿಸಲಾಗುವುದು ಎಂದು ಅವರು ಭರವಸೆ ನೀಡಿದರು.

Contact Your\'s Advertisement; 9902492681

ಜಿ.ಪಂ ಅಧ್ಯಕ್ಷೆ ಸುವರ್ಣ ಮಲಾಜಿ ಪರ ಪತಿ ಹಣಮಂತರಾವ್ ಮಲಾಜಿ ಅವರು ಮಾತನಾಡಿ, ಬೆಳೆಗಾಗುವಷ್ಟು ಮಾತ್ರ ಮಳೆಯಾಗಿದೆ, ಹೀಗೆ ಮಳೆ ಮುಂದೊಡಿದರೆ ಬೆಳೆ, ಜನ ಜಾನುವಾರುಗಳಿಗೆ ಭಾರೀ ಸಮಸ್ಯೆ ಆಗಲಿದೆ. ಅನೇಕ ಕಡೆ ಇನ್ನೂ ನೀರು ಮೇವಿನ ಸಮಸ್ಯೆ ಇರುವುದು ಪಶು ಪಾಲಕರು ಸಂಕಷ್ಟದಲ್ಲಿದ್ದಾರೆ. ಇದರಿಂದಾಗಿ ಪ್ರತಿ ಹೋಬಳಿ ಮಟ್ಟದಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲು ಶಾಸಕರ ಮೂಲಕ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.  ಜಿಪಂ ಸದಸ್ಯ ಗುರುಶಾಂತ ಪಾಟೀಲ ನಿಂಬಾಳ, ತಹಸೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ, ಕಲಬುರಗಿ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ವಿ.ಎಚ್. ಹನುಮಂತರಾವ್, ಸಹಾಯಕ ನಿರ್ದೇಶಕ ಡಾ. ಸಂಜಯ ರೆಡ್ಡಿ ಮಾತನಾಡಿದರು.

ಮರಾಠಾ ಸಮಾಜದ ಅಧ್ಯಕ್ಷ ನಾಗನಾಥ ಏಟೆ, ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ಗ್ರಾಮ ಲೇಖಪಾಲಕ ರಮೇಶ ಮಾಳಿ, ಪಶು ವೈದ್ಯಾಧಿಕಾರಿ ಡಾ. ಮಹಾಂತೇಶ ಪಾಟೀಲ, ಜಗನಾಥ ಕುಂಬಾರ ಸೇರಿದಂತೆ ತೆಲಾಕುಣಿ, ಆಳಂದ ವಲಯದ ರೈತರು ಪಾಲ್ಗೊಂಡಿದ್ದರು.

ಸೌಲಭ್ಯ: ಗೋ ಶಾಲೆಯಲ್ಲಿ ಪಶುಗಳಿಗೆ ನೆರಳಿನ ಹೊದಿಕೆ, ಪಶುಗಳ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗಾಗಿ ತಾತ್ಕಾಲಿಕ ಪಶು ಚಿಕಿತ್ಸಾಲಯ, ಜಾನುವಾರುಗಳಿಗೆ ಪ್ರತ್ಯೇಕ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಕಣಕಿ ಹಾಗೂ ಚುನ್ನಿ ವಿತರಿಸಲಾಗುತ್ತಿದೆ. ಗೋ ಶಾಲೆಗೆ ದಾಖಲಾಗುವ ಪಶುಗಳಿಗೆ ಸ್ಥಳದಲ್ಲೇ ಉಚಿತವಾಗಿ ಮೇವು, ನೀರು, ಚಿಕಿತ್ಸೆ ಸೌಲಭ್ಯ, ಮೊದಲು ದಿನವೇ ಎತ್ತುಗಳು, ಎಮ್ಮೆ, ಕರ ಹೋರಿ ಹಸುಗಳು ಸೇರಿ 67 ಜಾನುವಾರುಗಳು ದಾಖಲೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here