ಬಿಸಿ ಬಿಸಿ ಸುದ್ದಿ

ಪ್ರೌಢ ಶಾಲಾ ಶಿಕ್ಷಕರಿಗೆ ವೇತನ ಬಡ್ತಿ ಮತ್ತು ವರ್ಗಾವಣೆಯಲ್ಲಿ ಅನ್ಯಾಯ

ಕಲಬುರಗಿ: ಬಡ್ತಿ ಪ್ರೌಢ ಶಾಲಾ ಶಿಕ್ಷಕರಿಗೆ ವೇತನ ಬಡ್ತಿ ಮತ್ತು ವರ್ಗಾವಣೆಯಲ್ಲಿ ತುಂಬಾ ಅನ್ಯಾಯ ಆಗತ್ತಿದೆ. ಕರ್ನಾಟಕ ನ್ಯಾಯ ಮಂಡಳಿ ಬಡ್ತಿ ಶಿಕ್ಷಕರ ಪರವಾಗಿ ತೀರ್ಪು ನೀಡಿದರು ಸಹ ಸರಕಾರ ಇನ್ನು ಕಾರ್ಯರೂಪಕ್ಕೆ ತರುತ್ತಿಲ್ಲ ಇದರಿಂದ ಬಡ್ತಿ ಶಿಕ್ಷಕರಿಗೆ ಸಿಗಬೇಕಾದ 10, 15, 20, 25 ಮತ್ತು 30 ವರ್ಷಗಳ ವೇತನ ಬಡ್ತಿಯಿಂದ ವಂಚಿತರಾಗುತ್ತಿದ್ದೇವೆ. ಮತ್ತು ವರ್ಗಾವಣೆಯಲ್ಲಿ ಇಂದಿನ ಸೇವೆಯು ಪರಿಗಣಿಸದೆ ಇರುವದರಿಂದ ನಮ್ಮ ಜೇಷ್ಠತೆಯಲ್ಲಿ ಹಿರಿಯರಾದವರು ವರ್ಗಾವಣೆ ಪಟ್ಟಿಯಲ್ಲಿ ನಮಗಿಂತ ಜೇಷ್ಠತೆಯಲ್ಲಿ ಮೇಲಕ್ಕೆ ಇದ್ದು ನಮಗೆ ಬೇಕಾದ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ವಂಚಿತರಾಗುತ್ತಿದ್ದೇವೆ ಎಂದು ನಿಕಟಪೂರ್ವ ಅಧ್ಯಕ್ಷ ಸುರೇಶ ಕುಮಸಗಿ ಹೇಳಿದರು.

ಇವರು ನಿನ್ನೆ ಕರ್ನಾಟಕ ರಾಜ್ಯ ಬಡ್ತಿ ಸರಕಾರಿ ಪ್ರೌಢ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು ಜಿಲ್ಲಾ ಘಟಕ ಕಲಬುರಗಿ ಘಟಕದ ನೂತನ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡುತ್ತಾ ತಾವು ಒಂದೂವರೆ ವರ್ಷಗಳಿಂದ ಸತತ ಪ್ರಯತ್ನ ಮಾಡಿದರು ಡಿಪಿಎಆರ್ ಹಾಗೂ ಫೈನಾನ್ಸ್ ಇಲಾಖೆಯು ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲದೆ ಇರುವದು ವಿಷಾದನೀಯ ವಿಷಯವಾಗಿದೆ ಎಂದರು.

ರಾಜ್ಯಾಧ್ಯಕ್ಷ ಯಲ್ಲಪ್ಪಗೌಡರು ಮಾಡುವ ಪ್ರಯತ್ನಕ್ಕೆ ನಾವೆಲ್ಲರೂ ಕೈ ಜೋಡಿಸಿ ನಮ್ಮ ಬೇಡಿಕೆಗೆ ಈಡೇರಿಕೆಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ತಾಲೂಕು ಮಟ್ಟದಿಂದ ಭದ್ರ ಬುನಾದಿ ಹಾಗೂ ಸಂಘಟನೆ ನಡೆಯಲಿ ಇದಕ್ಕೆ ನಾನು ನಿವೃತ್ತನಾದರೂ ನಿಮ್ಮಗಳ ಸಹಾಯಕ್ಕೆ ಸದಾ ಸಿದ್ದನಾಗಿರುವೆ ಎಂದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಾದ ಮಹಾದೇವ ಚೇಂಗಟಿ (ಗೌರವ ಅಧ್ಯಕ್ಷ), ವೆಂಕಟೇಶ ಚಿನ್ನೂರ (ಅಧ್ಯಕ್ಷ), ಶರಣಪ್ಪಾ ಕಟ್ಟಿ (ಉಪಾಧ್ಯಕ್ಷ), ಶಿವಕುಮಾರ ಹೊಸಮನಿ (ಪ್ರಧಾನ ಕಾರ್ಯದರ್ಶಿ), ಸಾಯಿಬಣ್ಣಾ ಲಂಗೋಟಿ (ಕಾರ್ಯದರ್ಶಿ), ಅಶೋಕ ಕೆ., ಸತೀಶಕುಮಾರ ಮಜಗೊಂಡ (ಸಹ ಕಾರ್ಯದರ್ಶಿ), ಮಹಿಬೂಬ ವಾಲಿಕಾರ, ವಿಷ್ಣುಕುಮಾರ (ಸಂಘಟನಾ ಕಾರ್ಯದರ್ಶಿ), ಚಂದ್ರಕಲಾ ಪಾಟೀಲ (ಮಹಿಳಾ ಪ್ರತಿನಿದಿ) ಇದೇ ಸಂದರ್ಭದಲ್ಲಿ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ದಾದಾಸಾಬ ಹೊಸೂರ, ಲಕ್ಷ್ಮೀಪುತ್ರ ಬಿಂಗೊಳ್ಳಿ, ರಾಜೇಂದ್ರ ಕೊರಬ, ರಾಜಶೇಖರ ಹಸರಗುಂಡಗಿ, ಚಂದ್ರಕಾಂತಾ ಬಿರಾದಾರ, ಶಶಿಕಾಂತ, ದಿಲೀಪ ಚೌಹಾಣ, ಮಹಾದೇವ ಓಕಳಿ, ಭಾಗ್ಯಲತಾ, ತಿಪ್ಪಣ್ಣ ಕಲಕೋರಿ, ಶಿವಲೀಲಾ ಪಾಟೀಲ, ಶಿವಾನಂದ ಹಿರೇಮಠ ಹಾಗೂ ಎಲ್ಲಾ ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago