ಬಿಸಿ ಬಿಸಿ ಸುದ್ದಿ

ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಮೇಲೆ ಕ್ರಮಕ್ಕೆ ಸರಕಾರಿ ನೌಕರರ ಸಂಘ ಆಗ್ರಹ

ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕುರಿತು ಇಲ್ಲಸಲ್ಲದ ಅರೋಪ ಮಾಡುತ್ತಾ, ಸುಳ್ಳು ಸುದ್ದಿಯನ್ನು ಪ್ರಚಾರ ಮಾಡುತ್ತಿರುವ ಅಧಿಕಾರಿ-ನೌಕರರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕವು ಆಗ್ರಹಿಸಿದೆ.

ಮಂಗಳವಾರ ರಾಜ್ಯ ಸರ್ಕಾರಿ ನೌಕರರ ಸಂಘದ‌ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ನೇತೃತ್ವದ ನೌಕರರು ನಿಯೋಗವು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಸಂಘದ‌ ಘನತೆಗೆ ಧಕ್ಕೆ ತರುತ್ತಿರುವ ಐದು ಜನ ಅಧಿಕಾರಿ-ನೌಕರರ ಮೇಲೆ ಕ್ರಮಕ್ಕೆ ಆಗ್ರಹಿಸಿದೆ.

ಸಿ.ಷಡಕ್ಷರಿ ಅವರು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ‌ ಮೇಲೆ ನೌಕರರ ಬಹುದಿನಗಳ ಬೇಡಿಕೆ ಒಂದೊಂದಾಗಿ ಈಡೇರಿವೆ. ಇದರಲ್ಲಿ ನೌಕರರ ಏಳನೇ ವೇತನ ಆಯೋಗ ರಚನೆ, ಶೇ.17 ಮಧ್ಯಂತರ ಪರಿಹಾರ ಮಂಜೂರು, ಎನ್.ಪಿ.ಎಸ್. ರದ್ದುಗೊಳಿಸಿ ಓ.ಪಿ‌.ಎಸ್. ಜಾರಿಗೆ ಅಧ್ಯಯನ ಸಮಿತಿ ರಚನೆ, ಶುಲ್ಕ ರಹಿತ ಆರೋಗ್ಯ ಚಿಕಿತ್ಸೆ, ಮಹಿಳಾ ನೌಕರರಿಗೆ 6 ತಿಂಗಳ ಶಿಶು ಪಾಲನೆ ರಜೆ, ಮುಂಬಡ್ತಿ ಭಾಗ್ಯ, ಇಲಾಖೆಗಳ ಸಿ. & ಆರ್. ತಿದ್ದುಪಡಿ ಸೇರಿದಂತೆ ಅನೇಕ‌ ನೌಕರರ ಸ್ನೇಹಿ ಕೆಲಸಗಳು ಜಾರಿಗೆ ಬಂದಿವೆ. ಇದಲ್ಲದೆ ಸಂಘವು ಸಮಾಜ‌ ಮುಖಿ ಕೆಲಸದಲ್ಲಿಯೂ ಸಹಾಯದ ಹಸ್ತ ಚಾಚಿದೆ ಎಂದು ಆಗ್ರಹ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಿ.ಎಸ್.ಷಡಕ್ಷರಿ ನೇತೃತ್ವದಲ್ಲಿನ ನೌಕರರ ಸಂಘದ ಬೆಳವಣಿಗೆ ಸಹಿಸದವರು ಸಮಾಜಿಕ ಜಾಲತಾಣದ ಮೂಲಕ ಅಪಪ್ರಚಾರ ಮಾಡುತ್ತಾ, 5.25 ಲಕ್ಷ ನೌಕರರ ಮಾತೃ ಸಂಸ್ಥೆಯ ಹೆಸರಿಗೆ ಕಪ್ಪು ಚುಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಪತ್ರದಲ್ಲಿ ಅರೋಪಿಸಲಾಗಿದೆ.

ಈ ಸಂದರ್ಭದಲ್ಲಿ ನೌಕರರ ಸಂಘದ ಪದಾಧಿಕಾರಿಗಳಾದ ಅಬ್ದುಲ್ ಅಜೀಮ್, ಹನುಮಂತರಾಯ ಗೊಳಸಾರ್, ಸಿದ್ದಲಿಂಗಯ್ಯ ಮಠಪತಿ, ಬಾಬು ಮೌರ್ಯ, ಉಮಾದೇವಿ, ರವಿ ಮಿರಸ್ಕರ್, ಹನುಮಂತರಾವ ಮರಡಿ, ಮಲ್ಲಿನಾಥ ಮಂಗಲಗಿ, ಗುರುಲಿಂಗಪ್ಪ ಪಾಟೀಲ್, ಅಶೋಕ್ ಶಾಬಾದಿ, ಅಬ್ದುಲ್ ಜಮೀಲ್ ಅವ್ವಣ್ಣ ತಳವಾರ್, ವೀರೇಂದ್ರ ಪೂಜಾರಿ, ರಂಗನಾಥ ಪೂಜಾರಿ, ಗಜೇಂದ್ರ ರವಿಕುಮಾರ್ ಮೊದಲಾದವರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

15 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago