ಬಿಸಿ ಬಿಸಿ ಸುದ್ದಿ

ಕೆಕೆಆರ್‍ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಗೆ ಭಾಸಗಿ ನೇತೃತ್ವದಲ್ಲಿ ಮನವಿ

ಕಲಬುರಗಿ ನಗರದ ತಾರಫೈಲ್ ಬಡಾವಣೆಯ ಸರಕಾರಿ ಪ್ರೌಢ ಶಾಲೆ ತಾರಫೈಲ್ ಶಾಲೆಗೆ ಬಿಸಿ ಊಟದ ಸಲುವಾಗಿ ಅಡುಗೆ ಕೋಣೆ ಮತ್ತು ಶಾಲೆಯ ಸುತ್ತ ಕಂಪೌಂಡ ವಾಲ್ ಮಂಜೂರು ಮಾಡಬೇಕೆಂದು ಜೈ ಕನ್ನಡಿಗರ ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹೆಚ್, ಭಾಸಗಿ ನೇತೃತ್ವದಲ್ಲಿ ಕೆಕೆಆರ್‍ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.

ಕಲಬುರಗಿ ನಗರದ ತಾರಫೈಲ್ ಬಡಾವಣೆಯಲ್ಲಿರುವ ಸರಕಾರಿ ಪ್ರೌಢ ಶಾಲೆ ತಾರಫೈಲ್ ಈ ಶಾಲೆಯಲ್ಲಿ ಬಿಸಿ ಊಟದ ಕೋಣೆ ಇರುವುದಿಲ್ಲ ಮತ್ತು ಶಾಲೆಯ ಸುತ್ತ ಮುತ್ತಲು ಕಂಪೌಂಡ ಪಾಲ್ ಇರುವುದಿಲ್ಲ ಇದರಿಂದ ಮಳೆಗಾಲದ ಸಮಯದಲ್ಲಿ ಮಳೆ ನೀರು ಹರಿದು ಬಂದು ಶಾಲೆಯ ಮುಂದೆಯೇ ನಿಂತುಕೊಳ್ಳುವುದರಿಂದ ಶಾಲೆಯ ವಿದ್ಯಾರ್ಥಿಗಳಿಗೆ ಓಡಾಡಲು ಮಧ್ಯಾಹ್ನ ಊಟದ ಸಮಯದಲ್ಲಿ ಊಟ ಮಾಡಲು ಹಾಗೂ ಆಟವಾಡಲು ಇನ್ನಿತರ ಚಟುವಟಿಕೆಗಳು ನಡೆಸಲು ತೊಂದರೆಯಾಗುತ್ತದೆ. ಅಲ್ಲದೆ ಹಂದಿ ನಾಯಿಗಳು ಶಾಲಾವಧಿಯಲ್ಲಿ ಬರುವುದರಿಂದ ಮಕ್ಕಳಿಗೆ ತೋಂದರೆಯಾಗುತ್ತದೆ. ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರಾಮಾ ಪೂಜಾರಿ, ಹುಸೇನ, ಯಲ್ಲೇಶ, ದೀಪಕ, ಸಿದ್ಧಾರೂಡ, ಶ್ರೀಧರ, ಶ್ರೀನಾಥ, ಸಾಗರ ಕಾಂಬಳೆ, ಅನೀಲ ತಳವಾರ, ಆನಂದ ಕೊಳ್ಳೂರ ಇದ್ದರು.

emedialine

Recent Posts

ಕೃಷಿ ವಿಜ್ಞಾನಿ ಡಾ.ಎಸ್.ಎ.ಪಾಟೀಲ್ ಹೃದಯಾಘಾತದಿಂದ ನಿಧನ

ಕಲಬುರಗಿ: ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ನಾಡಿನ ಶ್ರೇಷ್ಠ ಕೃಷಿ ವಿಜ್ಞಾನಿಗಳಾಗಿದ್ದ ಡಾ.ಎಸ್.ಎ.ಪಾಟೀಲ್ ಬಿರಾಳ (80) ಅವರು ನಿಧನರಾಗಿದ್ದಾರೆ.…

2 hours ago

ಜಲಮೂಲ, ಪರಿಸರ ಸಂರಕ್ಷಣೆಯತ್ತ ಯುವಜನತೆ ಸಕ್ರಿಯರಾಗಲಿ: ಹುಲಿಕುಂಟೆ ಮೂರ್ತಿ

ಬೆಂಗಳೂರು: ಯುವಜನತೆ ನದಿಮೂಲಗಳು ಹಾಗೂ ಪರಿಸರ ಸಂರಕ್ಷಣೆಯ ಅಭಿಯಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮೈಗೂಡಿಸಿಕೊಳ್ಳಬೇಕೆಂದು…

2 hours ago

ಕಲಬುರಗಿ ಜಿಲ್ಲಾ ಗಾಣಿಗ ನೌಕರರ ಸಭೆ 17ಕ್ಕೆ: ಸಂಗನಗೌಡ ಪಾಟೀಲ್‌

ಕಲಬುರಗಿ: ಜಿಲ್ಲಾ ಗಾಣಿಗ ನೌಕರರ ಕಲ್ಯಾಣ ಸಂಘದ ಸದಸ್ಯರ ಸಭೆ ಜು.17ರಂದು ಬೆಳಗ್ಗೆ 10.30ಕ್ಕೆ ಕನ್ನಡ ಭವನದಲ್ಲಿ ನಡೆಯಲಿದ್ದು, ಸಂಘದ…

4 hours ago

371 (ಜೆ) ಸಮರ್ಪಕ ಅನುಷ್ಠಾನಗೊಳಿಸದಿದ್ದರೆ ಮತ್ತೊಮ್ಮೆ ಉಗ್ರ ಹೋರಾಟದ ಎಚ್ಚರಿಕೆ

ಕಲಬುರಗಿ: 371(ಜೆ) ಕಲಂ ಸಮರ್ಪಕ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಘೋಷಣೆ ಮಾಡಿ ಕಚೇರಿ ಸ್ಥಾಪಿಸಬೇಕು.ಇಲ್ಲದಿದ್ದಲ್ಲಿ ಮತ್ತೊಮ್ಮೆ ಕಲ್ಯಾಣ ಕರ್ನಾಟಕದ ಎಲ್ಲಾ…

4 hours ago

ಆದರ್ಶದ ಬದುಕಿಗೆ ಯಾವೊತ್ತೂ ಬೆಲೆ: ಮಹಾಂತ ಸ್ವಾಮೀಜಿ

ಕಲಬುರಗಿ: ಮನುಷ್ಯ ಆದರ್ಶದ ಬದುಕನ್ನು ಕಳೆದಾಗ ಬೆಲೆಯುಳ್ಳ ಬದುಕಾಗುತ್ತದೆ. ಆಗ ಆ ಬದುಕಿಗೆ ಮೌಲ್ಯ, ಅರ್ಥ ಬರುತ್ತದೆ ಎಂದು ಮುದಗಲ್-…

4 hours ago

ರೈತರ, ವಿದ್ಯಾರ್ಥಿಗಳ ಸಮಸ್ಯ ಪರಿಹಾರಕ್ಕೆ ಒತ್ತಾಯ: ಶರಣಬಸಪ್ಪ ದೊಡ್ಮನಿ

ಕಲಬುರಗಿ : ಬಡವರ ಪರವಾಗಿ ಹಾಗೂ ಶಾಲಾ ಕಾಲೇಜು ವಸತಿ ನಿಲಯಗಳಲ್ಲಿ ಆಗುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಸಮಾಜಕಲ್ಯಾಣ…

18 hours ago