ಬಿಸಿ ಬಿಸಿ ಸುದ್ದಿ

ಜಾನಪದ ಸಾಹಿತ್ಯದ ಬಗ್ಗೆ ಅರಿವು ಮೂಡಿಸಬೇಕಿದೆ: ಶಂಕ್ರಪ್ಪ ಕರಡಿ

ಸುರಪುರ: ಇಂದಿನ ಆಧುನಿಕತೆಯಲ್ಲಿ ಪಾಶ್ಚಿಮಾತ್ಯ ಸಂಗೀತದ ಹಾವಳಿ ಎಷ್ಟೇ ಇದ್ದರೂ,ಜಾನಪದ ಕಲೆಗೆ ಎಂದೂ ಸಾವಿಲ್ಲ, ಇಂದಿನ ಯುವ ಜನಾಂಗಕ್ಕೆ ಜಾನಪದ ಸಾಹಿತ್ಯದ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ.ಜನಪದ ಉಳಿದರೆ ದೇಶದ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಶಂಕ್ರಪ್ಪ ಕರಡಿ ಹೇಳಿದರು.

ರಂಗಂಪೇಟಯ ಶ್ರೀ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ಶ್ರೀ ಗುರು ಪುಟ್ಟರಾಜ ಜನಕಲ್ಯಾಣ ಸೇವಾ ಸಮಿತಿ ಹಾಗೂ ನಾದಶೃತಿ ಟ್ರಸ್ಟ್ ಬೋನ್ಹಾಳ ಏರ್ಪಡಿಸಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾನಪದ ಕಲೆಗೆ ತನ್ನದೇ ಆದ ಇತಿಹಾಸ ಮತ್ತು ಕೌಶಲ್ಯತೆ ಒಳಗೊಂಡಿದ್ದು,ಜಾನಪದ ಕಲೆಗೆ ಮಕ್ಕಳು ದೊಡ್ಡವರು ಎನ್ನುವ ಬೇದವಿಲ್ಲದೆ ಎಲ್ಲರನ್ನು ಅಪ್ಪಿಕೊಳ್ಳುವ ಶಕ್ತಿದೆ ಅಲ್ಲದೆ ಮಕ್ಕಳಲ್ಲಿ ಸುಲಲಿತವಾಗಿ ಉಚ್ಚರಿಸಬಹುದಾದ ಜಾನಪದದಿಂದ ಕನ್ನಡ ಭಾಷೆಯ ಬಗ್ಗೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ ಎಂದು ನುಡಿದರು.

ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಉಪನ್ಯಾಸಕಿ ಪದ್ಮಾಕ್ಷಿ ಶಾಪುರಕರ ಮಾತನಾಡಿ, ಜಾನಪದ ಗೀತೆಯಲ್ಲಿ ನಿಜವಾದ ಹಳ್ಳಿಯ ಸೊಗಡಿದೆ.ಅದಕ್ಕೆ ಅದರದೆ ಆದ ಅರ್ಥವಿದೆ.ನಮ್ಮ ಸಂಸ್ಕೃತಿ ಬಿಂಬಿಸುವ ಜಾನಪದ ಕಲೆ ಉಳಿಯಬೇಕು .ಜಾನಪದ ಸಾಹಿತ್ಯ, ಬರೆಯುವರು ಜಾನಪದ ಗಾಯಕರು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಮಿಂಚುವಂತವಾಗಲ್ಲಿ ಎಂದರು. ಉಪನ್ಯಾಸಕ ಸುರೇಶ ಕುಂಬಾರ ಮಾತನಾಡಿ ಜನಪದ ಸಾಹಿತ್ಯವು ರೂಪದಲ್ಲಿ ರೂಪಿತವಾಗಿದ್ದು ಪರಂಪರಾಗತ ಸಂಸ್ಕೃತಿಯನ್ನು ಹೊಂದಿದೆ. ಬಾಯಿಂದ ಬಾಯಿಗೆ ಬಹಳ ವೇಗವಾಗಿ ಪ್ರಸರಣವಾಗುವ ಶಕ್ತಿ ಈ ಜನಪದ ಸಾಹಿತ್ಯಕ್ಕಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮುಖ್ಯ ಗುರುಗಳು ರಶ್ಮಿತಾ ಬಿರಾದಾರ ಮಾತನಾಡಿದರು. ತಲ್ಕಿದ್ ,ಮೀನಾಕ್ಷ್ಮೀ,ಶಾಹಿನ್ ಹಸೀನ ಬೇಗಂ,ರಜಿಯಾ,ಅಶ್ವಿನಿ ಸಂಗೀತ ಲಕ್ಷ್ಮೀ ಜಮ್ನಾ ವೇದಿಕೆ ಮೇಲಿದ್ದರು
ಇದೇ ಸಂದರ್ಭದಲ್ಲಿ ಜಾದುಗಾರ ಲಕ್ಷ್ಮಣರವರಿಂದ ಜಾದು ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ನಂತರ ಲಕ್ಷ್ಮಣರವರಿಗೆ ಸನ್ಮಾನಿಸಲಾಯಿತು.

ಸಮಿತಿಯ ಅಧ್ಯಕ್ಷ ಕ್ಷೀರಲಿಂಗಯ್ಯ ಹಿರೇಮಠ ಬೋನ್ಹಾಳ ಪ್ರಾಸ್ತಾವಿಕವಆಗಿ ಮಾತನಾಡಿದರು. ಅಂಬಿಕಾ ಸ್ವಾಗತಿಸಿದರು, ಅರುಧಂತಿ ನಿರೂಪಿಸಿದರು, ಸುಷ್ಮಾ ವಂದಿಸಿದರು.

emedialine

Recent Posts

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮ

ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…

4 hours ago

ಶೋಷಿತ ಜನಜಾಗೃತಿ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ

ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…

4 hours ago

ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರು: ಡಾ. ಎಸ್.ಎಸ್. ಗುಬ್ಬಿ ಬೇಸರ

ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…

4 hours ago

ಹಣೆಯ ಮೇಲೆ ಹಚ್ಚಿದ ವಿಭೂತಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಅರ್ಪಿತಾ ಪಾಟೀಲ

ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…

4 hours ago

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…

4 hours ago

ಸಂವಿಧಾನವನ್ನು ರಕ್ಷಿಸಲು ಜವಾಬ್ದಾರಿ ಯುವಕರು ಮೇಲಿದೆ : ಹಿರಿಯ ವಕೀಲ ವೈಜನಾಥ ಎಸ್ ಝಳಕಿ

ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…

4 hours ago