ಬಿಸಿ ಬಿಸಿ ಸುದ್ದಿ

ಶಿಥಿಲಗೊಂಡ ಸರ್ಕಾರಿ ಶಾಲೆಗಳ ಕೋಣೆಗಳಿಗೆ ಕಾಯಕಲ್ಪ: KKRDB ಅಧ್ಯಕ್ಷ ಡಾ. ಅಜಯ್ ಸಿಂಗ್ ಸಂಕಲ್ಪ

ಕಲಬುರಗಿ: ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ 41 ಮತಕ್ಷೇತ್ರಗಳಲ್ಲಿರುವ ಶಿಥಿಲ ಸರ್ಕಾರಿ ಶಾಲೆಗಳು, ಶಾಲಾ ತರಗತಿ ಕೋಣೆಗಳಿಗೆ ಕಾಯಕಲ್ಪ ನೀಡುವ ದಿಶೆಯಲ್ಲಿ ಬರುವ ದಿನಗಳಲ್ಲಿ ಮಂಡಳಿಯಿಂದ ವಿಶೇಷ ಯೋಜನೆ ರೂಪಿಸಲಾಗುತ್ತದೆ, ಈ ವಿಷಯವಾಗಿ ಮಂಡಳಿಯ ಸದಸ್ಯರು, ಕಕ ಬಾಗದ ಎಲ್ಲಾ ಶಾಸಕರ ಸಲಹೆ- ಸೂಚನೆ ಕೇಳಿ ಸಮಗ್ರ ಯೋಜನೆ ರೂಪಿಸಲಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯ್ ಸಿಂಗ್ ಹೇಳಿದ್ದಾರೆ.

ಮಕ್ಕಳೊಂದಿಗೆ ಸಂವಾದ ನಡೆಸಿದ ಡಾ. ಅಜಯ್ ಸಿಂಗ್; ಎಂಬಿ ನಗರದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಡಾ. ಅಜಯ್ ಸಿಂಗ್ ಎಲ್‍ಕೆಜಿ, 3 ನೇ ಹಾಗೂ 5 ನೇ ತರಗತಿ ಮಕ್ಕಳೊಂಇಗೆ ಸಂವಾದ ನಡೆಸಿ ಗಮನ ಸೆಳೆದರು. ಇಂಗ್ಲೀಷನ್‍ಲ್ಲಿಯೇ ಮಾತುಕತೆ ನಡೆಸಿದ ಮಕ್ಕಳು ಅಜಯ್ ಸಿಂಗ್ ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಜಾಣತನ ಮೆರೆದರು. ನಿಮಗೆಲ್ಲರಿಗೂ ಓದಲು ಉತ್ತಮ ಪರಿಸರ, ಸ್ವಚ್ಚ ಅಡುಗನೆ, ಲೈಬ್ರರಿ, ಸುರಕ್ಷಿತ ತರಗತಿ ಕೋಣೆಗಳನ್ನು ನಿರ್ಮಿಸಿ ಕೊಡಲಾಗುತ್ತದೆ ಚೆನ್ನಾಗಿ ಓದಿರಿ ಎಂದು ಡಾ. ಅಜಯ್ ಸಿಂಗ್ ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯದರ್ಶಿ ಅನಿರುದ್ಧ ಶ3ವಣ, ಅತುಲ್ ನಲೀನ್ ಅವರೂ ಮಕ್ಕಳೊಂದಿಗೆ ಮಾತುಕತೆ ನಡೆಸಿ ಅನೇಕ ಸಂಗತಿಗಳನ್ನು ಕೇಳಿ ಮಾಹಿತಿ ಪಡೆದರು.

ಬುಧವಾರ ಕಲಬುರಗಿ ನಗರದ ಮಹಾತ್ಮಾ ಬಸವೇಶ್ವರ ನಗರದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಯಲ್ಲಿ ಮಂಡಳಿಯ ಅನುದಾನದಲ್ಲಿ ಸಾಗಿರುವ ಶಾಲಾ ಕೋಣೆಗಳ ನಿರ್ಮಾಣ ಕಾಮಗಾರಿ ವೀಕ್ಷಣೆ ಮಾಡಿದ ನಂತರ ಅದೇ ಶಾಲೆಯಲ್ಲಿ ಮಂಡಳಿಯ ಕಾರ್ಯದರ್ಶಿ ಅನಿರುದ್ಧ ಶ್ರವಣ, ಶಿಕ್ಷಣಾಯುಕ್ತಾಲಯದ ಅಪರ ಆಯುಕ್ತ ನಲೀನ್ ಅತುಲ್ ಇವರೊಂದಿಗೆ ಸವಿಸ್ತಾರವಾಗಿ ಚರ್ಚಿಸಿ ಮೇಲಿನ ನಿರ್ಧಾರಕ್ಕೆ ಬಂದಿದ್ದಾರೆ.

ಕೆಪಿಎಸ್ ಶಾಲೆಯ ಎಲ್‍ಕೆಜಿ, ಯೂಕೆಜಿ ಸೇರಿದಂತೆ 6 ನೇ ತರಗತಿಯವರೆಗೂ ಕೋಣೆಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಖುದ್ದು ಕಂಡ ಡಾ. ಅಜಯ್ ಸಿಂಗ್ ಕೋಣೆಗಳು ಶಿಥಿಲವಾಗಿವೆ. ಈ ಪರಿಸ್ಥಿತಿ ಕಕ ಬಾಗದ ಎಲ್ಲಾಕಡೆ ಇದೆ. ಹೀಗಾಗಿ ಶಾಲಾ ಕೋಣೆಗಳ ದುರಸ್ಥಿಗೆ ಸಮಗ್ರ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಅಧಿಕಾರಿಗಳೊಂದಿಗಿನ ಚರ್ಚೆಯಲ್ಲಿ ಒತ್ತಿ ಹೇಳಿದರು.

ಬಿರುಕು ಕಂಡಿರುವ ಕೋಣೆಗಳಿಗೆ, ಮಳೆ ನೀರು ಸೋರಿ ಬರುತ್ತಿರುವ ಕೋಣೆಗಳು ಎಂದು ಆಯಾ ಕೋಣೆಗಳ ಸಮಸ್ಯೆಗೆ ಅನುಗುಣವಾಗಿ ಇಡೀ ಪ್ರದೇಶದ ಮಾಹಿತಿ ಪಡೆದು ಅಗತ್ಯವಿರುವೆಡೆ ದುರಸ್ಥಿ, ಪುನರ್ ನಿರ್ಮಾಣದ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು. ಮಕ್ಕಳು ಸುರಕ್ಷಿತವಾಗಿ ಕೋಣೆಗಳಲ್ಲಿ ಓದಬೇಕು. ಈ ದಿಶೆಯಲ್ಲಿ ಮಂಡಳಿ ತನ್ನ ಬದ್ಧತೆ ಪ್ರದರ್ಶಿಸಲಿದೆ. ಮಂಡಳಿಯ ಮೊದಲ ಸರ್ವಸದಸ್ಯರ ಸಭೆಯಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಜರೂರತ್ತಿನ ಬಗ್ಗೆಯೂ ಡಾ. ಅಜಯ್ ಸಿಂಗ್ ಅಧಿಕಾರಿಗಳ ಗಮನ ಸೆಳೆದು ಅಗತ್ಯ ಪ್ರಸ್ತಾವನೆ ಸಿದ್ಧಪಡಿಸಲು ಸೂಚಿಸಿದರು.

ಶಾಲೆಯೊಂದರ ಸಮಗ್ರ ಪ್ರಗತಿಗೆ ಯೋಜನೆ ರೂಪಿಸಬೇಕು. ಅಲ್ಲಿರುವ ಅಡುಗೆ ಮನೆ ಸ್ವಚ್ಚವಾಗಿರಬೇಕು, ಶುದ್ಧ ನೀರಿನ ಸವಲತ್ತು, ಶೌಚಾಲಾಯ ಸವಲತ್ತು, ಡಿಜಿಯಲ್ ಲೈಬ್ರರಿ ಸವಲತ್ತು ಒಳಗೊಳ್ಳುವಂತೆ ಸಮಗ್ರ ಯೋಜನೆ ರೂಪಿಸಬೇಕಾಗಿದೆ. ಇದಕ್ಕಾಗಿ ಐಟಿ ಕಂಪನಿಗಳ ಸಹಕಾರ ಸಹ ಪಡೆಯಲು ಮುಕ್ತ ಅವಕಾಶಗಳಿವೆ. ಅನೇಕ ಐಟಿ ಕಂಪನಿಯವರು ತಮ್ಮ ಸಿಎಸ್‍ಆರ್ ಅನುದಾನದಲ್ಲಿ ಕಲ್ಯಾಣದ ಸಾಲೆಗಳ ಅಭಿವೃದ್ಧಿಗೆ ಆಸಕ್ತಿ ತೋರಿದ್ದಾರೆ. ಈ ದಿಶೆಯಲ್ಲಿಯೂ ಮಂಡಳಿ ಕಾರ್ಯಪ್ರವೃತ್ತವಾಗಬೇಕಿದೆ, ಹೊಸತನ್ನು ಚಿಂತಿಸೋಣ, ಹೊಸತು ಯೋಜನೆ ರೂಪಿಸೋಣ. ನಿಮ್ಮೆಲ್ಲರ ಸಹಕಾರ ಬೇಕೆಂದು ಡಾ. ಅಜಯ್ ಸಿಂಗ್ ಅಧಿಕಾರಿಗಳ ಗಮನ ಸೆಳೆದರು.

ಚರ್ಚೆಯ ಒಂದು ಹಂತದಲ್ಲಿ ಕೆಕೆಆರ್‍ಡಿಬಿ ಒಟ್ಟು ಅನುದಾನದ ಶೇ. 25 ರಷ್ಟು ಅನುದಾನ ಶಿಕ್ಷಣ ರಂಗಕ್ಕೇ ಮೀಸಲಿಟ್ಟು ಯೋಜಿತವಾಗಿ ಹೊಸತನದ ಯೋಜನೆಗಳನ್ನು ರೂಪಿಸುತ್ತ ವೆಚ್ಚ ಮಾಡುವ ಅಗತ್ಯವಿದೆ ಎಂದು ಒತ್ತಿ ಹೇಳಿದ ಡಾ. ಅಜಯ್ ಸಿಂಗ್ ಈ ದಿಶೆಯಲ್ಲಿ ಬರಲಿರುವ ಮಂಡಳಿ ಸಭೆಯಲ್ಲಿ ವಿಸ್ತೃತ ಚರ್ಚೆಗೆ ಅವಕಾಶವಾಗುವಂತೆ ಕಾರ್ಯಸೂಚಿಯಲ್ಲಿ ಈ ವಿಷಯ ಆದ್ಯತೆ ಮೇರೆಗೆ ಸೇರಿಸುವಂತೆ ಕಾರ್ಯದರ್ಶಿ ಅನಿರುದ್ಧ ಶ್ರವಣ ಅವರಿಗೆ ಸೂಚಿಸಿದರು.

ಕೆಪಿಎಸ್ ಶಾಲೆಯಲ್ಲಿ 8 ತರಗತಿ ಕೋಣೆ, ನೆಲ ಮಹಡಿ, ಮೇಲ್ಮಹಹಡಿ ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಕೆಕಆರ್‍ಡಿಬಿ 2 ಕೋಟಿ ರು ಅನುದಾನ ನೀಡಿದ್ದು ಕಾಮಗದಾರಿ ಭರದಿಂದ ಸಾಗಿದೆ. ಕಾಮಗಾರಿಯ ವಿವರಗಳನ್ನು ಅಲ್ಲಿನ ಪ್ರಾಚಾರ್ಯ ಅರುಣ ಕುಮಾರ್ ಅಧ್ಯಕ್ಷರಿಗೆ ನೀಡಿದರಲ್ಲದೆ ತಮ್ಮ ಶಾಲೆ, ಕಾಲೇಜಿಗೆ ಇನ್ನೂ 8 ಕೋಣೆಗಳ ಜರೂರತ್ತಿದೆ. ಮಂಡಳಿಯಿಂದ ಇನ್ನೂ 2 ಕೋಟಿ ರು ಅಗತ್ಯವಿದೆ ಎಂದು ಗಮನಕ್ಕೆ ತಂದರು. ಇಲ್ಲಿರುವ ಅಡುಗೆ ಮನೆಯ ಸಮಸ್ಯೆಗಳನ್ನು ವಿವರಿಸಿ ಅದಕ್ಕೂ ಕಾಯಕಲ್ಪ ಬೇಕಾಗಿದೆ ಎಂದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

15 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago