ಜೇವರ್ಗಿ: ಡಾ.ಉಮೇಶ್ ಜಾಧವ್ ಅವರಿಗೆ ರಾಜಕೀಯಕ್ಕೆ ಕರೆತಂದ ದಿ.ಧರ್ಮಸಿಂಗ್ ಅವರ ಮಗನ ಕ್ಷೇತ್ರದತ್ತ ಎಲ್ಲರ ಚಿತ್ತ ನೆಟ್ಟಿದೆ. ಕಾರಣ ಧರ್ಮಸಿಂಗ್ ನನ್ನ ಗುರುಗಳು ಅಂತಿದ್ದ ಡಾ. ಉಮೇಶ್ ಜಾಧವ್ ದಿಢೀರ್ ಬಿಜೆಪಿ ಸೇರಿದ್ದಾರೆ.
ಜಾಧವ್ ಅವರು ಬಿಜೆಪಿಗೆ ಸೇರಲು ಡಾ.ಅಜಯಸಿಂಗ್ ಸಹಾಯ ಮಾಡಿದ್ದಾರೆ ಅನ್ನುವ ಅನುಮಾನ ಕ್ಷೇತ್ರದ ಮತದಾರರಲ್ಲಿದೆ. ಇದಕ್ಕೆ ಪೂರಕ ಎನ್ನುವಂತೆ ಡಾ.ಉಮೇಶ್ ಜಾಧವ್ ಪದೇ ಪದೇ ಜೇವರ್ಗಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲದೆ ಜೇವರ್ಗಿ ಕ್ಷೇತ್ರ ಒಂದರಿಂದಲೇ 25 ಸಾವಿರ ಬಿಜೆಪಿ ಲೀಡ್ ಮಾಡಿಕೊಳ್ಳುತ್ತೇವೆಂದು ಬಿಜೆಪಿ ನಾಯಕರು ಬಹಿರಂಗವಾಗಿ ಹೇಳಿಕೆ ಕೊಡ್ತಿದ್ದಾರೆ.
ಲೋಕಸಭೆ ಚುನಾವಣೆ ಮುಗಿದ ಮೇಲೆ ಮಂತ್ರಿಯಾಗುವ ಕನಸು ಕಾಣುತ್ತಿರುವ ಡಾ.ಅಜಯಸಿಂಗ್ ಅವರಿಗೆ ಇದು ತೀರಾ ‘ಇಜ್ಜತ್ ಕಾ ಸವಾಲ್’ ಎಂಬಂತಾಗಿದೆ. ಡಾ.ಅಜಯಸಿಂಗ್ ಅವರು 16 ಸಾವಿರ ಅಂತರದಿಂದ ಗೆದ್ದು ಶಾಸಕರಾಗಿದ್ದಾರೆ. ಲೋಕಸಭೆಯಲ್ಲಿ ಕನಿಷ್ಟ 10 ಸಾವಿರ ಕಾಂಗ್ರೆಸ್ ಲೀಡ್ ಮಾಡಲೇಬೇಕು ಅಂತ ಮುಖಂಡರು ಬಹಿರಂಗ ವೇದಿಕೆಯಲ್ಲಿಯೇ ಅಜಯಸಿಂಗ್ ಅವರಿಗೆ ಟಾರ್ಗೆಟ್ ನೀಡಿದ್ದಾರೆ.
ಜಿಪಂˌ ತಾಪಂˌ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಯ ಸೀಟ್ ಗಳೇ ಹೆಚ್ಚಿಗೆ ಬಂದಾಗಲೇ ಶಾಸಕರ ಮೇಲೆ ಹಲವರು ಮುನಿಸಿಕೊಂಡಿದ್ದರು. ಇದರ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿಯೂ ಚರ್ಚೆ ಮಾಡಲಾಗಿತ್ತು. ಈ ಕಾರಣಕ್ಕಾಗಿ ಅಜಯಸಿಂಗ್ ಅವರು ಬಡ್ಡಿ ಸಮೇತ ಲೋಕಸಭೆ ಚುನಾವಣೆಯಲ್ಲಿ ವಸೂಲು ಮಾಡಬೇಕಾಗಿದೆ. ಹಾಗೆ ನೋಡಿದ್ರೆ ಡಾ.ಅಜಯಸಿಂಗ್ ಅವರ ವರ್ಚಸ್ಸು ಕಡಿಮೆಯೇನಿಲ್ಲ. ಆದ್ರೆ ವಿಧಾನಸಭೆ ಚುನಾವಣೆಯಂತೆ ಕೆಲಸ ಮಾಡಿದ್ರೆ ಲೀಡ್ ಕೊಡೋದು ಅವರಿಗೆ ದೊಡ್ಡ ವಿಷಯವೇನಲ್ಲ ಅಂತಾರೆ ಯಡ್ರಾಮಿಯ ಹಿರಿಯ ಕಾಂಗ್ರೆಸ್ ಮುಖಂಡರು.
ಡಾ.ಅಜಯಸಿಂಗ್ ಅವರು ಭಾಷಣ ಮಾಡ್ತಾರಲ್ಲ ಅದರಿಂದನೇ ಅಷ್ಟೂ ಓಟು ಕವರ್ ಆಗಲ್ಲ. ಒಳಗೆ ಏನ್ ಕೆಲ್ಸಾ ಮಾಡ್ತಾರೋ ಅದುವೆ ನಿಜವಾದ ಹಾರ್ಡ್ ವರ್ಕ್ ಅಂತಾರೆ ಜೇವರ್ಗಿ ಪಟ್ಟಣದ ಮುಖಂಡರು. ಈ ಲೋಕಸಭೆ ಚುನಾವಣೆ ಡಾ.ಅಜಯಸಿಂಗ್ ಅವರಿಗೂ ಪ್ರಮುಖ ಚುನಾವಣೆಯಾಗಿದೆ. ಅವರ ಪಕ್ಷದ ಮೇಲಿನ ಹಿಡಿತˌ ಸಾಮಾರ್ಥ್ಶˌ ಪಕ್ಷನಿಷ್ಠೆಯನ್ನು ಒರೆಗೆ ಹಚ್ಚಲು ಇದು ಸೂಕ್ತ ಸಮಯವಾಗಿದೆ. ಈ ಲೋಕಸಭೆ ಚುನಾವಣೆಯಲ್ಲಿ ಜೇವರ್ಗಿಯಲ್ಲಿ ಬಿಜೆಪಿ ಲೀಡ್ ಆದ್ರೆˌ ಮುಂದಿನ ಶಾಸಕ ಸ್ಥಾನ ಮಾಜಿ ಶಾಸಕ ದೊಡ್ಡಪ್ಪಗೌಡರ ಕೈಯಲ್ಲಿದ್ದಂಗೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಶದಲ್ಲಿ ಹೆಚ್ಚು ಸೀಟು ಗೆದ್ರೆ ವಿಧಾನಸಭೆಗೆ ಯಾವಾಗ ಬೇಕಾದ್ರು ಚುನಾವಣೆ ನಡೆಯಬಹುದು. ಇಂತಹ ಯೋಚನೆ ಇಟ್ಟುಕೊಂಡೇ ಮಾಜಿ ಶಾಸಕ ದೊಡ್ಡಪ್ಪಗೌಡ್ರು ಕೆಲಸ ಶುರು ಮಾಡಿದ್ದಾರೆ. ಇದು ಬಹುತೇಕರಿಗೆ ಅರ್ಥವಾಗಿಲ್ಲ. ದೊಡ್ಡಗ್ಶಾಪ್ ಸ್ರಷ್ಠಿಯಾಗಲಿದೆ. ದಿ.ಧರ್ಮಸಿಂಗ್ ಖರ್ಗೆಯವರು ಬಹುಕಾಲದ ಸ್ನೇಹಿತರು. ಕಷ್ಟ ಸುಖ ಬಂದ್ರೂ ಹಂಚಿಕೊಂಡವರು. ಆದ್ರೆ ಈ ಸಲದ ಲೋಕಸಭೆ ಚುನಾವಣೆಯಲ್ಲಿ ಜೇವರ್ಗಿ ಕ್ಷೇತ್ರ ಲೀಡ್ ಕೊಡದೆ ಇದ್ದರೆ ಡಾ. ಮಲ್ಲಿಕಾರ್ಜುನ ಖರ್ಗೆಯವರು ಮುನಿಸಿಕೊಳ್ಳಬಹುದು.
ಡಾ.ಅಜಯಸಿಂಗ್ ಪ್ರಿಯಾಂಕ್ ಖರ್ಗೆ ಅವ್ರು ಸರಿ ಇಲ್ಲ ಎನ್ನುವ ನೆಪ ಹೇಳಬಹುದು. ಸ್ವಪಕ್ಷಿಯರೇ ಅಸಮಾಧಾನ ವ್ಶಕ್ತಪಡಿಸಬಹುದು. ಒಟ್ಟಿನಲ್ಲಿ ಎರಡು ಕುಟುಂಬಗಳ ನಡುವೆ ಕಂದಕ ಸ್ರಷ್ಟಿಯಾಗಲಿದೆ. ವಿಧಾನಸಭೆ ಚುನಾವಣೆಯಲ್ಲಿ ಹಗಲು ರಾತ್ರಿ ನಿದ್ದೆ ಮಾಡದೆ ಖರ್ಗೆಯವರ ಗೆಲುವಿಗೆ ತನು-ಮನ-ಧನದಿಂದ ಶ್ರಮಿಸಿದರೆ ಡಾ.ಅಜಯಸಿಂಗ್ ಅವರ ವರ್ಚಸ್ಸು ಹೆಚ್ಚಾಗುತ್ತದೆ. ಡಾ.ಅಜಯಸಿಂಗ್ ಅವರಿಗೆ ಇಡೀ ಬಂಜಾರ ಸಮುದಾಯ ಬೆಂಬಲಿಸುತ್ತೆ. ಕಾಂಗ್ರೆಸ್ ದಲ್ಲಿರುವ ಬಂಜಾರ ಸಮುದಾಯಕ್ಕೆ ಶಾಸಕರು ಯಾವ ಸಂದೇಶ ಕೊಡ್ತಾರೋ ಕಾದು ನೋಡಬೇಕು.
ಕೆಲವು ತಾಂಡಾಗಳಲ್ಲಿಯೇ ಬೂತ್ ಗಳಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಮತಗಳು ಬಂದವು ಅನ್ನುವುದು ಗೊತ್ತಾಗಲಿದೆ. ತಾಪಂ ಕಾಂಗ್ರೆಸ್ ಸದಸ್ಶ ಪ್ರಶಾಂತ ರಾಠೋಡ ಅವರ ಯಡ್ರಾಮಿ ತಾಂಡಾದಲ್ಲಿ ಮತಗಳು ಪಕ್ಷಕ್ಕೆ ಬರಲು ಡಾ.ಅಜಯಸಿಂಗ್ ಪ್ಲ್ಶಾನ್ ಮಾಡಬೇಕಾದ ಅವಶ್ಶಕತೆ ಇದೆ. ತನ್ನ ಚುನಾವಣೆಗೆ ಮಾತ್ರ ತಾಂಡಾಗಳು ಸಹಕರಿಸಿದರೆ ಸಾಕು ಎನ್ನುವ ಮನೋಭಾವದಿಂದ ಕೆಲಸ ಮಾಡಿದ್ರೆˌ ಮುಂದಿನ ವಿಧಾನಸಭೆಯಲ್ಲಿ ಎಡ-ಬಲ ಸಮುದಾಯಗಳು ಸೇರಿದಂತೆ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದಲ್ಲಿ ಯಾಕಿರಬೇಕು ಅನ್ನುವ ನಿರ್ಧಾರಕ್ಕೆ ಬರಬಹುದು.
ಒಟ್ಟಿನಲ್ಲಿ ಡಾ.ಅಜಯಸಿಂಗ್ ಅವರಿಗೆ ಈ ಚುನಾವಣೆ ಒಳ್ಳೆಯ ಇಲ್ಲವೆ ಕೆಟ್ಟ ಹೆಸರು ಕೊಡಲು ತಯಾರಾಗಿದೆ.
ಡಾ.ಅಶೋಕ ದೊಡ್ಮನಿˌ ಜೇವರ್ಗಿ
ಮೊ: 9740202363
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
View Comments
ಈ ಸಲ ಒಂದು ವೇಳೆ ಬಿಜೆಪಿ ಮತಗಳು ಜೇವರ್ಗಿ ಯಲ್ಲಿ ಹೆಚ್ಚು ಬಂದರೆ ಮುಂಬರುವ ವರ್ಷಗಳಲ್ಲಿ ಜೇವರ್ಗಿ ಯಲ್ಲಿ ದಲಿತ ರು, ಡಾ,,ಅಜಯಸಿಂಗ್ ರನ್ನು ಬದಲಾವಣೆ ಮಾಡುವ ಅವಕಾಶವನ್ನು ಮಾಡಲು ಸಂಶಯವಿಲ್ಲ,