ಬಿಸಿ ಬಿಸಿ ಸುದ್ದಿ

ಪ್ರಸಿದ್ಧರಾಗಲು ಅಪರಾಧ ಲೋಕಕ್ಕೆ ಎಂಟ್ರಿ: ಡಾ. ಮೇಲಿನ ಗುಂಡಿನ ದಾಳಿ ಆರೋಪಿಗಳ ಬಂಧನ

ರಾಯಚೂರು; ಇತ್ತೀಚೆಗೆ ನಗರದ ಹೊರ ವಲಯದಲ್ಲಿ ಡಾ.ಜಯಪ್ರಕಾಶ ಪಾಟೀಲ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆಂದು ಬಳ್ಳಾರಿ ವಲಯ ಐಜಿಪಿ ಬಿ.ಎಸ್.ಲೋಕೇಶ ಕುಮಾರ್ ಹೇಳಿದರು.

ಅವರಿಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯಲಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಆ.31 ರಂದು ನಗರದ ಹೊರ ವಲಯದ ಸಾಥ್ ಮೈಲ್ ಕ್ರಾಸ್ ಬಳಿ ಡಾ.ಜಯ ಪ್ರಕಾಶರವರು ತೆರಳುತ್ತಿದ್ದ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದ ಕಲಬುರ್ಗಿ ಮೂಲದ ಆರೋಪಿಗಳಾದ ಶರ್ಫುದ್ದೀನ್ ಮಿಷ್ಟ್ರಿ,ಎಂ.ಡಿ.ಫಕ್ರುದ್ದೀನ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಇಬ್ಬರು ಸಹ ವಿದ್ಯಾವಂತರಿದ್ದು ಸಾಮಾಜಿಕ ಜಾಲ ತಾಣಗಳ ಅರಿವುಹೊಂದಿದ್ದು ಆ ಮೂಲಕ ಡಾ.ಜಯಪ್ರಕಾಶ ಪಾಟೀಲರ ಫೇಸ್ ಬುಕ್ ಮೂಲಕ ಅವರ ಮಾಹಿತಿ ಕಲೆಹಾಕಿ ಅವರಿಗೆ ದೂರವಾಣಿ ಮೂಲಕ 30 ಸಾವಿರ ಕ್ರಿಪ್ಟೋಕರೆನ್ಸಿಗೆ ಬೇಡಿಕೆ ಇಟ್ಟಿದ್ದರು ಅವರು ಅದನ್ನು ನೀಡಲು ಒಪ್ಪದ್ದರಿಂದ ಅವರ ಚಲನ ವಲನದ ಮೇಲೆ ನಿಗಾಯಿರಿಸಿ ಆ.31 ರಂದು ಸಾಥ್ ಮೈಲ್‌ನಲ್ಲಿ ಅವರು ತೆರಳುತ್ತಿದ್ದ ಕಾರಿನ ಮೇಲೆ ನಾಡ ಪಿಸ್ತೂಲ್ ನಿಂದ ಗುಂಡಿನ ದಾಳಿ ಮಾಡಿದ್ದಾರೆ ಎಂದರು.

ಕಲಬುರ್ಗಿಯಲ್ಲಿ ವಾಸಿಸುವ ಆರೋಪಿಗಳು ಹಣದ ಆಸೆಗೆ ಮತ್ತು ತಮ್ಮದೆ ಪ್ರತ್ಯೇಕ ಗ್ಯಾಂಗ್ ಮೂಲಕ ಎದುರಾಳಿ ಗ್ಯಾಂಗ್‌ಗೆ ಪರ್ಯಾಯವಾಗಿ ಅಪರಾಧ ಲೋಕದಲ್ಲಿ ಮಿಂಚಲು ಈ ಕತ್ಯಕ್ಕೆ ಇಳೀದಿದ್ದು ಮೇಲ್ನೋಟಕ್ಕೆ ಕಂಡು ಬಂದಿದ್ದು ಕಲಬುರ್ಗಿಯಲ್ಲಿ ಕೃತ್ಯ ಮಾಡಿದರೆ ಎದುರಾಳಿ ಗ್ಯಾಂಗ್ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಕಲಬುರ್ಗಿ ನಂತರ ದೊಡ್ಡ ನಗರವಾದ ರಾಯಚೂರು ಆಯ್ಕೆ ಮಾಡಿಕೊಂಡಿದ್ದು ರಾಯಚೂರಲ್ಲಿ ಪ್ರಖ್ಯಾತರಾದ ವೈದ್ಯರ ಫೇಸ್ ಬುಕ್ ಅಕೌಂಟ್ ಜಾಲಾಡಿ ದೂರವಾಣಿ ಸಂಖೆ ಸಂಗ್ರಹಿಸಿ ಅವರಿಗೆ ಈ ಹಿಂದೆ ಬೆದರಿಕೆ ಕೆರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ವೈದ್ಯರು ಅದಕ್ಕೆ ಸ್ಪಂದಿಸದ ಕಾರಣ ಗುಂಡಿನ ದಾಳಿ ಮಾಡಿದ್ದಾರೆ ಎಂದರು.

ಲಾಡ್ಜೊಂದರಲ್ಲಿ ತಂಗಿದ್ದ ಆರೋಪಿಗಳು: ಆ.30 ಕ್ಕೆ ನಗರಕ್ಕೆ ಆಗಮಿಸಿ ಲಾಡ್ಜೊಂದರಲ್ಲಿ ತಂಗಿದ್ದರು, ಆ.31 ರಂದು ಮಧ್ಯಾಹ್ನ ವೈದ್ಯರು ತಮ್ಮ ಆಸ್ಪತ್ರೆಯಿಂದ ತೆರಳುವುದನ್ನು ಹಿಂಬಾಲಿಸಿ ನಗರದ ಹೊರ ವಲಯಕ್ಕೆ ಬರುತ್ತಿದ್ದಂತೆ ಗುಂಡಿನ ದಾಳಿ ಮಾಡಿದ್ದು ನಂತರ ಅವರು ಪರಾರಿಯಾಗಿದ್ದರು ಎಂದ ಅವರು ತತಕ್ಷಣ ಕಾರ್ಯಪ್ರವೃತ್ತರಾದ ಎಸ್ಪಿ ನಿಖಿಲ್ ಬಿ ರವರು ಹೆಚ್ಚುವರಿ ಎಸ್ಪಿ ಶಿವಕುಮಾರ್.ಆರ್, ಡಿಎಸ್ಪಿ ಎಂ.ಜಿ.ಸತ್ಯನಾರಾಯಣರಾವ್ ಮಾರ್ಗದರ್ಶನದಲ್ಲಿ ಮೂರು ತಂಡಗಳನ್ನು ರಚಿಸಿ ಅರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದರು.

ಅರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ 30 ಸಾವಿರು ರೂ. ನಗದು ಬಹುಮಾನ ನೀಡಿದ ಅವರು ಸಾರ್ವಜನಿಕರು ತಮ್ಮ ಹಣದ ವ್ಯವಹಾರವನ್ನು ಜಾಗರೂಕತೆಯಿಂದ ಮಾಡಬೇಕು ಅಪರಾಧ ಕೃತ್ಯ ನಡೆದ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ನೀಡಿದರೆ ಅರೋಪಿಗಳನ್ನು ಬಂಧಿಸಲು ಸಹಕಾರಿಯಾಗುತ್ತದೆ ಎಂದರು.

20 ವರ್ಷಗಳ ನಂತರ ಗುಂಡಿನ ಶಬ್ಧ: ತಾವು ಈ ಹಿಂದೆ ರಾಯಚೂರು ಎಸ್ಪಿಯಾಗಿದ್ದ ವೇಳೆ ಮುರ್ಗಿ ಖಲೀಲ್ ಎಂಬುವವರನ್ನು2003ರಲ್ಲಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು ಅದನ್ನು ಬೇಧಿಸಿ ಆರೋಪಿಗಳನ್ನು ಪತ್ತೆ ಮಾಡಲಾಗಿತ್ತು ಎಂದ ಅವರು ಕರಾವಳಿ ಭಾಗದಲ್ಲಿ ಭೂಗತ ಚಟುವಟಿಕೆ ,ಹಫ್ತಾ ವಸೂಲಿ ಮುಂತಾದ ಅಪರಾಧ ಕೃತ್ಯ ಅಧಿಕವಾಗಿ ನಡೆಯುತ್ತಿವೆ ಆದರೆ ಉತ್ತರ ಕರ್ನಾಟಕದಲ್ಲಿಅದನ್ನು ಕಾಲಿರಿಸುವ ಮುನ್ನ ಪೊಲೀಸರು ಕಾರ್ಯಚರಣೆ ನೆಡೆಸಿ ಅಪರಾಧ ಕೃತ್ಯಕ್ಕೆ ಕಡಿವಾಣ ಹಾಕಿದ್ದಾರೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ.ಮಾತನಾಡಿ ಆರೋಪಿಗಳು ಈ ಹಿಂದೆ ಯಾವುದೆ ಅಪರಾಧ ಕೃತ್ಯದಲ್ಲಿ ಭಾಗಿಯಾದ ಬಗ್ಗೆ ಇನ್ನು ಮಾಹಿತಿ ದೊರೆತಿಲ್ಲ ಆದರೂ ತನಿಖೆ ಮುಂದುವರೆದಿದ್ದು ಅರೋಪಿಗಳ ಹಿನ್ನಲೆ ಕಲೆ ಹಾಕಿದಾಗ ಅವರ ಕುಟುಂಬ ಯಾವುದೆ ಅಪರಾಧಿಕ ಹಿನ್ನಲೆಯುಳ್ಳದ್ದು ಎಂದು ಕಂಡು ಬಂದಿಲ್ಲವೆ0ದ ಅವರು ಹಣದ ಆಸೆ ಮತ್ತು ಅಪರಾಧ ಲೋಕದಲ್ಲಿ ಮಿಂಚಬೇಕೆ0ಬ ಉದ್ದೇಶದಿಂದ ಈ ಕೃತ್ಯಕ್ಕೆ ಇಳಿದಿದ್ದಾರೆ ಎಂದರು.

ಧನ್ಯವಾದ ಅರ್ಪಿಸಿದ ವೈದ್ಯ: ಗುಂಡಿನ ದಾಳಿ ಪ್ರಕರಣವನ್ನು ಬೇಧಿಸಿದ್ದಕ್ಕೆ ಡಾ.ಜಯಪ್ರಕಾಶ ಪಾಟೀಲ್ ಪೊಲೀಸರನ್ನು ಭೇಟಿಯಾಗಿ ಧನ್ಯವಾದಗಳನ್ನು ಅರ್ಪಿಸಿದರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಪೊಲೀಸರ ಮೇಲೆ ನಂಬಿಕೆಯಿತ್ತು ಅವರು ಪ್ರಕರಣವನ್ನು ಬೇಧಿಸುತ್ತಾರೆ ಎಂಬ ಭರವಸೆಯಿತ್ತು ಎಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಶಿವಕುಮಾರ್.ಆರ್, ಡಿಎಸ್ಪಿ ಎಂ.ಜಿ.ಸತ್ಯನಾರಾಯಣರಾವ್ ಸೇರಿದಂತೆ ವಿವಿಧ ಠಾಣೆಗಳ ಸಿಪಿಐ, ಪಿಎಸ್‌ಐ ಹಾಗೂ ಸಿಬ್ಬಂದಿಗಳಿದ್ದರು.

emedialine

Recent Posts

ಪೂರ್ವ ಪೀಠಿಕೆ ಓದುವ ಮೂಲಕ ಸಂವಿಧಾನ ದಿನ ಆಚರಣೆ

ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…

3 hours ago

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

14 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

1 day ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

1 day ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

1 day ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

1 day ago