ಚಿತ್ತಾಪುರ; ಕಲಬುರಗಿ ಮಹಾನಗರ ಪಾಲಿಕೆಯ ವೀರಶೈವ ಲಿಂಗಾಯತ ಅಧಿಕಾರಿಯ ಆರೋಗ್ಯ ನಿರೀಕ್ಷಿಕ ಧನಶೆಟ್ಟಿ ಹೆಡಗಾಪುರೆ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿರುವ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ವೀರಶೈವ ಲಿಂಗಾಯತ ಸಮಾಜ ಮುಖಂಡ ಅಂಬರೇಶ ಸುಲೇಗಾಂವ ಒತ್ತಾಯಿಸಿದರು.
ಕಲಬುರಗಿಯ ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಿಕ ಧನಶೆಟ್ಟಿ ಹೆಡಗಾಪುರೆ ಮೇಲೆ ಅವಿನಾಶ ಭಾಸ್ಕರ್ ಹಾಗೂ ಸಂಗಡಿಗರು ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದಾರೆ.ವೀರಶೈವ ಲಿಂಗಾಯತರಾಗಿರುವ ಧನಶೆಟ್ಟಿ ಅವರು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿದ್ದಾರೆ. ಹಣ ನೀಡುವಂತೆ ಅವಿನಾಶ ಒತ್ತಾಯಿಸುತ್ತಿದ್ದರು. ವೈಯಕ್ತಿಕ ಕೆಲಸಗಳಿಗೆ ಹೊರಗೆ ಬರುವಂತೆ ಕರೆಯುತ್ತಿದ್ದರು. ಒಂದು ಅಂಗಡಿಗೆ ಪರವಾನಿಗೆ ಹಾಕಿಸಿ ತಪ್ಪು ವರದಿ ನೀಡುವಂತೆ ಒತ್ತಾಯಿಸುತ್ತಿದ್ದರು. ಅದನ್ನು ನಿರಾಕರಿಸಿದ ಧನಶೆಟ್ಟಿ ಇವರಿಗೆ ಜಾತಿ ನಿಂದನೆ ಮಾಡಿ ಮಹಾನಗರ ಪಾಲಿಕೆಯ ಕಚೇರಿಯಲ್ಲಿಯೇ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಹಲ್ಲೆ ಮಾಡಿ ಕ್ರೌರ್ಯ ಎಸಗಿದ್ದಾರೆ. ತಮ್ಮ ಸರ್ಕಾರವೇ ರಾಜ್ಯದಲ್ಲಿ ಅಧಿಕಾರದಲ್ಲಿದ್ದು ನಿನ್ನನ್ನು ಏನು ಬೇಕಾದರೂ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಹಲ್ಲೆ ವಿರೋಧಿಸಿ ಪಾಲಿಕೆಯ ಸಿಬ್ಬಂದಿಗಳು ತಕ್ಷಣ ಬೀದಿಗಿಳಿದು ಹೋರಾಟ ಮಾಡಿ ಪ್ರಕರಣ ದಾಖಲಿಸಿದರೆ. ಆದರೆ ಆರೋಪಿಗಳನ್ನು ಇದುವರೆಗೆ ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೀರಶೈವ ಲಿಂಗಾಯತರ ತಂಟೆಗೆ ಬಂದರೆ ಸಹಿಸುವುದಿಲ್ಲ. ತಾಳಿದರೇ ನಾವು ಬಸವಣ್ಣನಾಗುತ್ತೇವೆ. ತಾಳ್ಮೆ ಮೀರಿಸಿದರೇ ವೀರಭಧ್ರರಾಗುತ್ತೇವೆ. ಆದ್ದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಕೂಡಲೇ ಸರ್ಕಾರಿ ಅಧಿಕಾರಿಯ ಮೇಲೆಯಾಗಿರುವ ಹಲ್ಲೆಗೆ ವಿಶೇಷ ಪ್ರಕರಣೆ ಎಂದು ಭಾವಿಸಿ ಸಂಬಂಧಪಟ್ಟ ಆರೋಪಿಗಳನ್ನು ಕೂಡಲೇ ಬಂಧಿಸಿ ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಸೈಯದ್ ಷಾಷಾವಲಿ ಅವರಿಗೆ ಸಲ್ಲಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಗೌರವಾಧ್ಯಕ್ಷ ಲಿಂಗಾರೆಡ್ಡಿಗೌಡ ಭಾಸರೆಡ್ಡಿ, ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ನೇತೃತ್ವದಲ್ಲಿ ಸಮಾಜದ ಪ್ರಮುಖರಾದ ಸೋಮಶೇಖರ ಪಾಟೀಲ ಬೆಳಗುಂಪಾ, ಚಂದ್ರಶೇಖರ ಅವಂಟಿ, ರವೀಂದ್ರ ಸಜ್ಜನಶೆಟ್ಟಿ, ಶಿವಲಿಂಗಪ್ಪ ವಾಡೇದ್, ಅಶೋಕ ನಿಪ್ಪಾಣಿ, ಬಸವರಾಜಗೌಡ ಆಲೂರ, ಕೋಟೆಶ್ವರ ರೇಷ್ಮಿ, ಆನಂದ ಪಾಟೀಲ್ ನರಬೋಳಿ, ಸಿದ್ದಲಿಂಗರೆಡ್ಡಿ ನಾಲವಾರ, ಶ್ರೀನಿವಾಸರೆಡ್ಡಿ ಪಾಲಪ, ವೀರಣ್ಣ ಸುಲ್ತಾನಪುರ, ಚಂದ್ರಶೇಖರ ಊಟಗುರ, ರಾಮರೆಡ್ಡಿ ಕೊಳ್ಳಿ, ನಾಗರಾಜ ರೇಷ್ಮಿ, ನಾಗರೆಡ್ಡಿ ಗೋಪಶೇನ್, ಮಲ್ಲಿಕಾರ್ಜುನರೆಡ್ಡಿಇಜಾರ, ರವಿ ಗೊಬ್ಬೂರ, ಬಸವರಾಜ ಹೂಗಾರ, ದೊಡ್ಡಪ್ಪ ತೆಂಗಳಿ, ರವಿಂದ್ರ ಇವಣಿ, ಅನಿಲ ವಡ್ಡಡಗಿ, ಸಂಗನಗೌಡ ಸಂಕನೂರ ಸೇರಿದಂತೆ ಇನ್ನಿತರರಿದ್ದರು.
ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಇ.ಪಿ.ಎಫ್ ಕ್ಷೇತ್ರೀಯ ಕಾರ್ಯಾಲಯದಲ್ಲಿ ಮಂಗಳವಾರ 69ನೇ ಕನ್ನಡ ರಾಜ್ಯೋತ್ಸವವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಕಲ್ಯಾಣ…
ಕಲಬುರಗಿ: ಸಿಪಿಐ(ಎಂ) ಪಕ್ಷವು ನವೆಂಬರ್ 24,25 ನವೆಂಬರ್ ರಂದು ಎರಡು ದಿನಗಳ ಕಾಲ ಜಿಲ್ಲಾ ಸಮ್ಮೇಳನ ನಡೆದು ಜಿಲ್ಲಾ ಕಾರ್ಯದರ್ಶಿಯಾಗಿ…
ಕಲಬುರಗಿ: ಜಯನಗರ ಬಡಾವಣೆಯ ಹಳೆ ಸಾರ್ವಜನಿಕ ಉದ್ಯಾನವನ ಅಭಿವೃದ್ಧಿಗಾಗಿ ಕಲಬುರಗಿ ಬೀದರ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ.ಪಾಟೀಲ ಇವರ…
ಕಲಬುರಗಿ: ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಸಂವಿಧಾನ ದಿನ ಆಚರಣೆ ಕಾರ್ಯಕ್ರಮ ವನ್ನು ಸವಿಧಾನ ಪ್ರತಿಯನ್ನು ಓದುವ ಮೂಲಕ ಸವಿಧಾನ ಶಿಲ್ಪಿ…
ಕಲಬುರಗಿ : ಸೇಡಂ ಮತಕ್ಷೇತ್ರದ ವ್ಯಾಪ್ತಿಯ ಕರ್ಚಖೇಡ, ಕಾನಗಡ್ಡ,ಮದನ, ಮುಧೋಳ ಗ್ರಾ.ಪಂನ ಉಪ ಚುನಾಚುನಾವಣೆಯಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳು ಜಯ…
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ 75ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್…