ಬಿಸಿ ಬಿಸಿ ಸುದ್ದಿ

ಆದರ್ಶ ಶಿಕ್ಷಕ ಅಪ್ಪಾಸಾಹೇಬ ತೀರ್ಥ

ಆಳಂದ; ಅಪಾರ ಶಿಷ್ಯ ಬಳಗವನ್ನು ಹೊಂದಿರುವ ಬಹುಮುಖ ಪ್ರತಿಭೆಯ ಆದರ್ಶ ಶಿಕ್ಷಕ ಅಪಾಸಾಹೇಬ ಬಿ. ತೀರ್ಥ ಅವರು ಜಿಲ್ಲಾಮ ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಆಳಂದ ತಾಲೂಕಿನ ಪಡಸಾವಳಿ ಗ್ರಾಮದಲ್ಲಿ ಜನಿಸಿದ ಇವರು ಹುಟ್ಟೂರಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, 8 ನೇ ಕಲಬುರಗಿಯ ಎಂಪಿಎಚ್ ಎಸ್ ಶಾಲೆಯಲ್ಲಿ ಕಲಿತು, ಭೂಸನೂರ ಮಲ್ಲಿಕಾರ್ಜುನ ಪ್ರೌಢಶಾಲೆಯಲ್ಲಿ9,10 ತರಗತಿ ಅಭ್ಯಾಸ ಮಾಡಿದ್ದಾರೆ. ಆಳಂದ ಸರಕಾರಿ ಪಪೂ ಕಾಲೇಜಿನಲ್ಲಿ ಪಿಯುಸಿ ಉತ್ತೀರ್ಣರಾಗಿ, ಎ.ವಿ.ಪಾಟೀಲ್ ಡಿಗ್ರಿ ಕಾಲೇಜಿನಲ್ಲಿ ಪದವಿ ಪಡೆದು, ಬಳಿಕ ಕಲಬುರಗಿಯ ಆಶಾ ಜ್ಯೋತಿ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ತಂದೆಯವರಂತೆ ಶಿಕ್ಷಕ ವೃತ್ತಿ ಆಯ್ಕೆ ಮಾಡಿ ಕೊ೦ಡವರು.

ಆಳಂದ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಸಮತಾ ಲೋಕ ಶಿಕ್ಷಣ ಸಮಿತಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1990ರಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಶಿಕ್ಷಕ ವೃತ್ತಿಯ ಪಾವಿತ್ರ್ಯತೆ ಜತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತ ನಿಸ್ಸಿಮರಾದರು. ಬಡ ಮಕ್ಕಳಿಗೆ ನೋಟ್ ಬುಕ್, ಪೆನ್ನು, ಸಮವಸ್ತ್ರ ಶಾಲಾ ಬ್ಯಾಗು ಇತರೆ ಲೇಖನಿ ಸಾಮಾಗ್ರಿಗಳ ನೀಡುವ ಮೂಲಕ ವಿದ್ಯಾರ್ಥಿಗಳ ಬಾಳು ಬೆಳಗಿಸಿದ ಹಿರಿಮೆ ಇವರಿಗೆ ಸಲ್ಲುತ್ತದೆ.

ಶಿಕ್ಷಣ ಪಾಠದ ಜತೆಗೆ ಕ್ರೀಡೆ, ಭಾರತ ಸೇವಾದಳ, ಭಾರತ ಸೌಟ್ಸ್ ಮತ್ತು ಗೈಡ್ಸ್ ತಾಲೂಕು ಕಾರ್ಯದರ್ಶಿಗಳಾಗಿ ಮಕ್ಕಳಿಗೂ ತರಬೇತಿ ನೀಡಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಸಂಘ ಸಂಸ್ಥೆಗಳು 2 ಬಾರಿ ದೆಹಲಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ, ಬೆಂಗಳೂರಿನಲ್ಲಿ 3 ಬಾರಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿವೆ. ಮಠಗಳು, ಸಾಹಿತ್ಯ ಸಮ್ಮೇಳನ ಸೇರಿದಂತೆ ಅನೇಕ ಕಡೆಗಳಲ್ಲಿಯೂ ಸನ್ಮಾನ ಪ್ರಶಸ್ತಿಗಳು ಮುಡಿಗೇರಿವೆ. ಶಿಕ್ಷಣ ಇಲಾಖೆಯು 10 ವರ್ಷಗಳ ಹಿಂದೆ ಇವರನ್ನು ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ. ಶಿಕ್ಷಕರ ದಿನಾಚರಣೆ ನಿಮಿತ್ತ ಶಿಕ್ಷಣ ಇಲಾಖೆಯು ನೀಡುವ 2023 ನೇ ಸಾಲಿನ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತೀರ್ಥ ಅವರನ್ನು ಆಯ್ಕೆ ಮಾಡಿರುವದಕ್ಕೆ ಅಭಿಮಾನಿ ಹಾಗೂ ಶಿಷ್ಯ ಬಳಗದಲ್ಲಿ ಖುಷಿ ಇಮ್ಮಡಿ ಮಾಡಿದೆ.

ಕಳೆದ 33 ವರ್ಷಗಳಿಂದಲೂ ಖಾಸಗಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಸರಳ ಸಜ್ಜನಿಕಿಯ ಕ್ರಿಯಾಶೀಲ ಶಿಕ್ಷಕರಿಗೆ ದೊರೆತ ಈ ಪ್ರಶಸ್ತಿ ಇವರ ಜವಾಬ್ದಾರಿ ಹೆಚ್ಚಿಸಿದೆ. ತಂದೆ ದಿ. ಬಸವಂತರಾಯ ಶಿಕ್ಷಕರಾಗಿರುವದರಿಂದ ಅವರ ಹೆಸರು, ಕೀರ್ತಿ ತಂದೆಗೆ ತಕ್ಕ ಮಗನಾಗಿ ಜನಮಾನಸದಲ್ಲಿ ಉಳಿದಿರುವುದು ಹೆಮ್ಮೆಯ ಸಂಗತಿಯಾಗಿದೆ.

emedialine

Recent Posts

ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನ; ವಿದ್ಯಾರ್ಥಿಗಳಿಗೆ ಎಕ್ಸಾಮ್ ಪ್ಯಾಡ್ ವಿತರಣೆ

ಎಂ.ಡಿ‌‌ ಮಶಾಖ ಚಿತ್ತಾಪುರ ಚಿತ್ತಾಪುರ; ತಾಲೂಕಿನ ಯಾಗಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್…

59 mins ago

ಕರವೇ ನಗರ ಘಟಕದ ಪದಾಧಿಕಾರಿಗಳ ಆಯ್ಕೆ

ಶಹಾಬಾದ: ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿಎ. ನಾರಾಯಣಗೌಡ ರವರ ಆದೇಶದ ಮೇರೆಗೆ ಹಾಗೂ ಜಿಲ್ಲಾಧ್ಯಕ್ಷರಾದ ಆನಂದ ದೊಡ್ಡಮನಿ ಹಾಗೂ…

1 hour ago

ಶಾಸಕ ಮತ್ತಿಮಡು ಹಳೆಶಹಾಬಾದನ ಮನೆಮನೆಗೆ ತೆರಳಿ ಮತಯಾಚನೆ

ಶಹಾಬಾದ: ನಗರಸಭೆ ವಾರ್ಡ ನಂ. 3 ರ ಉಪಚುನಾವಣೆ ಪ್ರಯುಕ್ತ ಗುರುವಾರ ಬೆಳಿಗ್ಗೆ ಕಲಬುರಗಿ ಗ್ರಾಮಿಣ ಶಾಸಕರಾದ ಬಸವರಾಜ ಮತ್ತಿಮಡು…

1 hour ago

ಜಿಲ್ಲಾಧ್ಯಕ್ಷ-ತಾಲೂಕು ಅಧ್ಯಕ್ಷರಾಗಿ ಬಳಿರಾಮ ರಾಮಜಿ, ಶಿವರಾಜ ದೇಶಮುಖಪ್ಪಾ ನೇಮಕ

ಕಲಬುರಗಿ: ಕಲ್ಯಾಣ ಕರ್ನಾಟಕ ರೈತಾಪಿ ಸಂಘದ ಜಿಲ್ಲಾ ಅಧ್ಯಕ್ಷರನ್ನಾಗಿ ಬಳಿರಾಮ ರಾಮಜಿ ಚೌವ್ಹಾಣ, ಹಾಗೂ ತಾಲೂಕು ಅಧ್ಯಕ್ಷರನ್ನಾಗಿ ಶಿವರಾಜ ದೇಶಮುಖಪ್ಪಾ…

6 hours ago

ಪುರಾತನ ಕಾಲದಲ್ಲಿ ನಾಗಾವಿ ನಾಡು ಸಾಂಸ್ಕøತಿಕವಾಗಿ ಪ್ರಸಿದ್ಧ: ತಹಸಿಲ್ದಾರ್ ಹಿರೇಮಠ್

ಕಲಬುರಗಿ: ಪುರಾತನ ಕಾಲದಲ್ಲಿ ನಾಗಾವಿ ಪ್ರದೇಶವು ದಕ್ಷಿಣ ಭಾರತದಲ್ಲಿ ನಾಗಾವಿ ಪ್ರಸಿದ್ದಿ ಪಡೆದ ವಿಶ್ವ ವಿದ್ಯಾಲಯವಾಗಿತ್ತು ಎಂದು ತಹಸಿಲ್ದಾರ್ ನಾಗಯ್ಯ…

17 hours ago

ಮತದಾರರ ನೋಂದಣಿಗೆ ನವೆಂಬರ್ 23 ಮತ್ತು‌ 24 ರಂದು ವಿಶೇಷ ಅಭಿಯಾನಬಿ:.ಫೌಜಿಯಾ ತರನ್ನುಮ್

ಕಲಬುರಗಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಿ.1-1-2025 ಅರ್ಹತಾ ದಿನವನ್ನಾಗಿ ಪರಿಗಣಿಸಿಕೊಂಡು ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಸಲಾಗುತ್ತಿದ್ದು,…

17 hours ago