ಬಿಸಿ ಬಿಸಿ ಸುದ್ದಿ

ಅನ್ನ ನೀಡುವ ರೈತ ನೆಮ್ಮದಿಯಿಂದ ಜೀವನ ಸಾಗಿಸುವ ದಿಶೆಯಲ್ಲಿ ಸರ್ಕಾರ ಯೋಜನೆಗಳು ರೂಪಿಸಲಿ: ಪೂಜ್ಯ ಶ್ರೀ ಡಾ. ರೇವಣಸಿದ್ದ ಶಿವಾಚಾರ್ಯರು

ಕಲಬುರಗಿ: ಸಮಾಜಕ್ಕೆ ಅನ್ನ ನೀಡುವ ರೈತ ಎರಡು ಹೊತ್ತು ಊಟ ಮಾಡಿ ನೆಮ್ಮದಿಯಿಂದ ಜೀವನ ಸಾಗಿಸುವ ದಿಶೆಯಲ್ಲಿ ಸರ್ಕಾರಗಳು ಕಾರ್ಯ ಯೋಜನೆ ರೂಪಿಸುವುದು ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಆಧುನಿಕ ಕೃಷಿ ಪದ್ಧತಿ ರೈತ ಬೆಳೆದ ಬೆಳೆಗಳಿಗೆ ಯೋಗ್ಯವಾದ ಬೆಂಬಲ ಬೆಲೆ ನೀಡಲು ಚಿಂತಿಸುವುದು ತುರ್ತಾಗಿದೆ ಎಂದು ಶ್ರೀನಿವಾಸ ಸರಡಗಿ ಮತ್ತು ಕುರಿಕೋಟಾದ ಶ್ರೀ ಗುರುಚಿಕ್ಕ ವೀರೇಶ್ವರ ಸಂಸ್ಥಾನ ಹಿರೇಮಠದ ಪೀಠಾದಿಪತಿಗಳಾದ ಪೂಜ್ಯ ಶ್ರೀ ಡಾ. ರೇವಣಸಿದ್ದ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಶ್ರೀ ಮಣಿಕಂಠ ಪೂರ್ವ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ದಿನಾಚರಣೆ ಮತ್ತು ರಕ್ಷಾ ಬಂಧನ ಶ್ರೀಗಳಿಗೆ ದೊರೆತ ಗೌರವ ಡಾಕ್ಟರೇಟ್ ಅಭಿನಂದನಾ ಸಮಾರಂಭದ ಗೌರವ ಸತ್ಕಾರ ಸ್ವೀಕರಿಸಿ ಆಶೀರ್ವಚನ ನೀಡಿದ ಪೂಜ್ಯರು ಇತ್ತೀಚಿನ ವರ್ಷಗಳಲ್ಲಿ ನಾಡಿನಲ್ಲೆಡೆ ಪ್ರಕೃತಿಯ ಏರಿಳಿತದಿಂದ ಒಂದೆಡೆ ಅತೀವೃಷ್ಟಿ, ಇನ್ನೊಂದೆಡೆ ಅನಾವೃಷ್ಟಿ ಕಾಣುತ್ತಿದ್ದೇವೆ. ಇದರ ಪರಿಣಾಮವಾಗಿ ಕೃಷಿ ರಂಗ ಬಿಕ್ಕಟ್ಟಿನಲ್ಲಿದ್ದು ಕೃಷಿಯನ್ನೇ ನಂಬಿಕೊಂಡಿರುವ ರೈತಾಪಿ ವರ್ಗ ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟದ ಸ್ಥಿತಿಯಲ್ಲಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತನ ಕಣ್ಣೀರೊರೆಸುವುದು ಮತ್ತು ದೀರ್ಘವಾದ ವಾಸ್ತವವಾದ ಯೋಜನೆಗಳನ್ನು ರೂಪಿಸುವಂತೆ ಸಲಹೆ ನೀಡಿದರು.

ಮಠಗಳಿಗೆ ಭಕ್ತರೇ ಆಸ್ತಿಯಾಗಿದ್ದು ಹಣಕ್ಕಿಂತ ಗುಣದಿಂದ, ದಾನಕ್ಕಿಂತ ದಾಸೋಹದಿಂದ ಮಠಗಳು ನಡೆಯಲಿದ್ದು ಸಮಾಜಕ್ಕೆ ಮಠಗಳು ನೀಡಿದ ಕೊಡುಗೆ ಅತ್ಯಂತ ಹಿರಿದಾಗಿದ್ದು ಪ್ರಸಾದ, ಅಕ್ಷರ, ಆಶ್ರಯ, ಔಷಧ ನೀಡುವುದರ ಮೂಲಕ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಮಠಗಳು ನಿರಂತರವಾಗಿ ಶ್ರಮಿಸುತ್ತಿವೆ ಎಂದು ಬಣ್ಣಿಸಿದರು. ತಮಗೆ ದೊರೆತ ಗೌರವ ಡಾಕ್ಟರೇಟ್ ಭಕ್ತರಿಗೆ ಸಲ್ಲಬೇಕಾಗಿದ್ದು ತಮ್ಮ ಎಲ್ಲ ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ಸಹಕಾರ ನೀಡುವ ಎಲ್ಲರನ್ನೂ ಶ್ರೀಗಳು ಸ್ಮರಿಸಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಶ್ರೀ ಬಸವರಾಜ ಮತ್ತುಮೂಡ ರವರು ಮಾತನಾಡಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮಠಾಧೀಶರ ಪಾತ್ರ ಪ್ರಮುಖವಾಗಿದ್ದು ತಮ್ಮ ವ್ಯಾಪ್ತಿಯ ಗ್ರಾಮೀಣ ಮತಕ್ಷೇತ್ರದಲ್ಲಿ ಅನೇಕ ಮಠಗಳ ಮಠಾಧೀಶರು ಹಗಲಿರುಳು ಧರ್ಮ ಪ್ರಸಾರದೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಜನತೆಗೆ ಸನ್ಮಾರ್ಗದರ್ಶನ ಮಾಡುತ್ತಿದ್ದಾರೆಂದು ನುಡಿದರು.

ನೇತೃತ್ವ ವಹಿಸಿ ಆಶೀರ್ವಚನ ನೀಡಿದ ಮಹಾಗಾಂವ ಕಳ್ಳಿಮಠದ ಪೂಜ್ಯ ಶ್ರೀ ಗುರುಲಿಂಗ ಶಿವಾಚಾರ್ಯರು ಭವಬಂಧನವ ಬಿಡಿಸಿ ಭಕ್ತಿ ಮೂಡಿಸಿ ಮನುಷ್ಯನನ್ನು ಮಹಾದೇವನನ್ನಾಗಿ ಮಾಡುವ ಶಕ್ತಿ ಗುರುವಿಗಿದೆ ಎಂದು ನುಡಿದರು. ಅಜ್ಞಾನದಿಂದ ಸುಜ್ಞಾನದೆಡೆ ಕೊಂಡೊಯ್ದು ಬಾಳಲ್ಲಿ ನೆಮ್ಮದಿ ತರಲು ಭಕ್ತಿ ಮಾರ್ಗದ ಅಗತ್ಯವಾಗಿದೆ ಎಂದು ಹೇಳಿದರು. ಮುತ್ಯಾನ ಬಬಲಾದ ವಿರಕ್ತ ಮಠದ ಪೂಜ್ಯ ಶ್ರೀ ಗುರುಪಾದಲಿಂಗ ಮಹಾಶಿವಯೋಗಿಗಳು ಸಾನಿಧ್ಯ ವಹಿಸಿದ್ದರು.

ಕಲಬುರಗಿ ಕೃಷಿ ವಿಜ್ಞಾನ ಮಹಾವಿದ್ಯಾಲಯದ ನಿವೃತ್ತ ವಿಜ್ಞಾನಿಗಳಾದ ರವೀಂದ್ರ ಗುಂಡಪ್ಪಗೋಳ ರವರನ್ನು ವಿಶೇಷವಾಗಿ ಸತ್ಕರಿಸಲಾಯಿತು. ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ಶಿವಪ್ರಭು ಪಾಟೀಲ, ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರಾದ ವೈಜನಾಥ ತಡಕಲ್ ಸಮಾರಂಭದಲ್ಲಿ ಮಾತನಾಡಿದರು. ವೇದಿಕೆಯ ಮೆಲೆ ನ್ಯಾಯವಾದಿಗಳಾದ ಶಿವಕುಮಾರ ಪಸಾರ, ಮುಖಂಡರಾದ ಮುರುಘೇಂದ್ರ ವೀರಶೆಟ್ಟಿ, ಕರಸಿದ್ದಪ್ಪ ಪಾಟೀಲ ಹರಸೂರ, ಸಿದ್ದು ಶೆಳ್ಳಗಿ, ರಮೇಶ ಸಾಹು, ಹಿರಿಯರಾದ ಭೀಮಾಶಂಕರ ಚಕ್ಕಿ, ಶೀಲವಂತಯ್ಯ ಮಲ್ಲೇದಮಠ, ಶಿವಶರಣಪ್ಪ ಚಿದ್ರಿ, ತಾಲೂಕಾ ಪಂಚಾಯತ ಸದಸ್ಯರಾದ ಶ್ರೀಮತಿ ಪಾರ್ವತಿ ಸಲಗರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಸೂರ್ಯಕಾಂತ ಡೋಣಿ ಸ್ವಾಗತಿಸಿದರು, ನಾಗಲಿಂಗಯ್ಯ ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಬುರಗಿ ತಾಲೂಕಾ ಪಂಚಯತ ಮಾಜಿ ಅಧ್ಯಕ್ಷರಾದ ಚನ್ನವೀರಪ್ಪ ಸಲಗರ ನಿರೂಪಿಸಿದರು.

ಸಮಾರಂಭದಲ್ಲಿ ಸಂಗಣ್ಣ ಚಿಲಶೆಟ್ಟಿ, ಉಮೇಶ ಚಿಕ್ಕನಾಗಾಂವ, ಅಣವೀರಪ್ಪ ಗೌಡಪ್ಪಗೋಳ, ಶಾಂತವೀರಯ್ಯ ಹಿರೇಮಠ, ಸಂತೋಷ ಆಡೆ, ಚಿಕ್ಕವೀರಪ್ಪ ಮಮ್ಮಾ, ಚನ್ನವೀರ ಹಿರೇಮಠ, ಶಿವಲಿಂಗಪ್ಪ ಮಮ್ಮಾ, ಜಗನ್ನಾಥ ಪಾಟೀಲ ಅವರಾದ, ಸಂಗಯ್ಯ ಸ್ವಾಮಿ ಹಿರೇಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಮೀಣ ಜನಪದ ಕಲಾ ತಂಡಗಳೊಂದಿಗೆ ಶ್ರೀನಿವಾಸ ಸರಡಗಿಯ ಪರಮಪೂಜ್ಯರ ಭವ್ಯ ಮೆರವಣಿಗೆ ಜರುಗಿತು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

12 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

12 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago