ಬಿಸಿ ಬಿಸಿ ಸುದ್ದಿ

ಪಿಂಚಣಿ ಅದಾಲತ್: 4 ಇತ್ಯರ್ಥ, 85 ಪ್ರಕರಣಗಳನ್ನು ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಲು ಡಿಸಿ ಆದೇಶ

ಕಲಬುರಗಿ: ರಾಜ್ಯ ಹಾಗೂ ಕೇಂದ್ರ ನಿವೃತ್ತಿ ನೌಕರರ ಪಿಂಚಣಿ ಸಮಸ್ಯೆಯನ್ನು ಬಗೆಹರಿಸಲು ಶುಕ್ರವಾರ ಇಲ್ಲಿ ನಡೆಸಲಾದ ಪಿಂಚಣಿ ಅದಾಲತ್‌ಗಳಲ್ಲಿ ಸಲ್ಲಿಕೆಯಾದ ೫೪ ಅರ್ಜಿಗಳ ಪೈಕಿ ೪ ಪ್ರಕರಣಗಳನ್ನು ಸ್ಥಳದಲ್ಲಿಯೆ ಇತ್ಯರ್ಥಪಡಿಸಿ ೪೫ ಪ್ರಕರಣಗಳಲ್ಲಿ ಒಂದು ವಾರದೊಳಗೆ ಪಿಂಚಣಿದಾರರ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರು ಬ್ಯಾಂಕ್ ಮತ್ತು ಖಜಾನಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.

ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆ ಇವರ ಸಹಯೋಗದಲ್ಲಿ ಕೇಂದ್ರ ಹಾಗೂ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಪಿಂಚಣಿ ಅದಾಲತ್ ಉದ್ಘಾಟಿಸಿದ ನಂತರ ನಡೆದ ಪಿಂಚಣಿದಾರರ ಅಹವಾಲು ಸ್ವೀಕರಿಸಿದ ಅವರು, ಅದಾಲತ್‌ನಲ್ಲಿ ಸಲ್ಲಿಕೆಯಾದ ಅರ್ಜಿಗಳಲ್ಲಿ ೫ ಅರ್ಜಿಗಳು ತಿರಸ್ಕೃತಗೊಂಡಿವೆ ಎಂದರು. ಕಲಬುರಗಿ ನಗರದ ಪ್ರಗತಿ ಕಾಲೋನಿ ನಿವಾಸಿ ಮಡಿವಾಳಪ್ಪ ಅವರು ಪರಿಷ್ಕೃತ ವೇತನ ಶ್ರೇಣಿಯಂತೆ ತಮಗೆ ಬ್ಯಾಂಕಿನಿಂದ ಪಿಂಚಣಿ ಪಾವತಿಸುತ್ತಿಲ್ಲ ಎಂದು ದೂರನ್ನು ಹೊತ್ತಿಕೊಂಡು ಬಂದಿದ್ದರು.

ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಜಿಲ್ಲಾಧಿಕಾರಿಗಳು ಒಂದು ವಾರದೊಳಗೆ ಪರಿಷ್ಕೃತ ವೇತನದನ್ವಯ ಪಿಂಚಣಿ ಪಾವತಿಸುವಂತೆ ಎಸ್.ಬಿ.ಐ. ಓಂ ನಗರ ಶಾಖೆಯ ವ್ಯವಸ್ಥಾಪಕರಿಗೆ ನಿರ್ದೇಶಿಸಿದರು. ಏಪ್ರಿಲ್ ಮತ್ತು ಮೇ-೨೦೧೯ ಮಾಹೆಯ ಪಿಂಚಣಿ ಹಣ ಇನ್ನು ಕೈಸೇರಿಲ್ಲ ಎಂಬ ನಗರದ ಟಿಪ್ಪು ಸಲ್ತಾನ ಚೌಕ್ ನಿವಾಸಿ ಸೈಯ್ಯದ ಯೂಸುಫ್ ಅಲಿ ಅವರ ಅರ್ಜಿಯನ್ನು ಸಹ ಇತ್ಯರ್ಥಗೊಳಿಸಿ ಒಂದು ವಾರ ಕಾಲಮಿತಿ ನೀಡಿ ತಡೆ ಹಿಡಿಯಲಾದ ಹಣ ಪಿಂಚಣಿದಾರರಿಗೆ ಪಾವತಿಸುವಂತೆ ಸಿಂಡಿಕೇಟ್ ಬ್ಯಾಂಕಿನ ಪ್ರಾದೇಶಿಕ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಳಂದ ತಾಲೂಕಿನ ವಿ.ಕೆ.ಸಲಗರ ಗ್ರಾಮದ ಮಲ್ಲಪ್ಪ ತಂದೆ ಪೀರಪ್ಪ ಅವರು ೧೫ ವರ್ಷ ಕಳೆದರು ಕಮುಟೇಷನ್ ರಿಕವರಿ ಹಣ ಕಡಿತ ಬ್ಯಾಂಕಿನಿಂದ ಮುಂದುವರೆದಿದೆ ಎಂದು ಡಿ.ಸಿ.ಯವರ ಗಮನಕ್ಕೆ ತಂದಾಗ ಕೆ.ಸಿ.ಎಸ್.ಆರ್. ೩೭೬ ನಿಯಮದನ್ವಯ ೧೫ ವರ್ಷಗಳ ನಂತರ ಕಡಿತವನ್ನು ನಿಲ್ಲಸಬೇಕಾಗುತ್ತದೆ. ಹೀಗಾಗಿ ಹೆಚ್ಚುವರಿ ಕಡಿತ ಮಾಡಲಾದ ಮೊತ್ತವನ್ನು ಪಿಂಚಣಿದಾರರಿಗೆ ಪಾವತಿಸುವಂತೆ ಎಸ್.ಬಿ.ಐ. ಆಳಂದ ವ್ಯವಸ್ಥಾಪಕರಿಗೆ ಆದೇಶಿಸಿದರು. ಆಳಂದ ನಿವಾಸಿ ವಿಮಲಾಬಾಯಿ ಪಂಡಿತ ಅವರಿಗೆ ದಿ.೦೧-೦೪-೨೦೧೮ ರಿಂದ ಜಾರಿಗೆ ಬರುವಂತೆ ಪರಿಷ್ಕೃತ ಪಿಂಚಣೆಯನ್ನು ಪಾವತಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಅದಾಲತ್‌ನಲ್ಲಿ ಬಹುತೇಕ ಪಿಂಚಣಿದಾರರು ತಮಗೆ ಸಕಾಲಕ್ಕೆ ಪಿಂಚಣಿ ಪಾವತಿಯಾಗುತ್ತಿಲ್ಲ, ಪಿಂಚಣಿಯಲ್ಲಿ ಅನಗತ್ಯ ಹಣ ಕಡಿತಗೊಳಿಸಲಾಗುತ್ತಿದೆ ಹಾಗೂ ೧೫ ವರ್ಷ ಕಳೆದರು ಕಮುಟೇಷನ್ ರಿಕವರಿ ಹಣ ನಿರಂತರ ಕಡಿತ ಮಾಡಲಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರು, ನಿವೃತ್ತಿ ನೌಕರರಿಗೆ ವಯಸ್ಸಾಗಿರುವ ಕಾರಣ ತಮ್ಮ ಪಿಂಚಣಿ ಸಮಸ್ಯೆಗಳಿಗೆ ಬ್ಯಾಂಕ್, ಕಚೇರಿವೆಂದು ಅಲೆದಾಡುವುದಷ್ಟು ಶಕ್ತರಾಗಿರುವುದಿಲ್ಲ. ಇದನ್ನು ಅರಿತು ಬ್ಯಾಂಕ್, ಖಜಾನೆ ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸಿ ಒಂದೇ ವೇದಿಕೆಯಲ್ಲಿ ಪಿಂಚಣಿ ಸಮಸ್ಯೆಗಳನ್ನು ಬಗೆಹರಿಸಲು ಇಂದು ರಾಷ್ಟ್ರಾದಾದ್ಯಂತ ಪಿಂಚಣಿ ಅದಾಲತ್ ನಡೆಸಲಾಗುತ್ತಿದೆ. ಬ್ಯಾಂಕ್, ಖಜಾನೆ ಅಧಿಕಾರಿಗಳು ಸ್ಥಳದಲ್ಲಿಯೆ ಇದ್ದು, ಪಿಂಚಣಿದಾರರ ಎಲ್ಲಾ ಸಮಸ್ಯೆಗಳಿಗೆ ಇಂದು ಇತ್ಯರ್ಥ ಪಡಿಸಲಾಗುವುದು ಎಂದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಡಾ.ಪಿ.ರಾಜಾ ಮಾತನಾಡಿ, ನಿವೃತ್ತ ನೌಕರರ ಪಿಂಚಣಿ ಸಮಸ್ಯೆಗಳನ್ನು ಅಧಿಕಾರಿಗಳು ಕಾಲಮಿತಿಯಲ್ಲಿ ಬಗೆಹರಿಸಿದಲ್ಲಿ ಹಿರಿಯ ಜೀವಿಗಳ ಅಲೆದಾಟವನ್ನು ತಡೆಯಬಹುದಾಗಿದೆ ಎಂದರು.

ಅದಾಲತ್‌ನಲ್ಲಿ ಲೀಡ್ ಬ್ಯಾಂಕ್ ಚೀಫ್ ಮ್ಯಾನೇಜರ್ ಸಿ.ಹೆಚ್.ಹವಾಲ್ದಾರ, ಜಿಲ್ಲಾ ಖಜಾನಾಧಿಕಾರಿಗಳಾದ ವಿರುಪಾಕ್ಷಪ್ಪ, ದತ್ತಪ್ಪ ಗೊಬ್ಬೂರ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆಯ ಸಹಾಯಕ ನಿರ್ದೇಶಕ ಎ.ಬಿ.ಭಜಂತ್ರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಪಿಂಚಣಿದಾರರು ಭಾಗವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago