ಬಿಸಿ ಬಿಸಿ ಸುದ್ದಿ

ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡಲು ಕರೆ

ಕಲಬುರಗಿ: ನಗರದ ಶ್ರೀಮತಿ ಕಸ್ತೂರಬಾಯಿ ವಿಠ್ಠಲರಾವ ಪಾಟೀಲ ದಣ್ಣೂರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕೆ.ವಿ.ಪಿ.ದಣ್ಣೂರಪಿ.ಯು. ಕಾಲೇಜು, ಗುರುಜಿ ಪದವಿ ಮಹಾವಿದ್ಯಾಲಯ, ಅಜೋದ್ಯಾಬಾಯಿ, ಕಿ.ಪ್ರಾ.ಶಾಲೆ ಮತ್ತು ಭಾರತ ಸರ್ಕಾರದ ಕೇಂದ್ರ ಸಂವಹನ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛತಯೇ ಸೇವೆ, ಪ್ಲಾಸ್ಟಿಕ್ ಮುಕ್ತ ಪರಿಸರ ಹಾಗೂ ರಾಷ್ಟ್ರೀಯ ಪೆÇೀಷಣ ಮಾಸ ಕುರಿತು ವಿಶೇಷ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಸದಸ್ಯ ಕೃಷ್ಣ ನಾಯಕ ಉದ್ಘಾಟಿಸಿದರು.

ಕೆ.ವಿ. ಪಿ.ಮತ್ತು ಗುರೂಜಿ ಪದವಿ ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಕಲ್ಯಾಣರಾವ ಶೀಲವಂತ ಇವರು ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಸುತ್ತಲಿನ ಪರಿಸರ ಸ್ವಚ್ಛತೆ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ ಹಾಗೆಯೇ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವ ಕರ್ತವ್ಯ ನಮ್ಮದಾಗಿದೆ ಎಂದರು.

ಕಾರ್ಯಕ್ರಮವನ್ನು ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಸೂರ್ಯಕಾಂತಿ ಮಾತನಾಡುತ್ತಾ ಪ್ಲಾಸ್ಟಿಕ್ ಬಳಕೆಯಅನಾಹುತಗಳು ಮತ್ತು ಅದರಿಂದ ಪಾರಾಗುವದಾರಿಗಳು ಅಲ್ಲದೆ ಅಪೌಷ್ಟಿಕತೆಯಿಂದ ಆಗುತ್ತಿರುವ ತೊಂದರೆಗಳು ಕುರಿತು ಸವಿವರವಾದ ವಿಷಯ ಮಂಡನೆ ಮಾಡಿದರು.

ಕೆ.ವಿ.ಪಿಕಾಲೇಜಿನ ಪ್ರಚಾರ್ಯ ಎಸ್.ಎಸ್. ಪಾಟೀಲ ಮಾತನಾಡಿ ಅರಿವು ಆಚಾರ ಅನುಭಾವ ಅಳವಡದೆಯಾವುದೇಕಾರ್ಯ ಫಲಿಸದು ಸ್ವಚ್ಛತೆ ಬಗ್ಗೆ ನಮಗೆ ಅರಿವು ಇದೆ ಆದರೆ ಅದನ್ನು ನಾವು ಆಚರಿಸಲಾರೆವು. ತಿಳಿದವರೇ ಎಲ್ಲೆಂದರಲ್ಲಿ ಕಸ ಹಾಕುವ, ಎಲ್ಲೆಂದರಲ್ಲಿ ಉಗುಳುವ, ಮೂತ್ರ ವಿಸರ್ಜನೆ ಮಾಡುವಲ್ಲಿ ಎಲ್ಲಿ ಆಚಾರ ಇದೆ ಎಂದರು.

ಪಾಲಿಕೆ ಅಧಿಕಾರಿ ತುಕ್ಕಾ ರೆಡ್ಡಿ ಯವರು ಒಣ ಕಸ, ಹಸಿಕಸ, ಜೈವಿಕಕಸ ಇವುಗಳ ವಿಲೇವಾರಿ ಕುರಿತು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಪರಿಸರ ಅಭಿಯಂತ ಬಾಬುರಾವ ಮೇಲಿನಕೇರಿ, ಶರಣಪ್ಪ ಶೀಲವಂತ, ಮುಖ್ಯೋಪಾಧ್ಯಾಯನಿ ಸುಲೋಚನಾ ಜೋಳದ, ಸಂವಹನ ಇಲಾಖೆಯ ಸಹಾಯಕಅಧಿಕಾರಿ ನಾಗಪ್ಪ ಅಂಬಾಗೋಳ ಇದ್ದರು.

ಉಪನ್ಯಾಸಕಿ ಶ್ವೇತಾಶಟ್ಟಿ ನಿರೂಪಿಸಿದರು, ಶಿಲ್ಪಾ ಸ್ವಾಗತಿಸಿದರು, ಮತ್ತು ಜ್ಯೋತಿ ಶೀಲವಂತ ವಂದಿಸಿದರು, ಕಾಶಿನಾಥ ಬಿರಾದಾರ ವಿಶ್ವಜ್ಯೋತಿ ಕಲಾತಂಡ ಮತ್ತು ದತ್ತರಾಜ ಕೆ.ಕಲಶೆಟ್ಟಿ ಕಲಾ ತಂಡದವರಿಂದ ಪರಿಸರ ಕುರಿತು ಹಾಡು, ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಾಥಮಿಕ ಶಾಲೆಯ ಕೆ.ವಿ.ಪಿ ಕಾಲೇಜಿನ ವಿದ್ಯಾರ್ಥಿಗಳು, ಪಾಲಕರು ಓಣಿಯನಾಗರಿಕರು ಭಾಗವಹಿಸಿದ್ದರು.

emedialine

Recent Posts

ಜೇವರ್ಗಿ: ಲಂಚಾಪಡೆಯುತ್ತಿದ್ದಾಗ ಮಹಿಳಾ ಸಿಬ್ಬಂದಿ ಲೋಕಾಯುಕ್ತರ ಬಲೆಗೆ

ಕಲಬುರಗಿ: ನೀರಿನ ಕನೆಕ್ಷನಗಾಗಿ ಹತ್ತು ಸಾವಿರ ಲಂಚಾಪಡೆಯುತ್ತಿದ್ದಾಗ ಜೇವರ್ಗಿ ಪುರಸಭೆಯ ಮಹಿಳಾ ಸಿಬ್ಬಂದಿ ಲಣೊಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ…

12 hours ago

371 ಜೆ ಅಡಿ ಉದ್ಯೋಗ ನೇಮಕಾತಿ ಸಂಬಂಧದ ಗೊಂದಲ ನಿವಾರಿಸಿ ಮಾರ್ಗಸೂಚಿ ಸಿದ್ಧಪಡಿಸಲು ಸಚಿವರ ಸೂಚನೆ

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 ಜೆ ಅಡಿ ಉದ್ಯೋಗ ನೇಮಕಾತಿ ಹಾಗೂ ಬಡ್ತಿ ಸಂಬಂಧದಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಿ…

13 hours ago

ಶ್ಯಾಮರಾವ ನಾಟಿಕಾರಗೆ ಅಧ್ಯಕ್ಷರನ್ನಾಗಿ ನೇಮಕಕ್ಕೆ ಡಾ. ಮಲ್ಲಿಕಾರ್ಜುನ ಖರ್ಗೆಗೆ ಮನವಿ

ಕಲಬುರಗಿ: ಆದಿಜಾಂಬವ ಸರ್ಕಾರಿ ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನಿಯೋಗ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ…

14 hours ago

ಚಿರಂಜೀವಿ ವೆಂಕಯ್ಯ ಕುಶಾಲ್ ಗುತ್ತೇದಾರ್ ಗೆ ಸನ್ಮಾನ

ಕಲಬುರಗಿ: ಮಾಜಿ ಸಚಿವರಾದ ಮಾಲಿಕೆಯ್ಯಾ ಗುತ್ತೇದಾರ್ ಅವರ ಅಪ್ಪಟ ಅಭಿಮಾನಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ…

14 hours ago

ಮಹಿಳಾ ಘಟಕದ ನೂತನ ಪದಾಧಿಕಾರಿಗಳ ನೇಮಕ

ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಗೌಡ ಮಾಲಿಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾ…

14 hours ago

ಮಜರ್ ಆಲಂ ಖಾನ್ ಅಧ್ಯಕತೆಯಲ್ಲಿ ನಗರದ ವಿನ್ಯಾಸ ಮಾಲೀಕರು, ಡೆವಲಪರ್ಸ್, ಬಿಲ್ಡರ್ಸ್ ಅವರೊಂದಿಗೆ ಸಭೆ

ಕಲಬುರಗಿ: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್ ಇವರ ಅಧ್ಯಕ್ಷತೆಯಲ್ಲಿ ನಗರದ ಬಿಲ್ಡರ್ಸ್ ಡೆವಲಪರ್ಸ್ ಮತ್ತು ವಿನ್ಯಾಸದ ಮಾಲೀಕರವರೊಂದಿಗೆ…

14 hours ago