ಕಲಬುರಗಿ; ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ಚೌಕನಲ್ಲಿ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಬೆಂಗಳೂರು .ಜಿಲ್ಲಾಡಳಿತ, ಜಿಲ್ಲಾ ಪಂಚಾಯತ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯ ಕಲಬುರಗಿ. ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಕಲಬುರಗಿ ಇವರಗಳ ಹಾಗೂ ಮಣ್ಣೂರ ಮಲ್ಟಿ ಸ್ಪೆಷಲಿಟಿ ಹಾಸ್ಪಿಟಲ್ ಕಲಬುರಗಿ. ಸಹಯೋಗದೊಂದಿಗೆ
ಹಾಗೂ ಕಲಬುರಗಿ ವಿಶ್ವವಿದ್ಯಾಲಯ ಎನ್ ಎಸ್ ಎಸ್ ಕೋಶ ವಿಭಾಗದ ಎಲ್ಲಾ ಕಾಲೇಜು ಘಟಕಗಳು. ವಿವಿಧ ಸಂಘಟನೆಗಳು ಆಶ್ರಯದಲ್ಲಿ ಹೆಚ್ ಐ ವಿ / ಏಡ್ಸ್ ಜಾಗೃತಿಗಾಗಿ 5 ಕಿ. ಮೀ. ಮ್ಯಾರಥಾನ್ ರೆಡ್ ರಿಬ್ಬನ್ ಓಟ, ಯುವ ಜನೋತ್ಸವ 2023 ರ ಅಂಗವಾಗಿ ಏರ್ಪಡಿಸಿದ್ದ ಜಿಲ್ಲಾ ಮ್ಯಾರಥಾನ್ ವಿಭಾಗೀಯ ಸಹ ನಿರ್ದೇಶಕರು, ಜಂಟಿ ನಿರ್ದೇಶಕರ ಕಾರ್ಯಾಲಯ ವಿಭಾಗ ಡಾ. ಶಂಕ್ರಪ್ಪ ಮೈಲಾರಿ ಅವರು ಹಸಿರು ಬಾವುಟ ಪ್ರದರ್ಶಿಸುವುದರ ಮೂಲಕ ಚಾಲನೆ ನೀಡಿ. ಅವರು ಮಾತನಾಡುತ್ತಾ ಮ್ಯಾರಥಾನ್ ಓಟ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಉತ್ತಮವಾಗಿದ್ದು ಏಡ್ಸ್ ಎಂಬುದು ಮಾರಣಾಂತಿಕವಾದ ಕಾಯಿಲೆ ಅಗಿದ್ದು ಇದಕ್ಕೆ ಚಿಕಿತ್ಸೆ ಮೂಲಕ ಗುಣಪಡಿಸುವುದು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದೆ ಹೊದರೆ ಅಪಾಯ ಎದುರಿಸಬಹುದಗಿದೆ ಈ ಕಾಯಿಲೆಗೆ ಯಾರು ಒಳಾಗಗದೆ ಸಿಕ್ಕಿ ಹಾಕೊಕೊಳ್ಳದೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಏಡ್ಸ್ ನಿಂದ ನರಳುವ ಜನರಿದ್ದರು ಕೂಡ ಅವರಿಗೆ ಕಾನೂನು ಬದ್ದವಾಗಿ ಚಿಕಿತ್ಸೆ ಕೊಡಬೇಕಾಗುತ್ತದೆ ಹೆಚ್ ಐ ವಿ ಇಂದ ಬಳಲುತ್ತಿದ್ದರೆ ಎನ್ನುವ ಒಂದೇ ಕಾರಣದಿಂದ ತಾರತಮ್ಯ ಮಾಡಿದರೆ, ಕಾನೂನು ಪ್ರಕಾರ ತಪ್ಪಾಗುತ್ತದೆ. ಅವರಾವರ ಹಕ್ಕುಗಳನ್ನು ಗೌರವಿಸಬೇಕಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ಉಪ ನಿರ್ದೇಶಕರು ವಿಭಾಗೀಯ ಜಂಟಿ ನಿರ್ದೇಶಕರ ಕಾರ್ಯಾಲಯ ಡಾ. ಶರಣಬಸಪ್ಪ ಗಣಜಲಖೇಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಶೇಖರ ಮಾಲೀ, ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ಅಧಿಕಾರಿಗಳು ಡಾ. ಚಂದ್ರಕಾಂತ ನರಬೋಳಿ ಅವರು ವೇದಿಕೆಯಲ್ಲಿ ಸ್ವಾಗತಿಸಿ ಮಾತನಾಡಿದರು.
ಮಣ್ಣೂರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಚೀಪ್ ಅಡ್ವೈಸರ್ ಮೊಬಿನ್ ಅಹಮದ್. ಗುವಿಕ ಎನ್ ಎಸ್ ಎಸ್ ಸಂಯೋಜನ ಅಧಿಕಾರಿಗಳು ಎನ್ ಜಿ ಕಣ್ಣೂರು. ಜಿಲ್ಲಾ ಡಿ ಅರ್ ಟಿಬಿ ಸಮಾಲೋಚಕ ಮಂಜುನಾಥ ಕಂಬಾಳಿಮಠ. ಎಸ್ ಟಿಎಸ್ ಡಾ. ವಿಶಾಲ್ ಸಜ್ಜನ್, ಡಾ. ಗಿರೀಶ್ ಜಂಗೆ. ಮಣ್ಣೂರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಹೆಚ್ ಆರ್. ಶೋಭ ಮಠಪತಿ, ಅಡ್ಮಿನ್ ಅಮೀನ್ ಜೂಬೀನ್. ಡ್ಯಾಪ್ಕೋ ಅಕೌಂಟ್ ಅರ್ಚನಾ ಅಣವೇಕರ್, ಡಿಇಓ ದಿನೇಶ, ಹಿರಿಯ ಕ್ಷಯ ನಿರೀಕ್ಷಣಾಧಿಕಾರಿಗಳಾದ ರಾಜಶೇಖರ ಕುರಕೋಟಿ. ಗುಂಡಪ್ಪ ದೊಡ್ಡಮನಿ. ಜಿಲ್ಲಾ ಪಿಪಿ ಎಂ ಸಂಯೋಜಕ ಶಶಿಧರ ಕಮಲಪುರ. ಬೆಂಜಮಿನ್.
ಎ ಅರ್ ಟಿ ಸಮಾಲೋಚಕ ಮಲ್ಲಿಕಾರ್ಜುನ ಬಿರಾದಾರ ನಿರೂಪಿಸಿ / ವಂದಿಸಿದರು . ಡ್ಯಾಪ್ಕೋ ಸಿಬ್ಬಂದಿ ಹಾಗೂ ಎನ್ ಟಿ ಇ ಪಿ. ಸಿಬ್ಬಂದಿ ವರ್ಗದವರು ಗುವಿಕ ದೈಹಿಕ ಶಿಕ್ಷಣ ಇಲಾಖೆಯ ಸಿಬ್ಬಂದಿ ವರ್ಗದವರು, ಜಿಲ್ಲಾ ಮಟ್ಟ ಹಾಗೂ ತಾಲ್ಲೂಕು ಮಟ್ಟದ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಎನ್ . ಎಸ್ ಅಧಿಕಾರಿಗಳು ಇತರರು ಭಾಗವಹಿಸಿದ್ದರು .
ಹೆಚ್ ಐ ವಿ / ಏಡ್ಸ್ ನಿಯಂತ್ರಣಕಾಗಿ 5 ಕಿ. ಮೀ ಮ್ಯಾರಥಾನ್ ಓಟ ಸ್ಪರ್ಧೆ ವಿದ್ಯಾರ್ಥಿಗಳು ಗಂಡುಮಕ್ಕಳು; ಭೀಮಾಶಂಕರ ಶರಣಬಸಪ್ಪ ಸರ್ಕಾರಿ ಪದವಿ ಕಾಲೇಜು ಜೇವರ್ಗಿ.5000 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ, ಮಹೇಶ್ ಭೀಮು ರಾಠೋಡ ಸರ್ಕಾರಿ ಪದವಿ ಕಾಲೇಜು ಕಮಲಪುರ. 3500 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ , ರಾಕೇಶ್ ಮಹಾಂತೇಶ ಸರ್ಕಾರಿ ಪದವಿ ಕಾಲೇಜು ಕಮಲಪುರ. 2500 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ .
ವಿದ್ಯಾರ್ಥಿನಿಯರು ಹೆಣ್ಣು ಮಕ್ಕಳು; ರಾಣಿ ಟೋಪು ಸರ್ಕಾರಿ ಪದವಿ ಕಾಲೇಜು ಕಮಲಪುರ.5000 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ, ಅಸ್ಮೀತಾ ಸಂತೋಷ ಸರ್ಕಾರಿ ಪದವಿ ಕಾಲೇಜು ಕಲಬುರಗಿ. 3500 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ, ರೇಣುಕಾ ಅಮೃತ ಸರ್ಕಾರಿ ಪದವಿ ಕಾಲೇಜು ಕಮಲಪುರ . 2500 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ, ಸಮಾಧಾನಕರ ಬಹುಮಾನ 1000 ರ ನಗದು ರೂಪದಲ್ಲಿ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ವಿಶೇಷವಾಗಿ ಮಣ್ಣೂರ ಮಲ್ಟಿ ಸ್ಪೆಷಲಿಸ್ಟ್ ಹಾಸ್ಪಿಟಲ್ ಅವರು ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಟೀ ಶಾರ್ಟ್ ಮತ್ತು ಉಪ ಆಹಾರದ ವ್ಯವಸ್ಥೆ ಮಾಡಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…