ಬಿಸಿ ಬಿಸಿ ಸುದ್ದಿ

ಗ್ರಾಮ ಸ್ವಚ್ಛತೆ ಕಾಪಾಡುವ ಸ್ವಚ್ಛತಾಗಾರರ ಸುರಕ್ಷತೆ, ಘನತೆಗಾಗಿ ತರಬೇತಿ

ಕಲಬುರಗಿ; ಗ್ರಾಮಗಳಲ್ಲಿ ಕಾರ್ಯನಿರ್ವಹಿಸುವ ಸ್ವಚ್ಛತಾಗಾರರ ಕಾರ್ಯವು ಅಷ್ಟೆ ಸುರಕ್ಷತೆಯಿಂದ ಕೂಡಿರ ಬೇಕಾದರೆ ಅವರಿಗೆ ಸುರಕ್ಷತೆಯ ಕುರಿತು ಮಾಹಿತಿ ಮತ್ತು ಅವರ ರಕ್ಷಣೆಗಾಗಿ ಸಾಮಾಗ್ರಿ/ಉಪಕರಣಗಳು ಬೇಕಾಗುತ್ತವೆ. ಈ ನಿಟ್ಟಿನಲ್ಲಿ ಗ್ರಾಮವಾರು ಅರಿವು ಮೂಡಿಸುವ ನಿಟ್ಟಿನಲ್ಲಿ, ಕರ್ನಾಟಕ ಸರಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ವಚ್ಛ ಭಾರತ ಮಿಷನ್, ಯುನಿಸೆಫ್, ಸಂಜೀವಿನಿ ಕೆಎಸ್‍ಆರ್‍ಎಲ್‍ಪಿಎಸ್, ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು, ರವರ ಸಹಯೋಗದಲ್ಲಿ ಮಹತ್ವದ ನಿರ್ಣಯ ಕೈಗೊಂಡು ಪ್ರಪಥಮ ಬಾರಿಗೆ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಪ್ರತಿನಿಧಿಗಳಿಗೆ 3 ಹಂತದಲ್ಲಿ ಸ್ವಚ್ಛತಾಗಾರರ ಸುರಕ್ಷತೆ ಹಾಗೂ ಘನತೆಗಾಗಿ ತರಬೇತುದಾರರ ತರಬೇತಿಯನ್ನು ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಪ್ರಾದೇಶಿಕ ಕೇಂದ ಕಲಬುರಗಿಯಲ್ಲಿ ಆಯೋಜಿಸಿತು.

ಈ ತರಬೇತಿದಾರರ ತರಬೇತಿಯಲ್ಲಿ ಬೀದರ್, ಕಲಬುರಗಿ, ರಾಯಚೂರ, ಯಾದಗೀರಿ, ಬಳ್ಳಾರಿ, ಕೊಪ್ಪಳ, ಮತ್ತು ವಿಜಯನಗರ ಜಿಲ್ಲೆಗಳಿಂದ ಭಾಗವಹಿಸಿದ ಆಯ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಎನ್.ಆರ್.ಎಲ್.ಎಂ. ವಲಯ ಮೇಲ್ವಿಚಾರಕರು, ಸ್ವಚ್ಛಭಾರತ ಮಿಷನ್ ಎಸ್‍ಎಚ್‍ಪಿ ಸಮಾಲೋಚಕರು, ಜಿಲ್ಲಾ ತರಬೇತಿ ಕೇಂದ್ರದ ಬೋಧಕರನ್ನೊಳಗೊಂಡಂತೆ 136 ಪ್ರತಿನಿಧಿಗಳಿಗೆ ಮಾಸ್ಟರ್ ತರಬೇತುದಾರರನ್ನು ತರಬೇತಿ ನೀಡಿ ಮಾಸ್ಟರ್ ತರಬೇತುದಾರರನ್ನಾಗಿ ಮಾಡಲಾಗಿದೆ. ಮೊದಲ ತರಬೇತಿಯು ಆಗಸ್ಟ್ 21 ರಿಂದ 23 ರವರೆಗೆ, ಎರಡನೇ ತರಬೇತಿ ಆಗಸ್ಟ್ 31 ರಿಂದ ಸೆಪ್ಟಂಬರ್ 2, ಹಾಗೂ ಮೂರನೇ ತರಬೇತಿಯು ಸೆಪ್ಟಂಬರ್ 6 ರಿಂದ 8 ರವರೆಗೆ ಜರುಗಿತು.

ಮೊದಲನೇ ಹಂತದ ತರಬೇತಿಯಲ್ಲಿ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರಾದ ಶ್ರೀಮತಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ರವರು ವಚ್ರ್ಯುವಲ್ ಮೂಲಕ ತರಬೇತಿಯನ್ನು ಉದ್ಘಾಟಿಸಿ ತರಬೇತಿ ಆಯೋಜನೆಯ ಮುಖ್ಯ ಗುರಿ-ಉದ್ದೇಶ ಮಹತ್ವಗಳನ್ನು ಕುರಿತು ತಿಳಿಸಿದರು. ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಕಲಬುರಗಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಜಗದೇವಪ್ಪ ಕಲಬುರಗಿ ಜಿಲ್ಲೆಗೆ ಇದು ಮಹತ್ವವಾದ ತರಬೇತಿಯಾಗಿದ್ದು, ಇದರಿಂದ ಇನ್ನಷ್ಟು ನೈರ್ಮಲ್ಯದ ಅಭಿವೃದ್ಧಿ ಕಾರ್ಯ ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಕಲಬುರಗಿ ಪ್ರಾದೇಶಿಕ ಕೇಂದ್ರದ ಉಪನಿರ್ದೇಶಕರಾದ ನಾಹೀದ್ ಅಂಜುಮ್ ರವರು ಎಸ್.ಐ.ಆರ್.ಡಿ. ತರಬೇತಿ ಕೇಂದ್ರದ ವತಿಯಿಂದ ಮಾನ್ಯ ನಿರ್ದೇಶಕರಾದ ಲಕ್ಷ್ಮೀ ಪ್ರಿಯಾ ರವರ ನೇತೃತ್ವದಲ್ಲಿ ಸಾಕಷ್ಟು ತರಬೇತಿಗಳು ಗ್ರಾಮ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಆಯೋಜನೆಯಾಗುತ್ತಿದ್ದು, ಈ ನೈರ್ಮಲ್ಯ ತರಬೇತಿಯು ನಮ್ಮ ತರಬೇತಿ ಕೇಂದ್ರದಲ್ಲಿ ಆಯೋಜನೆಗೊಂಡಿರುವುದು ತುಂಬಾ ಸಂತೋಷದಾಯಕ ವಿಷಯವೆಂದರು.

ಎರಡನೇ ಹಂತದ ತರಬೇತಿಯನ್ನು ಕಲಬುರಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭಂವರಸಿಂಗ ಮೀನಾ ರವರು ಉದ್ಘಾಟಿಸಿ ಮಾತನಾಡುತ್ತ ಗ್ರಾಮಗಳಲ್ಲಿ ಮನೆ-ಮನೆ ಕಸವನ್ನು ವಿಂಗಡಿಸಿ ಸ್ವಚ್ಛ ವಾಹಿನಿಗೆ ನೀಡಿದಲ್ಲಿ ಗ್ರಾಮವು ಸಂಪೂರ್ಣ ಸ್ವಚ್ಛತೆಯಿಂದ ಕೂಡಿರುತ್ತದೆ ಎಂದರು. ಇದೇ ಸಂದರ್ಭದಲ್ಲಿ ಯುನಿಸೆಫ್ ಬೆಂಬಲಿತ ಕರ್ನಾಟಕ, ತೆಲಂಗಾಣ, ಉಸ್ತುವಾರಿ ಮುಖ್ಯಸ್ಥರಾದ ಪ್ರಭಾತ್ ಮಟ್‍ಪಾಡಿ ರವರು ಮಾತನಾಡುತ್ತ ತರಬೇತಿ ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬ ಮಾಸ್ಟರ್ ಟ್ರೈನರ್ ರವರು ತಾಲೂಕು ಮಟ್ಟದಲ್ಲಿ ಉತ್ತಮ ತರಬೇತಿ ಮಾಡಿದಾಗ ಮಾತ್ರ ತರಬೇತಿಯ ಯಶಸ್ಸು ಕಾಣಬಹುದು ಎಂದರು.

ತರಬೇತಿಯ ಅಧಿವೇಶನದ ಸಂಪನ್ಮೂಲ ವ್ಯಕ್ತಿಗಳಾಗಿ ಎಸ್‍ಐಆರ್‍ಡಿ. ಮೈಸೂರಿನ ಬೋಧಕರಾದ ಪ್ರಕಾಶ ಎಸ್.ಎಚ್., ಸಂಜೀವಿನಿ ಕೆಎಸ್‍ಆರ್‍ಎಲ್‍ಪಿಎಸ್ ರಾಜ್ಯ ತರಬೇತಿ ಮತ್ತು ಕಾರ್ಯಕ್ರಮ ವ್ಯವಸ್ಥಾಪಕರಾದ ಗಿರೀಶ್ ಕುಮಾರ ಆರ್.ಸಿ., ಯುನಿಸೇಪ್ ಬೆಂಬಲಿತ ಸಮಾಲೋಚಕರಾದ ದಿಲೀಪ್ ಸಿ.ಎಸ್., ಚಂದ್ರಕಾಂತ್ ಹಿರೇಮಠ್, ಗೋವಿಂದರಾಜಲು, ಶ್ರಾವ್ಯ ರತ್ನ, ರವರುಗಳು ಅಧಿವೇಶನ ನಡೆಸಿಕೊಟ್ಟರು.

ಮೂರು ದಿನದ ತರಬೇತಿಯ ಅಧಿವೇಶನದಲ್ಲಿ 17 ಅಧಿವೇಶನ ಅಳವಡಿಸಲಾಗಿತ್ತು. ಮೊದಲ ದಿನದ ಅಧಿವೇಶನದಲ್ಲಿ ನೈರ್ಮಲ್ಯ ಕಾರ್ಮಿಕರ ಸ್ಥಿತಿ ಗತಿಗಳ ಅವಲೋಕನ, ನೈರ್ಮಲ್ಯ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳು, ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಸುತ್ತಲಿನ ಕಾನೂನು ನಿಬಂಧನೆಗಳು,ಪಿಇಎಂಎಸ್‍ಆರ್ (PಇಒSಖ)ಕಾಯಿದೆ 2013, ಮತ್ತು ಕನಿಷ್ಠ ವೇತನಕಾಯಿದೆ 1948 ಹಾಗೂ ಚರಂಡಿಗಳ ಶುಚಿಗೊಳಿಸುವಿಕೆ ಕೆಲಸದ ಸ್ಥಳದಲ್ಲಿ ಆರೋಗ್ಯ ಮತ್ತು ಸುರಕ್ಷತೆ PPಇ (ಪಿಪಿಇ), ಸುರಕ್ಷತಾ ಸಾಧನಗಳು ಮತ್ತು ಉಪಕರಣಗಳು ಬಳಕೆ ಮಾಡುವುದು. ಗ್ರಾಮೀಣ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣೆ , ತ್ಯಾಜ್ಯದ ವಿಧಗಳು,ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ ಹಾಗೂ ಸಂಸ್ಕರಣೆ ಮತ್ತು ವಿಲೇವಾರಿ ಮಾಡುವ ವಿಧಾನವನ್ನು ತಿಳಿಸಲಾಯಿತು.

ಎರಡನೇ ದಿನದಂದು ಕ್ಷೇತ್ರ ಭೇಟಿಯನ್ನು ತಾಜ್ ಸುಲ್ತಾನಪುರು ಗ್ರಾಮ ಪಂಚಾಯತಿ ಮಲ ಸಂಸ್ಕರಣಾ (ಎಫ್.ಎಸ್.ಎಂ.) ಘಟಕದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ ಸ್ವಚ್ಛ ಭಾರತ ಮಿಷನ್ ಘನ, ದ್ರವ ತ್ಯಾಜ್ಯ ನಿರ್ವಹಣಾ ಸಂಯೋಜಕರಾದ ಭಾಗಪ್ಪ ಎಂ .ಮತ್ತು ಪÀಂಚಾಯತ್ ಆಬಿವೃದ್ಧಿ ಆಧಿಕಾರಿಗಳಾದ ಶ್ರೀಮತಿ ಅನುಪಮಾ ರವರು ಮಲ ಸಂಸ್ಕರಣಾ ಘಟಕದ ಕಾರ್ಯ ವೈಖರಿಯನ್ನು ಶಿಬಿರಾರ್ಥಿಗಳಿಗೆ ವಿವರಿಸಿದರು. ತದನಂತರ ಅವರಾದ ಗ್ರಾಮ ಪಂಚಾಯತಿಯ ಸ್ವಚ್ಛ ಸಂಕಿರ್ಣ ಘಟಕಕ್ಕೆ (Àಘನತ್ಯಾಜ್ಯ ನಿರ್ವಹಣಾ ಘಟಕ) ಭೇಟಿ ನೀಡಲಾಯಿತು.

ಈ ಸಂದರ್ಭದಲ್ಲಿ ಎಸ್.ಬಿ.ಎಂ. ನೈರ್ಮಲ್ಯ ಮತ್ತು ಸ್ವಚ್ಛತೆ ಸಮಾಲೋಚಕರಾದ ಮಲ್ಲಿಕಾರ್ಜುನ ಕುಂಬಾರ ಹಾಗೂ ಪಂಚಾಯತ್ ಆಬಿವೃದ್ಧಿ ಆಧಿಕಾರಿಗಳಾದ ಬಂಡೆಪ್ಪ ಧನ್ನಿ ರವರು ಘನ ತಾಜ್ಯ ನಿರ್ವಹಣಾ ಘಟಕದ ಕಾರ್ಯ ವಿಧಾನವನ್ನು ತಿಳಿಸಿದರು. ಶಿಬಿರಾರ್ಥಿಗಳು ಸಹ ನೈರ್ಮಲ್ಯ ಸ್ವಚ್ಛಗ್ರಹಿಗಳೊಂದಿಗೆ ಸಂವಾದ ಮಾಡುವ ಮೂಲಕ ವಿಷಯವನ್ನು ಅರಿತುಕೊಂಡರು ಮತ್ತು ನೈರ್ಮಲ್ಯ ಚಟುವಟಿಕೆಗಳ ಪ್ರಾಯೋಗಿಕ ಪ್ರದರ್ಶನ ವೀಕ್ಷಿಸಿ, ಪುನ: ತರಬೇತಿ ಕೇಂದ್ರಕ್ಕೆ ಮರಳಿ ಬಂದು ಅಧಿವೇಶನದಲ್ಲಿ ಭಾಗವಹಿಸಿದರು. ಮಧ್ಯಾಹ್ನದ ಅಧಿವೇಶನದಲ್ಲಿ (ಮೃದು) ಕೌಶಲ್ಯಗಳು, ವಾಕ್ ಸಾಮಥ್ರ್ಯ, ಡಿಜಿಟಲ್ ಸಾಕ್ಷರತೆ, ಹಣಕಾಸಿನ ಸಾಕ್ಷಾರತೆ ಕುರಿತು ತಿಳಿಸಲಾಯಿತು. ನಂತರದ ಅಧಿವೇಶನದಲ್ಲಿ ನೈರ್ಮಲ್ಯ ಕೆಲಸದಲ್ಲಿ ಉದ್ಯಮಶೀಲತೆಯ ಪರಿಕಲ್ಪನೆ, ಅವಕಾಶಗಳು ಕುರಿತು ವಿವರಿಸಲಾಯಿತು.

ಮೂರನೇ ದಿನದ ಅಧಿವೇಶನದಲ್ಲಿ ನೈರ್ಮಲ್ಯ ಸ್ವಚ್ಛತಾಗಾರರ ಹಕ್ಕುಗಳು ಮತ್ತು ಅವಕಾಶಗಳು ನೈರ್ಮಲ್ಯ ಕಾರ್ಯಕರ್ತರು ಮತ್ತು ಅವರ ಕುಟುಂಬದ ಆರೋಗ್ಯ ಸಂರಕ್ಷಣೆ ಕುರಿತು ತಿಳಿಸಲಾಯಿತು. ನಂತರ ತಾಲೂಕು ಮಟ್ಟದಲ್ಲಿ ಒಂದು ದಿನದ ತರಬೇತಿ ಕ್ರಿಯಾಯೋಜನೆ ತಯಾರಿಸಲಾಯಿತು. ತರಬೇತಿಗಳ ಕುರಿತು ಶಿಬಿರಾರ್ಥಿಗಳಿಂದ ಪ್ರತಿಕ್ರಿಯೆ ಸಂಗ್ರಹಣೆ ಮಾಡಿ ತರಬೇತಿ ಮುಕ್ತಾಯ ಗೊಳಿಸಿಲಾಯಿತು. 3 ಹಂತದ ತರಬೇತಿ ಜರಗುವಿಕೆಗೆ ಕಲಬುರಗಿ ಎಸ್‍ಐಆರ್‍ಡಿ ಉಪನಿರ್ದೇಶಕರು, ಬೋಧಕರಾದ ಶಿವಪುತ್ರ ಮತ್ತು ಸಿಬ್ಬಂಧಿ ವರ್ಗದವರು ವ್ಯವಸ್ಥೆ ಮಾಡಿದ್ದರು,ಮುಂದಿನ ಹಂತದ ತಾಲೂಕು ಮಟ್ಟದ ತರಬೇತಿಯಲ್ಲಿ ಗ್ರಾಮ ನೈರ್ಮಲ್ಯ ಕಾಪಾಡುವ ಸ್ವಚ್ಛತಾಗಾರರ ಸುರಕ್ಷತೆ ಹಾಗೂ ಘನತೆಗಾಗಿ ಮಾಸ್ಟರ್ ತರಬೇತಿದಾರರು ತರಬೇತಿ ನೀಡಿ, ಅವರ ಆರೋಗ್ಯ ಮತ್ತು ಜೀವನ ಸುಧಾರಣೆಯಾಗವುದರೊಂದಿಗೆ, ಗ್ರಾಮಗಳು ಉತ್ತಮ ನೈರ್ಮಲ್ಯದಿಂದ ರೂಪಿತವಾಗುವುದರಲ್ಲಿ ಸಂದೇಹವಿಲ್ಲ.

ನಮ್ಮ ಸಮುದಾಯಗಳ ಆರೋಗ್ಯ ಕಾಪಾಡುವಲ್ಲಿ ಸ್ವಚ್ಛತಾಗ್ರಹಿಗಳ/ಸ್ವಚ್ಛತಾಗಾರರ ಪಾತ್ರ ಬಹಳ ಮುಖ್ಯವಾಗಿದೆ. ನಮ್ಮ ಮನೆಯ ಕಸವನ್ನು ಒಂದು ದಿನ ಮಟ್ಟಿಗೆ ಇಟ್ಟರೆ ಗಬ್ಬೆದು ವಾಸನೆ ಬರುವಾಗ, ನಾವು ಮೂಗು ಮುಚ್ಚಿ ಕೊಂಡು ಕಸನವನ್ನು ಮನೆಯ ಹೊರಗಡೆ ಬೇಗನೆ ವಿಲೇವಾರಿ ಮಾಡಲಿಕ್ಕೆ ಪ್ರಯತ್ನ ಪಡುತ್ತೇವೆ. ಅಂತಹದರಲ್ಲಿ ಇಡಿ ಸಮುದಾಯ/ಗ್ರಾಮಗಳ ಕಸವನ್ನು ಯಾವುದೇ ಒಂದು ಮುಜುಗರವಿಲ್ಲದೆ ಕಸ ಸಂಗ್ರಹಿಸಿ ವಿಲೇವಾರಿ ಮಾಡುವಲ್ಲಿ ಸ್ವಚ್ಛತಾಗಾರರ ಪಾತ್ರ ಬಹಳ ಮುಖ್ಯವಾಗಿದೆ. ಇದರಿಂದ ನಮ್ಮ ದೇಶದ ನಗರ/ಗ್ರಾಮಗಳು ಉತ್ತಮ ನೈರ್ಮಲ್ಯತೆಯಿಂದ ಹಾಗೂ ಆರೋಗ್ಯದಿಂದ ಕೂಡಿದೆ.

ಡಾ.ರಾಜು ಎಂ
ಬೋಧಕರು (ಗ್ರಾಮೀಣಾಭಿವೃದ್ಧಿ)
ಅ.ನ.ರಾ.ಗ್ರಾ.& ಪಂ.ರಾಜ್ ಸಂಸ್ಥೆ
ಪ್ರಾದೇಶಿಕ ಕೇಂದ್ರ ಕಲಬುರಗಿ

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

6 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

16 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

16 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

16 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago