ಒತ್ತಡ ನಿವಾರಣೆಗೆ, ಆತ್ಮಹತ್ಯೆ ತಡೆಗಟ್ಟಲು ಧ್ಯಾನ ಉತ್ತಮ ಮಾರ್ಗ

ಕಲಬುರಗಿ: ನಗರದ ಹೈ.ಕ.ಶಿ.ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಮನೋವಿಜ್ಞಾನ ವಿಭಾಗದ ವತಿಯಿಂದ “ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಧಿ ವಿಜ್ಞಾನ ವಿಭಾಗದ ಅಧಿಕಾರಿಗಳಾದ ಡಾ.ದಿಲೀಪಕುಮಾರ ಎಸ್.ನವಲೆ ಅವರು ಮಾತನಾಡುತ್ತಾ ಮನುಷ್ಯ ಜೀವನದುದ್ದಕ್ಕೂ ಅನೇಕ ಒತ್ತಡಗಳಿಗೆ ಒಳಗಾಗಿ ಆತ್ಮಹತ್ಯೆಯ ಮಾರ್ಗ ಹಿಡಿಯುತ್ತಾರೆ ಅಂತಹವರು ಧ್ಯಾನ ಮಾಡುವುದರ ಮೂಲಕವಾಗಿ ಒತ್ತಡದಿಂದ ಹೊರಬಂದು ನೆಮ್ಮದಿಯ ಬದುಕು ಬಾಳಬಹುದು ಎಂದು ಕರೆನೀಡಿದರು.

ಮುಂದುವರೆದು ಹತ್ತು ನಿಮಿಷಗಳ ಕಾಲ ಧ್ಯಾನ ಮಾಡಿಸುವುದರ ಮೂಲಕ ಪ್ರಾಯೋಗಿಕವಾಗಿ ಅದರ ಲಾಭವನ್ನು ವಿವರಿಸಿದರು .ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಮುಖ್ಯ ಅತಿಥಿಗಳಾದ ಖ್ವಾಜಾ ಬಂದೇನವಾಜ ವಿಶ್ವವಿದ್ಯಾಲಯ ಕಲಬರಗಿಯ .ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಮನಿಷಾ ಪಾಟೀಲ್ ಮಾತನಾಡುತ್ತಾ ಧನಾತ್ಮಕ ಮನೋಭಾವದಿಂದ ಆತ್ಮಹತ್ಯೆ ತಡೆಗಟ್ಟಬಹುದು ಅದಕ್ಕಾಗಿ ಧನಾತ್ಮಕ ಮನೋವಿಜ್ಞಾನ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದು ತಿಳಿಸಿದರು.

ಇನ್ನೋರ್ವ ಮಖ್ಯ ಅತಿಥಿಗಳಾದ ಹಿರಿಯ ವೈಜ್ಞಾನಿಕ ಅಧಿಕಾರಿ ವಿಧಿ ವಿಜ್ಞಾನ ವಿಭಾಗ ಬೆಳಗಾವಿಯ ಡಾ.ಮಲ್ಲಿಕಾರ್ಜುನ ಕೃಷ್ಣಾ ರವರು ಈ ಮಹಾವಿದ್ಯಾಲಯದಲ್ಲಿ ತಾವು ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ನೆನಪುಗಳನ್ನು ಮೆಲಕು ಹಾಕುತ್ತಾ ಪ್ರಸ್ತುತ ಮನೋವಿಜ್ಞಾನ ಕಲಿಯುವುದರಿಂದ ಬಹಳಷ್ಟು ಉದ್ಯೋಗ ಅವಕಾಶಗಳು ದೊರೆಯುತ್ತವೆ ವಿವಿಧ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿವೆ ಜೊತೆಗೆ ಕೌಟುಂಬಿಕ ಬದುಕಿನಲ್ಲಿಯು ಸಮಸ್ಯೆಗಳ ನಿವಾರಣೆಗೆ ಸಹಾಯಕ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ವಹಿಸಿಕೊಂಡು ಮನೋವಿಜ್ಞಾನ ವಿಭಾಗದವರು ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡು ವಿಧ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸುವಲ್ಲಿ ಶ್ರಮಿಸುವದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ .ಛಾಯಾ ಪಾಟೀಲ ,ಉಪನ್ಯಾಸಕಿ ಸುರಕ್ಚಾ ಠಾಕೂರ್ ಉಸ್ತುವಾರಿ ವಹಿಸಿಕೊಂಡಿದ್ದರು.ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯರಾದ ಡಾ.ವೀಣಾ ಹೆಚ್ ,ರಾ.ಸೇ.ಯೋ ಅಧಿಕಾರಿಗಳಾದ ಡಾ.ಮಹೇಶ ಗಂವ್ಹಾರ, ಡಾ.ರೇಣುಕಾ ಹಾಗರಗುಂಡಗಿ ,ಪ್ರಾಧ್ಯಾಪಕರಾದ ಡಾ.ಚಂದ್ರಕಲಾ ಪಾಟೀಲ,ಡಾ.ಶರಣಮ್ಮ ಕುಪ್ಪಿ ಶ್ರೀಮತಿ ಶಿವಲೀಲಾ ಧೊತ್ರೆ,ಡಾ.ಜ್ಯೋತಿಪ್ರಕಾಶ ಡಾ. ರಾಜೇಶ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು .ಕುಮಾರಿ ಹೆಜಲ್ ಥಕ್ಕರ್ ನಿರುಪಿಸಿದರು,ಕುಮಾರಿ ಐಶಾ ತಹೆಸಿನ್ ಪ್ರಾರ್ಥಿಸಿದರು,ಕುಮಾರಿ ನಾಝನಿನ್ ಬೇಗಂ ಸ್ವಾಗತಿಸಿದರು,ಕುಮಾರಿ ಅಶ್ವಿನಿ. ಕೆ. ಅತಿಥಿಗಳನ್ನು ಪರಿಚಯಿಸಿದರು, ಕುಮಾರಿ.ಐಶಾ ಸಮರಿನ್ ವಂದಿಸಿದರು.

ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಅಂಗವಾಗಿ ದಿನಾಂಕ 12-09-2023 ರಂದು ಮಹಾವಿದ್ಯಾಲಯದ ಮನೋವಿಜ್ಞಾನ ವಿಭಾಗದ ವಿಧ್ಯಾರ್ಥಿನಿಯರಾದ ಕುಮಾರಿ ಹೆಜಲ್,ಅಶ್ವಿನಿ, ಐಶಾ ,ಕೋಮಲ್,ಅಕ್ಸಾ,ಸುಮಿತ್ರಾ,ಸಭಾ ಮೊದಲಾದವರು ಸೇರಿಕೊಂಡು ಮಹತ್ವದ ಸಂದೇಶವನ್ನು ಸಾರುವ ಕಿರು ನಾಟಕವನ್ನು ಪ್ರಸ್ತುತಪಡಿಸಿದರು .
ಹಾಗೂ ಇದೇ ಸಂಧರ್ಭದಲ್ಲಿ ವಿದ್ಯಾರ್ಥಿ ನಿಯರಿಗೆ ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ಇವರು ಪ್ರತಿಜ್ನಾ ವಿಧಿಯನ್ನು ಬೋಧಿಸಿದರು.

emedialine

Recent Posts

ಸದ್ಗುಣ ಮೈಗೂಡಿಸಿ ಪ್ರಗತಿಪರ ಬದುಕು ಕಟ್ಟೋಣ : ಬಸವರಾಜ್ ಪಾಟೀಲ್ ಸೇಡಂ

ಕಲಬುರಗಿ: ಜೀವನದಲ್ಲಿ ಎದುರಾಗುವ ಅರಿಷಡ್ ವೈರಿಗಳನ್ನು ಗೆದ್ದು ಉತ್ತಮ ಬದುಕು ಕಟ್ಟಿದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಲೋಕಸಭಾ…

1 hour ago

ನಾಡಹಬ್ಬ ಆಚರಣೆ ಅಂಗವಾಗಿ ನಾಡ ದೇವತೆ ಸ್ತಬ್ಧ ಚಿತ್ರಗಳ ಮೆರವಣಿಗೆ

ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…

15 hours ago

ವೀರಪ್ಪ ನಿಷ್ಠಿ ಕಾಲೇಜ್ ಮಹಾತ್ಮ ಗಾಂಧಿಜಿ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ

ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…

15 hours ago

ಲೈಂಗಿಕ ದೌರ್ಜನ್ಯ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ 8ಕ್ಕೆ ಸುರಪುರ ಬಂದ್

ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…

15 hours ago

ಗರ್ಭಿಣಿ ಮಹಿಳೆಯರಿಗೆ ಹಣ್ಣು ಹಂಪಲು ವಿತರಣೆ

ಕಲಬುರಗಿ:  ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…

15 hours ago

ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…

15 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420