ಕಲಬುರಗಿ: ಚಿತ್ರ ನಿರ್ದೇಶಕರಾದ ಸಿದ್ದು ವಜ್ರಪ್ಪರಿಗೆ ಉತ್ತಮ ಕಥೆ ಬರಹಗಾರ ಮತ್ತು ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು ಖ್ಯಾತ ಹಿರಿಯ ನಟ ಡಾ. ಚಿಕ್ಕಹೆಜ್ಜಾಜಿ ಮಹದೇವ್ ನೀಡಿ ಗೌರವಿಸಿದರು.

ಚೈತನ್ಯ ಫೌಂಡೇಶನ್ ಕರ್ನಾಟಕ, ಕನಕಪೀಠ ವಿಶ್ವವಿದ್ಯಾಲಯ ಧಾರವಾಡ ಇವುಗಳ ವತಿಯಿಂದ ನಡೆದ ಧಾರವಾಡ ನುಡಿ ಸಡಗರ ಚಲನಚಿತ್ರೋತ್ಸವ ಪ್ರಶಸ್ತಿ -2023ಕ್ಕೆ ರಾವುತ ಚಿತ್ರ ಭಾಜನವಾಗಿದೆ.

ರಾವುತ ಚಿತ್ರಕಥೆ ಗೆ ದೊರಕಿದ ಈ ಪ್ರಶಸ್ತಿಯು ಏಳು ಜನ ಪರಿಶೀಲಕರಿಂದ ದೊರಕಿದ ಪ್ರಶಸ್ತಿ ಆಗಿದೆ. ತಮ್ಮಣ್ಣ ಬಡಿಗೇರ್, ಚಂದ್ರಶೇಖರ ಹನುಮಗೌಡ ಕನಕ ಪೀಠ ಮುಂತಾದವರು ಪ್ರಶಸ್ತಿ ಪರಿಶೀಲನಾ ಸಮಿತಿಯಲ್ಲಿ ಇದ್ದರು.

ಚಿತ್ರದ ಕತೆಯು ಗುರುಶಿಷ್ಯರ ಸಂಗಮದಲ್ಲಿ, ಮರಣದ ನಂತರದ ಆದಿಯನ್ನು ತೋರುವ ಕಥೆ ಇದೆ. ಅಲ್ಲದೇ ಎರಡು ಉಪಕಥೆಗಳು ಈ ಸಿನಿಮಾದಲ್ಲಿ ಇವೆ. ಆ ಕತೆಗಳು ಆಯೋಜಕರಿಗೆ ತುಂಬಾ ಹಿಡಿಸಿವೆ. ಜೀವನದ ಮೂಲ ಅಂಶಗಳನ್ನು ಪ್ರತಿ ದೃಶ್ಯದಲ್ಲೂ ತೋರಿಸಿದ್ದು ಪರಿಶೀಲಕರಿಗೆ ಖುಷಿ ತಂದಿದೆ. ಕಥೆಯು ಬಿಗಿಯಾಗಿದ್ದು ಈ ಚಿತ್ರಕ್ಕೆ ಜೀವ ತುಂಬಿದೆ ಎಂದು ನಿರ್ದೇಶಕರನ್ನು ಪರಿಶೀಲನಾ ಸಮಿತಿ ಬೆನ್ನು ತಟ್ಟಿದೆ.

ಶ್ರೀ ವಿಶ್ವಕರ್ಮ ಸಿನಿಮಾಸ್ ಅಡಿಯಲ್ಲಿ ಈರಣ್ಣ ಸುಭಾಸ್ ಬಡಿಗೇರ್ ನಿರ್ಮಾಣ ಮಾಡಿದ್ದಾರೆ. ನಾಯಕ ರಾಜಪ್ರವೀಣ್, ನಾಯಕಿ ಭವಾನಿ, ಇನ್ನೂಳಿದ ಕಲಾವಿದರು, ರಾಘವ್ ಗೌಡಪ್ಪ, ಮಾರೇಶ್ ಕನಕಗಿರಿ, ನರಸಿಂಹಮೂರ್ತಿ , ಸೋಮಶಂಕರ್ ಬಿರಾದಾರ ಗುಲ್ಬರ್ಗಾ ಇವರ ನಟನೆ ಚೆನ್ನಾಗಿ ಮೂಡಿ ಬಂದಿದೆ. ಸಂಗೀತ ಸುಚಿನ್ ಶರ್ಮ, ಸಂಕಲನ, ಅರವಿಂದ್, ಕಲಾ ನಿರ್ದೇಶನ ಲಷ್ಮೀಕಾಂತ ಜೋಶಿ ಗುಲ್ಬರ್ಗಾ ಅವರದ್ದು ಆಗಿದೆ.

ಚಿತ್ರದ ಹಾಡುಗಳು ಪೂರ್ಣವಾಗಿದ್ದು ಪ್ರಖ್ಯಾತ ಆಡಿಯೋ ಕಂಪನಿಯಲ್ಲಿ ಬಿಡುಗಡೆಗೊಳ್ಳಲ್ಲಿವೆ, ಚಿತ್ರವು ನವಂಬರ್ ಅಂತ್ಯದಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರ ನಿರ್ದೇಶಕರು ಸಿದ್ದುವಜ್ರಪ್ಪ ತಿಳಿಸಿದ್ದಾರೆ.

emedialine

Recent Posts

ಪತ್ರಕರ್ತ ಮಣೂರರಿಗೆ ಟಿಎಸ್‍ಆರ್ ಪ್ರಶಸ್ತಿ ಪ್ರದಾನ

ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…

2 mins ago

ನವರಾತ್ರಿ ಮಹೋತ್ಸವದ ನಿಮಿತ್ತ ದೇವಿ ಪೂಜಾ ಕಾರ್ಯಕ್ರಮ

ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…

6 mins ago

ಶ್ರೀ ಭವಾನಿ 1ನೇ ದಿನದ ಪುರಾಣ, ಕಳಸ ರೋಹಣ

ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…

11 mins ago

ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲ್ಲ –ಮುದ್ದಾ

ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…

15 mins ago

ಅಹಿಂಸೆಯ ದಾರಿಯಲ್ಲಿ ನಡೆದಾಗ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯ

ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…

20 mins ago

ನಾನು ಆಕಾಂಕ್ಷಿ ಅಧ್ಯಕ್ಷ ಸ್ಥಾನ ಸಿಗುವ ವಿಶ್ವಾಸವಿದೆ; ಕೋರವಿ

ಕಾಳಗಿ: ಈ ಹಿಂದೆ ಕೇಳಿ ಬಂದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಬದಲಾವಣೆ ಮಾಡಲು ಪಕ್ಷ ಕೈಗೊಂಡ…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420